Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಅನಿಸಿಕೆ ನಿಮಗಾಗಿ

ಜೀವನದಲ್ಲಿ ಎರಡು ರೀತಿಯ ನೋವುಗಳಿರುತ್ತವೆ
ಒಂದು ನಿಮ್ಮನ್ನು ನೊಯಿಸಿದರೆ
ಇನ್ನೊಂದು ನಿಮ್ಮನ್ನ ಬದಲಾಯಿಸುತ್ತದೆ.

ಇನ್ನೊಬ್ಬರ ಬದುಕನ್ನು
ಇಣುಕಿ ನೋಡುವುದನ್ನು
ಬಿಟ್ಟಾಗಲೆ ನಿಮ್ಮ ಬದುಕು
ಸುಂದರವಾಗಿ ಕಾಣಲು ಸಾಧ್ಯ....

ಯಾವತ್ತೂ ನಿನಗೆ ಶತ್ರುಗಳ ಸಂಖ್ಯೆ
ಹೆಚ್ಚುತ್ತ ಹೋಗುತ್ತದೊ...
ಅವತ್ತು
ನಿ ನಡೆದ ಹಾದಿ ಮತ್ತು ನಿನ್ನ
ಗುರಿ ನಿಖರವಾಗಿದೆ ಎಂದರ್ಥ....

ಪ್ರಯತ್ನ ಎಂಬುದು ಬೀಜದ ಹಾಗೆ
ಬಿತ್ತುತ್ತಲೇ ಇರಿ
ಚಿಗುರಿದರೆ ಮರವಾಗಲಿ
ಇಲ್ಲವೆಂದರೆ
ಮಣ್ಣಿಗೆ ಗೊಬ್ಬರವಾಗಲಿ.....

ಡಿ ಜೆ ವಿಶಾಲ ❤❤

- Vishal Hiremath

06 Apr 2020, 12:28 pm

ನನ್ನ ಪ್ರಕಾರ

ಬೆತ್ತಲೆ ದೇಹ ನೋಡಿ ಜೊಲ್ಲು ಸುರಿಸುವ
ಬದಲು
ಮುಚ್ಚಲು ಹೊದಿಕೆ ಕೊಡುವವನ ನಿಜವಾದ
ಗಂಡಸು
ಅರೆಬೆತ್ತಲೆ ಮೈಮಾಟ ಪ್ರದರ್ಶನ ಮಾಡದೇ
ಮೈತುಂಬಾ
ಬಟ್ಟೆ ಉಟ್ಟು ಸುಂದರವಾಗಿ ಕಾಣುವವಳೆ
ನಿಜವಾದ
ಹೆಣ್ಣು

N~RAJ

- Nagaraj Raj

06 Apr 2020, 10:15 am

ಹೆಣ್ಣು

ಪ್ರಕೃತಿಯು ಹೆಣ್ಣು ಭೂಮಾತೆಯು ಹೆಣ್ಣು
ಕನ್ನಾಂಡೆಯು ಹೆಣ್ಣು
ಅವರೆಲ್ಲ ನಮ್ಮ ತಾಯಿಯ ಸ್ಥಾನ ತುಂಬುತ್ತಾರೆ
ಹೆಣ್ಣು ಭೂಜ್ರೇಶು ಮಾತಾ ಎಂಬುದು ನಿಜ
ಹೆಂಡತಿ ಎಲ್ಲಾ ಸ್ಥಾನವನ್ನು ತುಂಬಿದರು ಸಹ
ಕೂನೆಗೆ ಅವಳು ಬರೀ ಹೆಣ್ಣು ಹೆಣ್ಣು...
ಮಣ್ಣು ಹೂನ್ನು ರತ್ನ ಎಲ್ಲಕ್ಕು ಇದೆ ಬೆಲೆ
ಆದರೆ ಹೆಣ್ಣಿನ ಮನಸ್ಸಿಗೆ ಮಾತ್ರ ಹೆಣದಿದೆ ಬಲೆ

- RoopaGowtham

06 Apr 2020, 09:25 am

ಮುಖವಾಡದ ಜೀವನ!?

ಹಾರಾಡಿದೆ ಕನಸು ಬಾನಾಡಿಯಾಗಿ,
ಕೊನೆ ಮೊದಲಿಲ್ಲದ ಆಕಾಶದಲ್ಲಿ
ಬಂಧಿಸುವ ಮನಸಾಗಿದೆ,
ಹೋಗಿ ಬಿಡು ದೂರ..

ಸಂಬಂಧಗಳ ಬೇಡಿಯ ತೊಡಿಸಿ,
ಹೇಗೆ ಸೆರೆ ಮಾಡಲಿ ನಿನ್ನ
ಆದರೂ ಕೊಲ್ಲುವ ಮನಸಾಗಿದೆ,
ಹೋಗಿ ಬಿಡು ದೂರ..

ಮುಖವಾಡದ ಜೀವನ,
ಸಾಕಿನ್ನು ಮೂರು ದಿನ
ಆಸೆಯ ರೆಕ್ಕೆ ಬಲಿಯುವ ಮುನ್ನ,
ಹೋಗಿ ಬಿಡು ದೂರ..

- deepu

06 Apr 2020, 03:05 am

ಮನ ಮನಸ್ಸು

ನನಗೆ ಎನೋ ಅನಿಸುತಿದೆ ಇಂದು
ನನ್ನಲಿ ನಾ ಇಲ್ಲ ಇಂದು
ಕೂನೆಗೆ ಹುಡುಕಾಡಿದೆ ನನ್ನ ಮನಸ್ಸನ್ನು
ಆದರೆ ತಿಳಿಯಿತು ಅದು ನಿನ್ನಲಿ ಇದೆ ಎಂದು
ನನ ಮನಸ್ಸು ನನ್ನಲಿ ಇರಲು ಬಯಸುತಿಲ್ಲ
ಏಕೆಂದರೆ ಅದು ಬಯಸಿದೆ ನಿನ್ನ ಪ್ರೀತಿ ಅರಮನೆಯಲ್ಲಿ ಬದುಕಲು
ಮನಸ್ಸೇ ನೀ ಅಲ್ಲೇ ಇರು ನಾ ಬಂದು
ಸೇರುವೇ ನಿನ್ನಲ್ಲೇ.....ಣ

- RoopaGowtham

05 Apr 2020, 11:11 pm

ಕೊರೋನಾ ಕೊಂದಿದ್ದು ನಾನೇ!!

ಹೇ .. ಕೊರೋನ
ನನ್ನ ಹಣೆತೆಯ ಬೆಳಕಿನ ಜ್ವಾಲೆಗೆ
ಹೆಣವಾಗಿ ಹೋಗು
ಮರಳಿ ಧರೆಗೆ ಬಾರದೆ ಬೂದಿಯಾಗು.

ಭಾರತ.......
ಸಪ್ತರ್ಷಿಗಳು ನಡೆದಾಡಿದ ತಪೋ ಭೂಮಿ
ಗಂಗೆ ತುಂಗೆ ಹರಿವ ಪುಣ್ಯ ಭೂಮಿ
ಕೆಟ್ಟ ಹುಳುಗಳಿಗೆ ಇಲ್ಲಿ ನೆಲೆಯಿಲ್ಲ
ಒಗ್ಗಟ್ಟಿನ ಬಲವೆ ಇಲ್ಲಿ ಎಲ್ಲ

ಇಲ್ಲಿ....
ಸರ್ವಧರ್ಮಗಳ ಒಗ್ಗಟ್ಟಿನ ಬಲವಿದೆ
ನಿನ್ನನ್ನು ನಾಶಗೊಳಿಸುವ ಛಲವಿದೆ
ಮಂತ್ರ ತಂತ್ರಗಳ ಬಲೆಯಿದೆ

ನೆನಪಿರಲಿ ನಿನಗೆ........
ನಿನ್ನ ಮೇಲಿದೆ ಎಲ್ಲರ ಕೋಪ
ತಿಥಿ ಮಾಡಲೆಂದೇ ಮನೆ ಮುಂದೆ ದೀಪ.

lakshman .madival teacher

- lakshman

05 Apr 2020, 08:20 pm

ಕೊರೊನಾ ವೈರಸ್

*ಕೊರೊನಾ ವೈರಸ್*
ಮಹಾ ಮಾರಿಯಂತೆ ಜನರಿಗೆ ಗೋಳು ಹಿಡಿಸೈತಂತ್ತೆ
ಇದರ ಹೆಸರು ಕೊರೊನಾ ವೈರಸ್ ಅಂತೆ
ಜಗದ ಜನರ ಜೀವ ತಗಿತೈತಂತ್ತೆ
ಬಡವ,ಶ್ರಿಮಂತ ಬೇದವಿಲ್ಲವಂತೆ ಎಲ್ಲರಲ್ಲಿ ಹೊಗತಿನಿ ಅಂತೈತಂತ್ತೆ
ಇದುವೆ ಕೊರೊನಾ ವೈರಸ್ ಅಂತೆ||

ಜಗದಲಿ ಜನರ ನಿದ್ದೆ ಗೆಡಿಸೆತಂತ್ತೆ
ವಿಜ್ಞಾನಿಗಳೊಗೆ ತಲೆನೋವಾಗೆತಂತ್ತೆ
ಮಕ್ಕಳ ಭವಿಷ್ಯವಾದ ಪರೀಕ್ಷೆ ಜೊತೆ ಆಟ ಆಡಾಕತ್ತೆತಂತ್ತೆ
ಜನರ ಸಂತೋಷದ ಸಂಭ್ರಮಗಳನ್ನು ಕಿತಗೊಂಡೈತಿ
ವ್ಯಾಪಾರಿಗಳ ವ್ಯವಾಹಾರಕ್ಕೆ ಕಂಠಕವಾಗೆತಿ
ಅದುವೆ ಕೊರೊನ್ ವೈರಸ್ ಅಂತೆ||

ಕ್ಷಣ ಮಾತ್ರದಲ್ಲಿ ಇಡಿ ವಿಶ್ವವನ್ನು ಆವರಿಸೆತಿ,ಜನರ ನಿದ್ದಿಗೆಡಿಸೆತಿ
ಮುಟ್ಟಿದರು,ಕೆಮ್ಮಿದರು ಅಂಟಿಕೊಳ್ಳತೈತಂತ್ತೆ
ಮುಖಕ್ಕೆ ಮಾಸ್ಕ್ ಹಾಕಿಕೊಳ್ಳೊತರಾ ಮಾಡೆತಿ ಇದುವೆ ಕೊರೊನ್ ವೈರಸ್ಂತೆ||

ಎಲ್ಲರನ್ನು ಹೊರ ಹೋಗದಂತೆ ಬಂದನ ಹಾಕೆತಿ
ಜನರ ನಡುವಿನ ಭಾಂದವ್ಯ ದೂರ ಮಾಡಕತ್ತೆತ್ತಿ
ಮಕ್ಕಳು, ವೃದ್ದರಿಗೆ ಬೇಗ ಹರಡತೈತಂತೆ
ಕೊರೊನಾ ವೈರಸ್ ಕೊಲ್ಲಲ್ಲು ವಿಜ್ಞಾನಿಗಳು ಮದ್ದು ಕಂಡು ಹಿಡಿಯ್ಯಾಕತ್ತಾರಂತ್ತೆ
ಹುಟ್ಟಿದ ವೈರಸ್ಗೆ ಕೊನೆ ಎಂಬುದು ಇದೆ ಅಂತೆ
ಅದುವೆ ಕೊರೊನಾ ವೈರಸ್ ಅಂತೆ||

ಎಲೆ ಕೊರೊನಾ ನೀನು ಮಾಡುವುದು ಸರಿನಾ
ಇನ್ನೂ ಉಳಿಗಾಲವಿಲ್ಲ ನಿನಗಾ ಬಿಡುವುದಿಲ್ಲ ನಮ್ಮ ವಿಜ್ಞಾನಿಗಳು ನಿನ್ನ
ಬೇಗ ತೊಲಗು ಇಲ್ಲಿಂದ
ಬೇಡುವೆನು ದೇವರಲ್ಲಿ ನಾನು||

ರಚನೆ:ಎಸ್.ಕೆ.ಆಡಿನ.ಶಿಕ್ಷಕರು

- S.K.ADIN

05 Apr 2020, 04:10 pm

ಮುಖಪುಟ

ಕಳೆದು ಹೋದ ನೆನಪುಗಳು ಸಾವಿರ
ಕಾಣಿಸದ ಮುಖಪುಟದಲಿ,
ನೀ ಓದದೇ ಹೋದೆ ಪುಟ ತಿರುವಿ
ಬರೆದವನ ಬಯಕೆ ಅರಿಯದೆ۔

ಕಾರ್ಮೋಡವೆ ಕರಗಿ ಮಳೆ ಹನಿಯಾಗಿ ಬಿದ್ದರೂ
ಇನ್ನೂ ನಿನ್ನ ಮನ ಕರಗದೆ,
ನೀ ಹೇಳದೇ ಹೋದ ಕಾರಣವೇನೇ ಇದ್ದರೂ
ನೆನಪುಗಳಿಂದಾದರೂ ನಿನ್ನಮನ ಕೊರಗದೇ ?

- chidananda chida

05 Apr 2020, 01:57 pm

ದೀಪ

ಹಣತೆ ಹಚ್ಚಾ ಗೆಣತೀ
ಪ್ರೀತಿ ಎಣ್ಣೆ ಸುರಿದು
ತನು ಬತ್ತಿಯ ಬಿಗಿದು
ಜ್ಞಾನಾಗ್ನಿಯ ತೀಡಿ
ಬೆಳಕ ಹೊತ್ತಿಸ ಸತ್ತು ಬಿಡಲಿ ಒಳಅಂಧಕಾರ ರಕ್ಕಸ

ಅಶಾಂತಿ ಅಸಹಿಷ್ಣ
ಕತ್ತಲಾಭ್ಧಿಯ ಕುಡಿದು
ದೀಪವೆಂಬ ಅಗಸ್ತ್ಯ
ಅಟ್ಟಿಬಿಡಲಿ ಬಡಿದು
ಮತ್ತೆಬಾರದ ಕತ್ತಲೆಯ ಕಪ್ಪಿನ ಸುಳಿಗೆ ಸಿಕ್ಕಿಸ

ಪ್ರಕೃತಿಯ ಎದುರ
ಹಿಡಲಣಿತ ಹೆಜ್ಜೆಗಳ
ಕೆಡವಲಿ ದೊಪ್ಪನೆ
ನೆಲದಳಿಲಿಗೆ ಕಿವಿಗಳ
ಬೆಳಕೊಟ್ಟಿಗೆ ಕೊಡತ ಬೆಳಕದು ಪಯಣಿಸಲಿ

ತಮಜ್ಞತೆ ಅಳಿದು
ವಿಜ್ಞಾನ ಉಳಿದು
ಆಧ್ಯಾತ್ಮತೆ ಬೆಳಿದು
ಬ್ರಹ್ಮಬೆಳಗು ಎದ್ದು
ನೆಲದಜೀವಗಳ ತಪ್ಪ ಮನ್ನಿಸೆನಲು ದೀಪದಲಿ

ನಮ್ಮೊಳಗ ತೆರೆದು
ದೇವನೆದುರು ಭಕ್ತಿ ತೋರಿ
ಪ್ರೀತಿ ಬೆಳಕ ಕರೆದು
ತೊಯ್ಯೋಣ ತಾಯ ಧರಿ
ಮನಷತ್ವ ಮಮತೆಬೆಳಗ ಪಕ್ಷಿಯ ತೇಲಿಸೋಣ ನಭಕ

- samna

05 Apr 2020, 01:09 pm

ಹೆಣ್ಣು ಎಂಬ ದೈವ ಅವಳು

ಎಲೆ ಗಂಡು ಕುಲವೇ ಹೆಣ್ಣು ಎಂಬ ದೈವ ಅವಳು
ಋತುಸ್ರಾವದ ನೋವನ್ನೆ ತಡೆದುಕೊಂಡವಳು
ನಿನ್ನ ಹೊರುವಾಗ ನರಕಕ್ಕೆ ಹೋಗಿ ಬಂದವಳು
ಹಸುಗೂಸು ಇದ್ದಾಗ ಹಾಲುಣಿಸಿದವಳು
ಅಕ್ಕ ತಂಗಿಯಾಗಿ ಜೊತೆಯಾಗಿ ಬೆಳೆದವಳು
ಜೀವನ ಸಂಗಾತಿಯಾಗಿ ಬಾಳ ಬೆಳಗುವವಳು
ನಿನ್ನೆಲ್ಲ ಆಸೆ-ಬಯಕೆಗಳ‌ ತಣಿಸಿದವಳು
ಗಂಡಸಿನ ಕಾಮ ಕೃತ್ಯಕ್ಕೆ ಬಲಿಯಾದವಳು
ಇಷ್ಟೆಲ್ಲಾ ನೋವುಂಡರು ಗಂಡು ಕುಲದಿಂದ
ಹೆಣ್ಣು ಬಯಸುವುದು ಎರಡನ್ನೆ
ನೀವು ಅವಳಿಗೆ ಕೊಡುವ ಗೌರವ ಮತ್ತು ಪ್ರೀತಿಯನ್ನೆ

- Basavaraj.

05 Apr 2020, 01:07 pm