Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಣದ ಗುಡಿಯೊಂದು.......

ಬದುಕಿನ ಬವಣೆಯು
ಕನಸಿನ ತವರಿದು

ಅರಿವಿನ ಒಲವಿದು
ಕಾಣದ ಉರಿದು

ಅಳುವಿನ ಕಡಲಿದು
ಮರೆತರು ಬಿಡದಿದು

ಸೆಳೆತದ ಗುರಿಯಿದು
ಯಾರಿಗು ತಿಳಿಯದು

ಮೌನದ ಅಲೆಯಿದು
ಸೋತರು ಬಿಡದಿದು

ಬಾವದ ಬಂದವಿದು
ಸೇರದ ನದಿಯಿದು

ಕಾಣದ ಗುಡಿಯಿದು
ಆರದ ಬದುಕಿದು..............

- ರಾಗಸಿರಿ....

17 Apr 2020, 04:45 pm

ಹೆಂಡತಿ

ಏನೆಂದು ನಾ ಹೇಳಲಿ ನಿನ ಸೌಂದರ್ಯವ
ನಾ ಹೇಗೆ ಬಣ್ಣಿಸಲಿ ರೂಪವತಿ
ನಾ ಏನ್ನನ್ನೆ ನೋಡಿದರು ಮತ್ತೆ ಮತ್ತೆ ನಿನ್ನೆ ನೋಡಲು ಬಯಸಿದೆ ಸುಂದರಾಂಗಿಣಿ

ಯಾವಾಗಲು ನನ್ನನ್ನೇ ನೋಡುವ ಆ ಕಣ್ಗಳು
ನನ್ನ ಎಷ್ಟು ಬೈದರು ಸಮಾಧಾನ ಇಲ್ಲದ ಬಾಯಿ
ನನಗಿಷ್ಟವಾದ ಅಡುಗೆ ಮಾಡಿ ಬಡಿಸುವ ಕೈಗಳು
ಇಷ್ಟೆಲ್ಲ ಮಾಡಿದರು ನನ್ನ ಅರ್ಥಮಾಡಿಕೂಳ್ಳಲ್ಲ ಎಂದು ಕೂರಗುವ ಮನಸ್ಸು ಹೇ ಹುಡುಗಿ ಏಕೆ ನೀ ಹೀಗೆ ಇದುವೆ ನನ್ನ ಉತ್ತರ ಸಿಗದ ಪ್ರಶ್ನೆ...

ಪ್ರೇಮಿಯಸಿದರೆ ಏನಿಷ್ಟು ಪ್ರೀತಿ ಬೈದರೆ ಎಂತಹ ಬೈಗುಳ ಹೂಗಳಿದರೆ ಏನೋ ಕಾದಿದೆ ಇಂದು
ಏನ ಮಾಡಲಿ ನಾನು ನಿನಗೆ ಅರ್ಥವಾಗಲು
ನನಗಿಷ್ಟವಿಲ್ಲ ನಾ ಸೋಲಲು
ನಾ ಕಾದಿವೆ ನಿನ್ನ ಒಲವಿಗೆ ಅರಿತು ಕಾರಣವಾಗು
ನಮ್ಮ ನಿಶ್ಕಲ್ಮಶ ಪ್ರೀತಿಗೆ....

- RoopaGowtham

17 Apr 2020, 02:21 pm

ಕಲ್ಪನೆ

ನೀನು ನನ್ನ ಜೊತೆಗಿದೀಯಾ ಎನ್ನುವ
ಕಲ್ಪನೆ ಕಾಲ್ಪನಿಕ ವಾದರೂ,
ನೀನು ಇವತ್ತು ನನ್ನೊಂದಿಗಿಲ್ಲ ಎನ್ನುವುದೇ
ವಾಸ್ತವವಾಗಿದೆ..!

- Megha

17 Apr 2020, 10:11 am

.......

ಹೇಳದೆ ಉಳಿದಂತಹ ಮಾತುಗಳೆಷ್ಟೋ ಇದೆ ಆದರೆ ....ಹೇಳುವಂತಹ ಪರಿಸ್ಥಿತಿ ನನ್ನದಲ್ಲ ಹೃದಯವೇ.....

ಹೇಳುವ ಆಸೆಯಲ್ಲಿ ಬಂದೆ ಆದರೂ ಹೇಳದೆ ಉಳಿದೆ ....

ಇದಾ ಆತ್ಮವಂಚನೆ ಎನ್ನುವರೊ ಇಲ್ಲ ಮೊಸಗರರು ಎನ್ನುವರೊ ತಿಳಿದಿಲ್ಲ ಎನಗೆ

- Acchu love

16 Apr 2020, 08:43 pm

ನನ್ನವಳು.

ಕೆನೆ ಹಾಲ ಮನದವಳಿಗೆ
ಅಕ್ಕರೆಯ ಸಕ್ಕರೆಯು
ತುಸು ಹೆಚ್ಚು ನನ್ನವಳಿಗೆ.

ನೇರಮಾತಿನ ಮಾಯಗಾತಿ
ಅವಳು,
ತುಟಿಯ ಕೊನೆಯಲಿ
ಮೌನ ಮುಡಿದವಳು.

ತಪ್ಪಿದಲ್ಲಿ ತಿದ್ದಿ ಹೇಳಿವ ತಾಯಿಯಂತ
ಮೃಧು ಸ್ವಭಾವದವಳು,
ಕತ್ತಲಿಗೆ ಅಂಜದವಳು ಬೆಳಗಿನ
ಜಾವಾದಿ ಬೆಳ್ಳಕ್ಕಿಯವಳು.

ಚಿನ್ನದ ಪಾದಕೆ ಬೆಳ್ಳಿ ಕಾಲ
ಗೆಜ್ಜೆ ತೊಟ್ಟು ನನ್ನೆದೆಯ
ಗುಡಿಯಲಿ ದೇವತೆಯಾದವಳು.

ನನ್ನವಳು ಅವಳು
ಮಾರುಮಾತನಾಡದೆ
ಎದೆಗಪ್ಪಿದ ಇರುಳು ಹಾಡುವ
ಲಾಲಿ ಹಾಡಿನಂತವಳು.

- ಚುಕ್ಕಿ

16 Apr 2020, 06:04 pm

ನನ್ನವಳ ನನ್ನವಳ

ಕಂಡೆ ಕಂಡೆ ನನ್ನವಳ
ಮುಗ್ಧ ಮುಖದವಳ
ಚಂಗನೆ ಹೃದಯಕ್ಕೆ ಜಿಗಿದವಳ
ಹೃದಯಂಗಳದಿ ಈಜಿದವಳ

ಜಿಂಕೆಯ ಕಣ್ಣವಳ
ಚಂದಿರ ವದನದವಳ
ಸಂಪಿಗೆ ಮೂಗಿನ
ಸುಗಂಧ ಸೂಸುವಳ

ಕರೆ ನೀಡುವ ನೋಟದವಳ
ಹುಸಿ ನಗೆಯ ಬೀರುವವಳ
ಗಾಂಭೀರ್ಯ ನಡೆಯವಳ
ಮೈ ಜುಂ ಅನಿಸುವವಳ

- suresh veera

16 Apr 2020, 06:02 pm

ಜಗಕೆ ಬೇಡದವ

ಹಣೆ ಬರಹದ ನತಾದೃಷ್ಟ
ಬಗೆದು ಕೊಂಡರು
ಹೂರಬರದ ರಕ್ತ
ಹಿಂಡಿ ಹಿಪ್ಪೆಯಾದ ದೇಹ
ಬಡಕಲು ಬದುಕು
ಬೆಲೆಯಿರದ ಬಾಳು
ಕಾಣದಾದ ಬೆಳಕು
ಬರಿ ಅಂಧಕಾರ
ಜಗದ ನಿರುತ್ತರ
ಪಡೆಯಲಾಗದ ಪ್ರೀತಿ
ನಿಸ್ಸಂದೇಹವಾಗಿ ನಾ
ಜಗಕೆ ಬೇಡದವ....

- suresh veera

16 Apr 2020, 05:47 pm

ನೀ ಸಾಯಬೇಡ

ನಿನ್ನ ಜೊತೆ ಯಾರಿಲ್ಲವೆಂದು ಬಾಳ ಬೇಡ
ನಿನ್ನ ಮನಸಿಗಾಗಿ ಬದುಕಬೇಕು ಮೋಡ
ಈ ಸ್ನೇಹಿತರ ಮನಸ್ಸು ಮುರಿಯ ಬೇಡ
ಪ್ರೀತಿ ಹೆಸರಿನಲ್ಲಿಲಿ ನೀ ಸಾಯಬೇಡ

✍️ವಿ.ಶಿವಾನಂದ

- Shivanand V Anandadavar

16 Apr 2020, 04:42 pm

ಕಾಣುವುದು ಹೇಗೆ

ಬಯಸಿ ಬಯಸಿ ಬಂದೆ ನಿನ್ನಾ
ಹುಡುಕುತ್ತಾ ಹೊರಟೆ ನಿನ್ನ ಮುಖವನ್ನಾ
ಕಾಣುವುದು ಹೇಗೆ ನಿನ್ನ ಚೆಲುವನ್ನಾ
ತೋರಬಾರದೇ ಆ ನಿನ್ನ ಮುದ್ದು ಮುಖವನ್ನಾ

✍️ವಿ.ಶಿವಾನಂದ

- Shivanand V Anandadavar

16 Apr 2020, 04:40 pm

ಕಾರಣವಿಲ್ಲದೆ ಪ್ರೀತಿಸುವೆ

ಕಾರಣವಿಲ್ಲದೆ ಪ್ರೀತಿಸುವೆ
ಅದಕೆ ಕಾರಣ ಬೇಕಿಲ್ಲ
ಹುಡುಕ ಬೇಡ
ಹೆಜ್ಜೆ ಗುರುತುಗಳನ್ನು
ಎಕೆಂದರೆ
ಹೃದಯಕ್ಕೆ ಪಾದವಿಲ್ಲ
ಬರಿ ಭಾವನೆಗಳ ಬಂಧಿ.

- suresh veera

16 Apr 2020, 04:07 pm