1,3,5,7,9 ಸಾಲು ಮಗ ಹುಟ್ಟಿದ ನಂತರ
2,4,6,8,10 ತಾಯಿಯ ಗರ್ಭ ದಲ್ಲಿದ ಸಾಲು
ಹುಟ್ಟು ಹಬ್ಬ ಹುಟ್ಟ ಹಬ್ಬ ಏಕೆ ಕುಣಿಯುವೆ?
ತಾಯಿಯ ನೋವಿನ ಸ್ಪರ್ಶ ತಿಳಿಯಾ...ದಿರುವೆ
ನೀನು ಉಟ್ಟ ಆ ಮಿಣ ಮಿಣ ಬಟ್ಟೆ.
ಹಿಡಿ ಅನ್ನಕಾಗಿ ಕಾಯುತ್ತಿತ್ತು ತಾಯಿಯ ಹೊಟ್ಟೆ.
ಹಣವನ್ನು ಕುಡಿದು ಕುಪ್ಪಳಿಸಿದೆ ಖರ್ಚಿನಲ್ಲಿ...
ನಿನಗೇನು ಆಗದಂತೆ ಹರಕೆ ಕಟ್ಟಿದಳು ಚರ್ಚಿನಲ್ಲಿ..
ಮಿತಿಮೀರಿ ದಾಟಿಹೋಗುತಿರುವೆ ಪ್ರಾಯದಲ್ಲಿ.
ಜಾರಿಬಿದ್ದ ಸಂಕಟದ ನೋವು ಗಾಯದಲ್ಲಿ.
ಊಟ ರುಚಿಯಿಲ್ಲ ಎಂದು ತಟ್ಟೆ ಎಸೆದ ಕೋಪ.
ಹಸಿವುತಾಳಲಾರದೆ ಬಟ್ಟೆ ಇಸ್ತರಿಗಾಗಿ ಗಂಜಿಯ ನೆಪ
ನಿಮ್ಮಿಂದ ದೂರಾಗಿ ಇರಲಾರೆನೂ,,,,
ಇನ್ನೆಂದು ನಿಮ್ಮನ್ನು ಬಿಡಲಾರೆನೂ,,,,
ಕಣ್ಣಲ್ಲೇ ನೀನೂ ಕುತಿದ್ದ ಮೇಲೆ
ಬೆಕಿಲ್ಲಾ ಇನ್ನು ಕಣ್ಣಾ ಮುಚ್ಚಾಲೆ,,,
ನಾ ಕೂಗಲೇ ನಿನ್ನನ್ನು,,,
ಅದೇ ನೀನು ಅದೇ ನಾನು
ಅತಿಯಾಯ್ತು ಪ್ರೀತಿ ಇನ್ನನೂ
ಮುದ್ದಾದ ನಿನ್ನ ಶೈಲಿನೇ ಭಿನ್ನ ನೀನ್ನೋನೇ ನಾನು ಇನ್ನೊಂದೇ ಚೆನ್ನ ಮೆಚ್ಚೋದೆ ಬೇಡ ಇನ್ಯಾರು ನಿನ್ನ ಹೇ,,,,, ನೆನಪಿನ ನಿನ್ನ ಈ ಕಿಲಿಯಿಂದ ಕನಸಿನ ಖಜಾನೆ ಒಂದ ತೆರೆಯುವ ಯತ್ನ ತುಂಬಾನೇ ಚೆಂದ ಹೇ,,,,
ಯಾರಿಲ್ಲ ನಿನ್ನಂತೆ ಇನ್ನ್ಯಾರೂ ಬರದಂತೆ ಬಾ ನನ್ನ ಸ್ವರದಂತೆ ಎಂದೆಂದಿಗೂ ನನ್ನ ಜೊತೆ
ಅಂತರಂಗದೊಳು ಇಣುಕಿ ಕಂಡೆ ನನ್ನದೇ ಪ್ರತಿಬಿಂಬ
ಒಳ ಹೊಕ್ಕು ನೋಡಲು ವಿವರಿಸಲಾಗದು ಅನುಭವ
ಕಂಡದ್ದು ನೋಡಿದ್ದೆಲ್ಲವೂ ನನ್ನದಾಗಲಿ ಎಂದೆ ನಾನು
ಅರಿಯದಾದೆ ಆ ನಾನು ಈ ದೇಹದೊಳು ಎಲ್ಲಿರುವನು..
ಪ್ರೀತಿಯಿಂದ ಕರೆದರೆ ಮುಖ ಕಮಲ ಅರಳುವುದು
ದ್ವೇಷದಿಂದ ಕರೆದರೆ ಮುಖ ಕೆಂಪೇರಿ ಉರಿವುದು
ತನ್ನವರ ಬಿಗಿದಪ್ಪಿ, ಪರರ ಕಂಡೊಡನೆ ದೂರ ಸರಿದು
ಒಂದೇ ದೇಹದೊಳು ಹಲವು ಮುಖಭಾವ ಇಹುದು..
ಮೂಳೆ, ಮಾಂಸ, ನರ, ರಕ್ತಗಳಿಂದ ತುಂಬಿದ ದೇಹ
ಅದೇಕೋ ಹೆಣ್ಣು,ಹೊನ್ನು,ಮಣ್ಣಿಗಾಗಿ ತೀರದ ದಾಹ
ಕ್ಷಣಿಕ ಈ ಬದುಕು ಹೊತ್ತು ಸಾಗುವ ಸಮಯ ಪ್ರವಾಹ
ಸುಳಿಗೆ ಸಿಕ್ಕಿ ಈಜಲು ಆಗದವನಿಗೂ ಏನೋ ಮೋಹ..
ನಾನು,ನನ್ನದು,ನನ್ನವರೆಂಬ ಹುಚ್ಚು ಭ್ರಮೆ ಇಲ್ಲಿ
ಮೊದಲು ನೀನು ಯಾರೆಂಬ ನಿಜವನು ನೀ ತಿಳಿ
ಕ್ಷಣಿಕ ಸುಖಃಕ್ಕಾಗಿ ಕೊಡಬೇಡ ಬದುಕನ್ನು ಬಲಿ
ಬಲಿಯಾದರೆ ಜೀವ ಸೇರುವುದು ಯಾವ ತೀರದಲ್ಲಿ..?