Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....
- ದೇವು,,,,,,ಕನ್ನಡಿಗ
11 Mar 2020, 08:31 pm
ಗಿಡ-ಬಳ್ಳಿ, ಹೂ-ಹಣ್ಣು ಪ್ರಕೃತಿಯ ಮಡಿಲಲ್ಲಿ
ಸಾವಿರಾರು ಜೀವಕೋಟಿ ಭೂದೇವಿಯ ಒಡಲಲ್ಲಿ
ಎಷ್ಟೊಂದು ಕ್ರೌರ್ಯ ದೌರ್ಜನ್ಯ ಮನುಷ್ಯನ ಮನದಲಿ
ಪ್ರಕೃತಿಯ ಬೆಳಸಿ ಉಳಿಸುವ ಛಲವು ಮೂಡಲಿ.
ಕಿದ್ವಾಯಿರಾಜಶೇಖರ್.
- Raj Raj
11 Mar 2020, 08:10 pm
ಬಂದಿದೆ ಬಂದಿದೆ ಕೊರೊನ
ಬೀಸಿದೆ ತನ್ನಯ ಜಾಲನ
ಚೀನಾದ ದ್ವೇಷದ ಜ್ವಾಲಗೆ
ದೇಶದೇಶಗಳಲ್ಲಿ ರೋಗಗಳ ಸರಮಾಲೆ
ಮಾಂಸ ತಿನ್ನಂಗಿಲ್ಲ
ಮೊಟ್ಟೆ ನುಂಗಗಿಲ್ಲ
ಬಾರ್ ಗೆ ಕಾಲಿಡಂಗಿಲ್ಲ
ಮಾಲ್ ಗೆ ಹೋಗಂಗಿಲ್ಲ
ನಮಗೆಲ್ಲ ಇದಾವಾ ಕರ್ಮ
ಅರಿತಿಲ್ಲ ನಾವೆಲ್ಲ ಚೀನಾದವರ ಮರ್ಮ !!
ಕಿದ್ವಾಯಿ ರಾಜಶೇಖರ್.
- Raj Raj
11 Mar 2020, 07:30 pm
ಮಗುವಂತೆ ಪುಟ್ಟ ಮನಸುವಳು
ಎಷ್ಟೇ ಕೋಪ ಬಂದರು ಕೋಪಿಸಿಕೊಳ್ಳದವಳು
ಎಷ್ಟೇ ನೋವು ಕೊಟ್ಟರು ಕ್ಷಮಿಸುವಳು
ತನ್ನ ಮುಗುಳು ನಗೆಯಲ್ಲಿ ಎಲ್ಲಾ ನೋವನ್ನು ಮರೆಸುವಳು
ದಿನ ನಿತ್ಯ ನಿನ್ನದೇ ಧ್ಯಾನ
ನಿನ್ನ ಜೊತೆ ಕಳೆದ ಪ್ರತಿಕ್ಷಣ
ನನ್ನನ್ನು ಕೊಲ್ಲುತ್ತಿದೆ ಆ ದಿನಗಲ್ಲು
ನಿನ್ನೇ ಬೇಕೆಂದು ಕೇಳುತ್ತಿದೆ ನನ್ನ ಮನ
ಮೌನಿಯಂತೆ ಒಂಟಿ ಮಾಡಿ ಹೋದೆ ನನ್ನ.....
ನಿತ್ಯ ಕಾಳಜಿ ಪ್ರೀತಿ ತೋರಿಸಿದ ನೀನು
ಮರೆಯಗಬಹುದೇ ನೀ ನನ್ನನು ಬಿಟ್ಟು
ಒಂಟಿಯಾಗಿ ಬಿಟ್ಟು ಹೋದೆ ನೀನು
ನಿನ್ನ ನೆನಪಲ್ಲಿ ನಾನು ಉಳಿದೆನು.....
ಕೊನೆಗೂ ನನ್ನ ಒಂಟಿ ಮಾಡಿದೆ
ನನ್ನ ಹೃದಯವ ಕೊಳ್ಳೆ ಹೊಡೆದೆ
ನಿನ್ನನ್ನು ನಾ ಮರೆತೇನು
ಆದರೆ ಈ ನನ್ನ ಪುಟ್ಟಮನಸ್ಸು ನೀನೇ ಬೇಕುನ್ನುತ್ತಿದೆ.....
- Ajay
10 Mar 2020, 11:15 pm
ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ
ಒಮ್ಯಾರ ಹೇಳೆ ನನ್ನ ಒಡತಿ ಅದ್ಯಾಂಗಂತ?
ಒಂದು ಮಾತಾಗ ಮರಿ ಅಂತೀಯಾ ನನ್ನ
ಬಾರೀ ದೊಡ್ ಮಂದಿ ಆದಿ ನೀ ಈಗ
ಇನ್ಯಕಾ ಈ ಹೈದ ನಿನ್ನ ಜೊತೆಯಾಗ ಅಲ್ಲಾ?
ಹೇ ಕೇಳೇ ಒಡತಿ ನೀಯ್ಯಾರಾ, ನಾಯ್ಯಾರ
ಅಂತಿದ್ವಿ ಆಗ ನೆನಪಾಯ್ತಿ ನಿಂಗ ಚೆಲ್ವಿ
ಆಮ್ಯಾಕ ನೀ ಏನಂದಿ ಮರೆತಾ, ಮಾರಾಯ್ತಿ?
ನೀನೇ ನನ್ ಉಸಿರು ನನ್ ಒಡೆಯ ನೀ
ನಾ ಎಂದು ಬಿಡಲ್ಲ ನಿನ್ನ ಈ ಜನುಮದಾಗ
ಗ್ಯಪ್ತಿ ಬಂತಾ ನಿನ್ ಮಾತು ಒಸಿ ಮಾತಾಡು
ಅಂಗೆಲ್ಲಾ ಹೇಳಿ ಇಪ್ಪಾಟಿ ಪೀರುತಿ ಕೊಟ್ಟಿ
ನೀ ಮರಿ ಅಂತಿ ಎಷ್ಟ್ ದಪ ಹೇಳುದ್ರು ನೀ
ಕೇಳಕಿಲ್ಲಾ ನಾ ಹೋಗ್ ಹೋಗ್ ಅಟ್ಟಿಗೆ
ಮರಿಯಾಕ ನಾ ನೀ ಅಲ್ಲಾ ನನ್ನೊಡತಿ
ಈ ಜನುಮಕ ನೀನೇ ನನ್ನ ಒಡತಿ
ನೀ ಏನ್ನಾರ ಹೇಳು ನಾ ಕೇಳೀನಿ ಅಂತ ತಿಳಿಬೇಡ
ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ
ಒಮ್ಯಾರ ಹೇಳೆ ನನ್ನ ಒಡತಿ ಅದ್ಯಾಂಗಂತ
- ಹಂಸ ಕುಲಾಲ್✍️✍️✍️
ಮರೆತು ಬಿಡು ನನ್ನ ನೀ ಎಂದು ಹೇಳಿದ ಅವಳ ನುಡಿಗೆ ಅವನ ಮರು ಉತ್ತರ.
ಜಾನಪದ ಶೈಲಿ ಪ್ರಯತ್ನಿಸುವ ಹಂಬಲ ನನ್ನಲ್ಲಿ ಹೆಚ್ಚಾಯಿತು. ಆಗಾಗಿ ಈ ಪ್ರಯತ್ನ.
ನಿಮ್ಮ ಅಭಿಪ್ರಾಯ ತಿಳಿಸಿ.
- ಹಂಸವೇಣಿ
10 Mar 2020, 02:13 pm
ಮನದಾಳದ ಮಾತು ಬರಲಿಲ್ಲ ನನ್ನ ಮನದಿಂದ
ತುಟಿಯಂಚಿನ ಮಾತು ಬಾರದೆ ಹೋಯಿತು ತುಟಿಯಿಂದ
ನನ್ನ ಚೆಲುವೆ ಅರಿಯಲಿಲ್ಲ ನನ್ನ, ತನ್ನ ಮನದಿಂದ
ಬದುಕು ಬರಡಾಯಿತು, ನಾ ಪ್ರೀತಿಸಿದ ಪ್ರೀತಿಯಿಂದ......
- ದೇವು,,,,,,ಕನ್ನಡಿಗ
09 Mar 2020, 11:05 pm
ಸಾಲವೆಂಬ ರಾಕ್ಷಸ ಮನದೊಳಗಿರಲು...!
ಸಾಧ್ಯವೆ ನಾ ನೆಮ್ಮದಿಯಿಂದ ಬದುಕಲು..!!
ದುಡಿದು ಹರಿಸಿದರು ಮೈಯಲ್ಲಿ ಬೆವರು....!!
ನನ್ನಂತವರಿಗೆ ಸಿಕ್ಕಲ್ಲ ಆ ಲಕ್ಷ್ಮೀ ದೇವರು......!!
ಅದಕಾಗಿ ನಾ ಕುಡಿಯುವೆ ಬಾರಲ್ಲಿ ಬೀರು....!!!
- Harish Gowda
09 Mar 2020, 10:50 pm
ವಿದ್ಯಾ ನೀ ಒಂದು ಮಾಯೆ
ನನ್ನಮೇಲೆ ಇದ್ದಿದ್ದರೆ ನಿನ್ನ ಛಾಯೆ..
ಇಂದು ಐಶ್ವರ್ಯ ಸೌಂದರ್ಯರರು ನನ್ನ ಸುತ್ತಮುತ್ತ...!!
!!ವಿದ್ಯಾ!!
ನಿನ್ನ ಮಹತ್ವ ತಿಳಿದಯದೆ ಕೆಟ್ಟೆ...
ಹಣದ ಹಿಂದೆ ಬಿದ್ದು ನೆಮ್ಮದಿಯಾ ಬಿಟ್ಟೆ..,
ವಿದ್ಯೆ ಇರುವಲ್ಲಿ ಲಕ್ಷ್ಮೀ ಹೊರತು
ಲಕ್ಷ್ಮೀ ಇರುವಲ್ಲಿ ವಿದ್ಯೆ ಅಲ್ಲಾ ಎಂಬಾ ತತ್ವ ತಿಳಿಯಿರಿ....
ಬದಕಲಿ ನೆಮ್ಮದಿಯ ಕೆಲಸವ ಪಡೆದು ತೃಪ್ತಿ ಪಡೆಯಿರಿ....
- Harish Gowda
09 Mar 2020, 09:51 pm
ಎದೆಬಾಗಿಲಲಿ ಕಟ್ಟಿ ತೋರಣತಳಿರ
ಮುದನೀರ ಎದೆಅಂಗಳಕ ಚೆಲ್ಲೀ...
ಕಸನೆಲ್ಲ ಗುಡಿಸಿ ತಿದ್ದಿ ಮುಂಗುರುಳ
ಕಾದಿದ್ದೇನೆ ಹೊಯ್ದು ರಂಗವಲ್ಲೀ...
ನೆಡೆದ ಹೆಜ್ಜೆಗಳ ಮೇಲೆ ಹೆಜ್ಜೆಇರಿಸಿ
ತುಳಿದಿದ್ದೇನೆ ಕನಸಿನ ಏಳಪದೀ..
ಬರುವದಾರಿಗೆ ಕಣ್ಣದಿಟ್ಟಿಯ ಹರಿಸಿ
ಕಾದಿದ್ದೇನೆ ಇಂಗುತ ಜೀವನದೀ...
ತನುಮುಗಿಲಲಿ ಕಲ್ಪವೃಕ್ಷ ನಾಟಿ
ನೆನಪಚಂದ್ರಮ ಇಣಕಿಹ ಕಾಡುತ..
ಬಯಕೆಗುದುರೆಯ ಮುರಿದು ಕಾಲ
ಕಾದಿದ್ದೇನೆ ಒಳಗೊಳಗ ಸುಡತ...
ಕೊರೆವ ತಂಡಿಗಾಳಿಗೆ ಹರೆಯ ತುಡಿದು
ಇರುಳ ಕಪ್ಪು ಕವಿದು ನುಂಗುತಲೀ..
ಕಿರುಹಣತೆ ಬೆಳಗ ಮೊಗದಿ ಮುಡಿದು
ಮರುಳಿಡಿದು ಕಾದಿಹೆ ಬಾಳತಮದಲಿ...
- samna
09 Mar 2020, 08:00 pm
ಮರೆತರು ಮರೆಯಲಾಗದ ನೆನಪು,ಸುಟ್ಟರೂ ಸುಡದಿರುವ ಕನಸು,ಕೊಂದರು ಸಾಯದ ಮನಸ್ಸು,ಇದಕ್ಕೆ ಕರಣ ನೀನ್ನ ಪ್ರೀತಿ,ಕೆಲವೊಮ್ಮೆ ಹೇಳದೆ ಕೇಳದೆ ಬಂದೆ,ಹೋಗುವಾಗ ಕಣ್ಣೀರಿನ ಜೋತೆಗೆ ಜೀವನವನ್ನೇ ಕೊಂದೆ....ಪ್ರೀತಿ ನೀ ಶಾಶ್ವತನಾ...?? ದೇವು,,,,,,,
- ದೇವು,,,,,,ಕನ್ನಡಿಗ
09 Mar 2020, 10:46 am