Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಂದರಿ

ಮೂಗುತಿ ಸುಂದರಿ,
ಮುಂಗುರಳ ಸರಿಸಿ,
ಕಾಡುತಿಹಳು ಪರಿವೆಯಿಲ್ಲದೆ
ಪ್ರೀತಿಯ ಲಹರಿ ಹರಿಸಿ...!

- Megha

01 May 2020, 06:53 pm

ಮೌನ ಮುರಿದು ಮಾತಾಡಿದೆ,

ಮೌನ ಮುರಿದು ಹೇಳುತ್ತಿರುವೆ
ಗೆಳೆಯ ಗೆಳತಿಯರೆ ನಾ ಇಂದು,
ಪ್ರೀತಿಯೊಂದೇ ಜೀವನವಲ್ಲ ಎಂದು
ಕಡೆಗಣಿಸಬೇಡಿ ಹೆತ್ತವರನ್ನು ಎಂದು,

ಹತ್ತಿ ಗೆಳೆಯ -ಗೆಳತಿಯರೆ
ನೀವು ಸಾಧನೆಯ ಶಿಖರ,
ಆಗಾ ಹುಡುಕಿಕೊಂಡು ಬರುವುದು
ಪ್ರೀತಿಯೇ ನಿಮ್ಮ ಹತ್ತಿರ,

ತಂದೆ -ತಾಯಿಯ ನೋಡಿಕೊಳ್ಳಿ ಚೆನ್ನಾಗಿ
ಅವರ ಆಶೀರ್ವಾದವಂದಿದ್ದರೆ ಸಾಕು,
ಬದುಕಿ ಬಾಳುವಿರಿ ಜೀವನದಲ್ಲಿ ನೀವು ಸುಖವಾಗಿ.

:-ವೀಣಾ ಲಿಂಗಣ್ಣ

- Veena

01 May 2020, 06:37 pm

ಭೂಮಿ

ಭೂಮಿ ತಾಯಿ ಹಸಿರು ಸೀರೆ ಉಟ್ಟಾಳ
ಕಲಕಲ ನಗುತ್ತಾಳ ಜೀವರಾಶಿಗಳಿಗೆ ಹೊಟೆ ನೆತ್ತಿ
ನೋಡುತಾಳ ಅವಳೇ ಸಕಲ ಜೀವರಾಶಿಗಳ
ಮಹಾತಾಯಿ.

- UMESH KHAJJIDONI

01 May 2020, 05:48 pm

ನೆನಪಿನ ಬುತ್ತಿ

ಬರೆದಿದ್ದೆ ಗೆಳತಿ ನಿನ್ನ ಹೆಸರಲಿ
ಕಥೆ, ಕವನ, ಕಾದಂಬರಿ,

ಆದರೆ ನನಗೆ ಉಳಿದಿರುವುದು ಈಗ
ಆ ನಿನ್ನ ನೆನಪುಗಳೇ ಬರೀ,

ನೆನಪಿದೆಯಾ ಗೆಳತಿ ನಿನಗೆ ಆ ಕ್ಷಣ
ನಾನು ಸ್ವಲ್ಪ ಮರೆಯಾದರೆ ಸಾಕು
ತಾಳುತ್ತಿದ್ದೆ ನೀ ಮೌನ,

ಎಷ್ಟು ಸುಂದರ ಆ ಹಳೆಯ ನೆನಪುಗಳು
ಮತ್ತೆ ಮತ್ತೆ ನಿನ್ನ ನೆನಪಾಗುವುದು ಗೆಳತಿ
ಓದುವಾಗ ನಿನಗಾಗಿ ನಾ ಬರೆದ ಕವಿತೆಗಳು.

:-ವೀಣಾ ಲಿಂಗಣ್ಣ

- Veena

30 Apr 2020, 11:47 pm

ಈ ನನ್ನ ಹೃದಯವು ಹೇಳಲು ಪ್ರಾರಂಭಿಸಿದೆ

ಈ ನನ್ನ ಹೃದಯವು ಹೇಳಲು ಪ್ರಾರಂಭಿಸಿದೆ
ನಿನ್ನ ಹೃದಯದ ಬಡಿತವಾಗುವ ಆಸೆ
ನಿನ್ನ ಉಸಿರಿನ ಉಸಿರಾಗುವ ಆಸೆ
ನಿನ್ನ ಪ್ರೀತಿಗೆ ನಾ ಸೋಲುವ ಆಸೆ
ನಿನ್ನಲ್ಲಿ ನಿನ್ನವನಾಗುವ ಆಸೆ
ದಯಮಾಡಿ ಉತ್ತರಿಸಿ ಈ ನನ್ನ ಪುಟ್ಟ ಹೃದಯಕ್ಕೆ

- Manoj nj Manoj

30 Apr 2020, 10:00 pm

ಕೊನೆಯವರೆಗೂ

ಕೊನೆಯವರೆಗೂ ಜೊತೆ ಇರುವೆ
ಎಂದವಳು ಮಾತು ತಪ್ಪಲಿಲ್ಲ
ಇಂದಿಗೂ ಜೊತೆ ಇದ್ದಾಳೆ
ಒಮ್ಮೊಮ್ಮೆ ನೆನಪಾಗಿ
ಮತ್ತೊಮ್ಮೆ ಮನಸಿನ ನೋವಾಗಿ
ಆ ದೇವರಲ್ಲಿ ಕೇಳುತ್ತಿರುವೆನು
ನಿನ್ನನ್ನು ಮರೆಯುವ ಶಕ್ತಿ ಕೊಡು
ಈ ನನ್ನ ಮನಸ್ಸಿಗೆ ಎಂದು

- Manoj nj Manoj

30 Apr 2020, 09:53 pm

ಕನಸ್ಸಲ್ಲು ನನಸ್ಸಲ್ಲು

ಕನಸ್ಸಲ್ಲು ನನಸ್ಸಲ್ಲು ಅವಳ್ದೆ ಧ್ಯಾನ
ಈ ಮನಸಿಗಿಲ್ಲ ಒಂಚೂರು ಸಮಾಧಾನ...
ಅವಳಿಗೆ ಮೈತುಂಬ ಬಿಗುಮಾನ
ಅವಳಿಲ್ದೆ ಹೇಗೆ ನನ್ನ ಜೀವನ...?
ಎಷ್ಟಂತ ಬರೆಯಲಿ
ಅವಳ ಮೇಲೆನೆ ಹನಿಗವನ...?
ಅವಳೇ ಒಲಿಯದಿದ್ದ್ರೆ
ಆಗೋದ್ಯಾಗೆ ನನ್ನ ಪ್ರೀತಿ ಪಾವನ...?
ಇರೋ ಪ್ರೀತಿನ್ಯಾಕೆ ಮರೆಮಾಚಿದೆ
ಆಕೆಯ ತುಂಟ ನಯನ?
ಉತ್ತರಿಸಲಾಗದ ಪ್ರಶ್ನೆಗಳನ್ನೇ
ಕೇಳೊದ್ಯಾಕೆ ನನ್ನೀ ಹುಚ್ಚು ಮನ?
ಆಕೆಯ ಉತ್ತರಕ್ಕಾಗಿ ಕಾದು
ಕಳೆದೋಯ್ತು ನನ್ನ ಯೌವ್ವನ...
ಆಕೆ ಖುಷಿಯಿಂದಲೇ ಬರೆದಳಾ
ಮನೆಮದ್ವೆಗೆ ಮೌನ ಚರಣ...?
ಆಕೆ ನನಗೆ ಪ್ರಶ್ನೆಯಾಗೆ ಉಳಿದು
ಪ್ರಾರಂಭಿಸಿದಳು ಹೊಸ ಜೀವನ...
ಅವಳ ವಿರಹ ವೇದನೆಯಲ್ಲೇ
ನಾ ಸೇರಿದೆ ಸತ್ತ ಕವಿತೆಗಳ ಮಸಣ...

- Manoj nj Manoj

30 Apr 2020, 09:37 pm

ನಿನ್ನದೇ ಬಿಂಬ

ನನ್ನ ಕಣ್ಣಾ ಕಡಲಲಿ
ನಿನ್ನ ನೆನಪಿನ ನೌಕೆಯು ತೇಲುತಿದೆ ಗೆಳೆಯ ,
ಕಣ್ ಬಿಟ್ಟರು,
ಕಣ್ತೆರೆದರು, ನಿನ್ನದೇ ಬಿಂಬ ಕಾಣುತಿದೆ ಗೆಳಯ.

:- ವೀಣಾ ಲಿಂಗಣ್ಣ

- Veena

30 Apr 2020, 05:32 pm

ನೀನಿಲ್ಲದೆ ಈ ದಾರಿಯು

ನೀನಿಲ್ಲದೆ ಈ ದಾರಿಯು ಒಂಟಿಯಾಗಿದೆ
ನೀನಿಲ್ಲದೆ ಸುಖದ ಜೊತೆ ದುಃಖವು
ಜೊತೆಯಾಗಿದೆ
ಮರೆಯಲಾಗದೆ ನಿನ್ನ ನೆನಪಲ್ಲಿ ಈ
ಹೃದಯವು ಒಂಟಿಯಾಗಿದೆ ಒಬ್ಬಂಟಿಯಾಗಿದೆ

ಇಂತಿ ನಿನ್ನ ಪ್ರೀತಿಯ

- Manoj nj Manoj

30 Apr 2020, 04:41 pm

ನೀ ಬರೆದ ಕವಿತೆಯಲ್ಲಿ

ನೀ ಬರೆದ ಕವಿತೆಯಲ್ಲಿ
ಮರೆತು ಹೋದ ಪದವೊಂದು ನಾನು
ನಾ ಬರೆಯಲಾಗದೇ ಹೋದ ಕವಿತೆಯಲ್ಲಿ
ಮರೆಯಲಾಗದ ಸಾಲುಗಳು ನೀನು
ನನ್ನ ಮನಸ್ಸಿನ ಒಡತಿ ನೀನು

- Manoj nj Manoj

30 Apr 2020, 04:33 pm