Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಒಂದು ಪದ,
ಎರಡು ಅಕ್ಷರ,
ಸಣ್ಣ ಸಣ್ಣ ಹುಸಿ ಮುನಿಸು,
ಕೋನೆಯಿಲ್ಲದ ಪ್ರೀತಿ ಮತ್ತು ನಂಬಿಕೆ,
ಬೆಲೆಕಟ್ಟಲಾಗದ ಭಾವನೆಗಳು,
ಎನೇ ಆದರೂ ನಾನೀದಿನಿ ಅನ್ನೋ ವಿಶ್ವಾಸ,
ಕಷ್ಟಕ್ಕೆ ಹೆಗಲು, ಸಂತೋಷಕ್ಕೆ ಸಾತ್
ಕೋಡೋ ಒಂದು ಪವಿತ್ರ ಹೃದಯ
ಅದು ಅಣ್ಣ...
- Chaitra Kulkarni
20 Mar 2020, 07:10 pm
ಪಾರವೇ ಇಲ್ಲ ನಿನ್ನ ಪ್ರಿತಿಗೆ
ಶಬ್ಧವೆ ಇಲ್ಲ ನಿನ್ನ ಸೌಂದರ್ಯಕ್ಕೆ
ಮಾತೆ ಇಲ್ಲ ನಿನ್ನ ಅದ್ಭುತ ನುಡಿಗಳಿಗೆ
ಏನೆಂದು ವರ್ಣಿಸಲಿ ನಾನು...
ಅಮ್ಮಾ
- Chaitra Kulkarni
20 Mar 2020, 07:10 pm
ಕೊನೆಗೂ ಬಂದಿಹುದು ಚೆಲುವ ಯುಗಾದಿ,
ತೋರುತ ಮನಕೆ ಮೋದದ ಹಾದಿ,
ಕುಡುಕರಿಂದ ತುಂಬಿ ಕೊನೆಗೆ
ಜೂಜಾಟವ ಕಾಣುವುದು ಬೀದಿ,
ಸವಿಯುವುದು ನಮ್ಮ ಮನವು
ಬೇವು-ಬೆಲ್ಲದ ಸಿಹಿಯ ನದಿ.
ತೊಡಗಲಿ ಮನವು ಇಂದು
ಬೇವು-ಬೆಲ್ಲವ ಬೀರುವಲಿ,
ಎಲ್ಲರ ಜತೆ ಮನದಿಂದ
ಸಂತಸವ ಪಡೆಯುವಲಿ,
ಬೇವು-ಬೆಲ್ಲವ ಸವಿದು
ಮುಗುಳ್ನಗೆಯ ತರುವಲಿ.
ಬೇವೂ ಹೆಚ್ಚಾಗದಿರಲಿ,
ಬೆಲ್ಲವೂ ಹೆಚ್ಚಾಗದಿರಲಿ,
ಎರಡೂ ಸಮನಾಗಿರಲಿ,
ಬಾಳು ಗುಲಾಬಿಯಾಗಲಿ.
- Sunanda bai slv kavana channel
20 Mar 2020, 06:33 pm
ನಮ್ಮ ಮನೆಯ ಮುಂದೆ ಇದೆಯೊಂದು
ಕಟ್ಟೆ......
ತುಂಬುತ್ತದೆ ನೂರಾರು ಜನ-ಜಾನುವಾರುಗಳ
ಹೊಟ್ಟೆ.......
ನಮ್ಮ ಊರಿನ ರಾಜಕಾರಣಿಗಳ ಹತ್ತಿರ ಇದೆ
ಕೋಟಿಯ ಕಟ್ಟೆ......
ಆದರೂ ತುಂಬಲಿಲ್ಲ ರಾಜಕಾರಣಿಗಳ
ಹೊಟ್ಟೆ......
-ಧನುಷ್. ಬಿ
9880028207
- DHANUSH.B
20 Mar 2020, 05:33 pm
Tu news akidre korana, adarinda yelarigu bhaya bhayana, tagoli mask akondu selfi na,
avag avaga kai ge achkoli sabuna, kemmu negdi bandare takshna concert madi
docter na,
ulisikolli nimma jeevana.
creat by sagi
Deticated to
(korana viras)
- Sagi Sagar
20 Mar 2020, 04:03 pm
ಬಂತು ಬಂತು ಯುಗಾದಿ..!
ಜನ ಹಿಡಿವರು ಜೂಜಿನ ಹಾದಿ..!!
ಬೇವು ಸೋತವರಿಗೆ ಬೆಲ್ಲ ಗೆದ್ದವರಿಗೆ..!
ಒಬ್ಬಟ್ಟಿನ ಊಟ ಆಡದವರ ಪಾಲಿಗೆ.!!.
- Harish Gowda
20 Mar 2020, 10:15 am
ಎಲ್ಲ ದಿನಗಳೂ ಅಪರಿಚಿತರ ಜೀವನಕ್ಕಾಗಿ
ಹಗಲು ರಾತ್ರಿ ಎನ್ನದೆ ದುಡಿದರು...
ಒಂದು ದಿನ ಕೂಡ ಸಮಯಕ್ಕೆ ಸರಿಯಾಗಿ
ಆಹಾರವನ್ನು ಸೇವಿಸದೆ ಇತರರಿಗೆ ತಿನಿಸಿ
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವರು
ಬರುವ ಎಲ್ಲಾ ರೋಗಿಗಳನ್ನ ತನ್ನ ಸ್ವಂತ
ಸಂಭಂದಿಕರಂತೆ ಕಾಣುವ ದಯಾಳುಗಳು...
ರಜಾ ದಿನಗಳು ಹಬ್ಬದ ದಿನಗಳನ್ನ ಮರೆತು
ಕತ೯ವ್ಯ ನಿರತರಾಗಿ ಸೇವೆ ಸಲ್ಲಿಸುವರು..
ಜಗತ್ತು ಗಾಢನಿದ್ರೆಯಲ್ಲಿದ್ದರೆ ಇತರಿಗಾಗಿ
ಕಾದು ಕುಳಿತು ಕೊಳ್ಳುವ ಕರುಣಾಮಯಿಗಳು...
ನಿಂತು ಹೋಗುತ್ತಿರುವ ಜೀವವನ್ನು ಮರಳಿ
ತರುವ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸುವ
ಪಾತ್ರಧಾರಿಗಳು ಇವರು
ಜನನಕ್ಕೂ ಮರಣಕ್ಕೂ ಸಾಕ್ಷಿಯಾರವರು
ಡಾಕ್ಟರ್ ರೋಗಿಗಳ ಸಿಟ್ಟಿನ ನಡುವೆ
ಕಾರಣವಿಲ್ಲದೆ ಬಲಿಪಶುವಾಗುವರು...
ಪ್ರತಿದಿನ ಬೆಳಿಗ್ಗೆ ಬೇಗನೆ ಕೆಲಸಕ್ಕೆ ಹಾಜರಾಗಿ
ಕತ೯ವ್ಯ ಮುಗಿಸಿ ಕೊನೆಗೆ ಹೊರಡುವರು...
ರೋಗಿಗಳ ಗುಣಮುಖಕ್ಕಾಗಿ ದುಡಿಯುವ
ಇವರನ್ನು ಇತರರು ಹಾಸ್ಯ ಅಪಹಾಸ್ಯ ಮಡಿದರೂ
ಅದನ್ನು ಮನಸ್ಸಿನಲ್ಲಿ ಇಟ್ಟು ಕೊಳ್ಳದ
ಹೃದಯ ಶ್ರೀಮಂತಿಕೆಯ ಗುಣದವರು...
ಕೊನೆಗೊಂದು ದಿನ ನಮ್ಮ ಶ್ವಾಸ ನಿಂತಾಗ
ಪಕ್ಕದಲ್ಲೇ ಇದ್ದು ಬಿಳಿ ಬಟ್ಟೆಯನ್ನು ಹೊದಿಸುವರು...
ಭೂಮಿಯಲ್ಲಿನ ಈ ದೇವತೆಗಳನ್ನ
ಗೌರವಿಸಬೇಕು ನಾವೆಲ್ಲ....
- ರಮೇಶ್ ನಾರಾಯಣ್
- ramesh narayan
20 Mar 2020, 08:23 am
ನಂಬಿಕೆ ಹರಡಲಿ...
ವಿಶ್ವಾಸ ಬೆಳಗಲಿ..
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯ ಬೆಳಕು ಹರಿಯಲಿ…
ಸಹೋದರತೆ ಹರಡಲಿ…
ವಾತ್ಸಲ್ಯತೆ ಬೆಳಗಲಿ…
ಜಾತೀವಾದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ..
ಧರ್ಮ ಹರಡಲಿ..
ನ್ಯಾಯವು ಬೆಳಗಲಿ…
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃಧಿಯ ಬೆಳಕು ಹರಿಯಲಿ…
ಆತ್ಮವಿಶ್ವಾಸ ಹರಡಲಿ ..
ಆಶಾಜ್ಯೋತಿ ಬೆಳಗಲಿ ..
ಅಜ್ಞಾನವೆಂಬ ಕತ್ತಲು ಸರಿದು ,
ವಿಜ್ಞಾನದ ಬೆಳಕು ಹರಿಯಲಿ ..
ಗುರು.
- Guru.B
19 Mar 2020, 11:23 pm
ಪಟ್ಟದಿ ಕಟ್ಟಳೆಯ ಕಟ್ಟುವಾಗಾ
ತಪ್ಪನಾ ಮಾಡಿದಲ್ಲಿ ಅಟ್ಟೀ
ನಾಯಿಯನ ಅಟ್ಟಿದಂತೆನುವ ರೂಢಿ ಮಾತು
ಭಕ್ತಗಿವಿಗಳಲಿ ಗುನಗುಟ್ಟೀ
ಪಿಂಡ ಬಿಡಿಸಿ ಪಟ್ಟದೇವರಿಂದಾ
ಬದುಕಿದ್ದಾಗಲೆ ತಾಯ್ತಂದೆಗೆ ಅಲ್ಲ ಕಂದಾ
ಪಡೆದ ಹುಟ್ಟು ಸಾಮಾಜಿಕಾ
ಆರಳಿದು ತೊಟ್ಟು ಮೂರರ ಮುಕುಟಾ
ಬಿದ್ದು ಕಾಲಿಗೊ ಮುಂದಿನ ನೆಲಕೊ
ಕೊಟ್ಟ ಹತ್ತಿಪ್ಪತ್ತ ರೂಪಾಯೆ
ಇಟ್ಟಿಗೆ ಜೆಲ್ಲಿ ಸಿಮೆಂಟು ಕಬ್ಬಿಣ ಮರಳಾಗೀ
ಬದಲಾಗಿ ಇಟ್ಟ ಹೆಸರೆ ಮಠ
ಜೀವವಿಲ್ಲದ ವಸ್ತುಗಳ ಗಾಳಾ
ಜೀವಕೆ ದೊರೆತಂತೆಲ್ಲಾ ತುಸು ಬಹಳಾ
ಮೋಹದ ಮಾಹೆ ಹುಟ್ಟುವಳಾ
ಭಕ್ತರನ್ನವ ಗಂಟಿಕ್ಕಿ ಪೀಳಿಗೆಗೆ ಕಟ್ಟುವಳಾ
ಬಾಲಂಗೋಚಿಗಳಿಗೆ ತಿಳಿದಿತ್ತೊ
ತಿಳಿಯದಿತ್ತೊ ಬಲ್ಲವರ್ಯಾರು?
ಬೇಕಿತ್ತಷ್ಟೆ ಪಟ್ಟಭದ್ರತೆಯ ಊಳಿಗಾ
ನಂಬಿಕೆ ಭಕ್ತಕಡಲ ಕತ್ತಹಿಸುಕಿ
ಗುರಿಧ್ವೇಯ ದಾರಿದಿಕ್ಕ ತಪ್ಪೀ
ಎತ್ತಲೋ ಹೊರಡುವದು ಧರ್ಮದೋಣೀ
ನೆಲ ಎಚ್ಚರೆದ್ದು ಬೀಸಿ ಬಿರುಗಾಳಿಕ್ಕೀ
ಮುಳುಗು ತೇಲಿನ ಆಟವದು ಏಣೀ
ಬಲ್ಲವರು ಯಾರು ಪ್ರಕೃತಿ ಗುಟ್ಟಾ
ಇದಿರು ಈಜುವ ಧೈರ್ಯ ಯಾರಿಗುಂಟು?
ಆರಳಿದವ ತೇಲಿ ಪಡೆದ ದೈವ ಪಟ್ಟಾ
ಉಳಿದವಗಿದ್ದೇ ಇದೆ ಕಾಮಿಪಟ್ಟಾ
- samna
19 Mar 2020, 02:05 pm
ಸುಂದರ ಕತ್ತಲಲಿ ಕವಿ ನಾನಾಗಿರುವೆ ನಿನ್ನಿಂದಲೆ...
ತುಸು ಬಂದು ತಿಳಿಸುವೆಯಾ ನಿನ್ನ ಪರಿಚಯವನ್ನು...
ಕವಿ ಕಂಡ ಕನಸಿನ ಪ್ರತಿ ಸಾಲಿನಲ್ಲು ನೀನದೆ ವರ್ಣನೆ ಅದನ್ನೋಮ್ಮೆ ನೀ ಬಂದು ವಿವರಿಸುವೆಯಾ...
ಸುಂದರ ತಾರೆಗಳು ತಿಳಿಸುತ್ತಿವೆ ನೀನ್ನ ಕಣ್ಣೋಟವನ್ನು...
ತಂಪು ತಂಗಾಳಿಯು ನೀಡುತಿದೆ ನೀ ಬರುವ ಸೂಚನೆಯನ್ನು...
ನೀ ಬಂದು ನಿಂತು ತುಸು ಉಸಿರು ಸೋಂಕಿಸಿ
ಮರು ಜೀವವ ನೀಡೆನಗೆ...❤❤❤
- Chaitra Kulkarni
18 Mar 2020, 11:24 pm