Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೂಗುತಿಗೆ ಮೌಲ್ಯ

ಕಿರು ನಾಚಿದ ಮೊಗದಲ್ಲಿನ ಮೂಗುತಿಯ ಅಂದ,
ಹೊಳೆಯುವ ಮೂಗುತಿಯು ನೋಡಲು ಚಂದ,
ಮೂಗುತಿಯ ಹೊಳಪಿಗೆ ಪೈಪೋಟಿ ನೀಡುವಂತಿದೆ ಹೆಣ್ಣಿನ ಕಣ್ಣಿನಂದ,
ಈ‌‌ ಅಂದ-ಚಂದಕ್ಕೆ ಮೌಲ್ಯ ಬಂದತ್ತು ಧರಿಸಿದಾಕೆಯಿಂದ,
ಮೂಗುತಿಯ ಅಂದದಿಂದ ದುಪ್ಪಟ್ಟಾಯ್ತು ಹೆಣ್ಣಿನಂದ.

- Guruprasad P

05 Apr 2020, 10:54 am

ಮನವ ಕರಗಿಸಿದ ಮಲ್ಲಿಗೆ ಹೂ

ನಗು ಮರೆತ ತುಟಿಗಳ ಮಧ್ಯ ಕಂಡಿತು ಮುಗುಳು ನಗೆ
ಉತ್ಸಾಹದ ಚೆಲುಮೆ ಚಿಗುರಿತು ಬದುಕಿನ ಪುಟದಲ್ಲಿ
ಮರಿಚಿಕೆಯಾದ ಸಂತೋಷದ ಕ್ಷಣ ಮರಳಿ ಬಾಳಿಗೆ ನೀ ತಂದು ಕೊಟ್ಟಿ ಚೆಲುವೆ ॥

ಪ್ರೀತಿ ಅರಿಯದ ಮನಸ್ಸಲ್ಲಿ ಅರಳಿಸಿದೆ ಒಲವಿನ ಒಲುಮೆ
ಸ್ನೇಹ ಬಾಂಧವ್ಯದ ಹೊಸ ಬದುಕಿಗೆ ನಿನಾದೆ ಮುನ್ನುಡಿ
ನವ ಕನಸಿಗೆ ಬಳೆದೆ ಕಾಮನ ಬಿಲ್ಲಿನ ರಂಗೂ
ಜೀವಕ್ಕೆ ಹೊಸ ಜೀವನ ನೀಡಿದೆ ಅಂಧಕಾರದ
ಹೊಂಬಿಸಿಲಿನ ಹೂವೇ ॥

ಸಂಬಂಧಗಳ ಹೂದೋಟದಲ್ಲಿ ಅರಳಿತು ಪ್ರೀತಿಯ ಮೊಗ್ಗು
ಕನಸು ರಂಗೇರಿತು, ಮನಸ್ಸು ಹುಚ್ಚೆದಿತು,
ಆಸೆ ಮುಗಿಲೆರಿತು, ಜೀವ ಹೂವಾಯಿತು,
ಬದುಕಿನ ಜ್ಯೋತಿ ಬೆಳಗಿಸಿದ ಕೋಮಲೆ
ಮನವ ಕರಗಿಸಿದ ಮಲ್ಲಿಗೆ ಹೂವು ನಿನಾದೆ ॥
❤❤❤

ಡಿ ಜೆ ವಿಶಾಲ
7996014212

- Vishal Hiremath

05 Apr 2020, 10:36 am

ಮಾತಿನ ಮಿತಿ

ಅತಿಯಾದ ಮಾತು
ತಳಹಿಡಿದ ಆಹಾರದಂತೆ
ತಿನ್ನುವುದು ತುಂಬಾ ಕಷ್ಟ
ಆದರೂ ಕೆಲವರು ತಿನ್ನುವರು.

ಅತಿ ಕಡಿಮೆ ಮಾತು
ಉಪ್ಪಿಲ್ಲದ ಆಹಾರದಂತೆ
ತಿನ್ನಲಾಗದೆಂದೇನಿಲ್ಲ
ಆದರೂ ಎಲ್ಲರೂ ತಿನ್ನಬಹುದು.

ಹಿತಮಿತವಾದ ಮಾತು
ರುಚಿಕರವಾದ ಆಹಾರದಂತೆ
ಹೊಟ್ಟೆ ತುಂಬುವಷ್ಟು
ತಿಂದು ತೇಗಬಹುದು..

- ಅಕ್ಷತ

05 Apr 2020, 10:21 am

ಒಲವು...❤

ಅಪ್ಪಳಿಸುವ ಸಮುದ್ರದಲೆಯಂತೆ
ನಿನ್ನ ಮೌನ ಹೃದಯಕ್ಕೆ ನೋವ ನೀಡುತಿದೆ ಪ್ರತಿಬಾರಿ...
ಬರಡಾಗಿರುವ ಮರುಭೂಮಿಯು ಹೇಳುತಿದೆ ನನ್ನ ಒಂಟಿತನವ ಸಾರಿ...
ಕತ್ತಲ ಕಾನನದಿ ಸಾಗುತಿದೆ ನಿನಿಲ್ಲದೆ ನನ್ನ ಜೀವನದ ದಾರಿ...
ಹಾದಿ ತಪ್ಪುತಿದೆ ನೀ ತೋರೆದ ಕ್ಷಣದಿಂದ ಬದುಕಿನ ಗುರಿ...
ನಾ ಕಾಣುವ ಕನ್ನಡಿಯ ಪ್ರತಿಬಿಂಬದಿ ನೀ ಮಾಯವಾದಾಗ ಕಳಚಿತು ನನ್ನ ನಗುವಿನ ಗರಿ...
ಕಾದಿರುವೆ ದಡದಲಿ ನಿನಗಾಗಿ, ನನ್ನೋಲವ ದಾಹವ ನಿಗಿಸಲು ಒಮ್ಮೆ ನೀರಂತೆ ಹರಿ...

- Chaitra Kulkarni

05 Apr 2020, 12:04 am

ವಿರಹಿ

ಚಿನ್ನಿ ನಿನ್ನ ನಾ ನೆನೆದಾಗ ನೆನಪಾಗೋದು
ನಿನ್ನ ಬರಸೆಳೆದು ಚುಂಬಿಸಿದ ಆ ಕ್ಷಣ...

ನಾ ಮಾಡಿದ ಕಾಡಿದ ನನ್ನ ಪ್ರೀತಿ
ನಾ ಕೆಟ್ಟವನು ನಿಜ...
ಆದರೆ ನನ್ನ ಪ್ರೀತಿ ಸುಳ್ಳಲ್ಲ
ನಾಟಕದ ನಾಯಕ ನಾನಲ್ಲ....
ಮೋಸ ವಂಚನೆ ತಿಳಿದಿಲ್ಲ
ನಿನ್ನ ಹಿಂಸಿಸುವ ಮನಸಿಲ್ಲಾ...
ನಾ ಪ್ರೀತಿಸುವುದು ನಿಲ್ಲೊಲ್ಲ
ನಿನ್ನ ಒಲವಿಗೆ ಕಾದಿರುವೆ ಬದುಕೆಲ್ಲಾ....
- ತೋ. ತಿ.

- ಸುನಿಲ್

04 Apr 2020, 09:34 pm

ಒಬ್ಬಂಟಿ,,,,,,,,

ಪ್ರತಿಬಾರಿ ನಾ ನಿನ್ನ ನೆನೆದಾಗ ನಂಗೆ ನೆನಪಾಗುವದು ನೀ ಮಾಡಿದ ಮೋಸವಲ್ಲ,,,,,,
ನಾ ಮಾಡಿದ ಬೆಟ್ಟದಷ್ಟು ಪ್ರೀತಿ,,,,,,,,
ನಾ ಕೆಟ್ಟವನು ನಿಜ,,,,,,
ಆದರೆ ನಿನ್ನ ಜೊತೆ ಇದ್ದಿದ್ದು ಎಲ್ಲವೂ ಸತ್ಯ,,,,
ನಟನೆಯಲ್ಲಿ ನಿನ್ನಷ್ಟು ಉತ್ತಮನು ನಾನಲ್ಲ,,,,,,
ಮೋಸ ಮಾಡುವದು ನಂಗೆ ತಿಳಿದಿಲ್ಲ,,,,,,
ಇನ್ನು ನೀ ನನ್ನ ಹಿಂದೆ ಬರುವದು ಬೇಕಿಲ್ಲ,,,,,,
ನಿನ್ನ ಮತ್ತೆ ಸೆರಿಸುವಷ್ಟು ಒಳ್ಳೆಯವ ನಾನಲ್ಲ,,,,,
ಕೊನೆಯ ಮಾತು,,,,
ಪ್ರೀತಿಸುವದ ನಿಲ್ಲಿಸಲಾರೆ ಆದರೆ ನಿನಗಾಗಿ ಎಂದು ಕಾಯಲ್ಲ,,,,,,,,
ಒಬ್ಬಂಟಿಗ,,,,,,,,,,,,

- ದೀಪವಿ

04 Apr 2020, 04:11 pm

ಸ್ವಪ್ನವಿಜ್ಜಿಕೆ

ಕವಿದು
ಕತ್ತಲೆಯಾದ ಮ್ಯಾಲೆ
ಅವಳು
ಮನಸಕುದರಿ ಮ್ಯಾಲೆ
ತನ್ನದೇ ಬಿಂಬಪ್ರತಿಗೆ
ರಾಣಿಪೋಷಾಕ
ಬಿಗಿದು
ಕದನ ಸಾರಲು
ಬರುವಳೆಂದು
ನನ್ನ ಸುಪ್ತ ರಾಜ್ಯದ ಮ್ಯಾಲೆ
ಕಾಯುತ್ತಿದ್ದೇನೆ
ಎಚ್ಚರಿದ್ದು....
ಬಂದಲ್ಲಿ
ಒಡನೆಯೇ ಮುಗಿಬಿದ್ದು
ಬಲೆಹಾಕಿ
ಒಳಸೆರೆಗಿಟ್ಟು
ಅವಳ
ಪ್ರೀತಿಕುದುರೆಯ
ಕಟ್ಟಿಹಾಕಲು
ಬದುಕಶ್ವಮೇದಕೆ....

- samna

04 Apr 2020, 03:22 pm

ಹೇ ಕರೋನಾ, ನೀ ಮಾಡಿದ್ದು ಸರಿನಾ ?

ನಗರೀಕರಣವ ಕಡಿಮೆ ಮಾಡಿದೆ ,
ಮಾಲಿನ್ಯವ ಮಟ್ಟ ಹಾಕಿದೆ,
ಹೇ ಕರುನಾ ,ನೀ ಮಾಡಿದ್ದು ಸರಿನಾ ?
ಲಕ್ಷಲಕ್ಷವೆಲ್ಲ ನಿನ್ನೆದುರು ಲಕ್ಷ್ಯವಿಲ್ಲದಾಯ್ತು,
ಭಕ್ಷ್ಯ ಭೋಜನ ಗಳೆಲ್ಲ ಕನಸಿನ ಮಾತಾಯ್ತು,
ಹೇ ಕರೋನಾ, ನೀ ಮಾಡಿದ್ದು ಸರಿನಾ ?
ಮಕ್ಕಳಲ್ಲಿ ಮಮತೆಯ ಬೆಳೆಸಿದೆ ,
ದೇಶ ಬಿಟ್ಟಿದ್ದವರ ಮರಳಿ ಗೂಡು ಸೇರಿಸಿದೆ ,
ಹೇ ಕರೋನಾ ,ನೀ ಮಾಡಿದ್ದು ಸರಿನಾ ?
ಅಪಘಾತ ಗಳೆಲ್ಲವೂ ಕಡಿಮೆಯಾಯಿತು ,
ವಿಮೆ ಮೊತ್ತವು ಹಾಗೆ ಉಳಿಯಿತು,
ಜಿಡಿಪಿ ಬಿದ್ದೇಹೋಯ್ತು,ಖಜಾನೆ ಖಾಲಿಯಾಯ್ತು,
ಅಭಿವೃದ್ಧಿ ಕಾರ್ಯ ನಿಂತೇ ಹೋಯ್ತು.
ಹೇ ಕರೋನಾ ,ನೀ ಮಾಡಿದ್ದು ಸರಿನಾ ?
@ ಚಿದಾನಂದ ಬಿ ಎಸ್

.,,,

- chidananda chida

04 Apr 2020, 03:19 pm

ಪರಿಧಿ

ಮೇರೆಗಳಿಲ್ಲದೇ ಪಸರಿಸಿದ ಅಂಬರವೆಲ್ಲ
ಸಾವಿರ ತಾರೆಗಳಿಂದ ತುಂಬಿಹುದಲ್ಲ
ನಮ್ಮ ಮೀರುವವರು ಇಲ್ಲಿಲ್ಲ
ಎಂಬ ಭ್ರಮೆಯೇ ಅವುಗಳ ತಲೆಯ ತುಂಬೆಲ್ಲ
ನೇಸರನು ಕಾಣದಂತೆ ಈ ಭುವಿಗೆಲ್ಲ
ಮರೆಮಾಚಬಲ್ಲವೇ ಆ ತಾರೆಗಳೆಲ್ಲ?

ನಲಿಯುತಲಿ ಸಾಗುತಿಹವು ನದಿಗಳೆಲ್ಲ
ಕಡಲಸೇರುವ ಕನಸನೊಂದ ಕಾಣುತಿಹವಲ್ಲ
ದಶದಿಕ್ಕುಗಳಿಂದ ನುಗ್ಗಿ ಬರುತಲಿರುವುವೆಲ್ಲ
ಭೋರ್ಗರಿಸುತಲೇ ಓಡುತಲಿವೆಯಲ್ಲ
ಕಡಲ ಕಂಡೊಡನೆ ಅಪ್ಪಳಿಸಿಹವಲ್ಲ
ಸೀಳಬಲ್ಲವೇ ಆ ಕಡಲ ಅವೆಲ್ಲ?

ದುರಾಸೆ ಎಂಬುದೇ ತುಂಬಿಹುದಲ್ಲ
ಮನುಜನೆಂಬ ಪ್ರಾಣಿಯ ತಲೆಯ ತುಂಬೆಲ್ಲ
ತಿಳಿದಿಹನು ತನ್ನದೇ ಇಲ್ಲಿರುವುದೆಲ್ಲ
ಮರೆತಿಹನು ಅದಾವುದೂ ಅವನದಲ್ಲ
ಮಾತೆ ಮುನಿದರೆ ತನಗುಳಿಗಾಲವಿಲ್ಲ.
ಅರಿಯುವನೇ ಸತ್ಯವನಿದನೆಲ್ಲ?

@ಕಂಪಾ

- KN PATIL

04 Apr 2020, 03:07 pm

ಒಡೆದ ಹೃದಯ

ಬಾವನೆ ಅರ್ತ ಮಾಡಿಕೂಳದ ಮನಸು ಬಾಡಿದ ಹೂವಿನ ತರ,,,,,,,,,,

- Banadayya Vishwakarma

04 Apr 2020, 02:33 pm