Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚೆಲುವನ ಮುಗುಳು ನಗೆಗೆ

ಚೆಲುವನ ಮುಗುಳು ನಗೆಗೆ
ಮನಸೋತ ಮಲ್ಲಿಗೆಯು ನಾನು!!
ಹರೆಯದ ತೋಟದೊಳಗೆ
ಅರಳಿದ ಹೊಂಗನಸು ನೀನು!!

ನಿಶ್ಯಬ್ಧ ಲೋಕದಿಂದ ಧರೆಗಿಳಿದ
ಚೆಲುವ ಚೆನ್ನಿಗ ರಾಜಕುಮಾರ!!
ಸುಸ್ವಾಗತವು ಗೆಳೆಯ ನಿನಗೆ
ಈ ನನ್ನ ಹೃದಯದ ಅರಮನೆಗೆ!!

ಮೇಘ ಮಾಲೆಯನು ಹಿಡಿದು
ಕಾದಿದ್ದೆ ಇನಿಯ ನಿನಗಾಗಿ!!
ನೀ ಬಂದು ಎದುರು ನಿಂತ ಕ್ಷಣವೇ
ಮೈ ಮರೆತು ಹೋದೆನು ನಾನಾಗೇ!!

ಹೂ ಬಾಣದಂತ ನೋಟವನು
ನೀ ಎಸೆದೆ ನನ್ನಯ ಕಡೆಗೆ!!
ಹೃದಯವನು ನಾಟಿದ ನೋಟವು
ನನ್ನೊಳಗೆ ಮಿಡಿಯಿತು ಅನುರಾಗ!!

ಸಂಜೆಗೆಂಪಿನ ಕಾಂತಿಯ ರಂಗು
ಈ ನನ್ನ ಗುಳಿ ಕೆನ್ನೆಯ ತುಂಬ!!
ಶಿರ ಬಾಗಿ ನಿಂತಿರುವೆನು ನಾನು
ನೀ ಬಂದು ಸೇರಿಕೋ ನನ್ನನು!!

ನೀ ನನ್ನ ಸಂದಿಸಿದ ಕ್ಷಣವೇ
ನಾನಾದೆನು ನಿನ್ನಯ ಒಡವೆ!!
ನೀ ಜೊತೆಯಾಗಿ ಇರಲು ಹೀಗೆ
ಈ ಬಾಳು ಬಲು ಸುಂದರ ಸ್ವರ್ಗ!!

- ಪಿ.ಜಿ.ಜ್ಯೋತಿ

13 Mar 2020, 12:39 pm

ನಿನಗೆಂದೇ ನನ್ನೆದೆಯಲ್ಲಿ ಬಚ್ಚಿಟ್ಟ

ನಿನಗೆಂದೇ ನನ್ನೆದೆಯಲ್ಲಿ ಬಚ್ಚಿಟ್ಟ
ಅದೆಷ್ಟೋ ಸಾವಿರ ಆಸೆಗಳು
ಬೆಚ್ಚನೆಯ ಹೊದಿಕೆಯ ಹೊದ್ದು
ನನ್ನೊಳಗೆ ಸುಂದರ ಕನಸಾಗಿದೆ!!

ಹುಣ್ಣಿಮೆ ಚಂದಿರನ ಮಂದಹಾಸ
ನನ್ನೊಳಗೆ ಅಡಗಿಕೊಂಡಿರುವ
ಹೆಣ್ತನದ ನಸುನಾಚಿಕೆಯನ್ನು
ಬಿಡದಂತೆ ಕಾಡಿ ಬಡಿದೆಬ್ಬಿಸುತ್ತಿದೆ!!

ಕಡಲಿನಲ್ಲಿ ಅವಿತುಕೊಂಡಿರುವ
ಬೆಲೆಬಾಳುವ ಮುತ್ತಿನ ಹಾಗೆ
ಹೇಳಲಾರದ ಸವಿ ಮಾತುಗಳು
ಅದರದ ಚಿಪ್ಪಿನಲ್ಲಿ ಸಿಲುಕಿಕೊಂಡಿದೆ!!

ಮನವೆಂಬ ಖಾಲಿ ಹಾಳೆಯಲ್ಲಿ
ನನ್ನಯ ಬಯಕೆಗಳನ್ನು ಬಿಂಬಿಸಿ
ಬರೆದ ನೂರಾರು ಪ್ರೇಮಾಕ್ಷರಗಳು
ರವಾನಿಸಲಾಗದೇ ಉಳಿದುಬಿಟ್ಟಿದೆ!!

ಹರೆಯದಲ್ಲಿ ಜನಿಸಿದ ಒಲವೊಂದು
ನದಿಯಂತೆ ಸಾಗಿ ಹರಿಯುತಲಿ
ನಿನ್ನೆದೆಯ ಮಹಾ ಸಾಗರವನ್ನು
ಸೇರಲು ತವಕದಿಂದ ಧಾವಿಸುತ್ತಿದೆ!!

- ಪಿ.ಜಿ.ಜ್ಯೋತಿ

13 Mar 2020, 10:40 am

ನನ್ನ ಹುಡುಗ

ನನ್ನ ಹುಡುಗ ಬಾನಾಡಿನ ನಕ್ಷತ್ರ ಹೊಳೆದಂತೆ ಅವನ ಮಾತು ಸಮುದ್ರದ ಮುತ್ತಿನಂತೆ ಅವನು ತೋರಿಸುವ ಪ್ರೀತಿ ಹಾಲು ಜೇನು ಸವಿ ಅಂತೆ ಅವನ ಕೋಪ ಮೂಗಿನ ತುದಿಗೆ ಅವನ ಕುಶಿ ಬಾನಾಡಿಗೆ ಕತ್ತಲಲ್ಲಿ ಮೆರಗು ತಂದ ಚಂದ್ರ ನಂತೆ ಅವನ ವೀರ ತನ ಉರಿಯುವ ಬೆಂಕಿಯ ಅಂತೆ ಇರುವ ಸೂರ್ಯ ನಂತೆ ಮನಸು ತಾಯಿ ಅಂತೆ ಅವನ ಮನಸು ಆಕಾಶ ದಂತೆ ಎನ ಎಂದು ವರ್ಣಿಸಲಿ ನಿನ್ನ . ನಿನ್ನ ವರ್ಣಿಸಲು ಪದಗಳೇ ಸಾಲುತ್ತಿಲ್ಲ ಓ ನನ್ನ ಪ್ರೀಯತಮ...✍️

- Iramma Iramma

12 Mar 2020, 11:18 pm

ಪ್ರೀತಿ

ನಿನ್ನ ಬರುವಿಕೆಗೆ ಇಡಿ ದಿನ ಕಾದೆ ನನಗೆ ಸಮಯ ಹೋಗಿದ್ದೇ ಅರಿವು ಇಲ್ಲ ಗೆಳೆಯ ಕೆಡೆಗು ನೀನು ಬಾರದೆ ಇರುದನ್ನು ನನ್ನ ಮನ ಅರಿತು ನನಗೆ ಹೇಳಿತು ನಿನ್ನ ಕಾಯುಕೆಗೆ ಒಂದಲ್ಲ ಒಂದು ದಿನ ಪ್ರತಿಫಲ ಸಿಗುತ್ತದೆ ನೀನು ಕಾಯುದನ್ನು ನಿಲ್ಲಿಸ ಬೇಡ ಎಂದು.

- Iramma Iramma

12 Mar 2020, 10:51 pm

ನನ್ನ ಗೆಳತಿ

ಗೆಳತಿ ನಿನ್ನ ಅಂದದ ಮೊಗಕೆ ತಿಲಕವಿಟ್ಟು
ನಿನ್ನ ಕಾಲ್ಬೆರಳಿಗೆ ಉಂಗುರ ತೊಟ್ಟು
ನಿನ್ನ ಕುತ್ತಿಗಿಗೆ ಮಾಂಗಲ್ಯವ ಕಟ್ಟಿ
ನಿನ್ನ ಕೈ ಹಿಡಿದು
ಸಪ್ತಪದಿಯ ತುಳಿದು
ಜೀವನವೆಂಬ ಸುಂದರ ನವ ಬದುಕಿಗೆ ಕಾಲಿಡಲು ನಾ ಹೊರಟಿರುವೆ ನಿನ್ನೊಂದಿಗೆ
ನಾ ನಿನ್ನ ಪ್ರೀತಿಗೆ ಎಂದೂ
ಮೋಸಗಾರನಲ್ಲ ಕಣೆ.
ಜೀವ ಇರುವವರೆಗೂ ನಾ
ನಿನ್ನ ನೆರಳಾಗಿರುವೆ.

✍️ಕನಸುಗಾರ.

- varu

12 Mar 2020, 09:30 pm

ನಾ ಹೇಗೆ ಮರೆಯಲಿ

ನಿನ್ನ ನೋಡಬಾರದೆಂದು ನನ್ನ ಮನಸ್ಸು ಕಲ್ಲು ಮಾಡಿಕೊಂಡೆ,ಆ ಕಲ್ಲೇ ಶಿಲೆಯಾಗಿ ನಿನ್ನ ರೂಪ ಕಂಡರೆ,ನಾ ಹೇಗೆ ಮರೆಯಲಿ...ದೇವು

- ದೇವು,,,,,,ಕನ್ನಡಿಗ

12 Mar 2020, 08:33 pm

ಚಿಂತೆಗಳು

ಮನಸ್ಸು ಸ್ವಚ್ಚಗೊಳಿಸಿ
ನಿರೆರೆಯದಿದ್ದರೂ
ಮನದಾಳದಲಿ ಇಳಿದ ಬೇರುಗಳ
ಕಿತ್ತು ಎಸೆದು ಬಿಟ್ಟರು
ಮತ್ತೆ ಬೇರು ಬಿಡುವ ಬಿಳಲುಗಳು.

ಕಿದ್ವಾಯಿರಾಜಶೇಖರ್.

- Raj Raj

12 Mar 2020, 08:08 pm

ಮೌನದ ಮಾತು

ಕಳೆದುಕೊಂಡ ಪ್ರೀತಿಗೆ ಕಾಯೋ ಪ್ರತಿ ಹೃದಯವು ಆ ಇನ್ನೊಂದು ಹೃದಯಕ್ಕೆ ಒಳ್ಳೆಯದನ್ನೆ ಬಯಸುತ್ತಾ ಇರುತ್ತದೆ ಮತ್ತೆ ಆ ಹೃದಯ ಸಿಗುತ್ತೆ ಎಂಬ ನಂಬಿಕೆ ಮೇಲೆ ಈ ಪುಟ್ಟ ಹೃದಯ ಜೀವನ ಸಾಗಿಸುತ್ತಾ ಇರುತ್ತದೆ. ಇಂತಿ ನಿಮ್ಮ ಈರಮ್ಮ✍️

- Iramma Iramma

12 Mar 2020, 07:08 pm

ನೀ ನಡೆವ ಹಾದಿಯಲ್ಲಿ

ನೀ ನಡೆವ ಹಾದಿಯಲ್ಲಿ
ಕಲ್ಲಿರಲಿ ಮುಳ್ಳೇ ಇರಲಿ
ನೀ ಸಾಗಿ ತೀರಲೇಬೇಕು
ಈ ಬಾಳ ಪಯಣದಲಿ!!

ಸುಖ ದುಃಖ ಎಂಬ ತಿರುವು
ನೂರಾರು ಎದುರು ಬರಲು
ನೀ ಹೆಜ್ಜೆ ಇಡಲೇಬೇಕು
ಮುನ್ನಡೆದು ಸಾಗಲೇಬೇಕು!!

ಬದುಕಲ್ಲಿ ಗೆಲುವು ಎನ್ನುವ
ಶಿಖರವನು ಏರುವಾಗ
ಸೋಲೆಂಬ ಊರಗೋಲ
ಕೈಯಲ್ಲಿ ಹಿಡಿದಿರಬೇಕು!!

ಬೋಧನೆಯು ಏನೇ ಇರಲಿ
ಹುಟ್ಟನ್ನು ಅರಿಯಲಾರೆ!!
ಸಾಧನೆಯು ಸಾವಿರ ಬರಲಿ
ಸಾವನ್ನು ಗೆಲ್ಲಲಾರೆ!!

ಬದುಕೆಂಬ ಗುಟ್ಟನೆಂದು
ನೀ ಮೆಟ್ಟಿ ನಿಲ್ಲಲಾರೆ!!
ಹೆಜ್ಜೆ ಗುರುತ ಅಳಿಸಿದರೂ
ಪಯಣಿಸದೇ ಇರಲಾರೆ!!

- ಪಿ.ಜಿ.ಜ್ಯೋತಿ

12 Mar 2020, 04:12 pm

ಹನಿಗಳು

ನಿನ್ನ ಮುಗ್ದ ಮೊಗದ ನಗುವಲ್ಲಿ
ಹುದುಗಿಹುದು ನೂರು ಮಲ್ಲಿಗೆಯ
ಸೊಗಸು ಚೆಲುವೆ..
ತುಟಿಯಂಚಿನ ಮುಗಳ್ನಗು
ಹರಡುವುದು ಸಮ್ಮೋಹಕ ಪರಿಮಳವನ್ನು
ಅಂದದ ಮೊಗವೊಂದು ಸುಂದರ
ಹೂಬನವೆಂದು ಸಾರಿ..
***
ನೊಂದ ಮನಕೆ
ನಲ್ನುಡಿಗಳನು ಸಿಂಪಡಿಸಿ,
ಇನಿಯ ಮಾತುಗಳಿಂದ
ಎರೆದು ತಂಪನು ಹೃದಯಕೆ
ಮಮತೆಯಲಿ ಆರಿಸಿದೇ ಮನದುರಿಯನು
ಚಿಗುರಿಸಿದೆ ನೀ
ನಲಿವಿನೆಲೆಯ ನನ್ನೊಳು
ಕ್ಷಣದಲ್ಲಿ ಓ ಗೆಳತಿ..
***
ಕತ್ತಿ ಅಲುಗಿನ ಆ ಮೊನಚು ಕಂಗಳು
ಬಹಳ ಚೂಪಾಗಿವೆ ಕಾಮನೆಯಲಿ..
ಇರಿಯುತ್ತವೆ ಎದುರಿನವರ ಎದೆಯ
ಸ್ಪುರಿಯುತ್ತಿವೆ ಪ್ರೇಮ ಅಮೃತ ಸುಧೆಯ..

- ಶ್ರೀಗೋ.

11 Mar 2020, 09:35 pm