ನಾ ಬರೆದ ಮೊದಲ ಕವನ
ನಿನ್ನನು ಕಂಡ ನಾನೇ ಪಾವನ.....
ತಕ್ಷಣವೇ ಬರೀಬೇಕೇನಿಸಿತು ಒಂದು ಕವನ
ನೀ ತೆರೆದೆ ನನ್ನ ಮನದ ಬಾಗಿಲಿನ.....
ಹೇಳು ನೀ ನನಗೆ ಪ್ರೀತಿ ಎಂದರೆ ಇದೇನಾ
ನಿನ್ನೆ ಸ್ಮರಿಸುತಿರುವೆ ಸದಾ ನಾ.....
ನನ್ನ ಕನಸಿನ ಕನ್ನಡಿಯ
ನೀ ಚೂರು ಮಾಡಿ ಹೋದೆಯಲ್ಲೇ
ನನ್ನ ಹೃದಯದ ಅರಮನೆಯ
ರಾಜಕುಮಾರಿಯೇ.
ಚಿದ್ರವಾದ ಕನ್ನಡಿಯನ್ನ ಚೂರುಗಳನ್ನಾ
ಜೋಡಿಸಲಾಗುತ್ತಿಲ್ಲಾ.
ನೀನಿಲ್ಲಾದಾ ಬದುಕಿಗೆ
ಅರ್ಥವಿಲ್ಲಾ.
ನನ್ನ ಮೂಖ ರೋಧನೆಯ
ಕೇಳುವವರಾರಿಲ್ಲಾ.
ಎತ್ತ ನೋಡಿದರು ನೀನೆ
ಕಾಣುತಿಹೆಯಲ್ಲಾ.
ಮನದ ಕಣ್ಣೀರ ಜೊತೆಗೆ
ಬಿಂಬವೇ ಮಾಯವಗುತಿಹುದಲ್ಲಾ.
ನಾ ಮರೆಯೋ ಮುನ್ನ
ನೀ ಬಂದು ಸೇರು ನನ್ನಾ.
ನಿನ್ನನ್ನು ದೇವರಂತೆ ಪೂಜಿಸುವೆ
ನಿನ್ನಲ್ಲಿ ಯಾವುದೇ ಬೇಡಿಕೆಯು ನನಗಿಲ್ಲ
ಮಗುವಿನಂತೆ ನಿನ್ನ ಪ್ರೀತಿಸುವೆ
ತಾಯಿ ನಾ ನಿನಗಲ್ಲ
ಹಿಂದೆ ಬಂದಾಗಲೆಲ್ಲ ಹೊರದೂಡಿದೆನಲ್ಲ
ನೀನಿಲ್ಲದ ಬದುಕು ಚಂದವೇನಲ್ಲ
ಅನಿಸುವುದು ಆಗಾಗ್ಗೆ ನೀನಿಲ್ಲದೆ ನನಗೆ ಬದುಕಿಲ್ಲ
ಆದರೂ ಬದುಕುವುದು ಅನಿವಾರ್ಯ ಬೇರೆ ದಾರಿಯಿಲ್ಲ!
ಪ್ರಾರಂಭದಲ್ಲಿ ನಾ ಬರೆಯುವ ಕವನದಲ್ಲಿತ್ತು ಅಟ್ಟಹಾಸ...!
ನೀ ಪರಿಚಯ ವಾದಾಗ ಅನಿಸಿತು,
ಈ ಕವನವೊಂದು ಸುಂದರ, ಸಮಂಜಸ...!
ನಿನ್ನಿಂದ ನನ್ನ ಕವನಗಳಿಗೆ ಬಂದಿತು ಮಂದಹಾಸ..!
ನಾ ಕೇಳುವೆ ನಿನಗೊಂದು ಏನಿದು
ವಿಪಯಾ೯ಸ...!
ಹೇ ಹೃದಯವೇ ಕೇಳು,
ನಿನ್ನ ಪ್ರೀತಿಗೆ ಜೊತೆಯಾಗ ಬಯಸುವ ಒಡತಿ
ನಾನು,
ಒಂದು ವೇಳೆ ಆ ಪ್ರೀತಿಗೆ ಕೊಟ್ಟರೆ ಸಮ್ಮತಿ,
ಆಗುವೆನು ನಿನ್ನ ಪ್ರೀತಿಗೆ ಆಹುತಿ...!
ಇರುವೆನು ನಿನ್ನ ಜೊತೆಗೆ ಜನ್ಮ ಪೂತಿ೯...!