Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳೆಯ

ಇರು ಗೆಳೆಯ ಹರುಷದಿಂದ,
ಹರಸುವೇನು ಖುಷಿ ಮನ್ಸಿಂದ,
ಹುಟ್ಟು ಹಬ್ಬದ ಶುಭಾಶಯಕ್ಕೆ,
ಯಾವಾಗಲೂ ನೀನಿರು ಸಂತೋಷ ದಿಂದ.

- SadanandaV

05 May 2020, 08:33 am

ಬರುವನೆನ್ನ ಕಂದ

ಕಾತರಿಸಿದೆ ಮನ
ಬರುವ ನನ್ನ ಕಂದನಿಗಾಗಿ,
ನನ್ನೊಲುಮೆಯ ಪಟ್ಟದರಸಿಯ
ಹೊಟ್ಟೆಯೊಳಗೆ ಕಳೆದು
ಒಂಬತ್ತು ತಿಂಗಳು,
ತಳೆದು ಮೆದು ಮೈ ಮನಸುಗಳ
ಕಾಲಿಡುವನು ನೆಲಕೆ,
ಕತ್ತಲ ಲೋಕದಿಂದೊಮ್ಮೆ
ಬೆಳಕಿನಂಗಳಕೆ..
ಬರುವ ಕಂದನ ಹೊಗಳಲು
ಸಾಲದು ಪದಗಳ ಹೊಳಲು,
ಕಣ್ತುಂಬಿಕೊಳಲು ಕಾದಿವೆ ಕಂಗಳು,
ಮುಟ್ಟಿದರೆ ಮುನಿವನೋ,
ತಾಯಿ ಎದೆಯೊಳಗೆ ಹುದುಗಿ
ಮೈ ಮುರಿವನೋ..
ಬರಲಿರುವ ಕಂದ
ಅರಸನೋ, ಅರಸಿಯೋ ಅರಿತವರಿಲ್ಲ
ಹೊತ್ತು ತಿರುಗುವೆ ಪುಟ್ಟ ಕೂಸನು
ನಾನೆಂದಿಗೂ ಅವಳ ಕಾಲಾಳುವಾಗಿ..

- ಶ್ರೀಗೋ.

05 May 2020, 07:45 am

ಮೋಸದ ಪ್ರೀತಿ

ಹೇ ಕುಸೆ ...
ಮೊಸದ ಬಲೆಯಲ್ಲಿ ಮಾಯಾವಿಯ ಹಾಗೆ ನನ್ನನ್ನೆ ಮರಸಿದ ನಿನಗೆ ನನ್ನ ನಮನಗಳು..
ನಾ ಮರೆಯಲಿಚ್ಚಿಸುವುದು ನಿನ್ನನ್ನಲ್ಲ ನನ್ನನ್ನೇ ಕಾರಣ ಅರಿಯದ ಮನಸ್ಸು ನೂರೊಂದು ಚೂರಾಗಿರುವಾಗ ನಿನ್ನನ್ನು ಮರೆಯವುದಾದರು ಹೇಗೆ ?
....✍️ರಾಮ್.

- ರಾಮ್

04 May 2020, 10:02 pm

ಬಸ್ಸು ರೇಶು ವೆಸ್ಟ್ ಬೆಸ್ಟ್

ಹತ್ತಲು ಹೋದೆ ಬಸ್ಸು
ಒಳಗಡೆ ಇತ್ತು ರೇಶು
ಅನಿಸಿದ್ದು ಹತ್ತೋದು ವೆಸ್ಟ್
ನಡ್ಕೊಂಡು ಹೋಗೋದೇ ಬೆಸ್ಟ್

- Shivanand V Anandadavar

04 May 2020, 09:37 pm

......

ಕೆಲ ದಿನಗಳಿಂದ ಕಣ್ಣ ಹನಿಯು ಜಾರಿ ತಾಕುತಿದೆ ಕೆನ್ನೆಯ,
ನಿನ್ನ ನೋಡಲು ಹವಣಿಸುತ್ತಿದೆ ಈ ಹೃದಯ,
ನಿನ್ನ ನೋಡದೆ ಹೇಗಿದೆಯೋ ಈ ನನ್ನ ಮನ,
ಬಂದರೆ ಸಾಕಾಗಿದೆ ಕಣ್ಣ ಮುಂದೆ ಒಂದು ಕ್ಷಣ,
ಮಿಡಿಯುತ್ತಿರುವ ನನ್ನ ಕಂಬನಿಗೆ ಆಗಬಹುದು ನನ್ನ ಕೈ ಸ್ಪಶ೯ವೇ ಪರಿಹಾರ,
ಆದರೆ
ನಿನಗಾಗಿ ಮಿಡಿಯುತ್ತಿರುವ ನನ್ನ ಹೃದಯಕ್ಕೀಗ
ನೀನೆ ಪರಿಹಾರ...!

- Megha

04 May 2020, 08:00 pm

ಹಣ ಬಲ

ಬರೆಯಲಾಗುತ್ತಿಲ್ಲ ಒಂದೆಳ್ಳೆ ಕವಿತೆ..!
ಮನದಲ್ಲಿ ತುಂಬಿರುವುದು ಬರಿ ವ್ಯತೆ...!!
ಕೇಳಿ ಸ್ವಲ್ಪ ನನ್ನ ಕಥೆ..?
ಹುಡುಗಿಯ ನೋಡಲು ಹೋದೆ
ಬ್ರೋಕರ್ ಜೊತೆ..!
ನೋಡಿ ಅವಳಂದಕೆ ನಾ ಸೋತೆ...!!
ಮದುವೆಗೆ ಸೂಚಿಸಿದೆ ನನ ಒಪ್ಪಿಗೆ..
ಬಳಿ ಬಂದರು ಅವರಮ್ಮ ಮೆತ್ತಗೆ..
ವಧುದಕ್ಷಿಣೆ ಎಷ್ಟಿದೆ ಎಂದರು ನನಗೆ..
ತೆಲೆತಿರುಗಿದ ಹಾಗೆ ಆಗಿ ಹಿಡಿದೆ ಮನೆಕಡೆ ಕೊನೆಗೆ.....!!!!!!

ಹಣದ ಮುಂದೆ ನಡೆವುದಿಲ್ಲ ಯಾವ ಬಲ
ಹಣಕೆ ಆಡಿಸುವರು ಎಲ್ಲರು ಬಾಲ........!
ಆದರೆ ನಾನಂತು ಸೇರಿದೆ ಬಿಲ.............!!!!



ವಧುದಕ್ಷಿಣೆ

- Harish Gowda

04 May 2020, 05:29 pm

ಪ್ರೀತಿ

ಹೃದಯದ ಮರದಲ್ಲಿ ಕುಳಿತ ಗಿಣಿ
ಅಂದಚಂದದ ನಲ್ಮೆಯ ನಾರಿಮಣಿ
ಚಿತ್ತಾರ ಚೆಲುವಿನ ಸುಂದರ ತರುಣಿ
ಮನವ ಕುಲುಕುವ ಚಿಂತಕ ಮೋಹಿಣಿ
ನಿನ್ನೊಂದು ಸೌಂದರ್ಯದ ಗಣಿ
ವರ್ಣಿಸಲು ಸಾಲದು ಪದಗಳ ಸರಣಿ
ನೀಡಿರುವೇ ಮನದಲ್ಲಿ ನಿನಗೆ ಪಹಣಿ
ನೀನು ಒಪ್ಪಿದರೆ ಕೊಡುವೆ ಕರಿಮಣಿ
ನಿನಾಗುವೆ ನನ್ನ ಅರ್ಧಾಂಗಿಣಿ
ನಿಜ ಸುಖಸಂಸಾರದ ಕಣ್ಮಣಿ
ಕಾಯಿಸಬೇಡ ಸಮಯದಾರಿತ್ರಿಣಿ
ಆಗೂ ನನ್ನ ಪ್ರೀತಿಗೆ ನೀನು ಅಣಿ.

- Shivakumara S

04 May 2020, 12:42 pm

ಅಂಧಕಾರ

ಎಲುಬಿಲ್ಲದ ನಾಲಿಗೆಗೆ ಅರಿವೇ ಇಲ್ಲ
ಮಾಡುವ ಕೆಲಸದಲ್ಲಿ ಪಾಪ ಪ್ರಜ್ಞೆ ಇಲ್ಲ
ಸತ್ಯ, ಧರ್ಮದ ಪರಿವೇ ಇಲ್ಲ
ನ್ಯಾಯ , ನಿಷ್ಟೆಯ ಅಂಕುಶವಿಲ್ಲ
ಆಚಾರ, ವಿಚಾರಗಳ ಸುಳಿವೆ ಇಲ್ಲ
ಭಕ್ತಿ,ಭಾವದ ಪರಿಪಾಲನೆ ಇಲ್ಲ
ಓಂ ಪರಮಾತ್ಮ ನಾನು ಆತ್ಮವಿಲ್ಲದ ಮೂಡತ್ಮ ಭಗವಂತ ಪಾರದರ್ಶಕ ನೀನು ಮಿತ್ಯ ಬಿಂಬ ನಾನು
ಜ್ಯಾನವೆಂಬ ಕಣಗಳ ನಡುವೆ ಅರಿವೆಂಬ ಬೆಳಕ ಚೆಲ್ಲಿ ಯಶಸ್ಸಿನ ಮಿತ್ಯಬಿಂಬ ಚೆಲ್ಲಿ
ಅಜ್ಯಾನದ ಅಂಧಕಾರ ಕಳೆಯೊ ಜಗಮಲ್ಲ.

- Shivakumara S

04 May 2020, 11:17 am

ಕೋರಿಕೆ

ಸ್ಥಿರ ಇಲ್ಲ ಮನವು ನನಗೆ
ಶುಚಿ ಇಲ್ಲ ದೇಹ ನನಗೆ
ಭಕ್ತಿ, ಭಾವದ ರಚನೆ ಇಲ್ಲ ನನಗೆ
ಸ್ನೇಹ, ಪ್ರೀತಿ ಬಂಧವಿಲ್ಲ ನನಗೆ
ಸಹಕಾರ, ಸಹನೆಯ ಗುಣ ಇಲ್ಲ ನನಗೆ
ನಾನೇಕೆ ಈಗೆ, ಅರಿವಿಲ್ಲ ನನಗೆ
ಇದು ಸಮಜಂಶವೇ ಕರುಣಾಕರ ನಿನಗೆ.

- Shivakumara S

04 May 2020, 08:24 am

ಹುಡುಗಿ ಮನೆಯವರ ಬೇಡಿಕೆ

ಇದುವರೆಗೂ ನೋಡಿದ ಹುಡಿಗಿಯರು ಎಂಟು..!!
ಅದರಲ್ಲಿ ಒಬ್ಬರಲ್ಲೂ ಬೆಳೆಯಲಿಲ್ಲ ನನ್ನ ನಂಟು..!!
ಹುಡುಗಿಯ ಮನೆಯವರು ಕೇಳುವರು ಎಷ್ಟೀದೆ ನಿನ್ನಲ್ಲಿ ಗಂಟು....?

- Harish Gowda

04 May 2020, 12:51 am