Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನೆಯಲ್ಲಿ ಇರಿ

ಪ್ರೋತ್ಸಾಹಿಸಿ ಹರಸಿ ಬೆಂಬಲಿಸಿ ಚಪ್ಪಾಳೆ ತಟ್ಟಿ


ಒಂದು ದಿನದ ಕೆಲಸವನ್ನು ಬದಿಗೊತ್ತಿ ಆಟಗಾರರಿಗೆ ಬೆಂಬಲಿಸುವುದು ನಮ್ಮ ಕರ್ತವ್ಯ
ಅದಕ್ಕೆಂದೇ ಬರೆಯುತ್ತಿರುವುದು ಈ ಒಂದು ಕಾವ್ಯ

ಆಟಗಾರರಿಗೆ ಆಟವಾಡುವುದೇ ಅವರ ನರನಾಡಿಯಲ್ಲಿ ಇರುವ ಚೈತನ್ಯ
ಅದನ್ನು ಸಂಪೂರ್ಣವಾಗಿ ನೋಡಿ ಬೆಂಬಲಿಸುವುದು ನಮ್ಮ ನಿಮ್ಮ ಚಪ್ಪಾಳೆ ಅವರ ಬಾಳಿಗೆ ಸನ್ಮಾನ

ಆಡುವ ಆಟಗಾರರಿಗೆ ಪ್ರೋತ್ಸಾಹ ನೀಡದೆ ಸುಮ್ಮನೆ ಕುಳಿತಿರುವುದು ನಮಗೆ ಅವಮಾನ

ನಮ್ಮ ಬದುಕಿನಲ್ಲಿ ಪ್ರತಿಯೊಂದಕ್ಕೂ ಗೆಲುವನ್ನು ಕಾಣಬೇಕೆಂದು ನಾವು ಹೇಗೆ ಬಯಸುತ್ತೇವೋ ಅದೇ ರೀತಿ ಒಬ್ಬ ಆಟಗಾರನಿಗೆ ಬೆಂಬಲವನ್ನು ಸೂಚಿಸಿ ಬೆಂಬಲಿಸಿ ಬದುಕುವುದು ನಮ್ಮ ಅಧಿಕಾರ ಹಾಗೂ ಅವರಿಗೆ ಕೊಡುವ ಪ್ರೋತ್ಸಾಹ

ಆಟ ಯಾವುದಾದರೇನು ಚಪ್ಪಾಳೆ ತಟ್ಟಿ ಅವರಿಗೆ ಬೆಂಬಲಿಸುವುದೇ ನಮ್ಮದೊಂದು ಸಂಸ್ಕೃತಿ

ಅವರು ನಮ್ಮವರು ಇವರು ನಮ್ಮವರು ಎನ್ನದೇ ಆಡುವ ಆಟಗಾರರೆಲ್ಲರೂ ನಮ್ಮವರೆಂದು ತಿಳಿದುಕೊಂಡು ಚಪ್ಪಾಳೆ ತಟ್ಟಿ ಸಂತೋಷದಿಂದ ಕಿರುಚಾಡಿ ಅವರಿಗೆ ಹೆಚ್ಚಿನ ಗೆಲುವನ್ನು ನೀಡುವುದೇ ನಮ್ಮ ಬೆಂಬಲದ ಕೀರ್ತಿ

ಬನ್ನಿ ಎಲ್ಲರೂ ಸೇರಿ ಆಟಗಾರರಿಗೆ ಪ್ರೋತ್ಸಾಹಿಸೋಣ ಬೆಂಬಲ ನೀಡೋಣ ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸೋಣ
ಕೋರೊನಾ ವಿರುದ್ಧ ಹೋರಾಡೋಣ
ಮನೆಯಲ್ಲಿ ಇರೋಣ
ಪೊಲೀಸ್ ಸೈನಿಕರು ಮತ್ತು ಡಾಕ್ಟರ್ ಗಳಿಗೆ ಒಂದನೇ ಸಲ್ಲಿಸೋಣ

✍️ವಿ.ಶಿವಾನಂದ

- Shivanand V Anandadavar

03 May 2020, 08:59 pm

ನಿನ್ನೊಂದಿಗೆ ನಾನು

ನಿನ್ನೊಂದಿಗೆ ನಾನು
ಇರುವಾಸೆ ಎಂದೆಂದು
ನಿನ್ನೀ ಮುದ್ದು ಪ್ರೀತಿಯ
ಸವಿಯುವಾಸೆ ಮೂಡುತಿಹುದು


ರೆಪ್ಪೆ ಮುಚ್ಚಲು ಕಣ್ಣೊಳಗೆ
ಕಾಡುವ ಕನಸು ನಿನೊಲವು
ಮಾಸದ ಪಿಸು ಮಾತುಗಳಿಗೆ
ಸ್ವರದ ಲಾಂಛನವು ನೀನಾಗಬೇಕು


ಕಿರುಬೆರಳು ಚಾಚಿದರೂ ಕ್ಷಣವೇ
ತಾಕಬೇಕು ನಿನ್ನೀ ಹಸ್ತವು
ಪೂರ್ಣ ವಿರಾಮವೇ ನೀಡಲಾಗದ ನನ್ನೀ
ಕಾಟಕ್ಕೆ ನೀನೊಬ್ಬನೇ ಹಕ್ಕುದಾರನಾಗಬೇಕು


- ಹಂಸ ಕುಲಾಲ್✍️✍️✍️

- ಹಂಸವೇಣಿ

03 May 2020, 06:16 pm

ಇರುವುದೆಲ್ಲವ ಬಿಟ್ಟು

ಎಂದೂ ಈ ಮನ ಇಲ್ಲದರ ಬಗ್ಗೆಯೇ
ತನ್ನ ಒಲವನ್ನ ತೋರಿಸುವುದು
ಉತ್ತರ ಶೂನ್ಯ ಎಂದಾದರೆ
ದುಃಖದ ಕಡಲು ಜೊತೆಯಾಗುವುದು
ಇರುವುದನ್ನೇ ಸ್ವಾಗತಿಸಿ ಒಮ್ಮೆ,,,,,


- ಹಂಸ ಕುಲಾಲ್✍️✍️✍️

- ಹಂಸವೇಣಿ

03 May 2020, 05:53 pm

"ಪ್ರಕೃತಿಯ ಪಾಠ"

"ಪ್ರಕೃತಿಯ ಪಾಠ"

ಎಲ್ಲಿಂದಲೋ ಬಂದ ಕಾಣದಾ ಸೂಕ್ಷ್ಮಾಣುವೊಂದು
ಮನುಜ ದೇಹವ ಸದ್ದಿಲ್ಲದೆ ಹೊಕ್ಕು ರೋಗವ ತಂದು
ಅಬ್ಬರದಾರ್ಭಟಕೆ ವಿಶ್ವದೆಲ್ಲರು ಸೊರಗಿಹರಿಂದು ನೊಂದು
ಆವರಿಸಿಹ ಕತ್ತಲು ಕಮರಿ ಬೆಳಕು ಬೀರುವುದು ಇನ್ನೆಂದು|

ನೀತಿ ನಿಯಮ ಗಾಳಿಗೆ ತೂರಿದ ಅಜ್ಞಾನ ಅಹಮಿಕೆ
ಮತಿಗೆಟ್ಟ ಮನದ ಓಟಕೆ ಅಂಕುಶದ ಅಂಕೆಯ ಕುಣಿಕೆ
ರೋಗ ರುಜಿನಕೆ ಅಂಜದೆ ತಿರುಗಿ ಸಾವಿನ ಬಳಿಗೆ ಸಾರಿ
ವಿನಮ್ರದಿ ನನ್ನದೊಂದು ಮನವಿ ಇಂದು ಒಳಗಿರೆಂದು ಕೋರಿ||

ನೇಹಿ ಬಂಧು ಬಾಂಧವರ ಕಂಡು ತಬ್ಬಿ ಮುತ್ತಿಕ್ಕಿ ಕೈಕುಲುಕುವ ಅನ್ಯರ ಸಂಸ್ಕೃತಿ
ಈಗಲಾದರೂ ಕರಮುಗಿದು ಉಪಚರಿಸಿ ಮೆರೆವ ಧನ್ಯ ನನ್ನಮ್ಮ ಭಾರತಿ
ಭವ್ಯತೆಗೆ ಮೆರಗಿಟ್ಟು ನವ್ಯತೆಯ ಸೋಗನಳಿಸಿ ಬೆಳಗಿಸಿ ಸಂಸ್ಕೃತಿಯ ಆರತಿ||

ಎತ್ತ ಸಾಗಿದೆ ಅವಿವೇಕದಿ ಅಜ್ಞಾನದಿ ವರ್ತಿಸುತಿಹ ಜನ
ರಣಕೇಕೆ ಹಾಕಿ ಬರೆದಾಗಿದೆ ಮರಣ ಮೃದಂಗ ಶಾಸನ
ಗುರಿಯಿಲ್ಲದ ಅತಿಯಾಸೆಯ ವೇಗಕೆ ಬೇಕಿಂದು ಕಡಿವಾಣ
ಪ್ರಕೃತಿಯ ಮುನಿಸನಳಿಸಿ ತಣಿಸಲು ಎಲ್ಲರೊಟ್ಟಿಗೆ ಬದುಕಿ ಬಾಳೋಣ||

ಎಲ್ಲಿ ನೋಡಿದಲ್ಲಿ ಶವಗಳ ರಾಶಿ ಬೇಕು ಬೇಡಗಳ ಗೊಡವೆ
ಸಾಮಾಜಿಕ ಅಂತರವಿರಲಿ ಒಳಿತಿಗಾಗಿ ನಮ್ಮೆಲ್ಲರ ನಡುವೆ
ಗೊತ್ತಿಲ್ಲದೆ ದೂರದೂರಿಂದ ತಂದು ಮಹಾ ಮಾರಿಯ ಹೊತ್ತು
ನಿರ್ಲಕ್ಷದಿ ಬೀದಿಯೆಲ್ಲವ ಸುತ್ತಿ ತಂದರು ಅಮಾಯಕರ ಪ್ರಾಣಕ್ಕೆ ಕುತ್ತು||

ಕಾಲನ ಕರೆಯನುಡುಕಿ ಹೊರಟಂತಿದೆ ಮೇರೆ ಮೀರಿದ ದುರಾಸೆ
ನಿಸರ್ಗ ಕಲಿಸಿ ತೋರಿಸಿ ಮೆರೆಯುತಿದೆ ತನ್ನದೇ ಆದ ವರಸೆ
ನಶ್ವರವೀ ಬದುಕು ಒಳಿತು ಮಾಡಿ ನಡೆ ಅಂತ್ಯ ಶಾಶ್ವತ
ಮರೆತು ಬೀಗಿ ನೋವನುಳಿಸಿ ಬಿಕ್ಕಿ ಆಗದಿರು ನೀನು ಅನಾಥ||

ಅನ್ಯಾಯ ಅಕ್ರಮಗಳ ಸುಳಿಗೆ ಸಿಲುಕಿ ತುಂಬಿದೆ ಪಾಪ ಕರ್ಮಗಳ ಜೋಳಿಗೆ
ಅಹಂಕಾರ ಅಜ್ಞಾನ ಅಂದಕಾರದ ಸ್ವಾರ್ಥದ ಕಲೆಯ ಗುರುತು ಬಾಳಿಗೆ
ನಿರ್ಗತಿಕರ ಬದುಕ ಕಿತ್ತು ನಡುಬೀದಿಗೆ ತಂದಿದೆ ರಕ್ತಪಿಪಾಸು ದಾಳಿಗೆ
ದಿಕ್ಕುಗಾಣದೆ ಎತ್ತೆತ್ತಲೋ ಸುತ್ತುತ್ತಿದೆ ದಿಕ್ಕಿಲ್ಲದೆ
ಸಿಲುಕಿ ಸುಳಿಗಾಳಿಗೆ||

ಮಾಲಿನ್ಯಕೆ ಮುನ್ನುಡಿ ಬರೆದು ಪ್ರಕೃತಿ ನಾಶಕೆ ಭ್ರಮೆಯ ಬೆನ್ನೇರಿ
ದಾರ್ಶನಿಕರ ನುಡಿಸಾರ ಅತಿಯಾಸೆ ಸಲ್ಲದೆಂದು ಅಂದೇ ಸಾರಿ
ಕೇಳಲೊಲ್ಲ ಕೆಡುಕು ಮತಿಗೆಟ್ಟ ಮೂಢ ಮಾನವ ಎಲ್ಲ ಗಾಳಿಗೆ ತೂರಿ
ಕೆಣಕಿ ಕಾಡುತಿದೆ ಇಂದು ಪ್ರಕೃತಿ ಇಣುಕಿ ಅಣಕದ ನಗುವ ಬೀರಿ||

ಬಿಕ್ಕುತ್ತಿದೆ ಮನ ಬದುಕನರಸಿ ಬಂದವರ ನೆನೆದು
ಬರಿಗೈಲಿ ಕುಳಿತಿಹರು ದಿಕ್ತಪ್ಪಿ ಬಸವಳಿದು ಬೆಂದು
ಬೆಂಗಾವಲ ಬೆಳಕಿಲ್ಲದ ಬಾಂಧವರ ನೆರಳಿಲ್ಲದೇ ನೊಂದು
ಬದುಕ ಕಳೆದುಕೊಂಡು ನೊಂದವರ ಕಂಬನಿಯ ಕಂಡು||

ಸ್ವಾರ್ಥದಾಸೆಗೆ ಕಟ್ಟಿದಾ ಅಂತಸ್ತಿನ ಕೋಟೆಯ ಕನಸು
ದಿಕ್ಕೆಟ್ಟು ಓಡುತಿದೆ ಒಂದೆಡೆ ನಿಲ್ಲದಾ ಹುಚ್ಚು ಮನಸು
ಕಟ್ಟಿ ಹಾಕು ದುರಂತಕೆ ಮುನ್ನ ಹಿಡಿದು ಈಗಲೇ ನಿಲ್ಲಿಸು
ನಿಸರ್ಗದ ಮುನಿಸು ಅದು ನಮ್ಮದೇ ಪಾಪಕರ್ಮ ತಾಳಿ ಸಹಿಸು||

ಜೀವದುಸಿರ ಉಳಿಸಲೊಸುಗ ಒಳಗಿರೆಂದು ನನ್ನ ಮನವಿ
ಮಡದಿ ಮಕ್ಕಳ ತಂದೆ ತಾಯ್ಗಳೊಟ್ಟಿಗೆ ಇರಿ ನವಿರಾಗಿ ಮೈದಡವಿ
ಬದುಕ ಧಾವಂತದ ಭ್ರಮೆಯಲಿ ಕಳೆದುಳಿದ ಮಮತೆಯ ಪ್ರೇಮಾಂಕುರ
ಮೌಲ್ಯಗಳುದಿಸಿ ಸಂಬಂಧಗಳ ಬೆಸುಗೆಯ ಚಿಲುಮೆ ಹತ್ತಿರ||

ನಮಿಸುವೆನು ನಾನು ಹಗಲಿರುಳು ಕಾಯ್ವ ರಕ್ಷಕರಿಗಿಂದು
ಜೀವ ಪಣವಿಟ್ಟು ಶ್ರಮಿಸುವ ವೈದ್ಯರಿಗೆ ಮುಂದೆ ಎಂದೆಂದು
ಬಿರುಬೇಸಗೆಯ ತಾಳಲಾರದ ಸೆಕೆ ಅಬ್ಬರಿಸುತಿದೆ ಸಾವಿನ ರಣಕೇಕೆ
ಮಡಿಲ ಕುಡಿಯ ಸತಿಯ ಒಲವ ಗಳಿಸಿ ಮೆರೆಸಲು ಒಳಗಿರಬಾರದೇಕೆ ....??!!

- gp

03 May 2020, 04:43 pm

@ಬದುಕಿಗೊಂದು ಬುಲೇಟು@

ಸಂಸಾರದಲಿ,
ತುತ್ತು ಕಡಿಮೆಯಾದರು,
ಮುತ್ತು ಕಡಿಮೆಯಾಗಬಾರದು,
ಇದೆ ಸುಖ ಸಂಸಾರದ ಗುಟ್ಟು
ಬಿಡದೆ ಹಾಕಿ ಸಾಧಿಸು ಪಟ್ಟು.

- sanjayG

03 May 2020, 08:44 am

ಬದುಕಿನ ಗಾಡಿ

ಬೇಕೆಂದು ಒಂದು ಗಾಡಿ
ಅಲ್ಲಿ ಇಲ್ಲಿ ಸುತ್ತಾಡಿ
ಸುಸ್ತು ಆಯ್ತು ನೋಡಿ
ಕೋನೆಗೆ ಬಂದಿದ್ದು ನಾಲ್ಕು ಜನರ ಹೆಗಲ ಮೇಲೆ ನನ್ನ ಬಾಡಿ

✍️ವಿ.ಶಿವಾನಂದ

- Shivanand V Anandadavar

02 May 2020, 11:43 pm

ಕಾಯುತ ಕುಳಿತೆ ನಿನಗಾಗಿ...

ಅವಳಿಗಾಗಿ ಕಾಯುತ್ತಾ
ಹೃದಯ..
ಮರೆತಿದೆ ಹೃದಯದ ಬಡಿತದ
ಸಮಯ..
ಕುಳಿತಿರುವೆ ನಾ ಕಾಯುತ್ತ
ಅವಳಿಗೆ...
ಬರಬಾರದೆ ಓ ಗೆಳತಿ ನೀ ನನ್ನ ಹೃದಯದ
ಊರಿಗೆ..

- Vishwa PS

02 May 2020, 09:53 pm

ಕಾಯಕ ಯೋಗಿ """""""""""

ಕಾಯಕವೇ ಕೈಲಾಸವೆಂದು ಪ್ರತಿಪಾದಿಸಿದ
ಕಾಯಕ ಯೋಗಿ
ಜಾತಿಮತ ಧರ್ಮದ ಮೌಢ್ಯವೆಂಬ ತಮವ
ಅಳಿಸಲು ಹೋರಾಡಿದ ಭೈರಾಗಿ !

ಮನದಲಿ ದೇವರನರಸಿ ಎಂದು ಬೆಳಕು ತೋರಿದೆ
ಕ್ರಾಂತಿಯ ಹರಿಕಾರನಾಗಿ
ವಿಶ್ವಮಾನವ ನೀನಿಂತೆಲ್ಲರ ಮನದೆ ಜಗಜ್ಯೋತಿ
ಬಸವೇಶ್ವರನೆಂದು ಅಜರಾಮರವಾಗಿ !

ಮಾನವತೆಯ ಸೆಲೆಯಲಿ ಧರ್ಮವ‌ ಅರಿತ ಬೆರಗು
ಅನುಭವ ಮಂಟಪದಲಿ ವಚನಗಳ ಸೊಬಗು

ಜಗದ ಮೌಢ್ಯವ ಬದಲಾಯಿಸಲು ಅನವರತ
ಗುಡುಗು
ದಯವೇ ಧರ್ಮದ ಮೂಲವಯ್ಯ ಎಂದು
ಸಾರಿದ ನಿಮ್ಮಿಂದ ಮಾನವತಾವಾದಿಯೆಂಬ
ಹೆಸರಿಗೆ ಮೆರುಗು !

- Shaku Thanks Amma Shaku

02 May 2020, 08:05 pm

ಕೊರೋನಾ

ಕೊರೋನಾ ಮಹಾ ಮಾರಿ
ಕೊಲ್ಲುತ್ತಿದೆ ಎಲ್ಲರ ಮೇಲಾರಿ
ಇದಕ್ಕಿಲ್ಲ ಯಾವುದೇ ಬೇದಭಾವ
ಪರದಾಡುತಿಹರು ಉಳಿಸಲು ಜೀವ !

ಚೀನಾದ ವುಹಾನ್ ನಲ್ಲಿ ಜನನ
ದಶದಿಕ್ಕಿನಲ್ಲಿ ಮರಣಮೃದಂಗನ
ಕೋಟೆ- ಕೊತ್ತಲಗಳ ದಾಟಿ
ಬಡವ- ಬಲ್ಲಿದರ ಭೇಟಿ

ಬೀಗುತಿದ್ದ ವಿಶ್ವದ ದೊಡ್ಡಣ್ಣನೂ;
ಆದ ಕೊರೋನಾ ಮುಂದೆ ಸಣ್ಣವನು
ಸರ್ವಾಧಿಕಾರಿಗಳ ಸಾಮ್ರಾಜ್ಯಗಳೆಲ್ಲ
ಕೊರೋನ ಬಲೆಯಲ್ಲಿ ವಿಲವಿಲ

ಭಾರತಕ್ಕೆರಗಿದ ಮಹಾಮಾರಿ
ತೋರುತ್ತಿದೆ ಸ್ಮಶಾನದ ದಾರಿ
ಪ್ರಧಾನಿ ಲಾಕ್ ಡೌನ್ ಜಾರಿ
ತೊಲಗಿಸಲು ಸಕಲ ತಯಾರಿ

ಹೋರಾಟಕ್ಕೆ ರಣರಂಗ ಸಿದ್ದ
ಶಸ್ತ್ರಸಜ್ಜಿತ ಕರೋನ ಸದಾ ಬದ್ದ
ಸ್ವಚ್ಛತೆ,ಸಾಮಾಜಿಕ ಅಂತರ
ಇವೆರಡೇ ನಮ್ಮೆಲ್ಲರ ಅಸ್ತ್ರ

ಊಸರವಳ್ಳಿಯಂತ ಗುಣಾಣು
ಪಾಪಿ ಕೊರೋನಾ ವೈರಾಣು
ಉಳಿಸಲು ವೈದ್ಯರ ಹರಸಾಹಸ
ನಿಯಂತ್ರಿಸಲು ಆರಕ್ಷಕರ ವನವಾಸ

ನಮ್ಮ ರಕ್ಷಣೆಗೆ ಹೊರಾಡುವವರಿಗೆ
ನೀಡೋಣ ಒಂದು ಸಲಾಮು
ಮುಂದಾಗೋಣ ದೇಶ ಸೇವೆಗೆ
ಲೇಪಿಸುತ್ತ ಕೊರೋನಾಗೆ ಮುಲಾಮು



ಶಾರದ

- ಶಕುಂತಲಾ

02 May 2020, 09:44 am

ಸಮಯ

ಕಾಯುವಾಗ ಕಡೆಗಣಿಸಿ ಹೋದೆ,
ಆದರೀಗ ಅದೇ ಸಮಯ
ನಿನ್ನನ್ನೆ ಕಾಯಿಸಿ ಕಡೆಗಣಿಸುತ್ತಿದೆ..!

- Megha

01 May 2020, 08:36 pm