Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾಲವೆಂಬ ರಾಕ್ಷಸ ಮನದೊಳಗಿರಲು...!
ಸಾಧ್ಯವೆ ನಾ ನೆಮ್ಮದಿಯಿಂದ ಬದುಕಲು..!!
ದುಡಿದು ಹರಿಸಿದರು ಮೈಯಲ್ಲಿ ಬೆವರು....!!
ನನ್ನಂತವರಿಗೆ ಸಿಕ್ಕಲ್ಲ ಆ ಲಕ್ಷ್ಮೀ ದೇವರು......!!
ಅದಕಾಗಿ ನಾ ಕುಡಿಯುವೆ ಬಾರಲ್ಲಿ ಬೀರು....!!!
- Harish Gowda
09 Mar 2020, 10:50 pm
ವಿದ್ಯಾ ನೀ ಒಂದು ಮಾಯೆ
ನನ್ನಮೇಲೆ ಇದ್ದಿದ್ದರೆ ನಿನ್ನ ಛಾಯೆ..
ಇಂದು ಐಶ್ವರ್ಯ ಸೌಂದರ್ಯರರು ನನ್ನ ಸುತ್ತಮುತ್ತ...!!
!!ವಿದ್ಯಾ!!
ನಿನ್ನ ಮಹತ್ವ ತಿಳಿದಯದೆ ಕೆಟ್ಟೆ...
ಹಣದ ಹಿಂದೆ ಬಿದ್ದು ನೆಮ್ಮದಿಯಾ ಬಿಟ್ಟೆ..,
ವಿದ್ಯೆ ಇರುವಲ್ಲಿ ಲಕ್ಷ್ಮೀ ಹೊರತು
ಲಕ್ಷ್ಮೀ ಇರುವಲ್ಲಿ ವಿದ್ಯೆ ಅಲ್ಲಾ ಎಂಬಾ ತತ್ವ ತಿಳಿಯಿರಿ....
ಬದಕಲಿ ನೆಮ್ಮದಿಯ ಕೆಲಸವ ಪಡೆದು ತೃಪ್ತಿ ಪಡೆಯಿರಿ....
- Harish Gowda
09 Mar 2020, 09:51 pm
ಎದೆಬಾಗಿಲಲಿ ಕಟ್ಟಿ ತೋರಣತಳಿರ
ಮುದನೀರ ಎದೆಅಂಗಳಕ ಚೆಲ್ಲೀ...
ಕಸನೆಲ್ಲ ಗುಡಿಸಿ ತಿದ್ದಿ ಮುಂಗುರುಳ
ಕಾದಿದ್ದೇನೆ ಹೊಯ್ದು ರಂಗವಲ್ಲೀ...
ನೆಡೆದ ಹೆಜ್ಜೆಗಳ ಮೇಲೆ ಹೆಜ್ಜೆಇರಿಸಿ
ತುಳಿದಿದ್ದೇನೆ ಕನಸಿನ ಏಳಪದೀ..
ಬರುವದಾರಿಗೆ ಕಣ್ಣದಿಟ್ಟಿಯ ಹರಿಸಿ
ಕಾದಿದ್ದೇನೆ ಇಂಗುತ ಜೀವನದೀ...
ತನುಮುಗಿಲಲಿ ಕಲ್ಪವೃಕ್ಷ ನಾಟಿ
ನೆನಪಚಂದ್ರಮ ಇಣಕಿಹ ಕಾಡುತ..
ಬಯಕೆಗುದುರೆಯ ಮುರಿದು ಕಾಲ
ಕಾದಿದ್ದೇನೆ ಒಳಗೊಳಗ ಸುಡತ...
ಕೊರೆವ ತಂಡಿಗಾಳಿಗೆ ಹರೆಯ ತುಡಿದು
ಇರುಳ ಕಪ್ಪು ಕವಿದು ನುಂಗುತಲೀ..
ಕಿರುಹಣತೆ ಬೆಳಗ ಮೊಗದಿ ಮುಡಿದು
ಮರುಳಿಡಿದು ಕಾದಿಹೆ ಬಾಳತಮದಲಿ...
- samna
09 Mar 2020, 08:00 pm
ಮರೆತರು ಮರೆಯಲಾಗದ ನೆನಪು,ಸುಟ್ಟರೂ ಸುಡದಿರುವ ಕನಸು,ಕೊಂದರು ಸಾಯದ ಮನಸ್ಸು,ಇದಕ್ಕೆ ಕರಣ ನೀನ್ನ ಪ್ರೀತಿ,ಕೆಲವೊಮ್ಮೆ ಹೇಳದೆ ಕೇಳದೆ ಬಂದೆ,ಹೋಗುವಾಗ ಕಣ್ಣೀರಿನ ಜೋತೆಗೆ ಜೀವನವನ್ನೇ ಕೊಂದೆ....ಪ್ರೀತಿ ನೀ ಶಾಶ್ವತನಾ...?? ದೇವು,,,,,,,
- ದೇವು,,,,,,ಕನ್ನಡಿಗ
09 Mar 2020, 10:46 am
ಪ್ರೀತಿ ಎಂಬ ಗುಲಾಬಿ
ಗಿಡವ ನೆಟ್ಟು
ರಕ್ತವೆಂಬ ನೀರು ಚಲ್ಲಿ
ನಂಬಿಕೆ ಎಂಬ ಬೇಲಿ ಹಾಕಿ
ಸಾಗರವೆಂಬ ಕನಸಿನಲ್ಲಿ ಕಾಯುತ್ತಿದೆ ನಾ
ಅಲೆ ಅಪ್ಪಳೆಸಿ
ಸಿಡಿಲು ಬಡಿದು
ದರಾಕಾರವಾಗಿ ಮಳೆಯ
ಸುರಿಸಿ ಹೋದಯಾ ನೀ.......ದೇವು
- ದೇವು,,,,,,ಕನ್ನಡಿಗ
08 Mar 2020, 10:52 pm
"ಕಲೆಗಾರ ನಾನಲ್ಲ"
"ಕವಿಗಾರ ನಾನಲ್ಲ"
ಭಾವನೆಗಳೊಂದಿಗೆ ಬದುಕುವುದು ಬಿಟ್ಟು,
ಬೇರೇನು"ಗೊತ್ತಿಲ್ಲ"
ಆಸ್ತಿಯೂ"ನನಗಿಲ್ಲ"
ಆಸೆಯೂ"ನನಗಿಲ್ಲ"
ನಿಮ್ಮ"ಸ್ನೇಹ-ಪ್ರೀತಿ"ಬಿಟ್ಟು,
ಬೇರೇನು"ಬೇಕಿಲ್ಲ"
- ದೇವು,,,,,,ಕನ್ನಡಿಗ
08 Mar 2020, 10:50 pm
ಹೇ ಹೆಣ್ಣೇ ಕುಟುಂಬದ ಕಣ್ಣು ನೀ,
ಮಣ್ಣಿನಲ್ಲಿ ಕೆಲಸ ಮಾಡುವ ಹೊನ್ನು ನೀ,
ದೇಶವನ್ನಾಳುವ ಧೀರ ಹೆಣ್ಣು ನೀ,
ಚಂದ್ರನ ಮೇಲೂ ಕಾಲಿಟ್ಟ ಅಗೋಚರ ಶಕ್ತಿ ನೀ.
ಜನ್ಮ ನೀಡಿ ತಾಯಿಯಾದೆ,
ಉಸಿರು ನೀಡಿ ದಾನಿಯಾದೆ,
ಅನ್ನ ನೀಡಿ ದಾಸೋಹಿಯಾದೆ,
ಕರುಣೆ ತೋರಿ ಕರುಣಾಮಯಿಯಾದೆ.
ಶಿಕ್ಷಣ ನೀಡುವ ಶಿಕ್ಷಕಿಯಾದೆ,
ಒಳ್ಳೆ ದಾರಿ ತೋರುವ ಮಾರ್ಗದರ್ಶಕಿಯಾದೆ,
ನ್ಯಾಯ ನೀಡುವ ನ್ಯಾಯಾಧೀಶಳಾದೆ,
ಅನ್ಯಾಯ ಅಳಿಸುವ ನಾಯಕಿಯಾದೆ.
ಪತಿಯ ಸೇವೆಗೆಂದು ಸತಿಯಾದೆ,
ಪತಿಯ ಸುಖದುಃಖದಲ್ಲಿ ಸಮಪಾಲಿನವಳಾದೆ, ತಾಳ್ಮೆಯಲ್ಲಿ ಜಾನಕಿಯಾದೆ,
ಕ್ಷಮಿಸುವ ಕ್ಷಮಯಾಧರಿತ್ರಿ ನೀನಾದೆ.
........ರೋಹಿಣಿ ಪಾಟೀಲ
- RohiniPatil
08 Mar 2020, 03:09 pm
ನಿಟ್ಟುಸಿರು ಬಿಡುತ
ಕುಳಿತಿದ್ದೇನೆ ಕಿಟಕಿಗೊರಗಿ ಏಕಾಂಗಿ..
ಬಿಟ್ಟು ಹೋದ ಹೆಜ್ಜೆಗಳ
ದಿಟ್ಟಿಸತ ಎದೆಯನಲ್ಲೆ ತಂಗಿ..
ಕಣ್ಣಕಂಬನಿ ಕಂಡೀತೆಂದು
ಕನ್ನಡಕ ಕಪ್ಪಗಾಜ ಅಚ್ಚಿ...
ಬಣ್ಣವೆಲ್ಲ ಮಬ್ಬುಕಾಣಲೆಂದು
ತೆಗೆಯದಿದ್ದೇನೆ ಮುಚ್ಚಿ..
ಹಿಂಗದೆ ಜಾರಿತೊಂದು
ಅವನಸಂಗಚಿತ್ರದ ಕಣ್ಣೀರ ಹರಳು..
ಎದೆ ಸನಿಹಕೆ ತಾ ಬಂದು
ಬಿಚ್ಚಿತು ಕಥೆಯಾದವನ ತಿರುಳು..
ಕಂಪಿಸತಿವೆ ತುಟಿ ಒಣಗಿ
ನುಡಿತೊದಲು ಅವನೊಲವ ಗುನಗಿ...
ಮೌನ ಕೊನರತಿದೆ ತೂಗಿ
ಎದೆಮೊಗ್ಗ ಹನಿತೊಯ್ದು ಇಬ್ಬನಿಯಾಗಿ....
ಕಿಟಕಿಯಾಚೆ ತೋರಲೆಳಸಿ
ತೂರಿಬರುವ ಬೆಳಕ ಕನ್ನಡಕಕೆ ತೋರಿ...
ಎದೆಸೋತಿತು ಮೌನಕೆದರಿ
ಮನಹಾರಿದೆ ಹುಡಕತ ನಲ್ಲನದಾರಿ...
- samna
08 Mar 2020, 12:44 pm
ಅದೇನೋ ಕಾತರ ಕಣೇ ನನಗೆ,
ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು.
ಅದೇನೋ ಅವಸರ ನನಗೆ,
ಆದಷ್ಟು ಬೇಗನೆ ನಿನ್ನ ಕಾಣಲು.
ಬರೀ ಕಣ್ಣನೋಟದಿಂದ ನೀನಿಟ್ಟೆ,
ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ
ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,
ನಾ ಮೌನದಿ ಕರಗಲೇ ನಿನ್ನ ತೋಳಲಿ ?
ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,
ನಿನ್ನ ನಗುವ ನೆನಪಿಸುತಿದೆ ಮನಸು.
ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,
ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು.
ಇದು ಪ್ರೀತಿಯೆನ್ನದೇ ಮತ್ತೇನೆಂದು ಹೇಳಲಿ,
ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,
ಒಮ್ಮೆ ಕೃಪೆ ತೋರು ಬಾ ಚೆಲುವೆ ನನ್ನಲಿ,
ಕನಸಲೂ ಕನಸಾಗಿ ಉಳಿಯದೇ, ನನಸಾಗಿ ಬಾರೇ.
ನಿನಗೆಂದೆ ಕಾದಿದೆ ಬೆಚ್ಚನೆಯ ಅಪ್ಪುಗೆ, ಕೃಪೆತೋರೆ.,,,,,,,,,,ದೇವು
- ದೇವು,,,,,,ಕನ್ನಡಿಗ
08 Mar 2020, 11:57 am
ಪೀಡಿಸಲಾರೆ ನೀ ನನ್ನ ಪ್ರೀತಿಸು ಎಂದುಆದರೆ ನಾ ಪ್ರೀತಿಸುವೆ ನಿನ್ನ ಎಂದೆಂದೂ...ಮನದಲಿ ಪ್ರೀತಿಯಿಲ್ಲದಿರೆ ನಿನ್ನದೇನಿದೆ ತಪ್ಪುನನಗೇನಿದೆ ಹಕ್ಕು, ಹೇಳಲು ನನ್ನ ಪ್ರೀತಿಯ ಒಪ್ಪು ..
ಇಂತಿ ನಿಮ್ಮ ಪ್ರೀತಿಯ ಮಲ್ಲೇಶ್
- mallesh
08 Mar 2020, 08:51 am