Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾಳೆ ಇವತ್ತು ಆಗುತ್ತೆ , ಇವತ್ತು ನಿನ್ನೆ ಆಗುತ್ತೆ ಆದ್ರೆ ನಿನ್ನೆ ಯಾವತ್ತು ಇವತ್ತ್ ಆಗಲ್ಲ ಯಾಕಂದ್ರೆ ನಿನ್ನೆಯ ನೆನಪುಗಳಷ್ಟೇ ನಮ್ಮ ಜೊತೆ ಇರೋದು ನಿನ್ನೆ ಯಾವತ್ತೂ ನಮ್ಮ ಜೀವನದಲ್ಲಿ ಮತ್ತೆ ಬರೋದಿಲ್ಲ ಅದಕ್ಕೆ ನೆನಪೊಂದೇ ಶಾಶ್ವತ ಅನ್ನೋದು...
- MM
29 Apr 2020, 11:19 am
ಬೆಳಕಿನಲ್ಲಿ ಬೆಳಕಿಗೆ ಬೆಲೆ ಇಲ್ಲ ಭಯಂಕರ ಕತ್ತಲೆಯಲ್ಲಿ ಕಿರು ದೀಪದ ಬೆಳಕಿಗೂ ಬೆಲೆಯುಂಟು ನೂರಾರು ಸುಳ್ಳಿನ ಪ್ರೀತಿಗಿಂತ ಒಂದು ಸತ್ಯವಾದ ಪ್ರೀತಿಗೆ ಬೆಲೆ ಉಂಟು
- Muttu Ganeshi
29 Apr 2020, 10:49 am
ದೇಶದ ಬೆನ್ನೆಲುಬು ರೈತ
ಮಾನವ ಕುಲದ ಸ್ನೇಹಿತ
ಪ್ರತೀ ಮನದಲ್ಲೂ ಜೀವಂತ
ನಮ್ಮಈ ಅನ್ನದಾತ
- Chinmayi C S
29 Apr 2020, 08:35 am
ಓ ನನ್ನ ಗೆಳೆಯ
ನಿನ್ನ ಕಣ್ಣುಗಳಲ್ಲಿ ಕನಸಾಗುವ ಆಸೆ,
ನಿನ್ನ ಮೊಗದಲಿ ಮಂದಹಾಸ ಆಗುವ ಆಸೆ,
ಕೊನೆವರೆಗೂ ನಿನ್ನ ಒಳಿತನ್ನು ಬಯಸುವ ಆಸೆ.
- Veena
28 Apr 2020, 10:12 pm
ಎಲ್ಲಿದ್ದೆ ಇಲ್ಲಿ ತನಕ
ಬಂದಿದ್ದೆ ಮನೆತನಕ
ನೋಡು ನೀ ನನ್ನ ಮುಖ
ಉಸಿರಾಡುವೆ ಕೊನೆತನಕ
✍️ವಿ.ಶಿವಾನಂದ
- Shivanand V Anandadavar
28 Apr 2020, 08:58 pm
ಸಹನೆ ನಿನ್ನದಾದರೆ
ಸಕಲವೂ ನಿನ್ನದೇ
ವಿನಯವು ನಿನ್ನದಾದರೆ
ವಿಜಯವು ನಿನ್ನದೇ,
ಪ್ರೀತಿ ಎನ್ನುವುದೇ
ಒಂದು ಕನಸಿನ ಕೋಟೆ,
ಬರಬೇಡ ಗೆಳತಿ ಹೊತ್ತು ನೀ ಆಸೆಗಳ ಮೂಟೆ ,
ಇಲ್ಲಿ ಎಲ್ಲಾ ಸುಖಗಳು ಕ್ಷಣಿಕ,
ತೀರದ ನೋವುಗಳೇ ಅಧಿಕ.
- Veena
28 Apr 2020, 08:43 pm
ಜೋಪಾನವಾಗಿದ್ದರೆ ಕನ್ನಡಿ
ನೆಲಕ್ಕೆ ಬಿದ್ದರೆ ಪುಡಿ -ಪುಡಿ,
ನಂಬಿಕೆ ಇದ್ದರೆ ದಾಂಪತ್ಯ,
ನಂಬಿಕೆ ಇಲ್ಲದಿದ್ದಾರೆ ಅದುವೇ
ದಾಂಪತ್ಯಕ್ಕೆ ಅಂತ್ಯ.
:-ವೀಣಾ ಲಿಂಗಣ್ಣ
- Veena
28 Apr 2020, 08:32 pm
ಬೆಳಕಿನಲ್ಲಿ ಬೆಳಕಿಗೆ ಬೆಲೆ ಇಲ್ಲ ಭಯಂಕರ ಕತ್ತಲೆಯಲ್ಲಿ ಕಿರು ದೀಪದ ಬೆಳಕಿಗೂ ಬೆಲೆಯುಂಟು ನೂರಾರು ಸುಳ್ಳಿನ ಪ್ರೀತಿಗಿಂತ ಒಂದು ಸತ್ಯವಾದ ಪ್ರೀತಿಗೆ ಬೆಲೆ ಉಂಟು
- Muttu Ganeshi
28 Apr 2020, 08:28 pm
ಇರು ಗೆಳತಿ ಸುಖ-ಸಂತೋಷದಿಂದ,
ಅರಸುವೇನು ನನ್ನಿ ಪುಟ್ಟ ಮನಸ್ಸಿನಿಂದ,
ಬೇಡಾ ಗೆಳತಿ ಮನಸ್ತಾಪ,
ನಂತರ ಪಡಬೇಡ ನೀ ಪಾಶ್ಚಾತಾಪ.
:-ವೀಣಾ ಲಿಂಗಣ್ಣ
- Veena
28 Apr 2020, 08:27 pm
ಮೌನವೆಂಬುದು ಪ್ರಾಬಲ್ಯ ಶಕ್ತಿ
ಮೌನ ಸ್ತಬ್ಧವಾದರೇ ಅದು ಜೀವನದ ಯುಕ್ತಿ
ಏನೋ ಮನಸ್ಸೆಂಬ ಜಾದೂಗಾರ ಕೇಳದೆ
ಒಳ ಕದವ ತಟ್ಟಿ ಮನವ ಮುಟ್ಟಿ ನಾ ಹೇಳಿದೆ.
ಮನದ ಮಾತುಗಳ ವಿಸ್ತರಿಸಿದೆ
ಒಳಗಿನ ಭಾವಗಳು ಉತ್ತರಿಸಿದೆ
ಎಲ್ಲವನ್ನೂ ಏಕೋ ಮೌನವಾಗಿಸಿದೆ .
ಮೌನಸರೋವರದಿ ಹದುಗಿಟ್ಟ ಎಷ್ಟೋ ಭಾವ
ಮನದೊಳಗಿನ ಅಂತರಾಳದಿ ನಲುಗಿದೆ
ತಿಂಗಳ ಬೆಳಕಿಗೆ ಬಾರದೇ, ತುಸು ದೂರ ಸಾಗಿದೆ
ಇಳೆಯ ಪರಿವಿಲ್ಲದ ಮನದಿ ಮಾತು ಮೌನವಾಗುತಿದೆ .
ಅದೇನೋ ಹೃದಯ ಇದನು ಬಯಸುತಿಲ್ಲ
ಅಂತರಾಳದ ಮೌನ ಸರಿ ಕೇಳುತಿಲ್ಲ
ಮತ್ತೆ ಅದೇ ಮಾತು ಮರುಕಳಿಸಿದೆಯಲ್ಲ
ಪುನಃ ಮನವು ಬಾಗಿಲ ತೆರೆದಿದೆಯಲ್ಲ
ಮೌನ ಮಾತಾಗಿ ಬದಲಾಗುತಿದೆಯಲ್ಲ.
ಸರ್ವಸ್ವವು ಖುಷಿಯಿಂದ ತೇಲಿದಾಗ
ತನುವು ಬಿಚ್ಚಿ ಹೇಳಿದಾಗ
ಮತ್ತೆ ಮೌನ ಮಾತಾದಾಗ .......
- Pranam Pranam
28 Apr 2020, 09:19 am