Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಧ್ಯ ರಾತ್ರಿ ಕಂಡವಳು

ಫೋನ್ ನಿನ್ನ ಮುಟ್ಟಲು ನನಗೆ ಕಾರಣವಿಲ್ಲ
ಆದರೆ ಅವಳನ್ನು ಸ್ಪರ್ಶಸಲು ಮನಸು ಕಾರಣ ಹುಡಿಕಿತಲ್ಲ
ಊರ್ವಶಿಯನ್ನೇ ಮೀರಿಸುವಂತ ಅಂದವಂತೆ ಆಕೆ
ಸನಿಹಕೆ ಬಂದಾಗ ಅವಳು ಹೃದಯ ಬಡಿತ ಜೋರಾಯ್ತು ಯಾಕೆ..
ದಿನಬೆಳಗಾದರೆ ಸೂರ್ಯನದೆ ಭೂಮಿಗೆ ಆರತಿ
ನನ್ನ ಮನಸ್ಸನ್ನು ಕ್ಷಣಕ್ಕೆ ಸೆಳೆದು ಬಿಟ್ಟಳು ಅ ರತಿ
ಇವೆಲ್ಲ ಮಾತಾಷ್ಟೇ
ನಿಜವಾಗಿಯೂ ಪೂಜಿಸುತ್ತಿರುವೆ ಅವಳನ್ನು ಅಂದು ಕೊಂಡು ದೇವತೆ.....

- Sanju gubbi Bhagya

26 Jul 2024, 06:36 pm

ಭೂಮಿಗೆ ಬಂದ ಮಳೆ

ಮಳೆ ಮಳೆ ಮೋಡ ಕವಿದ ಮಳೆ
ಬಾನ ತುಂಬಾ ಬೆಳಗುತ್ತಿದೆ ಮಿಂಚಿನ ಮಳೆ
ಹಳ್ಳ ಕೊಳ್ಳ, ನದಿಯನು ತುಂಬಿಸುವ ಮಳೆ
ಆ ಗಂಗೆಯ ಹರಿವಿಗೆ ನಳನಳಿಸುವ ಮಳೆ

ರೈತರಿಗಾಗಿ ಮಿಡಿಯುತ್ತಿದೆ ತುಂತುರು ಮಳೆ
ಬೆಳೆಗಳು ಬೆಳೆಯಲು ಕಾತಾರಿಸೋ ಮಳೆ
ಭೂಮಿಯ ಬಿಸಿಯನು ಹಾರಿಸುವ ಮಳೆ
ಮುತ್ತಿನ ಹನಿಯನು ಕಾರುವ ಹವಳ ಮಳೆ

ನಿಸರ್ಗದ ಮೈಯನ್ನು ತೊಳೆಯುವ ಮಳೆ
ಹಸಿರು ಗಿಡ ಮರಗಳಿಗೆ ಆಸರೆಯಾದ ಮಳೆ
ಪ್ರಾಣಿ ಪಕ್ಷಿಗಳಿಗೆ ದಾಹವನ್ನಿಂಗಿಸುವ ಮಳೆ
ಕಾಡು ಮೇಡುಗಳ ಮಿತ್ರನಾಗಿರುವ ಮಳೆ

ಬರಗಾಲವನ್ನು ದೂರ ಸರಿಸಿರುವ ಮಳೆ
ನೆಲದಲ್ಲಿರುವ ಬಿರುಕನ್ನು ಮುಚ್ಚಿರೋ ಮಳೆ
ಮನುಕುಲ ಅನ್ನವ ತಿನ್ನಲು ನೆರವಾದ ಮಳೆ
ಮಲೆನಾಡಿನ ಮಂಜಿಗೆ ಕಾರಣವಾದ ಮಳೆ

ನವಿಲಿನ ನಾಟ್ಯಕ್ಕೆ ಆನಂದಿಸುವ ಮಳೆ
ಕಾಮನಬಿಲ್ಲಿನ ಏಳು ಬಣ್ಣಗಳ ಸೃಷ್ಟಿಯ ಮಳೆ
ಸಿಡಿಲು ಮಿಂಚನು ಘರ್ಷಿಸುತ್ತಿರೋ ಮಳೆ
ಚಿಗುರುವ ಮಕ್ಕಳನು ನಗಿಸುತ್ತಿರುವ ಮಳೆ

❤️ ವಿರೇಶ ಉಪ್ಪಾರ್


















- Viresh uppar

21 Jul 2024, 06:35 pm

ಕವನದ ಶೀರ್ಷಿಕೆ ಗುರುವಿನ ಸಂಸ್ಕಾರ.

ವಿವಿಧ ಹೂ ಮನಗಳ ಮಾಲೆ ಮಾಡಿ,
ಶಿಕ್ಷಕ ಏಕತೆಯ ಕಂಪು ನೀಡಿ,
ನಲಿಯುತ ಕಲಿಸುವ ಮಕ್ಕಳಿಗೆ
ಅಂಗಳದ ಆಟದಿ ತಾನೊಟ್ಟುಗೂಡಿ.

ಮಗುವಿನ ಕಲಿಕೆಗೆ ನಕ್ಷತ್ರವಾಗಿ,
ಭವಿಷ್ಯದ ಬುನಾದಿಗೆ ಕನ್ನಡಿಯಾಗಿ,
ಸಹಾನುಭೂತಿ ಶಿಕ್ಷಕ ದುಡಿಯುವ
ಮಕ್ಕಳ ಸಾಧನೆಯ ಯಶಸ್ಸಿಗಾಗಿ.

ಚಿಗುರುವ ಲತೆಗಳ ತಪ್ಪಿಗಿಲ್ಲ ಬೇಸರ,
ಮಗುವಿನ ಜ್ಞಾನಕ್ಕೆ ಹೊಂಬಣ್ಣ ಕೊಡುವ ಸರದಾರ,
ಜನರ ನೋವನ್ನು ಮರೆಸುವ ವಿದ್ಯೆ,
ಪಡೆಯುವುದು ಧರೆಯನಾಳಲು ಸದ್ಗುರುವಿನ ಸಂಸ್ಕಾರ. ಅಮೂರ್ತ ವಿಷಯಗಳ ಅರ್ಜನೆಗೆ
ಸಹಕರಿಸುವ ಗುರೂ ಹೊಸ ಸಂಶೋಧನೆಗೆ,
ಪಾರದರ್ಶಕದಿ ಪಡೆದ ಸಂಸ್ಕೃತಿ,
ಪಸರಿಸುವುದು ಗುರುವಿನ ಹೆಸರೊಂದಿಗೆ.

ಬುದ್ಧ ನೀಡಿದ ಜ್ಞಾನದ ಬೆಳಕು,
ಜಗಕೆ ಕಲಿಸಿದೆ ಶಾಂತಿಯ ಬದುಕು,
ಕಷ್ಟಗಳಿಗೆ ಅಂಜದೆ ನಡೆ ಮುಂದಕೆ,
ತೃಷೆಯಿರುವ ಮನುಜಗೆ ನಿ ನೀರಾದರೆ ಸಾಕು.

ರಚನೆ ಶ್ರೀಮತಿ ನಾಗಮಣಿ h b
ಸಹಶಿಕ್ಷಕಿ G HP S ಧರ್ಮಪುರ.

- nagamani Kanaka

21 Jul 2024, 05:44 pm

ಮೂಕಜ್ಜಿಯ ಕನಸು

ಓದಲು ಕುಳಿತೆ ಮೂಕಜ್ಜಿಯ ಕನಸು.
ಅರ್ಥವಾಗದೇ ಹೊಯ್ತು ಕಾರಾಂತರ ಮನಸು.
ಇನ್ನೂ ಓದಿಲ್ಲವಾ ಮೂಕಜ್ಜಿಯ ಕನಸು?
ಹಾಗಿದ್ರೆ ನೀವು ಮಾಡಬೇಕು ಖಂಡಿತ ಮನಸು.
ಅಯ್ಯೋ ರಾಮಾ, ನನ್ನ ಮೇಲೇಕೆ ನಿಮ್ಮ ಮುನಿಸು?

Mallarao Kulkarni
7204820986

- Mallarao Kulkarni

16 Jul 2024, 12:36 am

ಅಮ್ಮ

ಎಡವಿ ಬಿದ್ದರೆ ಅಮ್ಮ
ಹೆಂಡತಿ ಬಂದ್ಮೆಲೆ ಹೋಗಮ್ಮ
ಲೇ ಕಂದ! ತೀರಿಸಲಾಗದು ಅವಳ
ಋಣವ ಇನ್ನೂ ಏಳು ಜನ್ಮ.

ಅಮ್ಮ ಎಂದರೆ ಸಿಗುವುದು ಸ್ವರ್ಗ
ಹಡೆದಮ್ಮ ಎನ್ನುವಕ್ಕಿರಲಿ ಗರ್ವ
ದೇವನೇಳುತ್ತಾನೆ ಅಮ್ಮನ ಪೂಜೆಯೇ ಧರ್ಮ.
ಇದೆಲ್ಲವ ಮರೆತರೆ ಅದು ನಿನ್ನ ಕರ್ಮ !

Mallarao Kulkarni
7204820986

- Mallarao Kulkarni

16 Jul 2024, 12:05 am

ನನ್ನವನು

ನನ್ನ ಊಹೆಗೂ ಮೀರಿದ ಭಾವನೆ ನೀನು
ನಿನ್ನ ನಾ ಹುಡುಕುವೆ ಆ ಗುಂಗುರು ಕೂದಲಲ್ಲಿ
ಕಾಯುವೆ ನಾ ನಿನ್ನ ಬರುವಿಕೆಯನ್ನು
ಆ ನಿನ್ನ ನಗುವನು ನೋಡಲು ಹಾ ತೊರೆಯುತಿದೆ ನನ್ನ ಈ ಮನ
ಮಿಡಿಯುತಿದೆ ಈ ಹೃದಯ ನಿನ್ನ ತುಟಿ ಅಂಚಿನ ಧ್ವನಿಯ ಕೇಳಲು
ನನ್ನ ಕಂಗಳು ಸೆಳೆಯುತಿದೆ ನಿನ್ನ ನಡೆಯತ್ತಾ
ಪದೆ ಪದೆ ಕಾಡುತಿದೆ ಆ ನಿನ್ನ ನೆನಪು
ಆ ನಿನ್ನ ನೆನಪಿನಿಂದ ಆದೇ ನಾ ಕವಯಿತ್ರಿ

- Sowjanya Kotary

11 Jul 2024, 10:03 pm

ಲೇ ನನ್ನೋಳೇ....

ನಿನಗೇ ಅಡುಗೆ ಮಾಡಲು ಬರದೆ ಇದ್ರು
ಪರವಾಗಿಲ್ಲ ಹೇಗಿದ್ರೂ ಅಡ್ಜೆಸ್ಟ್ ಮಾಡ್ಕೊತಿನಿ
ಆದ್ರೇ ಊಟ ಮಾಡೋದು ಮಾತ್ರ ಚನ್ನಾಗಿ ಕಲಿ
ಯಾಕೆಂದ್ರೇ ನನ್ನ ಅತ್ತೆ
ನನಗೆ ಬಯ್ಯೋದು ಬೇಡ....
ನನ್ನನ್ನ ಹೇಗೆ ನೋಡ್ಕೊಂಡ್ರು ಪರವಾಗಿಲ್ಲ
ಅಡ್ಜೆಸ್ಟ್ ಮಾಡ್ಕೊತಿನಿ
ಆದ್ರೇ ಮನೆಗೆ ಬಂದ ಸಂಭಂದಿಕರನ್ನ
ಚೆನ್ನಾಗಿ ನೋಡ್ಕೋ ಯಾಕೆಂದ್ರೆ ನಿನ್ನ ಅತ್ತೆ
ನಿನಗೇ ಬಯ್ಯೋದು ಬೇಡ....
ಎಮ್.ಎಸ್.ಭೋವಿ...✍️

- mani_s_bhovi

10 Jul 2024, 11:50 am

ಆತ್ಮ ಸ್ಥೈರ್ಯ

ಸೋತಿರಬಹುದು ಆದರೆ ಸತ್ತಿಲ್ಲ ,
ನಗುತ್ತಿರುವವರ ಜೊತೆಗೂಡಿ ನಗಲಾಗುತ್ತಿಲ್ಲ
ಎತ್ತ ನೋಡಿದರು ಕಾಣುತ್ತಿಹುದು,
ಕಪಟಿಗಳ ಅಪಹಸ್ಯ ಕೇಳುತ್ತಿಹುದು;
ಅವಿವೇಕಿಗಳ ವಾಕ್ಯ ಆದರೂ
ಕುಗ್ಗದು ಆತ್ಮಸ್ಥೈರ್ಯ, ಜಗ್ಗದು ನಂಬಿಕೆ, ಬಲವಾಗಿಹುದು ಆತ್ಮವಿಶ್ವಾಸ ,
ಬಿಗಿದಪ್ಪಿ ವಿವೇಕವ ಭಾರಿಸುವೆ,
ಜಯಭೇರಿ ಸೋಲಿನ ಸರಮಾಲೆಯಲ್ಲಿ.

- ಭಾವ ( ಆಲ್ವಿನ್ ಪವನ್)

- alwin pavan

10 Jul 2024, 12:27 am

ಕಾವ್ಯ ಗಂಗೆ

ಬಾ ಎನ್ನ ಕಾವ್ಯ ಗಂಗೆ ,
ಎನ್ನ ಹೃದಯವು ಬತ್ತಿದೆ ನಿನ್ನ ಹರಿವಿಲ್ಲದೆ.
ಪ್ರೇಮ ಮಲ್ಲಿಗೆಯು ಬಾಡುತಿಹುದು ನಿನ್ನ ಸಾನಿಧ್ಯವಿಲ್ಲದೆ. ಚಾತಕ ಪಕ್ಷಿ ಮುಂಗಾರಿಗಾಗಿ ಹವಣಿಸುವಂತೆ, ಹವಣಿಸುತ್ತಿರುವೆ ನಾ ನಿನ್ನ ಆಗಮನಕ್ಕೆ .ಎನ್ನ ಹೃದಯದ ಚಿಪ್ಪಿನಲ್ಲಿ,
ಅವಿತ್ತಿಟ್ಟಿರುವೆ ಕಾವ್ಯ ಮುತ್ತನ್ನು, ಉಡುಗೊರೆಯಾಗಿ.
ವಸಂತ ಕಾಲದಲ್ಲಿ ಜೇನಿನ ಪರಾಗಸ್ಪರ್ಷಕ್ಕೆ ವನಕುಸುಮಗಳು ಕಾದಿರುವಂತೆ ನಾ ಕಾಯುತ್ತಿರುವೆ ನಿನ್ನ ಅಮೋಘ ಭಾವಸ್ಪರ್ಶಕ್ಕೆ ,
ಬಾ ನನ್ನ ಕಾವ್ಯ,
ಹರಿಸೆನ್ನಲ್ಲಿ ಪ್ರೇಮ ವರ್ಷ,
ಮಯೂರನಂತೆ ಹರಡುವೆ ಪದ ಗುಚ್ಚವನ್ನು ,ನಿನ್ನ ಹಾಡಿ ಹೋಗಳಲು ನೀ ಹಾಡಾದರೆ ,ನಾ ಸ್ವರವಾಗುವೆ. ಬಾ ನನ್ನ ಕಾವ್ಯ ನಾವಿಬ್ಬರು ಸೇರಿ ಹಾಡುವ ಜೀವರಾಗ.
ಭಾವ( ಆಲ್ವಿನ್ ಪವನ್ ಹಾಸನ)

- alwin pavan

10 Jul 2024, 12:17 am

ಸುಳ್ಳಿನ ಜಾಯಮಾನ

ಅನ್ಯಾಯದ ಪ್ರಪಂಚದಲ್ಲಿ, ನೀ ಒಂದು ಚಿಕ್ಕ ಕಣ,
ಇದನ್ನು ಸರಿಮಾಡುತ್ತೇನೆ ಎಂದು ಪಣತೊಟ್ಟವರು ಸಾವಿರಾರು, ಆದರೆ ಇದು ಅನ್ಯದ ಸಂಕೀರ್ಣ ನೀನೆ ಇಲ್ಲಿ ತೇಲೆ ಬಾಗಬೇಕು ಮನುಜ.

- Sharathkumar

09 Jul 2024, 09:57 pm