Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭಾವ-ಚಿಗುರು

ಎದೆಯಲಿ ಚಿಗುರಿದ
ನೂರು ಭಾವಗಳಿಗೇನು
ಗೊತ್ತು...?

ಅವುಗಳು ಉದುರಿ
ಕಾಲ ಧೂಳಾಗುವ
ಹೊತ್ತು...!

- ಶ್ರೀಕಾವ್ಯ

27 Apr 2020, 11:28 pm

ಬರೀಯ ಕಲ್ಪನೆ

ಹೇ ಹೃದಯದರಸಿ,
ಬರುವೆ ನಿನ್ನ ಪ್ರೀತಿಯ ಬಯಸಿ,
ಯಾಕೆ ಹೀಗೆ ಕಾಡುತ್ತಿರುವೆ ನನ್ನ ಕಾಯಿಸಿ,
ಬರುವೆಯಾ ಒಂದು ಬಾರಿ ಕಣ್ಣ ಮುಂದೆ ನಗು ಎಂಬ ಹೂವನ್ನು ಹಾಸಿ..!

ತಿಳಿಯದು ನನಗೆ ಎಲ್ಲಿಹುದು ನನ್ನ ಗಮನ,
ನಾನಾಡುವ ಮಾತೇ ನೀನಾ?
ಆ ಮಾತಿನಲ್ಲಿರುವ ಮೌನವೇ ನೀನಾ?
ನಾ ನೆನಪಿಸಿಕೊಳ್ಳುವ ನೆನಪುಗಳೇ ನೀನಾ?
ಆ ನೆನಪಿನಲ್ಲೆ ನೀನಾ?

ಏನೆಂದು ಕರೆಯಲಿ ಈ ಅನುಭವಕೆ,
ಆಕರ್ಷಣೆನಾ? ಆರಾಧನೆ ನಾ?
ಬಂದು ಬಿಡು ಕಣ್ಣೆದುರಿಗೊಂದು ಬಾರಿ,
ಹೃದಯ ದಿಂದ ಹೇಳಿ ಬಿಡುವೆನು ಪ್ರೀತಿಯ ಲಹರಿ,
ನೀ ಸಿಕ್ಕರೆ ನಾನಾಗುವೆನು ನಿನ್ನ ಪತಿ,
ನೀ ಸಿಕ್ಕ ದಿದ್ದರೆ ಜನ್ಮ ಪೂತಿ೯ ನಿನ್ನ ನೆನಪೇ ನನಗೆ
ಆಹುತಿ...!

- Megha

27 Apr 2020, 08:35 pm

ನಂಬಿಕೆಯ ಸುತ್ತ...

ಎಳೆಯ ಗರುಕೆಯು ಸುತ್ತ ಮುತ್ತ ನೋಡುತ್ತಿದೆ....
ರವಿಯು ಮೆಲ್ಲಗೆ ಬಂದುಅದಕ್ಕೆ ಮುತ್ತಿಟ್ಟು ಆಲಂಗಿಸುತ್ತಿರುವನು ....
ಮೋಡವು ಬೆಳಕು ಹರಿಸಿದಾಗ,ಗರುಕೆಯು ನಾಚಿ ತಲೆ ತಗ್ಗಿಸಿದೆ....
ರವಿಯು ಸಂಜೆ ಬಂದು ಮುತ್ತಿಟ್ಟು ಹೋಗುತ್ತೇನೆಂದು ಗರುಕೆಗೆ ಪ್ರಮಾಣ ಮಾಡಿ ಮೇಲೇರುತ್ತಿರುವನು......
Shiv..

- SHIV...

27 Apr 2020, 11:26 am

ಗಮನ

ಮನದಾಳದಲ್ಲಿ ಅಡಗಿ ಕುಳಿತಿದ್ದ ಪ್ರೀತಿಯು ಚಿಗುರೊಡೆದಾಗ ಹರಳಿದ ಓ ನನ್ನ ಕುಸುಮಮೇ
ನಿನ್ನ ಪರಿಮಳವು ಸೆಳೆಯಿತು ನನ್ನ ಗಮನ
ಮುದ ನೀಡಿತು ನಿನ್ನಯ ಆಗಮನ. .

ನನ್ನ ಆತ್ಮಸ್ಥೈರ್ಯಲವ ಬಲಪಡಿಸಿದ ನೀನು
ನನ್ನ ಅಸ್ಥಿತ್ವವಕ್ಕೆ ಮಂದಾರವೇ ನೀನು
ನೀನಿದ್ದರೆ ನನ್ನ ಜೂತೆಗೆ ವಿಶ್ವವನ್ನೆ ಸುತ್ತಿ ಬರೋಣ ಒಟ್ಟಿಗೆ ಎಂದಿಗೂ ಜೊತೆಜೊತೆಗಿರೋಣ.....

- RoopaGowtham

27 Apr 2020, 08:27 am

ಇಂತಿ ನಿಮ್ಮ..

"ನೀನು ಮೌನವಾಗೋ
ಮುನ್ನ
ನನ್ನನ್ನೊಮ್ಮೆ ಕೇಳಬೇಕಿತ್ತು.?
ನೀ ದೂರ ಸರಿಯೋ
ಮುನ್ನ
ದಾರಿಯುದ್ದಕ್ಕೂ ನಡೆದ
ಹೆಜ್ಜೆಗಳ ಲೆಕ್ಕ ಕೊಡಬೇಕಿತ್ತು .?
ಇಂತಿ ನಿಮ್ಮ........"

- LokiLokesh

26 Apr 2020, 11:59 pm

ಪೆದ್ದು ಮನಸ್ಸು

"ಕಾದು ಕುಳಿತಿರುವೆ ಗೆಳತಿ
ನಾನು ನಿನ್ನ ನೋಡಲು ಅಲ್ಲ
ಸಿಗದ ನಿನ್ನ ಪ್ರೀತಿಯ
ತಸು ಮಾತಿಗೆ
ಹುಚ್ಚು ಪ್ರೀತಿಯ
ಪೆದ್ದು ಮನಸ್ಸು....."

- LokiLokesh

26 Apr 2020, 11:57 pm

ಕಾಯಕ ಯೋಗಿ """"""""""""

ಕಾಯಕವೇ ಕೈಲಾಸವೆಂದು ಪ್ರತಿಪಾದಿಸಿದ ಕಾಯಕ ಯೋಗಿ
ಜಾತಿಮತ ಧರ್ಮದ ಮೌಢ್ಯವೆಂಬ ತಮವ
ಅಳಿಸಲು ಹೋರಾಡಿದ ಭೈರಾಗಿ !

ಮನದಲಿ ದೇವರನರಸಿ ಎಂದು ಬೆಳಕು ತೋರಿದೆ
ಕ್ರಾಂತಿಯ ಹರಿಕಾರನಾಗಿ
ವಿಶ್ವಮಾನವ ನೀ ನಿಂತೆಲ್ಲರ ಮನದೆ ಜಗಜ್ಯೋತಿ
ಬಸವೇಶ್ವರನೆಂದು ಅಜರಾಮರವಾಗಿ ‌!

ಮಾನವತೆಯ ಸೆಲೆಯಲಿ ಧರ್ಮವ ಅರಿತ ಬೆರಗು
ಅನುಭವ ಮಂಟಪದಲಿ ವಚನಗಳ ಸೊಬಗು

ಜಗದ ಮೌಢ್ಯತೆಯ ಬದಲಾಯಿಸಲು ಅನವರತ
ಗುಡುಗು
ದಯವೆ ಧರ್ಮದ ಮೂಲವಯ್ಯ ಎಂದು ಸಾರಿದ
ನಿಮ್ಮಿಂದ ಮಾನವತಾವಾದಿಯೆಂಬ ಹೆಸರಿಗೆ
ಮೆರಗು !!!
ಶಕುಂತಲಾಮೂರ್ತಿ
""""""""""""""""""""""""""

- Shaku Thanks Amma Shaku

26 Apr 2020, 10:24 pm

ಧ್ಯೇಯವಿಲ್ಲದ ಅಧ್ಯಾಯದಲ್ಲಿ

ಅಲೆದಾಡುತಿದೆ ಮನ
ಕಾಣದ ಬಿಂದುವಿನ ಹಿಂದೆ
ತಲುಪುವ ದಾರಿ ತಿಳಿಯದೆ
ಕಳೆದುಕೊಂಡು ಬಹಳ
ದೂರ ಬಹುದೂರ ಸಾಗಿದೆ
ಮರೆಯಾಗಿ ಮರೆಮಾಚಿ
ಸುಮ್ಮನೆ ಓಡಿದೆ ನಿಲ್ದಾಣವಿಲ್ಲದೆ


ತಿರುಗಿದರೂ... ಮರುಗಿದರೂ...
ದೊರಕದು ಸಾಕ್ಷಾತ್ಕಾರ
ಅರ್ಥವಾಗದೆ ಗರಬಡಿದು
ಕಾಲ ಕಳೆದಿದೆ ಸಿಗದೆ ನೆರಳು
ದುರುಪಯೋಗವಾದ ಬಲಹೀನತೆ
ಎಡ,ಬಲ ಮೇಲೆ, ಕೆಳಗೆ
ಸುತ್ತಮುತ್ತಲೂ...ಬಾಚಲಿಲ್ಲ; ಕೈ ಚಾಚಲಿಲ್ಲ
ಧ್ಯೇಯವಿಲ್ಲದ ಅಧ್ಯಾಯದಲ್ಲಿ ಜೀವ, ಬಡಜೀವ

- mahadeva kc

26 Apr 2020, 10:07 pm

ಜೀವನ

ಬಾಳು ಹೂಸದಾಗಿ ಶುರುವಾದಾಗ ಬಾಳಿನೂಂದಗೆ ಸಹಪಾಠಿವಾಗುವ ಸಣ್ಣ ಸಣ್ಣ ಆಸೆಗಳೆ
ಆಸೆ ಈಡೇರಿ ನನಸಾದರೆ ಹೂಮಳೆ
ಆಸೆ ಕನಸಾದರೆ ಕಂಬನಿಯ ಹೊಳೆ

ಹೂಸಬಾಳಿನ ಹೂಸಿಲಲಿ ನಿಂತ ನನ್ನ ಗೆಳತಿಗೆ
ತಲೆ ತಿರುಗಿ ಬರುವಂತೆ ಹೂತ್ತದಳು ಹೆಗಲಿಗೆ ಮೆತ್ತಗೆ ತಿಳಿದಿತ್ತು ಅಷ್ಟೂತ್ತಿಗೆ ಆ ಬಾಲೆಗೆ
ನಾ ಬಂದು ಬಿದ್ದಿರುವೆ ಸಂಸಾರವೆಂಬ ಬಲೆಗೆ
ಅದರೂಡೆಯರು ಅತ್ತೆ ಮಾವ ಎಂಬ ಮೆಚ್ಚುಗೆ
ಅವರ ಕಠೋರ ನುಡಿಗಳೇ ಆದವು ಮುಳ್ಳಿನ ಹಾದುಗೆ...

ದಾರಿಯೆ ಕಾಣದಂತಾಗಿದೆ ನಾ ಏನ ಮಾಡಲಿ ನನ್ನ ಗೆಳತಿ ಅಪ್ಪಿದ ಮೆಚ್ಚಿದ ಗೆಳತಿಗೆ ನಾ ಮಾಡಲಾರನೇ ಹೂಳಿತನ್ನ ಕರೆತಂದು ಅವಳನ್ನ ಹೇಳಿಸಿದೆ ನೀತಿ ಪಾಠವನ್ನ ಅದನೂಪ್ಪಿದ ಅವಳು ವಿದಾಯ ಹೇಳುತ್ತ ಸೇರಿದಳು ಅತ್ತೆ ಮನೆ
ಕುಹ ನೋಟ ಬೀರುತ್ತ ನುಡಿದಳು ನೀನೇಕೆ ಬಯಸುವೆ ನಿನ್ನಂತೆ ಇರಲು ನನ್ನನು
ನಾ ಮೌನಿಯಾದೆ
ಏ ಮಹಿಳ ಮಣಿಗಳ ಎಲ್ಲರ ಮೌನದ ಹಿಂದೆ ಕಥೆಯೇ ಇದೆಯಲ್ಲವೇ.....

- RoopaGowtham

25 Apr 2020, 11:29 pm

ನನ್ನವಳು.

ನನ್ನವಳು ಶಾಂತಲಾ
ನಗ್ತಾಳೆ ಕಿಲಕಿಲ
ಕೊಪಿಸಿಕೊಂಡ್ರೆ ರುದ್ರ ಕಲಾ
ಆಕೆ ಅತ್ರೆ ನನ್ನೆದೆಯಲ್ಲಿ ಕೋಲಾಹಲ
ಆಕೆ ನಗುವುದನ್ನು ನೋಡುವುದೇ ನನ್ನ ಹಂಬಲ

ಮನಸಿನಲ್ಲಿ ನೂರಾರು ನೋವುಗಳು ನರ್ತಿಸಿದಾಗ
ನಗುವುದನ್ನ ಕಲಿಸಿದವಳು ನನ್ನವಳು....
ಸಹನೆ ನಿನ್ನದಾದರೆ ಸಕಲವು ನಿನ್ನದು
ವಿನಯ ನಿನ್ನದಾದರೆ ವಿಜಯವು ನಿನ್ನದು
ಎಂದು ಉಪದೇಶಿಸಿದಳು ನನ್ನವಳು

ಸೋಲೇ ಗೆಲುವಿನ ಮೆಟ್ಟಿಲು
ನಗುವೇ ಜೀವನದ ತೊಟ್ಟಿಲು
ಜೀವನದಲ್ಲಿ ಸಾಧನೆ ಮುಖ್ಯ ವಾಗಲಿ
ಸಾಧಿಸುವ ಅಟ ನಿನ್ನದಾಗಲಿ
ಎಂದು ತಿಳಿಸಿದಳು ನನ್ನವಳು.....
Written By:-MS ಯಾದವ್.

- M S Yadav

25 Apr 2020, 03:20 pm