Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸುಂದರ ನೆನಪಿನ ಸಂಜೆ
ಮಳೆ ಯೊಡನೆ ಬಂದ ನೀ
ತಂಪು ಗಾಳಿಯ ತಂದೆ ರಾತ್ರಿಯಲ್ಲ
ನೆನೆದು ನೀರಾಗುವೆನು ಕೆಲವೊಮ್ಮೆ
ಈ ದಿನ ನಿನ್ನಿಲ್ಲ
ಅದರೂ
ನೆನೆದು ನೀರಾಗುವೆನು ಕೆಲವೊಮ್ಮೆ
- suresh veera
11 Apr 2020, 04:09 pm
ಇರುವಾಗ ಅಳುವರು
ಇಲ್ಲದಾಗ ನಗುವರು
ಎದುರು ಬಂದಾಗ
ಹುಚ್ಚು ಹುಚ್ಚುಾಟದವರು
ಚಿತ್ರ ವಿಚಿತ್ರ ದವರು
ದುರಾಸೆಯ ಹಿಮಾಲಯದವರು
ಅಸೂಯೆ ಕಸದವರು
ಹುಚ್ಚು ಹುಚ್ಚುಾಟದವರು
ಇರುವಾಗ ಓಲ್ಲೆಯನುವರು
ಇರದಿದ್ದಗ ಬೇಕೆನುವರು
ಅಥ೯ವಾಗದವರು
ಹುಚ್ಚು ಹುಚ್ಚುಾಟದವರು
ಅಗಾಗ ಕಿರುಚಾಡುವರು
ನಡುವೆ ನಗಾಡುವರು
ಅನಿಯಮಿತ ಅವಾತಾರದವರು
ಹುಚ್ಚು ಹುಚ್ಚುಾಟದವರು
ತುಂಬಾನೇ ಕೊಪದವರು
ಅದರೂ ಕೈಲಾಗದವರು
ಒಳಗೆ ಇರುವೆ ಬಿಟ್ಟುಕೂಂಡವರು
ಹುಚ್ಚು ಹುಚ್ಚುಾಟದವರು
ಹಿಂದೆ ಹತ್ತಾರು ವರುಷ
ಮುಂದೆ ಹತ್ತಾರು ವರುಷ
ಜೀವನ ತಲ್ಲಾಡುವರು
ಹುಚ್ಚು ಹುಚ್ಚುಾಟದವರು
ಬೇಡ ಹಿತ ದವರು
ಬೇಡದವರ ಹಿತ ಕಾಣುವರು
ಅಸಭ್ಯ ವಾದ ಮಾಡುವರು
ಹುಚ್ಚು ಹುಚ್ಚುಾಟದವರು
- suresh veera
11 Apr 2020, 03:37 pm
ಕೇಳಯ್ಯ ಓ ಮನುಜ ಹೇಳುವೆ ಕಥೆಯನೊಂದನು
ನೊಂದು ಬೆಂದ ಹೃದಯದಾ ವ್ಯಥೆಯನೊಂದನು
ಅಳಿಯುತಿಹುದು ಜೀವರಾಶಿ ನಿನ್ನ ನಿತ್ಯ ಕರ್ಮದಿ
ಮೆರೆಯುತಿಹುದು ನಿನ್ನ ಮನವು ರಾಗ ದ್ವೇಷದಿ
ಇರುವುದೆಲ್ಲ ನನಗೇ ಎಂಬ ಹಾಳು ಸ್ವಾರ್ಥದಿ
ಮೆರೆಯುತಿರುವೆ ಜಗಕೆ ನಾನೇ ಒಡೆಯನೆಂಬ ಭಾವದಿ
ಬಂದಿರುವೆ ಧರೆಗೆ ನೀನು ಬುದ್ಧಿವಂತ ಮೆದುಳಲಿ
ಬದುಕು ನೀನು ಜಗದಲಿ ಮನದ ತುಂಬಾ ಖುಷಿಯಲಿ
ಪರ ಜೀವಿಯೂ ಉಳಿಯಲಿ ನರಳದಿರಲಿ ನೋವಲಿ
ಅಮರನಲ್ಲ ಇಲ್ಲಿ ನೀ ಕರುಗುವೆ ಕೊನೆಗೆ ಕಲ್ಲು ಮಣ್ಣಲಿ
ಕಿವುಡನಾದೆ ಅನ್ಯ ಜೀವದಾರ್ತನಾದ ಕೇಳಲು
ವೇದನೆಯಲಿ ನರಳುತಿಹವು ತಮ್ಮನೋವ ಹೇಳಲು
ಅಂಕೆಯಿರದ ಮಂಕನಾದೆ ಪರರ ಮನದ ನೋವ ತಿಳಿಯಲು
ಹೊರಟೆ ನೀ ಭ್ರಮೆಯ ಹಿಂದೆ ಸುಖವನೊಂದ ಅರಸಲು
ಕ್ಷಣಿಕ ಅಣುವೋ ನೀನು ಒಡೆಯನಲ್ಲ ಈ ಜಗಕೆ
ಇದನು ಮರೆತು ಮೆರೆದರೆ ಬೀಳುವುದು ಕುಣಿಕೆ
ನಿಯಮ ಮೀರಿ ಬದುಕಿದರೆ ಸೇರುವೆ ನೀ ಮಸಣಕೆ
ಅಳಿವ ಮೊದಲೇ ಮರಳು ನೀ ಉಳಿವ ಮಾರ್ಗಕೆ
- KN PATIL
11 Apr 2020, 02:30 pm
ನಿನಗಾಗಿ ನಾನು ಮಾಡಿದ್ದೇನು ಇಲ್ಲ
ನನಗಾಗಿ ನೀನು ಮಾಡದೆ ಬಿಟ್ಟಿದ್ದೇನು ಇಲ್ಲ
ಗಾಳಿಪಟದ ಜೀವನ ಕಣೆ ನನ್ನದೂ ನೀನಿಲ್ಲದೆ
ಗಿಡುಗನ ಕೈ ಸಿಕ್ಕ ಗಿಣಿ ಕಣೆ ನಾನು ನೀನಿಲ್ಲದೆ
ನಾನು ನಿನ್ನಲ್ಲೇ ಇರುವೆ ಕೊನೆವರೆಗೂ
ನುಸುಳದಿರಲಿ ನಮ್ಮಲ್ಲಿ ವಿಫಲ ಪ್ರೇಮದ ಬೀಜ
ಪ್ರತಿ ಸಾಲಿನ ಮೊದಲನೇ ಅಕ್ಷರ
ನಿನಗಾಗಿ ನಾನು
- Kannada ratna B. N. R
11 Apr 2020, 12:09 pm
ಖಾಲಿಪೀಳಿ ಹೊಟ್ಟೆಯಲ್ಲಿ ಏನು ಇಲ್ಲ ಯಾರಿಗ್ ಹೇಳೋದು....ದು ದು
ಪಿಜ್ಜಾ ಅಂತೂ ಕೇಳೋಂಗಿಲ್ಲ ಬರ್ಗರ್ದಂತೂ ಮಾತೇ ಇಲ್ಲ ಯಾರಿಗ್ ಕೇಳೋದು....ದು ದು
ಗಟ್ಟಿಹಿಟ್ಟು ತಿಂದು ತಿಂದು ಕಾಯಿಕಸರು ಒಳಗಾಕ್ಕೊಂಡು ಹೊಟ್ಟೆ ಎಲ್ಲಾ ಕೆಟ್ಟೋಗಯ್ತೆ ಯಾರಿಗ್ ಹೇಳೋದು....ದು ದು
ಗೋಬಿ ಅಂತೂ ಕನ್ಸೋದಿಲ್ಲ ಪಾನಿಪುರಿ ಕಥೆಯೇ ಇಲ್ಲ ಬಾಯಿ ಮಾತು ಕೇಳ್ತಾ ಇಲ್ಲ ಕೋಡ್ಸೋವ್ರಂತೂ ಮೊದ್ಲೇ ಇಲ್ಲ ಯಾರಿಗ್ ಕೇಳೋದು....ದು ದು
- ಚುಕ್ಕಿ
11 Apr 2020, 11:56 am
ಮುಂಜಾವಿನ ನೇಸರನ ಇಳೆ ಬಿಸಿಲಿನಲ್ಲಿ
ಇಂಪಾದ ಹಕ್ಕಿಗಳ ಕಲರವ ನೀಡಿದೆ ಹೊಸ ಚೈತನ್ಯ
ಚಳಿಯಲ್ಲಿ ಆಗಾಗ ನೀಡುವ ಬಿಸಿಲಿನ ಶಾಖ
ಹಿಂಪೆನಿದೆ ಕಾಯಕೆ
ರವಿ ನೀ ಬಾ ಇಳೆಗೆ ಧರೆ ಕಾದಿವುದು ನಿನ್ನ
ಅಪ್ಪುಗೆಗೆ ಹೂಗಳೆಲ ಬಯಸುವುದು ನಿನ ಒಪ್ಪಿಗೆಯ ನೀಡಲು ಮಕರಂಧ ಮದ ಸಿಹಿಯನು
ದುಂಬಿಗಳು ಸವಿಯಲು ಜೇನಿನ ಸಿಹಿಯನು...
- RoopaGowtham
11 Apr 2020, 08:46 am
ಬಯಸದೇ ಬಂದ ಭಾಗ್ಯ
ದೊರೆಯುವುದು ಎಲ್ಲಿ ವೈರಾಗ್ಯ
ಆಸೆಗಳ ಕೊಡುವ ಆ ಬುಟ್ಟಿ
ಕನಸಿನಲ್ಲಿ ಪದೇ ಪದೇ ತಟ್ಟಿ
ಮನಸಿಗೆ ನೋವು ಏಕೆ ನೀ ಕೊಟ್ಟಿ
✍️ವಿ ಶಿವಾನಂದ
- Shivanand V Anandadavar
10 Apr 2020, 11:54 pm
ಅಲ್ಲೊಂದು ಇಲ್ಲೊಂದು ಮಾತು
ಈ ಕಿವಿಯಲ್ಲಿ ಕೇಳುತಿತ್ತು
ಒಂದು ಮಾತು ಸಂತೋಷವಾಯಿತು
ಇನ್ನೊಂದು ಮಾತು ದುಃಖ ಕೊಡುತ್ತಿತ್ತು
✍️ವಿ.ಶಿವಾನಂದ
- Shivanand V Anandadavar
10 Apr 2020, 11:52 pm
ಬಾರದ ಲೋಕಕ್ಕೆ ನಿಜಾರಿ
ಹುಡುಕಿದೆ ಪಯಣದ ದಾರಿ
ಬೆಳೆಯುವ ಮನಸಲ್ಲಿ ಉರಿ
ಬೇಡದ ಕನಸಲ್ಲಿ ಹಾರಿ
ಕತ್ತಲಿನಲ್ಲಿ ಕನಸು ಕಾಣುವ ಮರಿ
✍️ವಿ.ಶಿವಾನಂದ
- Shivanand V Anandadavar
10 Apr 2020, 11:49 pm
ಗುಡಿಗಳಲಿ ಭಜನೆಯಿಲ್ಲ
ಮಸೀದಿಯಲಿ ನಮಾಜಿಲ್ಲ
ಚಚಿ೯ನಲಿ ಗಂಟೆಯಿಲ್ಲ
ಬಡವನ ಕೇಳೊರಿಲ್ಲ
ರೈತನಿಗೆ ಹೊಟ್ಟೆಗಿಲ್ಲ
ಹೆಣ ಹೊರಲು ಜನರಿಲ್ಲ
ಕರೋನ
ಯಾವ ಧರ್ಮ ಕೇಳುವುದಿಲ್ಲ
ಯಾರನ್ನು ಬಿಡುವುದಿಲ್ಲ
ಮಾಡಿದೂನ್ನು ಮಾರಾಯ
- suresh veera
10 Apr 2020, 11:22 pm