Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೀವನ ಪರಿ

ಜೀವಿಸು ಮನದಾಸೆಯಂತೆ
ಬಯಸು ಕೊನೆಯಸೆಯಂತೆ
ಪ್ರೀತಿಸು ಉಸಿರೋಗುವಂತೆ
ಕ್ಷಮಿಸು ಭೂತಯಿಯಂತೆ
ಭಾವಿಸು ನಾ ನಿನ್ನವಳಂತೆ.....

- Nagamani Gupta

16 Aug 2024, 11:39 pm

"ನೀನು...."

"ನನ್ನ ಮಾತುಗಳೆಲ್ಲ ಸೋತಾಗ,
ನಾ ಕಣ್ಮುಚ್ಚಿ ಕೇಳುವ ಹಾಡುಗಳ ಹುಡುಕು,
ನಾ ಮೈಮರೆತು ಗುನುಗುವ ಹಾಡುಗಳ ಬೆದಕು.
ಆ ಹಾಡುಗಳಂತಹ ಹಾಡುಗಳ ಹಾಡು,
ಆ ಹಾಡುಗಳ ನಡುವಿನ ನೀರವ ಮೌನವ ನೋಡು. ಸಾವಿರ ಪದಗಳಿರಬಹುದೇನೋ ಆ ಕಡುಗತ್ತಲಲ್ಲಿ.
ನಾ ಆಡದೆ ಅವಿತಿಟ್ಟ ಮಾತುಗಳೆಲ್ಲ ಅಡಗಿರಬಹುದೇನೋ ಆ ಮೌನದಲ್ಲಿ "...!

-ಆಶಾ✍️

- Asha S A

14 Aug 2024, 02:03 pm

ಲೇ ನನ್ನೋಳೇ.... ನಿನಗೇ ಅಡುಗೆ ಮಾಡಲು ಬರದೆ ಇದ್ರು
ಪರವಾಗಿಲ್ಲ ಹೇಗಿದ್ರೂ ಅಡ್ಜೆಸ್ಟ್ ಮಾಡ್ಕೊತಿನಿ
ಆದ್ರೇ ಊಟ ಮಾಡೋದು ಮಾತ್ರ ಚನ್ನಾಗಿ ಕಲಿ
ಯಾಕೆಂದ್ರೇ ನನ್ನ ಅತ್ತೆ
ನನಗೆ ಬಯ್ಯೋದು ಬೇಡ....
ನನ್ನನ್ನ ಹೇಗೆ ನೋಡ್ಕೊಂಡ್ರು ಪರವಾಗಿಲ್ಲ
ಅಡ್ಜೆಸ್ಟ್ ಮಾಡ್ಕೊತಿನಿ
ಆದ್ರೇ ಮನೆಗೆ ಬಂದ ಸಂಭಂದಿಕರನ್ನ
ಚೆನ್ನಾಗಿ ನೋಡ್ಕೋ ಯಾಕೆಂದ್ರೆ ನಿನ್ನ ಅತ್ತೆ
ನಿನಗೇ ಬಯ್ಯೋದು ಬೇಡ....

- chandu

12 Aug 2024, 10:34 pm

"ಕವಿತೆ...."

ಕವಿತೆ ಹುಟ್ಟಬೇಕಾದರೆ,

ನಿಸರ್ಗ ಸೌಂದರ್ಯದ ರಮಣೀಯ ವರ್ಣನೆ, ಪರಿಸರ ಗುಟ್ಟಿಗೆ ಕಿವಿಯಾದ ಕವಿಯ ಕಲ್ಪನೆ!

ಭಾವಾತಿರೇಕವು ಉತ್ತುಂಗ ಅನುಭವವೇ, ಭವ-ಬಂಧನದಲ್ಲಿ ಅಕ್ಷರ ಸಾಲುಗಳ ಆಗರವೇ!

ಒಂಟಿತನದ ಮೌನ-ರಾಗಗಳ ಪದ ಮಾಲೆ, ಅನುಬಂಧದೊಳು ಅನುಭಾವ ಕುಂಚದ ಲೀಲೆ!

ಪ್ರೀತಿಯಲ್ಲಿ ಮುಳುಗಿದವರೆಲ್ಲಾ ಕವಿಗಳೇ, ಪ್ರೀತಿಯ ನುಡಿಗಳೆಲ್ಲವೂ ಕವಿತೆಗಳೇ!

-ಆಶಾ✍️

- Asha S A

12 Aug 2024, 08:56 am

ಕನ್ನಡ

ಇದು ಕೇವಲ ಭಾಷೆಯಲ್ಲ
ಇದೊಂದು ಭಾವನೆ, ಹೃದಯದ ಭಾಷೆ.
ತಾಯಿಯಂತೆ ಕಾಣುವ ನಾವು
ಕಾಯುವ ಗುಣವಿರಲಿ.
ಎರಡು ಸಾವಿರದ ಐದನೂರು ವರ್ಷಗಳ
ಇತಿಹಾಸವಿರುವ ಮಾತೃಭಾಷೆಗೆ ಸಮ್ಮಾನವಿರಲಿ.
ಸಾಹಿತ್ಯಕ್ಕೆ ಅತಿ ಹೆಚ್ಚು ಪ್ರಶಸ್ತಿ ಪಡೆದುಕೊಂಡಿರುವ
ಈ ಭಾಷೆಗೆ ಸ್ಥಾನ-ಮಾನ ಸಿಗಲಿ.
ಹೃದಯದ ಭಾಷೆ ಕನ್ನಡವಾಗಿರಲಿ.
ದುಡಿಮೆಯಲ್ಲಿ ಅನ್ಯ ಭಾಷೆ ಇರಲಿ.
ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗದೆ
ಪ್ರತಿ ದಿನವೂ ಕನ್ನಡವಾಗಲಿ.
ಜೀವನದಲ್ಲಿ ಭಾಷೆ ಮುಖ್ಯ
ಅದುವೇ ಮಾತೃ ಭಾಷೆಯಾಗಿರಲಿ.


- Shraddha H

09 Aug 2024, 09:25 pm

ಅವನು ❤️?

ನೀ ಜೊತೆಗಿರಲು ನೋವು ದೂರಾದಂತೇ
ನಿನ್ನ ಪ್ರೀತಿಯಲಿ ಮನಸು ಹಗುರದಂತೆ
ನೀ ನನ್ನವನೆಂಬಾ ಭಾವನೆ ಜೀವಕ್ಕಿಂತ
ಮಿಗಿಲು ನನಗೆ ❤️???
ಚಿತ್ರ ಶರತ್........

- chitra

07 Aug 2024, 11:43 pm

ಚಿಗುರೊಡೆದ ಸ್ನೇಹ

ನಿನ್ನ ಸ್ಪರ್ಶದ ಹಿತವೇ
ನನ್ನ ಗುರಿಗಳ ಸಾಧನೆಗೆ
ಹೊಸತೊಂದು ಭರವಸೆ.....

ಆ ಭರವಸೆಗೆ ಮುನ್ನುಡಿಯಾಗಿ
ಅರಳುತಿರು ನೀನು,
ಅದನ್ನೇ ನೋಡುತ ಹೊಸ ಕನಸು
ಕಾಣುವೆನು ನಾನು...

✍️ನಿಕಿತಾ V..






















- Nikita V

05 Aug 2024, 03:36 pm

ಅಮ್ಮ❤?

ನಿನ್ನ ಪ್ರೀತಿಯ ಮುಂದೆ
ಈ ಜಗದಲ್ಲಿ ಬೇರೇನೂ ಇಲ್ಲ....

ನಿನ್ನ ನಗುವಿನಲ್ಲಿ ನನ್ನ ನಗುವನ್ನು
ಕಾಣುವುದು ಬಿಟ್ಟು ಬೇರೇನೂ ಬೇಕಿಲ್ಲ..

ಇಷ್ಟೇ ಸಾಕು ಈ ಜನ್ಮಕೆ ನಿನ್ನನ್ನು ಅಗಲಿ
ಇರಲು ಊಹೆ ಕೂಡ ಮಾಡಲ್ಲ..

ಪ್ರೀತಿಯ ಧಾರೆ ಎರೆದ ನಿನಗೆ
ಹೊಗಳಲು ಪದಗಳೇ ಸಾಲುತ್ತಿಲ್ಲ...



- Nikita V

05 Aug 2024, 03:09 pm

ಮಳೆ

ಮನದ ಕಡಲಿಗೆ
ಬಂದ ಮಳೆ
ಕದಡಿತೇ ಮನವ
ನೂರು ನೋವುಗಳು
ಕಳೆಯಿತೇ
ಮಳೆಯ ರಬಸಕೆ

- Shilpa S

04 Aug 2024, 05:29 pm

ಗೆಳೆತನ

ಬಾಳಿನ ಪುಟದ
ಸುಂದರ ಬರವಣಿಗೆ
ಜೀವನದ ಸುಂದರ
ಕಾವ್ಯ
ಗೆಳೆತನ

- Shilpa S

04 Aug 2024, 02:31 pm