Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹರಿಯುವ ನೀರಿನ ಹಾಗೆ

ಹರಿಯುವ ನೀರಿನ ಹಾಗೆ ಓಡುವ ಸಮಯ
ಬರಲಾಗದು ಹಿಂದಕ್ಕೆ
ತಿರುವು ಕಲ್ಲುಮುಳ್ಳುಗಳಿಗೆ ಹೆದರದಿರು
ಓಡುತ್ತಿರು ಮುಂದಕ್ಕೆ
ಗೆಲುವು ನಿನ್ನದೇ ಜಯವು ನಿನ್ನದೆ
ನಿಷ್ಠೆಯಿಂದ ಗೌರವಿಸಿದರೆ
ಪ್ರತಿ ನಿಮಿಷದ ಸಮಯಕ್ಕೆ
ಇಂದ
ಮನೋಜ್ ಎನ್ ಜೆ

- Manoj nj Manoj

30 Apr 2020, 04:24 pm

ನಿನ್ನ ನೆನಪುಗಳ ನೆನೆದು

ನಿನ್ನ ನೆನಪುಗಳ ನೆನೆದು
ಕವಿತೆ ಬರೆಯಲು
ಕವಿಯು ನಾನಲ್ಲ
ಹಾಡು ಹೇಳಲು
ಹಾಡುಗಾರ ನಾನಲ್ಲ
ನಿನ್ನ ಚಿತ್ರ ಬಿಡಿಸಲು
ಚಿತ್ರಗಾರರು ನಾನಲ್ಲ
ಪದಗಳ ಸೇರಿಸಿ ಪುಸ್ತಕ ಬರೆಯಲು
ಬರಹಗಾರನೂ ನಾನಲ್ಲ ಆದರೂ
ನನ್ನ ಮನಸ್ಸಿನ ಭಾವನೆಗಳನ್ನು ಬರೆಯಲು ಪ್ರಯತ್ನ ಮಾಡುತ್ತಿರುವೆ ನಿನ್ನನ್ನು ವರ್ಣಿಸಲು ನಿನಗಾಗಿ ನಿನ್ನ ಮನಸಿಗಾಗಿ
ಇಂದ
ಮನೋಜ್ ಎನ್ ಜೆ

- Manoj nj Manoj

30 Apr 2020, 01:28 pm

ಮುಂದುವರೆಯಸಾಲು...

ಸಖೀ..
ನೀ ಮುಡಿದು ಬಾ
ಮಲ್ಲಿಗೆ..!
ಹಾಗೇ ಬಳುಕುತ್ತಾ
ಮೆಲ್ಲಗೆ..!
~ ಸಿದ್ದು ಗುಂಡ

ಸಖ..
ನಾ ಮುಡಿದು
ಕಾಯುತ್ತಿರುವೆ ಮಲ್ಲಿಗೆ..!
ನೀ ಎಂದು
ಬರುವೆ ಹೇಳು ಇಲ್ಲಿಗೆ..!
~ ಸಿರಿ ಕನ್ನಡತಿ

- - ಸಿದ್ದು ಕನ್ನಡಿಗ

30 Apr 2020, 08:18 am

ಮನಸಿನ ಮಾತು ಕೇಳದೆ

ಮನಸಿನ ಮಾತು ಕೇಳದೆ ಪ್ರೀತಿಸಿದೆ ಅಂದು ಇಂದಿಗೂ ಮನಸ್ಸು ಕೊರಗಿದೆ ನಿನ್ನ ನೆನೆದು
ದಯಮಾಡಿ ಹೇಳೆ ಗೆಳತಿ ಹೇಗೆ ಮರೆಯುವುದು
ಆ ನಿನ್ನ ಪ್ರೀತಿಯ ಕ್ಷಣಗಳನ್ನು
ಇಂತಿ
ಮನೋಜ್ ಎನ್ ಜೆ

- Manoj nj Manoj

30 Apr 2020, 12:58 am

ಮನಸ್ಸು ಮಾತನಾಡಲು ಪ್ರಾರಂಭಿಸಿದೆ

ಮೌನವಾಗಿದ್ದ ನನ್ನ ಮನಸ್ಸು ಮಾತನಾಡಲು ಪ್ರಾರಂಭಿಸಿದೆ
ನಿನ್ನ ಕಂಡ ಕ್ಷಣದಿಂದ ನಿನ್ನ ಅಂದವ ವರ್ಣಿಸಲು ನೀ ನನ್ನವಳೆಂದು ನಾನಿನ್ನ ಅವನೆಂದು ಆದರೂ ನೀ ಕೇಳದೆ ಹೋದೆ ನನ್ನ ಮನಸ್ಸಿನ ಮಾತುಗಳನ್ನು ಆಗಿನಿಂದ ನನ್ನ ಮನಸ್ಸು ಮತ್ತೆ ಮೌನವಾಗಿದೆ ಏನು ಮಾಡಲಿ ಹೇಳಿಬಿಡು ಗೆಳತಿ ನಿನ್ನ ಮರೆಯಲು
ಇತಿ ನಿಮ್ಮ
ಮನೋಜ್ ಎನ್ ಜೆ

- Manoj nj Manoj

29 Apr 2020, 11:39 pm

ಮಾರುವೇಷ

ಹುಟ್ಟು ದೋಷ,
ಸಾವು ದೋಷ,
ಇದರ ಮಧ್ಯೆ ಒಳ್ಳೆಯವರಂತೆ ನಟಿಸುವುದು ನಾವು ಹಾಕಿರುವ ಮಾರು ವೇಷ.

- Veena

29 Apr 2020, 09:12 pm

ನನ್ನ ಪ್ರೇಯಸಿ

ಕನಸು ಕಣೋ ಹೊತ್ತಿಗೆ
ಹೃದಯ ಒಡೆದು ಚೂರಾಯಿತು,
ನನಗೆ ತಿಳಿಯದೆ ಹಾಗೆ ಕಣ್ಣಾ ಕಂಬನಿ
ಕೆನ್ನೆಯ ತಾಕಿತು,

ನನ್ನ ಹೃದಯದ ಗೋಡೆಯ ಮೇಲೆ
ನಿನ್ನದೇ ಹೆಸರಿದೆ,
ಹೆಸರಿಟ್ಟು ಕೂಗುವ ವೇಳೆಗೆ
ಮನಸೇ ಮುರಿದಿದೆ,

ಓ ನನ್ನ ಪ್ರೇಯಸಿ
ಯಾಕೆ ಹೋದೆ ನನ್ನ ಮನಸ್ಸ ನೋಯಿಸಿ,
ನನ್ನ ಕನಸುಗಳ ಸಾಯಿಸಿ,

ಈ ನನ್ನ ಅತಿಯಾದ ಪ್ರೀತಿಯು
ಆಯಿತೆ ನಿನಗೆ ಬೇಲಿಯು.

- Veena

29 Apr 2020, 08:48 pm

ನಮನ

ಅವಳಿಗೆ ನನ್ನ ನಮನ
ಏಕೆಂದರೆ
ಸೆಳೆದಳು ಕವನಗಳತ್ತ ನನ್ನ ಗಮನ

- ಚೇತನ್ ಬಿ ಸಿ

29 Apr 2020, 08:35 pm

ತಾಯಿಭಾರತಿ

ನೋಡು ಬಾ ಗೆಳೆಯ ಕಣ್ಮನ ಸೆಳೆಯುವ ಪ್ರಕೃತಿ
ತಾಯೇ ಬೆಳಗುವೆನು ನೀನಗೆ ಕೃತಜ್ಞತೆಯ ಆರತಿ
ನೀನ್ನೊಡಲಲಿ ಆಡುತಿಹೆವು ನಾವು ತಾಯಿ ಭಾರತಿ
ಜಗದಲಿ ಹೆಚ್ಚಿದೆಯಮ್ಮ ಈ ನಿನ್ನ ಕೀರ್ತಿ

ಲೋಕದಲಿ ಶ್ರೇಷ್ಠವಾಗಿದೆ ಹಿಂಧೂಸ್ಥಾನ
ಪುಣ್ಯಪುರುಷರ ನಾಡಿದು ಈ ಜನ್ಮ ಪಾವನ
ಬೇಡಿಕೆಯಲಿ ಕೋರುವೆನು ದೇವರನ್ನ
ಪ್ರತಿ ಜನ್ಮವೂ ಇಲ್ಲೇ ಹುಟ್ಟಿಸು ನನ್ನ
....ಕನಸು(SCG)

- shambhug@mail.com

29 Apr 2020, 01:47 pm

ಒಮ್ಮೆ ತಿಳಿದು ನೋಡಾ

ಉಡುಗೆ -ತೊಡುಗೆ ನೋಡಿ
ಅಳಿಯಬೇಡಾ ಮೂಢ,
ಬಹಿರಂಗದ ಆಡಂಬರಕ್ಕಿಂತ
ಅಂತರಂಗದ ಗುಣವನು ಒಮ್ಮೆ ತಿಳಿದು ನೋಡಾ,

ಬಡವನೆಂದು ದುಡಾಬೇಡಾ ಮೂಢ,
ಇದ್ದವರೇ ನಿಜವಾದ ಕಳ್ಳರು ಒಮ್ಮೆ ತಿಳಿದು ನೋಡಾ,

ಹಣ, ಆಸ್ತಿ, ಅಧಿಕಾರವಿದೆಯೆಂದು
ಮೆರೆಯಬೇಡ ಮೂಢ,
ಇದೆಲ್ಲ ಕ್ಷಣಿಕ ಸುಖ ಒಮ್ಮೆ ಅರಿತು ನೋಡಾ.

ರೈತನೆಂದು ಕೀಳಾಗಿ ನೋಡಬೇಡಾ ಮೂಢ,
ನೀ ತಿನ್ನುವ ಪ್ರತಿ ಅಗಳು ರೈತನ ಶ್ರಮದ ದುಡಿಮೆ ನೋಡಾ.

ಹುಟ್ಟಿದ ಊರನು ಎಂದು ತೊರೆಯಬೇಡಾ ಮೂಢ,
ಮರೆಯಬೇಡಾ ನೋಡಾ, ಅದುವೇ ಪ್ರೀತಿ ವಾತ್ಸಲ್ಯದ ಗೂಡ.

ಅಂದನೋಡಿ - ಅಂಧಕನಾಗಬೇಡಾ ಮೂಢ
ಕಣ್ತೆರೆದು ನೋಡು ಒಳ್ಳೆ ಗುಣ, ಮನಸಿರುವವರ,

ಪ್ರೀತಿ ಬಯಸಿ ಕುರುಡನಾಗ ಬೇಡಾ ಮೂಢ,
ಒಮ್ಮೆ ನೆನಪಿಸಿಕೋ ನಿನ್ನ ನಂಬಿದವರ ಪಾಡ

:-ವೀಣಾ ಲಿಂಗಣ್ಣ
(ರಾಯಚೂರು )

- Veena

29 Apr 2020, 01:24 pm