Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರಿವಳು?!

ಯಾರಿವಳು?ಎಂದೆನಿಸಿಕೋಳ್ಳಬೇಡ
ಯಾರಿವಳು! ಎಂದೆನಿಸಿಕೋ.
ಯಾರಿವಳು!ಎಂದಾಗ
ನೀ ನಡೆದ ದಾರಿ ಹೇಳಬೇಕು.
ಬಾ ನನ್ನ ದಾರಿಯಲ್ಲಿ,ನಿನ್ನ ನೋಡಿ ಬೇರೆಯವರು ಹೇಳುವಂತೆ ಮಾಡುವೆನು ಯಾರಿವಳು! ಎಂದು.

- mahi

06 May 2020, 03:45 pm

ಜೀವದ ಗೆ‌ಳೆಯ

ಹುಟ್ಟಿನ ಗೆ‌ಳೆಯನಿವನು,
ಜೀವನದ ಕೋನೆಗೆ ಬರುವನು,
ದೇವರಿಗೂ ಬಿಡದವನು,
ಮತ್ತೆ ಹುಟ್ಟಿನ ಜೋತೆಗೆ ಹುಟ್ಟುವನು.
ಅವನೇ ಸಾವು ಎಂಬ ಹೆಸರುಳ್ಳವನು,
ನಮ್ಮನ್ನು ಬಿಗಿದಪ್ಪಿ ಬರಮಾಡಿಕೋಳ್ಳುವನು.

- mahi

06 May 2020, 01:15 pm

ಕಂಬನಿ

ಮನದಲ್ಲಿನ‌ ಹೇಳ ತೀರದ ದುಗುಡುಗಳೆಲ್ಲ‌ ಇಂದೆಕೊ ಮಾಯವಾಗಿದೆ... ಸಂತೋಷ ಮನೆ ಮಾಡಿದೆ.. ಈ ಸಂತೋಷ ಇನ್ನೆಷ್ಟು ದಿನ.. ಹಿಂದೆ ಆದ ನೋವುಗಳು ಇಂದು ಮಲಗಿರಬಹುದು. ಅವು‌ ಎದ್ದಾಗ ಮತ್ತದೆ ಹಳೆ ನೆನಪಿನ ಚಿತೆ ಆರಿಸಲು ಕಂಬನಿಯನ್ನು ಕರೆಯಲೇಬೇಕು....
....✍️.ರಾಮ್.

- ರಾಮ್

06 May 2020, 12:29 pm

ಮಾಸದ ನೋವು

ನನ್ನ ಬದುಕು ಒಂದು ಸುಂದರ ಚರಿತೆ
ನಾನೊಂದು ಅದ್ಭುತ ಪಾಠ ಕಲಿತೆ

ನಗು, ನಲಿವಿಗೆ ಇರಲ್ಲಿಲ್ಲ ಕೊರತೆ
ಆಗು ,ಹೋಗುಗಳಿಗೆ ಇರಲ್ಲಿಲ್ಲ ಚಿಂತೆ

ಇದರ ನಡುವೆ ನಡೆದ ಕತೆ
ಬದುಕಿಗೆ ನೀಡಲು ಆದ್ಯತೆ
ಬಂದಳು ಒಬ್ಬಳು ಪ್ರಾಣ ಕಾಂತೆ
ನಡೆಸಿ ಮನದಲ್ಲಿ ಮಾತುಕತೆ
ಆಗುವೆನೆಂದು ನನ್ನ ಜೊತೆ
ಮೂಡಿಸಿ ಪ್ರೀತಿಯ ಸಕರತೆ
ಹೆಚ್ಚಿಸಿ ಸಂತಸದ ಸೌಮ್ಯತೆ
ಹಾಡಿ ಅನುರಾಗದ ಗೀತೆ
ಹೆಚ್ಚಿಸಿ ಪ್ರೀತಿಯ ಘನತೆ
ಕಟ್ಟಿ ಕನಸಿನ ಕತೆ
ಆಡಿ ಮರೆಯಲಾಗದ ಮಾತುಕತೆ
ಹೆಚ್ಚಿಸಿ ಬಾಳಿನ ಕಾತುರತೆ
ಮೀರಿಸಿ ಪ್ರೀತಿಯ ಅಣತೆ
ಹೇಳಿ ನೆಪಮಾತ್ರದ ಕತೆ
ನಿನ್ನ ಬಿಟ್ಟಿಲಾರದಂತೆ
ಮೂಡಿಸಿ ನನಗೆ ಚಿಂತೆ
ನನ್ನಲ್ಲಿ ನನಗೆ ಪ್ರಜ್ಞೆ ಇಲ್ಲದಂತೆ
ನೀನು ಮಾಡಿದೆ ನನ್ನ ಹುಚ್ಚನಂತೆ
ಬಿಟ್ಟು ಹೋದೆಯಲ್ಲ ಕಾಂತೆ
ಇಲ್ಲ ನೀನು ಇಂದು ನನ್ನ ಜೊತೆ

ಸ್ವಲ್ಪದಿನದನಂತರ ನಾ ನಿನ್ನ ಮರೆತೆ
ಬದುಕಿನ ಪುಟದಲ್ಲಿ ನಿನ್ನೊಂದು ಮರೆಯದ ಕವಿತೆ

- Shivakumara S

06 May 2020, 12:12 pm

ಅಂದಗಾತಿ ಬಲು ಮೋಸಗಾತಿ

ಅಂದಗಾತಿಯರೆಲ್ಲರು ಮೋಸಗಾತಿಯರಲ್ಲ..
ಮೋಸಗಾತಿಯರೆಲ್ಲರೂ ಅಂದಗಾತಿಯರೆ....!!
ಹುಡುಗರ ಮನಸನ್ನ ಕದ್ದು..!
ಸಿಕ್ಕಸಿಕ್ಕಲ್ಲಿ ಮಾಡಿ ಮುದ್ದು..!
ಹುಡುಗರನ್ನು ಮಾಡಿ ಪೆದ್ದು‌‌..!

ಸಿರಿವಂತನು ಸಿಕ್ಕಿದಮೇಲೆ..
ಅವನ ಮುಂದೆ ಸಿಗುವದೆ ಬೆಲೆ...
ಚಲುವೆಯರಿಗೆ ಇದೊಂದು ಖಾಯಿಲೆ..
ಖಯಾಲಿಯಾಗಿ ಮಾಡುತ್ತಿದೆ ಅಮಾಯಕರ ಕೊಲೆ..!!!
ನಮ್ಮಂತವರು ಸೇರಿಕೊಳ್ಳುವುದು ಒಳಿತು ಮೂಲೆ.
ಸಿಲುಕಿದರೆ ಪ್ರೀತಿಯ ಬಲೆ ಸತ್ತಂತೆ ನೀನು ಆಗಲೆ..!!

- Harish Gowda

05 May 2020, 10:48 pm

ಕೋರೋನ ಮಹಿಮೆ...

ಹಾಲು ತರಲು ಹೋದವನಿಗೆ ಲಾಠಿ ಏಟು ಕೊಟ್ಟರು,
ಹಾಲು ತರಲು ಹೋದವನಿಗೆ ಲಾಠಿ ಏಟು ಕೊಟ್ಟರು..!

ಅದೇ ಅಲ್ಕೋಹಾಲು ತರಲು ಹೋದವನಿಗೆ ಕ್ಯೂನಲ್ಲಿ ನಿಲ್ಲಿಸಿ ಸೆಕ್ಯೂರಿಟಿ ಕೊಟ್ಟರು..!!

ದೇಶದ ಕಥೆ ಇಷ್ಟೇ ಕಣೊಪ್ಪ ಚಿಂತೆ ಮಾಡಿ ಲಾಭ ಇಲ್ಲಪ್ಪೊ

- Ajay

05 May 2020, 10:42 pm

ನೀನೇ ನನ್ನ ಸವಿಗನಸು..

ಮನಸಿದು ಮೌನವಾಗಿದೆ
ಹೃದಯವಿದು ಮರಣ ಹೊಂದಿದೆ,,
ಮರೆಯಲು ಮನಸಿಲ್ಲ
ದೂರವಾಗಲು ನೆಮ್ಮದಿಯಿಲ್ಲ,,
ಒಣಗಿದ ಮರುಭೂಮಿಯಾಂತಾಗಿದೆ ನನ್ನಿ ಜೀವನ,,,

ಮುಗ್ದ ಮನಸ್ಸು ಪ್ರೀತಿಯ ಕನಸ್ಸು...

- Nrj Nagaraj

05 May 2020, 06:53 pm

...ನಾನೊಬ್ಬ ಬಡವ...

ನಾ ಹೇಳಿದ ಸತ್ಯವ ಸುಳ್ಳೆಂದರು ‌ಅವನೇಳಿದ ಸುಳ್ಳನ್ನೇ ನಿಜವೆಂದರು‌ ‌‌‌ ನಾ ಏನ ಮಾಡಲಿ...? ನಾನೊಬ್ಬ ಬಡವ!(೧) ‌ ‌
ನಾ ಓಡಿದೆನು ಹೊಟ್ಟೆಯ ತುಂಬಿಸಲು
ಅವ ಓಡಿದನು ಹೊಟ್ಟೆಯ ಕರಗಿಸಲು ‌‌‌‌‌ನಾ ಏನ ಮಾಡಲಿ...? ನಾನೊಬ್ಬ ಬಡವ!(೨)

ನಾ ನಿದ್ದೆಯ ಮಾಡಿದೆ ಖಾಲಿ ಪಾತ್ರೆಯೊಂದಿಗೆ
ಅವ ನಿದ್ದೆಯ ಮಾಡಿದ ನಿದ್ದೆ ಮಾತ್ರೆಯೊಂದಿಗೆ ‌‌‌‌‌
ನಾ ಏನ ಮಾಡಲಿ...? ನಾನೊಬ್ಬ ಬಡವ!(೩)

ನಾ ನಕ್ಕಾಗ ನೋಡಿದರು ಕೋಪದಿಂದ
ಅವ ನಕ್ಕಾಗ ನೋಡಿದರು ಅಕ್ಕರೆಯಿಂದ ‌‌‌‌‌
ನಾ ಏನ ಮಾಡಲಿ...? ನಾನೊಬ್ಬ ಬಡವ!(೪)

ನನ್ನ ಮುಚ್ಚಿದರು ಮಣ್ಣಿನೊಳಗೆ
ಅವನನ್ನೂ ಮುಚ್ಚಿದರು ಅದೇ ಮಣ್ಣನೊಳಗೆ
ಹೇಳಿದೆವು *ನಾವಿಬ್ಬರು*
ನಾ ಏನ ಮಾಡಲಿ...? ನಾನೊಬ್ಬ ಬಡವ!(೫)

- ಅಬುರಯ್ಯಾನ್,ಹಂಡೇಲು

05 May 2020, 05:07 pm

ಕುಡಿತದ ಕೆಡಕು........

ನಿನ್ನೆ ದಿನ ತೋರಿಸ್ತಲ್ಲ ಸರ್ಕಾರ
ಕುಡಿದು ಹಾಳಾಗುವುದಕ್ಕೆ ದಾರಿ
ನಶೆಯಲ್ಲಿ ಮಗನ ತುಟಿಯನ್ನು
ಕಚ್ಚಿ ತುಂಡರಿಸಿದಳು ಒಬ್ಬಳು ಮಾರಿ

ಎಲ್ಲಿಗೆ ಬಂತು ನಮ್ಮ ಸಂಸ್ಕೃತಿ
ಮಹಿಳೆ ಬಾರ್ ಮುಂದೆ ನಿಲ್ಲುವ ಸ್ಥಿತಿ
ಏನ್ರೀ ಸಂಸಾರದ ಗತಿ

ಸಾಲ ಸೋಲ ಮಾಡಿಯಾದರೂ
ಕಂಠ ಪೂರ್ತಿ ಕೂಡಿತಿರಿ
ಮಾನ ಮರ್ಯಾದೆ ಗಾಳಿಗೆ ತೂರಿ
ಬೀದಿಯಲ್ಲಿ ಜಿಗಿಜಿಗಿದು ಡ್ಯಾನ್ಸ್ ಮಾಡ್ತೀರಿ

ಕೂಡಿದ ಮತ್ತಿನಲ್ಲಿ ಬೀಳುಸ್ತಿರಿ ಹೆಣ
ಸಂಸಾರ ನಡೆಸುವುದಕ್ಕೂ
ಕೈಯಲ್ಲಿ ಇಲ್ಲದಿದ್ದರೂ ಹಣ
ಯಾಕೆ ತೆಗಿತಿರೋ ಇನ್ನೊಬ್ಬರ ಪ್ರಾಣ

ಕುಡಿಕುಡಿದು ಹಾಳುಮಾಡುವವರೇ ಹೇಳಿ
ದಯವಿಟ್ಟು ಬಿಟ್ಟು ಬಿಡಿ ಕುಡಿತದ ಚಾಳಿ
ಕುಟುಂಬದ ಜೊತೆ ನಗುನಗುತಾ ಬಾಳಿ.

- lakshman

05 May 2020, 01:46 pm

ಒಲವಿನ ಅಂಚೆ..

ನೀನು ಯಾರೋ ನಾನು ಯಾರೋ
ನಮ್ಮಿಬ್ಬರನೂ ಈ ಪ್ರೀತಿ ಬೆಸೆದಿದೆ..!
ದೇಹವೆರಡದು ಬೇರೆ ಬೇರೆಯೇ
ಆದರೂ ಮನವದು ಒಂದೇ ಎನಿಸಿದೆ..!

ಜನ್ಮ ಜನ್ಮಗಳ ನಂಟಿದೇನೋ
ನಿನ್ನ ಪ್ರೇಮವೂ ಎನಗೆ ಲಭಿಸಿದೆ..!
ನಾವು ಕೂಡಿ ಕಳೆದ ಕ್ಷಣಗಳು
ಮನದಲಿ ಹರುಷವನು ನೆಲೆಸಿದೆ..!

ನಾನು ಮೇಲು ನೀನು ಕೀಳು
ಎಂಬುದಿಲ್ಲ ಮನದಿ ಭಾವನೆ..!
ನೀನು ನನ್ನ ಜೊತೆಗಿದ್ದರೆ ಸಖಿ
ಮರೆವನು ನನ್ನ ಎಲ್ಲ ನೋವನೆ..!

ನಮ್ಮ ಪ್ರೇಮವದು ಹಸಿರಾಗಿರಲಿ
ಇಂದು ನಾಳೆಗಳು ಎನ್ನದೆ..!
ನೀನು ನಗು ನಗುತಲಿ ಬಾಳೆಂದು
ತೊದಲು ಕವಿತೆಯ ಬರೆದು
ಹರಸುತಲಿದೆ ಗೆಳತಿ ಈ ನನ್ನೆದೆ..!

ಜನುಮ ದಿನದ ಶುಭಾಶಯಗಳು
~ ಪ್ರೀತಿಯಿಂದ ನಿನ್ನವ ಸಿದ್ದು

- - ಸಿದ್ದು ಕನ್ನಡಿಗ

05 May 2020, 08:44 am