Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಲುವೆ ವರ್ಣನೆ ಮತ್ತು ಮನಸಿಸ ವೇದನೆ

ಚಲುವೆ ನೋಡುತ್ತಿದ್ದರೆ ನಿನ್ನ....
ಮರೆವೆ ಮನದ ದುಖಃವನ್ನ..!!

ನೀನೆ ನನ್ನ ಕಲ್ಪನೆಗಳ ಲೋಕ...
ನಡೆವುದಲ್ಲಿ ನಿನ್ನ ಹೆಸರಿನ ಶ್ಲೋಕ...!!

ನೀ ಮಾಡಿಕೊಳ್ಳದೆ ಕೋಪ...
ಹಚ್ಚು ಬಾರೆ ನನ್ನ ಮನೆಯ ದೀಪ..!!

ನೀ ಬಾಳ ಸಂಗಾತಿಯಾಗು ಬಾರೇ..
ಈ ಜೀವ ಕೇಳುತಿಹುದು ನಿನ ಅಸರೆ...!!

ನೀನೆ ನನ್ನ ಮನದ ಅರಸಿ...
ಹುಡಕಿ ಬಂದೆ ನಿನ್ನ ಬಯಸಿ..
ನೀ ಬರದಿದ್ದರೆ ನನ್ನ ಆರಿಸಿ..
ಸಾಯುವೆ ನಾ ವಿಷ ಸೇವಿಸಿ...!!

- Harish Gowda

07 May 2020, 07:52 am

ತಾತಾ ಸಾವಿನ ಸೂತಕ

ದುಃಖವು ಅವರಿಸಿದಂತೆ ಮೌನವು ತಬ್ಬಿಬಾಗಿದೆ ನೆನೆಪಿನ ಲೋಕದಲ್ಲಿ ಒಬ್ಬಂಟಿಗನಾಗಿ ನಲುಗಲು ಆಗುತ್ತಿಲ್ಲ ಮರಳಿಬಾರದಿರು ನೆನೆಪೆ ಮರಣ ಹೊಂದುವ ತನಕ ...ಮರೆಯಲಾಗದ ಅನುಭಂದವಿದು ಕಂದನ ವಯಸ್ಸಿನಲ್ಲೆ ತಂದೆಯ ಕಳೆದುಕೊಂಡೆ.. ತಂದೆಯಂತೆ ಸಾಕಿದ ತಾತಾ ನಿನ್ನ ಹೇಗೆ ಮರೆಯಲ್ಲಿ ನಿನ್ನ ಒಲುಮೆಯ ತಾತಾ*

- santhosh Gandhi

06 May 2020, 11:53 pm

ತಾತಾನ ವಿದಾಯ

ಭಾವಗಳ ಲೋಕದಲ್ಲಿ ದುಂಖದ ಮಳೆಸುರಿಸಿ ಮರೆಯಾದ ನನ್ನ ತಾತ ..

ಹಬ್ಬ ಅರಿದಿನಗಳಲ್ಲಿ ನನ್ನ ಮೊಮ್ಮಗ ಸಂತೋಷ ಎಂದು ಕರೆಯುವ ಮುಗ್ದ ಮನಸ್ಸಿನವ ನನ್ನ ತಾತ...

ಯಾವ ಅವ್ಯಾಸಕ್ಕೂ ಕೈಇಡದೆ ಬಡತನದಲ್ಲಿ ಸಿರಿತನವ ಕಂಡ ನನ್ನ ತಾತಾ...

ಕೊನೆಗೂ ಕಣ್ಣಿರಲ್ಲಿ ಕೊನೆಯ ಆಸೆಯನ್ನೆ ಹೇಳದೆ ಹೊರಟ ಒಂಟಿ ಪಯಣಕ್ಕೆ ..ನೆನಪಿನಗಳಂದಿ ಕಾಡುವಂತೆ ಮಾಡಿ ಮರೆಯಾದ ನನ್ನ ತಾತಾ....

ಚಿರನಿದ್ರೆಗೆ ಜಾರಿ ಹಳೆ ನೆನಪುಗಳನ್ನ ನನ್ನ ಎದೆಯಲ್ಲಿ ಮೀಟಿ ಮರೆಯಾದ ನನ್ನ ತಾತಾ

- santhosh Gandhi

06 May 2020, 10:47 pm

ಮುಂದುವರೆದ ಸಾಲು.......

ಬತ್ತಿ ಹೊಸೆದು
ತೈಲವೆರೆದು
ಹಚ್ಚಿದ್ದೆ ನಾ ದೀಪ..!
ದೀಪದ ತಿಳಿ
ಬೆಳಕಲಿ ಎನ್ನ ಕಣ್ಣ
ಕುಕ್ಕಿತು ನಿನ್ನ ರೂಪ..!
- ಸಿರಿ ಕನ್ನಡತಿ

ಬಿಳಿ ಮಲ್ಲೆಯನೇ
ಮಾಲೆ ಮಾಡಿ
ಮುಡಿದಿದ್ದೆ ಓ ನಲ್ಲೆ..!
ಮಲ್ಲಿಗೆಯ
ಸವಿ ಘ್ರಾಣಕೆ
ನಾ ಶರಣಾದೇನು ಅಲ್ಲೆ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

06 May 2020, 10:19 pm

ಜೀವನ ಕ್ರಮ

ಹಸಿವೆ ನೀಗಿಸಲು
ಅನ್ನವು ಬೇಕಲ್ಲ
ಅನ್ನವ ಪಡೆಯಲು
ಕೆಲಸವಿರಲೇ ಬೇಕಲ್ಲ

ಮಾಲೀಕ ಕಾರ್ಮಿಕ
ಇಬ್ಬರೂ ಒಂದೇ
ಕೆಲಸ ಮಾಡದೆ ಅವಂಗೆ
ಬದುಕೇ ಇಲ್ಲ.

ಮಾಲೀಕ ತಾ ಮಿಗಿಲು
ಸೇವಕ ತಾ ಕೀಳು
ಕಸುಬಿಗೆ ಅದು
ಎಂದೂ ಗೊತ್ತಿಲ್ಲ.

ಮಾಡುವ ಕಾರ್ಯದಿ
ಶ್ರದ್ಧೆ ನಿಷ್ಠೆ ತೋರಲು
ಗೌರವ ಸನ್ಮಾನ
ಒಲಿದು ಬರುವುದು ಸುಳ್ಳಲ್ಲ.

ನಿನಗೊಲಿದ ಕಾಯಕ
ನಿನಗದು ಶ್ರೇಷ್ಠ
ಕೂಲಿಯೊ ನಾಲಿಯೊ
ಅವಮಾನ ನಿನಗಿಲ್ಲ

ಅವರಿವರ ಎಣಿಸದೆ
ನಿನ್ನ ಕಾಯಕ ಪೂಜಿಸಲು
ನಿನ್ನಂಥ ಕಾರ್ಮಿಕ
ಬೇರೆಲ್ಲೂ ಸಿಕ್ಕಲ್ಲ..

ಕಾಯವು ಚಿಕ್ಕದು
ಕಾಯವು ದೊಡ್ಡದು
ಕಾಯಕದಲ್ಲಿ ಎರಡಿಲ್ಲ
ಅರಿತರೆ ನಿನಗೆ ಸೋಲಿಲ್ಲ.

- Ravinayaknayak

06 May 2020, 09:18 pm

.....ಕೊರೋನ.....

ಎಲ್ಲೆಲ್ಲಾವಿರುವೆ ನಾ ಕಾಣೆನು ನಿನ್ನ
ಹುಡುಕೋಣವೆಂದರೆ ನೀನೆಷ್ಟು ಸಣ್ಣ
ಸಾಕಾಯ್ತು ನನಗೆ ಶುಚಿಗೂಳಿಸಿ ನನ್ನ!

ನೀ ಬಂದ ದಾರಿ ಅದೆಷ್ಟು ಅಸ್ಪಷ್ಟ
ಪಡುತಿಹರು ಇಲ್ಲಿ ಜನರೆಲ್ಲಾ... ಸಂಕಷ್ಟ
ಎಣಿಸಲಾಗಲೇ ಇಲ್ಲ ನಮಗಾದ ನಷ್ಟ!

ಪ್ರವಾಸಿಯು ಬಂದಾಗ ಪ್ರವೇಶಿಸಲಿಲ್ಲ ಮನೆಯ,
ಮಾಡಿದರು ತಪಾಸಣೆಯೂ.. ಅವನ ಹಣೆಯ
ಆಗಮನವಾಗದವನ ಕಂಡು ನಿರ್ಗಮಿಸಿದನಾ ಗೆಳೆಯ!

ಆರ್ಥಿಕ ಸಂಕಷ್ಟದಿ ಆದರು ನೂರಾರು ದಿವಾಳಿ
ಕಾಯುತ್ತಲೇ ಇರುವೆವು ದವಾ ಒಂದ ಬರಲಿ
ಪ್ರಾರ್ಥಿಸುವೆವು ಬರಬೇಡ ಮತ್ತೇಂದೂ... ಮರಳಿ!

ನಿನ್ನ ನಾಮ ಕೇಳಿ,ಮಾಡಿದರು ದೇವನ ಸ್ಮರಣ
ನಿನ್ನ ಮುಟ್ಟಿದವರು ಆದರೆಷ್ಟು ಮರಣ
ಇಟ್ಟರೊಂದು ನಿಂಗೆ ಹೆಸರ,ಅದೇನೋ.. *ಕೊರೋನ*!!

...‌✍

- ಅಬುರಯ್ಯಾನ್,ಹಂಡೇಲು

06 May 2020, 07:41 pm

ಚಿಗುರು

ಕನಸು ಒಡೆದಿದೆ ಚಿಗುರು
ಮನಸ್ಸೆಲ್ಲ ಮೊಂಪರು
ನಿನ್ನ ಪಡೆಯುವ ಪೊಗರು
ನಿನ್ನಲ್ಲಿ ಆದರೆ ಪ್ರೀತಿ ಸುರು
ನನ್ನ ಆರ್ಭಟ ನೂರಾರು
ಎಷ್ಟೆ ಬರಲಿ ಜನರು
ನೀನು ಎದರದಿರು
ಬರುವಿಕೆಗಾಗಿ ಕಾಯುತ್ತಿರು
ಮುಗುಳು ನಗೆಯಲ್ಲೆ ನೀನಿರು
ಒಂದಾಗೊಣ ನಾವಿಬ್ಬರೂ
ನನ್ನ ಒಲುಮೆಯ ಚಿಗುರು

- Shivakumara S

06 May 2020, 07:34 pm

ಪಿಸುಮಾತು

ಕವನಗಳ ಬರೆಯುವುದಕ್ಕೆ ಉತ್ತಮ ವೇದಿಕೆ ಪಿಸುಮಾತು,
ಕವನಗಳೇ ನನ್ನ ಸ್ವತ್ತು,
ಬರೆದಿರುವೆ ಕವನಗಳ ಅದೇಷ್ಟೋ ಆಸೆಗಳ ಹೊತ್ತು,
ನನ್ನ ಕಲ್ಪನೆಗಳಿಗೆ ಬರಹ ರೂಪ ಕೊಟ್ಟು,

ಮುಟ್ಟಲಿ ನನ್ನ ಕವನಗಳು
ಜನರ ಮನಸು,
ಅದೇ ನನ್ನ ಕನಸು.

:- ವೀಣಾ ಲಿಂಗಣ್ಣ

- Veena

06 May 2020, 06:59 pm

ಮನಸ್ಸು!

ನಾ ಕಲ್ಲಾಗುವನೆಂದಾಗ,ಕಲ್ಲು ನಾನಾಗುವೆನೆಂದಿತು,
ಕಲ್ಲೇ ನಾನಾಗುವೆನೆಂದಾಗ
ನಾನೇಕೆ ಕಲ್ಲಾಗಬೇಕೆಂದಿತು
ಮನಸ್ಸು!

- mahi

06 May 2020, 03:55 pm

ಒಲುಮೆ ಸಿರಿಯ ಪಡೆವೆ

ನರ ನಾಡಿಯಲ್ಲಿ
ಸ್ವರ ವೀಣೆ ಮಿಡಿದು
ಹಾಡಿಹುದು ಪ್ರೇಮ ಶೃತಿಯ!!
ನಿನ್ನ ಅಂದ ಚೆಂದ
ನನ್ನ ಕಣ್ಣ ಒಳಗೆ
ಆಗಿಹೆನು ಮಂದ ಮತಿಯು!!

ನನ್ನ ಹೃದಯದಲ್ಲಿ
ರವಿ ಉದಯವಾಗಿ
ದಿನ ಮಣಿಯ ಹೊತ್ತು ತಂದ!!
ನಿನ್ನ ಬಿಂಬ ಕಂಡು
ಬೆಳದಿಂಗಳಲ್ಲಿ
ಶಶಿ ಮರೆಗೆ ಸರಿದು ನಿಂದ!!

ಕನಸೆಂಬ ಗಡಿಗೆ
ನೀ ಅದರ ಒಳಗೆ
ನವ ಭಾವ ತುಂಬುತಿರುವೆ!!
ನನ್ನ ಬಾಳಿನಲ್ಲಿ
ನೀ ಬರಲು ನಲ್ಲೆ
ನಾ ಒಲಮೆ ಸಿರಿಯ ಪಡೆವೆ!!

- ಪಿ.ಜಿ.ಜ್ಯೋತಿ

06 May 2020, 03:51 pm