ಎದೆಯೆಲ್ಲಾ ಬತ್ತು.,
ಕಣ್ಣೀರೆಲ್ಲಾ ಇಂಗಿ,
ಮಾತೆಲ್ಲಾ ಮುಗಿದು,
ಜೀವ ಜೊತೆ ಬೇಡ
ಎಂದೆನಿಸಿ
ಕೊನೆಯ ಹೆಜ್ಜೆ ಇಡಬೇಕೆನುವಾಗ.
ಬಿಗಿದಪ್ಪಿ, ಮುತ್ತಿಟ್ಟು
ಚ್ಯೆತನ್ಯ ತುಂಬಿ..
ಮತ್ತೆ ಎದೆ ಯೆತ್ತಿ
ಬದುಕ ಎದುರಿಸಲು
ಧ್ಯೆರ್ಯ ತುಂಬುವಾಕೆ....
ನನಗೆ ಇರುವುದು ಕೆಲವೆ ಸ್ನೇಹಿತರಾದರು .
ಅವರು ನನ್ನ ಕಷ್ಟ ಸುಖ ನೋವು ನಲಿವುಗಳನ್ನರಿತವರು.
ಮುಂದೆ ನಗಿಸಿ ಹಿಂದೆ ಚೊರಿ ಹಾಕುವ ನೂರು ಸ್ನೇಹಿತರಿಗಿಂತ, ಮನಸ್ಸಲ್ಲೇ ಬೆಟ್ಟದಷ್ಟು ಪ್ರೀತಿ ಇಟ್ಟಿರುವ ಒಬ್ಬ ಗೆಳೆಯ ಸಾಕು.
ತನ್ನ ಪಾಡಿಗೆ ತಾನಿದ್ದ ಒಂದು ಪುಟ್ಟ ಹೃದಯಕ್ಕೆ ,
ಪರಿಚಯ ವಾಯಿತು ಇನ್ನೊಂದು ಪುಟ್ಟ ಹೃದಯ
ಪುಟ್ಟ ಹೂವಿನಂತೆ,
ಆದರೆ, ಆ ಪುಟ್ಟ ಹೃದಯಕ್ಕೆ ತಿಳಿದಿರಲಿಲ್ಲ
ಆ ಪುಟ್ಟ ಹೂವಿನಲ್ಲಿ ಮುಳ್ಳುಗಳ ರಾಶಿಯೇ ತುಂಬಿದೆ ಎಂದು,
ಬಂಧಿಯಾಯಿತು ಏನು ಅರಿಯದ ಆ ಪುಟ್ಟ ಹೃದಯ ಜೇಡರ ಬಲಿಯಂತೆ...!
ಕೊನೆಗೂ ಅಥ೯ವಾಗಲಿಲ್ಲ ಆ ಪುಟ್ಟ ಹೃದಯಕ್ಕೆ ಆ ಹೂವಿನಲ್ಲಿ
ಮುಳ್ಳಿನ ರಾಶಿಯೇ ಇದೆ ಎಂದು,
ಒದಾಡಿ , ನರಳಾಡಿ ,ಸಿಲುಕಿ ಹೋಯಿತು ಆ ಪ್ರೀತಿ ಎಂಬ ಬಂಧನಕ್ಕೆ..!
ಬದುಕಿನ ಪಯಣದಲ್ಲಿ ಸಿಹಿ ಕಹಿನೆನಪುಗಳು
ಸಿಹಿ ಎಲ್ಲಾ ಒಂದೆಡೆಗೆ ಕಹಿ ಎಲ್ಲಾ ಒಂದೆಡೆಗೆ
ತಕ್ಕಡಿ ಮಾತ್ರ ಯಾಕೋ ವಾಲುವುದು ಕಹಿಯೆಡೆಗೆ
ಕಹಿಯ ತೂಕ ಸಿಹಿಗಿಂತಲೂ ಹೆಚ್ಚೇನೋ...
ನಮಗಿಷ್ಟ ಬಾಲ್ಯದ ಜೀವನ ಯಾಕೆ ಬರುತ್ತದೆ ಯೌವ್ವನ ಬೇಡೆಂದರು ಬರುತ್ತದೆ ವೃಧ್ಧಾಪ್ಯ
ಮಕ್ಕಳ ಮೊಮ್ಮಕ್ಕಳ ಕಯ್ಯ ಪಿಯ್ಯ ಇರಿಸು ಮುರಿಸು ಸಹಿಸುವ ಹೂತ್ತಿಗೆ ಜೀವನ ಸಾಕು ಸಾಕಯ್ಯ....
ಒಮ್ಮೆ ನಾ ಕೇಳಿದೆ ಮುಂದಿನ ಜನ್ಮವಿದ್ದರೆ ನೀ ಏನಾಗ ಬಯಸುವೆ ಎಂದು
ಅದಕೆಂದಳು ನನ್ನ ಗೆಳತಿ ನಾನಗುವೆ ಸುಂದರ ಪಕ್ಷಿ
ಮತ್ತೆ ಅವಳು ನನ್ನ ಕೇಳಿದಳು ನೀನು ಎಂದು ನಾನಂದೆ...ನಾನಗ ಬಯಸುವೆ ನನ್ನ ಅಮ್ಮನಿಗೆ ಅಮ್ಮ ಎಂದು....
ಅಮ್ಮ ಆದರೆ ತಿಳಿಯುತ್ತದೆ ಮಗುವಿನ ಎಲ್ಲಾ ಪ್ರಶ್ನೆಗೆ ಉತ್ತರ ನಮಗೆ ತಿಳಿಯದ ಎಲ್ಲಾ ಪ್ರಶ್ನೆಯ ಉತ್ತರ ಅಮ್ಮ ನೀ ನಮ್ಮ ಐ ಲವ್ ಯು ಅಮ್ಮ
ಜಗವು ನೋಡಿದ ಮೊದಲ ದೈವ
ಬದುಕು ಕಂಡ ಮೊದಲ ಜೀವ
ನನ್ನ ಸಲಹಿದ ಧೀರೆ ನೀನು ಧೈರ್ಯ ನೀಡಿದ ಮಾತೆ ನೀನು
ಕಥೆಯ ಹೇಳುವ ಕಥೆಗಾರೆ ಲಾಲಿ ಹಾಡುವ ಗಾಯಕಿ ನೀನೆ
ನಿನ್ ಬಿಟ್ರೆ ಯಾರು ಇಲ್ಲಮ್ಮ ನೀನೆ ನನಗಲ್ಲಮ