Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮತ್ಸರಬಳ್ಳಿ

ಕೊಚ್ಚೆಯೆ ಹರಿದ ಇಚ್ಛೆಯೆ ತಳೆದ
ಹೆಚ್ಚಿತ ಬಳ್ಳಿ ಸ್ವಾರ್ಥ ತುಂಬಿ ಅಳ್ಳಿ
ಮುಚ್ಚಿ ನಗಲೊ ಸುಚ್ಚಿ ಕೊಲ್ಲಲೊ
ಮೈತುಂಬ ತಳೆದಿತ ಮುಳ್ಳಕಳ್ಳಿ

ಹೂವ್ವೆಂದ ಮುಡಿಯೆ ಬತ್ತಿಸಿ ಬದುಕ
ಇಡುಹೆಜ್ಜೆಗಳ ತೊಡರ ಗೆಡವಿ
ಕೂಡೆಂಬೊಲವ ಕಡಿದು ಇತ್ತು ನೋವ
ಬುಡಕೊಳೆಸಿ ಆಸರೆಯ ಕೆಡವಿ

ಸತ್ತ ಹಸುಗಳೆಷ್ಟ ವಿಷದೆಲೆ ಮೆದ್ದು ?
ವೃಕ್ಷಮೈ ಮುರಿದ ಸರ್ಪದಾಸರ
ಒಣನಗೆ ನಕ್ಕಿತೆಷ್ಟ ಕಂಡು ಹಣಹದ್ದು  ?
ನಡೆಕಲಿಸುವ ನಳ್ಳಿದು ಮತ್ಸರ

ಸಾಕಿ ಒಡಲಲಿ ವಿಷಚಿಂತನೆ ಹಾವಚೇಳ
ಹರಿಬಿಟ್ಟು ಕೊಲ್ಲಿಸಿದೆ ಪ್ರೀತಿಜಿಂಕೆಯ
ಹೀರಿ ಹಬ್ಬಿ ಮಂದನಗೆ ಕಣ್ಣೀರುಗೋಳ
ಅರಳಿಟ್ಟಿದೆ ಹೂವ್ವ ಕುಹಕನಗೆಯ

ಹಬ್ಬಿಸಲು ಹಾಲಚಂದ್ರನೆಡೆಗೆ ಬಿಂದಿಗೆ ಹಾಲ
ಚೆಲ್ಲಿದರು ಕೊರಲ ಹಿಚಕಿದೆ ಮಾಲಿಯ
ಪ್ರೇಮ ಬೇಡಿದ ಹಸ್ತಕ ಹೊಯ್ದಿದೆ ಹಾಲಹಲ
ಎದೆಮನ ಸುಟ್ಟ ಲತೆಇದು ಬೇಲಿಯ

- samna

04 Apr 2020, 02:30 pm

ಒಲವ ಒರತೆ ಬತ್ತಿತೆ

ಬೊಗಸೆ‌ ತುಂಬ
ಪ್ರೀತಿ ತುಂಬಿ
ನಗುವ ಹರಡಿ
ನೋವ ಮುದುಡಿ
ಹರಿದ ಒಲವ
ಒರತೆ ಬತ್ತಿತೆ?

ಮನದ ಹೊಸ್ತಿಲಲಿ
ಮನದುಂಬಿ ಬರಮಾಡಿ
ಬಿಡಿಸಿದ ರಂಗವಲ್ಲಿ
ರೇಖೆ ಚೆದುರಿ
ಬಣ್ಣ ಮಾಸಿ
ಎದೆಯ ಹಿಂಡಿತೆ?

ಎದೆಗೂಡ ಬಾಗಿಲಲ್ಲಿ
ಸಂಭ್ರಮಿಸಿ ಕಟ್ಟಿದ
ತಳಿರ ತೋರಣದ
ಎಲೆಯು ಒಣಗಿ
ದಾರ ಕಳಚಿ ಮಣ್ಣ ಸೇರಲು
ದ್ವಾರ ಮುಚ್ಚಿತೆ?

ರಂಗು ರಂಗಿನ ಭಾವದ
ಅರಮನೆಯ ಕಟ್ಟಿದ
ಪ್ರೀತಿ ಪ್ರೇಮದನುರಾಗ
ಕರುಣೆ, ನಂಬಿಕೆಯ
ತಳಪಾಯ, ಸ್ಥಂಭ ಕಳಚಿ
ಮನವೇ ಕುಸಿಯಿತೆ?

- ಶ್ರೀಕಾವ್ಯ

03 Apr 2020, 11:34 pm

ಸಾಹಿತ್ಯ ಆಸೆ

ಸಾಹಿತ್ಯದ ಆಸೆ ಉಕ್ಕುತಿವುದು
ಕಥೆ ಕವನ ಕಾದಂಬರಿ ಯೇಂತಹ
ಬರಹಕೆ ಮನ ಹಂಬಲಿಸುತಿವುದು /
ಎನ್ನ ಆಸೆ ನೋಡಿ ಇಂದಿನ ಮೋಬೈಲ್
ಟಿವಿ ವ್ಯೆಂಗ್ಯ ಮಾಡುತ ಹೇಳುತ್ತಿರುವುದು/
ನನ್ನ ಉಪಯೋಗಿಸಿದರೆ ಮನ ಸಂತೃಪ್ತಿ ಗೊಳ್ಳುವುದು/
ನಿನ್ನ ಸಾಹಿತ್ಯ ಮೂಲೆ ಸೇರುವುದು /
ಎನ್ನ ಮನ ಎರಡರ ನಡುವೆ ಸೇರಿ ಚಂಚಲಿತಾಗೊಳ್ಳುತಿರುವುದು /
ಮನರಂಜನೆ ಇರುವ ಮೋಬೈಲ್ ಟಿವಿ ಇರುವಾಗ ಸಾಹಿತ್ಯವೆ ಕೆ ಎನ್ನುತ್ತಿರುವುದು /
ಮತ್ತೆ ಬಂದು ಸಾಹಿತ್ಯ ಕಿವಿಯಲ್ಲಿ ಗುನುಗುತಿರುವುದು ,/
ನಿನ್ನ ಮನರಂಜನೆಯ ಮೋಬೈಲ್ ಟಿವಿ ಎಂಬ ಗಿಡದ ಬೇರು ನಾನು ಏನ್ನುತಿರುವು/
ಬೇರು ಕಡಿದು ಬಿಸಾಡಿದ ರೆ ನನ್ನಿಂದ ಸಿಗುವ ಸಂತೃಪ್ತಿ ನಿನ್ನ ಕಳೆದು ಹೋಗುವುದು /
ಬೇರಿಲ್ಲದಾ...ನಿನ್ನ ಮನ ಒಣಗಿ ಹೋಗುವುದು/
ತನ್ನ ಜೊತೆ ಕರೆದು ಪ್ರತಿ ದಿನ ಯುಗಾದಿ ಎಂತಹ ಪರಿಸರ ಕೊಡುವುದಾಗಿ ಹೇಳುತ್ತಿರುವುದು /
ಸಾಹಿತ್ಯ ದಾಸೆಗೆ ಮತ್ತೆ ಮನ ಉಕ್ಕುತಿರುವುದು .....

- KHASIM NADAF

03 Apr 2020, 11:25 pm

ಅಜ್ಞಾತ

ಹರಡಿಹುದು ಎಲ್ಲೆಲ್ಲೂ ಮನುಕುಲದ ಮಾರಿ
ಹುಡುಕುತಿಹೆವು ನಾವಿಲ್ಲಿ ಬದುಕಿಗೊಂದು ದಾರಿ
ನರಳುತಿಹನು ನರನು ಉಳಿವಿಗಾಗಿ ಎಲ್ಲೆಲ್ಲೂ ಚೀರಿ
ಸಿಗಬಹುದೇ ಪರಿಹಾರ ಸಂಕಟವನೆಲ್ಲ ಮೀರಿ

ರುದ್ರತಾಂಡವದಿ ತಾ ನರ್ತಿಸುತಿಹುದು
ಮರಣಮೃದಂಗವನೇ ಬಾರಿಸುತಿಹುದು
ನರನ ಮುಂದೆ ರಣಕೇಕೆಯ ಹಾಕುತಿಹುದು
ಮಸಣಕೆಲ್ಲರನು ತಾ ಎಳೆದೊಯ್ಯುತಿಹುದು

ಚೀತ್ಕರಿಸಿ ಬೊಬ್ಬಿರಿದು ಹಲುಬಿದರೂ ಇಲ್ಲಿ
ಕೇಳುವಾ ದೈವ ಕಿವಿಗೊಡುತಿಲ್ಲ ಅಲ್ಲಿ
ತಾ ಮಾಡಿಹ ಪಾಪಗಳಿಗೆ ಪರಿಹಾರವೆಲ್ಲಿ
ಅಸಹಾಯಕದಿ ಕುಳಿತಿಹನು ನರನು ಕೈಚೆಲ್ಲಿ.
@ಕಂಪಾ

- KN PATIL

03 Apr 2020, 10:06 pm

...ನನ್ನವರು ಯಾರು ಇಲ್ಲ...

ನಾನು ನಂದೇ ಎನ್ನುವುದು ಯಾವುದು ಇಲ್ಲ.
ದೇಹ ಆತ್ಮವೆಂಬುವುದೇ ನನ್ನದಲ್ಲ.
ನಾನು ನಮ್ಮದು ಅನ್ನೋ ಅಹಂಕಾರ
ಯಾಕೆ ಬೇಕು ಈ ಜಗತ್ತನಲ್ಲಿ...

ಅಪ್ಪ-ಅಮ್ಮ ಕೊಟ್ಟ ಜನ್ಮವಿದ್ದು
ಯಾರೋ ಜಾತಕ ನೋಡಿ ಹೆಸರಿಟ್ಟರೋ
ನಾವು ಕಲಿವ ವಿದ್ಯೆ-ಕೆಲಸ
ಒಂದ್ಕೊಂಡು ಸಂಬಂಧವಿಲ್ಲ...

ಸತ್ತ ಮೇಲೆ ದೇಹ ಆತ್ಮ
ಬೇರೆ ಆಗುವುದು
ಮೂರು ದಿನ ದುಃಖದ ನೋವು
ನಾಲ್ಕು ದಿನ ಅವರ ಚಿಂತೆ..

ನನ್ನವರು ಅನೋವರು ಯಾರು ಇಲ್ಲ
ನಮ್ಮದ್ದು ಅನ್ನೊದು ಯಾವುದು
ಕೊನೆಗೆ ಉಳಿಯುವುದಿಲ್ಲ....
ಇದ್ನ ತಿಳಿದವನು ಎಂದಿಗೂ ಸೋಲುವುದಿಲ್ಲ..

- Ajay

03 Apr 2020, 09:12 pm

ಕೃತಿಚೌರ್ಯ

ಕವಿಯೋರ್ವನ ಕಲೆಗೆ
ಅರಳಿದ ಕವಿತೆಗಳೆಲ್ಲ
ಭಾವನೆಯ ಸುವಾಸನೆಯನ್ನು
ಓದುಗರಿಗೆ ಪಸರಿಸುತ್ತಿತ್ತು,
ಕವಿಯಲ್ಲದವನ ಕಳ್ಳ
ಕೈಚಳಕದ ಮೋಡಿಗೆ ಬಲಿಯಾಗಿ
ಕದ್ದ ಕವಿತೆಗಳು ಉಳಿದದ್ದು
ಕೇವಲ ಕವಿತೆಯಾಗಿ
ಪ್ರಶಂಸೆಯ ಮಡಿಲೊಳಗೆ
ಬಿದ್ದು ಓಡಾಡಿ,ನರಳಾಡಿ,
ಕೊನೆಯುಸಿರೆಳೆದರೂ
ಕಡೆತನಕ ಅವನಿಂದ ಸಿಕ್ಕಿಲ್ಲ
ಕವಿ ಮತ್ತು ಕವಿತೆಗೊಂದು ಅರ್ಥ,

- ಅಕ್ಷತ

03 Apr 2020, 01:59 pm

ಪರಿಶುದ್ಧ ಪ್ರೀತಿ

ಕಾಡುವ
ದಟ್ಟ ದರಿದ್ರ
ಬಡತನದಲ್ಲಿ
ಮೊಗದಲ್ಲಿ
ಮೂಡುವ
ನಗುವಿಗೆ
ಶ್ರೀಮಂತಿಕೆ
ತುಸು ಜಾಸ್ತಿ,
ಅಹಂ ಇಲ್ಲ
ಆಡಂಭರವಿಲ್ಲ.
ಪರಿಶುದ್ದ
ಪ್ರೀತಿಯೇ ಎಲ್ಲಾ..

- ಅಕ್ಷತ

03 Apr 2020, 01:58 pm

●●●ನೆನಪ ಇಬ್ಬಿನಿ

ಜಾವದ ಸಿಂಹ ಬೆಳಗಿನಲ್ಲಿ
ದೇವಲೋಕದ ಹಕ್ಕಿ
ಕಣಿವೆ ಗುಡ್ಡದಿ ಬಿದ್ದ ಮಂಜುಹನಿಗಳ ಹೆಕ್ಕಿ
ಮುಗಿಲಿಗೆ ಮುಡಿಸಿ ಕಾಮನ ಬಿಲ್ಲ
ಆಡುತೈತಾ ನೋಡೋಣು ಬಾರ ಗೆಣೆಯ

ನಾನ ನೀನ ಅವನ ಬೇಗ
ನೇಹದ ಹುಟ್ಟ ಹಾಕತೀಗ
ತೇಲಿಸಿ ಖುಷಿಯ ಕಡಲಲಿ ನಗೆದೀಪ
ಇಬ್ಬಿನಿಯ ಹಿಡಿದು ಬೊಗಸೆ ತುಂಬಿ
ಆಟವನ ಆಡಿ ತರೋಣು ಬಾರ ಗೆಣೆಯ

ನವಿಲ ಮಲಗಿದ ಜೋಗಿ ಬೆಟ್ಟ
ಕಿರಣವ ರೆಕ್ಕೆ ಮುಡಿದು
ತಂಪುಗಾಳಿಗೆ ಮೈಯ್ಯತೂಗತಾ
ಕಿಣಿಕಿಣಿ ಸದ್ದು ಮಾಡದ
ಕೂಟವು ಕೂಡಿ ಕುಣಿಯೋಣು ಬಾರ ಗೆಣೆಯ

ಹೊತ್ತನ ಕಾಣ ಸ್ನೇಹತೀರಕ
ನೀರಿಗಿಳಿಯೆ ತೊಯ್ಯುತ
ಏರಿ ಬರತಾವ ಅಲೆಗಳು ಕೆಡೋವೋಕ
ಹುರಿಬಿಗಿದ  ಚಿತ್ತದಕೂಟಕ
ನಲಿದು ಕೂಗಿ ಈಜೋಣು ಬಾರ ಗೆಣೆಯ

ಅಲ್ಲಿರುವ ಹಕ್ಕಿ ಸಾಲಂತೆ
ಗಿಡಬಳ್ಳಿ ಬಿರಿದ ಹೂವ್ವ
ಬೆರಳೊಳು ತುಂಬಿ ಬಿದಿರಪುಟ್ಟಿಗಾಕತ
ಹೂವಂತೆ ಬಾಳತುಂಬುತ
ಪ್ರಕೃತಿಯ ಚೆಂಡಾಟಕ ತರೋಣು ನಡಿಗೆಣೆಯ

"ನೆನಪ ಇಬ್ಬನಿ", ಪ್ರತಿಲಿಪಿಯಲ್ಲಿ ಓದಿರಿ :
https://kannada.pratilipi.com/story/27gkjij5vrt7?utm_source=android

- samna

02 Apr 2020, 08:43 pm

ಕುರುಡ ಕಂದೀಲು

ಅಪ್ಪ ನೀ, ಇಷ್ಟು ಬೇಗ ಬದುಕಿನ ಸಂತೆ ಮುಗಿಸಿ ಎದ್ದು ಏಕೆ ಹೋದೆ? ಮೇಲೆ ನಿಂತು ನಿನ್ನ ಕೂಗಿ ಕರೆದವರಿಗೆ ದಿಕ್ಕಾರವಿರಲಿ.

ಅವ್ವ ಸುಡು ಬಿಸಿಲೊಳಗೆ ನೆತ್ತಿ ನೆಗ್ಗಿಸಿಕೊಂಡು, ಬೆನ್ನು ಬಾಗಿಸಿಕೊಂಡದ್ದು ನಿನಗೆ ಕಾಣಲಿಲ್ಲವೆ?

ತುತ್ತು ಅನ್ನಕ್ಕೂ, ಅವ್ವ, ಅಜ್ಜಿ, ಅಕ್ಕ ,ತಂಗಿ, ನಾನು ಊರ ಬೀದಿಯಲಿ, ಓಣಿ ಓಣಿಯಲಿ ನಿಂತು ಅಂಗಲಾಚಿದ್ದು ನಿನಗೆ ಕಾಣಲಿಲ್ಲವೆ?

ತೇಪೆ ಹಚ್ಚಿದ ಅಜ್ಜಿ-ಅವ್ವಳ ಸೀರೆ, ಅಕ್ಕ-ತಂಗಿಯ ಲಂಗ ದಾವಣಿ ನಿನಗೆ ಕಾಣಲಿಲ್ಲವೇ?

ನಿನ್ನ ಸಮಾಧಿ ಬಳಿಗೆ ನಾವೆಲ್ಲರೂ ಎಷ್ಟೋ ಸಾರಿ ಬಂದು, ಬಿರುಕು ಬಿಟ್ಟ ನೆಲದ ಸಂಧಿಯಲಿ ಕೂಗಿ ಕರೆದರೂ ನಿನಗೆ ಕೇಳಿಸಲಿಲ್ಲವೇ?

ನೀ ಬಿಟ್ಟು ಹೋದ ಹೊಲಿಗೆ ಯಂತ್ರ, ರಾತ್ರಿ ಎದ್ದು ಎದೆ ಎದೆ ಬಡೆದುಕೊಂಡು ಮತ್ತೆ ಬೋರಲು ಬಿದ್ದು,ಅಳುವ ಸದ್ದು ನಿನಗೆ ಕೇಳುತ್ತಿಲ್ಲವೆ?

ನೀ ಸುತ್ತಿ ಇಟ್ಟು ಹೋದ ಮಡುಗಟ್ಟದ ದುಃಖದ ದಾರದ ರೀಲಿನ ಉಂಡೆ ನಮ್ಮೆಲ್ಲರ ಕಾಲಿಗೆ, ಕೈಗೆ, ಕುತ್ತಿಗೆಗೆ ಸುತ್ತಿಕೊಂಡು ನಮಗೆ ಉಸಿರುಗಟ್ಟಿಸುತ್ತಿದೆ ಇದು ನಿನಗೆ ಕಾಣುತ್ತಿಲ್ಲವೇ?

ನೀ ಬಿಟ್ಟು ಹೋದ ಮುರುಕ ಸಂಧುಕದ ಪೆಟ್ಟಿಗೆ ನಮ್ಮ ಬದುಕಿಗೆ ಜೀವಂತ ಶವದ ಪೆಟ್ಟಿಗೆಯಾಗಿ ದಿನವೂ ನಮ್ಮನ್ನು ಹಂಗಿಸುತ್ತಿದೆ. ಇದು ನಿನಗೆ ಕಾಣುತ್ತಿಲ್ಲವೇ?

ನೀ ಹೋದ ದಿನದಿಂದ ಆ ಚಂದ್ರ ನಮ್ಮ ತೂತು ಬಿದ್ದ ಸೂರ ಮೇಲೆ ಬೆಳದಿಂಗಳು ಚಲ್ಲಿಲ್ಲ, ಆ ನಕ್ಷತ್ರಗಳು ಹಲ್ಲು ಕಿಸದೇ ಇಲ್ಲ ,ನಿನಗೇಕೆ ಇದು ತಿಳದಿಲ್ಲ?

ಹೊಟ್ಟೆಯೊಳಗೆ ಹೊತ್ತುಕೊಂಡು ಉರಿಯುವ ಉದರಾಗ್ನಿಗೆ ಅಗ್ನಿಶಾಮಕ ಕಳಸಲು ಹೇಳುವವರು ಯಾರು

ನಿನ್ನ ಹೆಗಲ ಮೇಲೆ ಕುಳಿತು ಜಾತ್ರೆಗೆ ಹೋಗಿ ಬಲೂನ, ಪೀಪಿ, ಮೆನಸಿನಕಾಯಿ ಬಜಿ ಕೊಂಡಿಸಿಕೊಳ್ಳುವ ಕನಸು ಎದೆಯಲ್ಲಿ ಹಾಗೆ ಬಿಕ್ಕಿ, ಬಿಕ್ಕಿ ಸಾಯುತ್ತಿದೆ.

ಕತ್ತಲೆಯ ರಾತ್ರಿಯಲಿ, ಈ ಕುರುಡು ಕಂದೀಲ ಬೆಳಕಿನಲ್ಲಿ ಬದುಕಿನ ಕವನ ಅಂಗಾತವಾಗಿ ಅನಾತವಾಗಿ ಮಲಗಿದೆ. ಎಬ್ಬಿಸಲು ನೀ ಎಂದು ಬರುವೆ?

ರಚಣೆ: ರೇವಣಸಿದ್ದ ವೀ ಗೌಡರ

- Siddugouda

02 Apr 2020, 07:22 pm

ಕಣ್ಮುಚ್ಚುವ ಮುನ್ನ

ಕಣ್ಮುಚ್ಚುವ ಮುನ್ನ ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ... ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ....ದೇವ್

- ದೇವು,,,,,,ಕನ್ನಡಿಗ

02 Apr 2020, 02:25 pm