Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪ್ರೀತಿ ಎಂಬ ಗುಲಾಬಿ
ಗಿಡವ ನೆಟ್ಟು
ರಕ್ತವೆಂಬ ನೀರು ಚಲ್ಲಿ
ನಂಬಿಕೆ ಎಂಬ ಬೇಲಿ ಹಾಕಿ
ಸಾಗರವೆಂಬ ಕನಸಿನಲ್ಲಿ ಕಾಯುತ್ತಿದೆ ನಾ
ಅಲೆ ಅಪ್ಪಳೆಸಿ
ಸಿಡಿಲು ಬಡಿದು
ದರಾಕಾರವಾಗಿ ಮಳೆಯ
ಸುರಿಸಿ ಹೋದಯಾ ನೀ.......ದೇವು
- ದೇವು,,,,,,ಕನ್ನಡಿಗ
08 Mar 2020, 10:52 pm
"ಕಲೆಗಾರ ನಾನಲ್ಲ"
"ಕವಿಗಾರ ನಾನಲ್ಲ"
ಭಾವನೆಗಳೊಂದಿಗೆ ಬದುಕುವುದು ಬಿಟ್ಟು,
ಬೇರೇನು"ಗೊತ್ತಿಲ್ಲ"
ಆಸ್ತಿಯೂ"ನನಗಿಲ್ಲ"
ಆಸೆಯೂ"ನನಗಿಲ್ಲ"
ನಿಮ್ಮ"ಸ್ನೇಹ-ಪ್ರೀತಿ"ಬಿಟ್ಟು,
ಬೇರೇನು"ಬೇಕಿಲ್ಲ"
- ದೇವು,,,,,,ಕನ್ನಡಿಗ
08 Mar 2020, 10:50 pm
ಹೇ ಹೆಣ್ಣೇ ಕುಟುಂಬದ ಕಣ್ಣು ನೀ,
ಮಣ್ಣಿನಲ್ಲಿ ಕೆಲಸ ಮಾಡುವ ಹೊನ್ನು ನೀ,
ದೇಶವನ್ನಾಳುವ ಧೀರ ಹೆಣ್ಣು ನೀ,
ಚಂದ್ರನ ಮೇಲೂ ಕಾಲಿಟ್ಟ ಅಗೋಚರ ಶಕ್ತಿ ನೀ.
ಜನ್ಮ ನೀಡಿ ತಾಯಿಯಾದೆ,
ಉಸಿರು ನೀಡಿ ದಾನಿಯಾದೆ,
ಅನ್ನ ನೀಡಿ ದಾಸೋಹಿಯಾದೆ,
ಕರುಣೆ ತೋರಿ ಕರುಣಾಮಯಿಯಾದೆ.
ಶಿಕ್ಷಣ ನೀಡುವ ಶಿಕ್ಷಕಿಯಾದೆ,
ಒಳ್ಳೆ ದಾರಿ ತೋರುವ ಮಾರ್ಗದರ್ಶಕಿಯಾದೆ,
ನ್ಯಾಯ ನೀಡುವ ನ್ಯಾಯಾಧೀಶಳಾದೆ,
ಅನ್ಯಾಯ ಅಳಿಸುವ ನಾಯಕಿಯಾದೆ.
ಪತಿಯ ಸೇವೆಗೆಂದು ಸತಿಯಾದೆ,
ಪತಿಯ ಸುಖದುಃಖದಲ್ಲಿ ಸಮಪಾಲಿನವಳಾದೆ, ತಾಳ್ಮೆಯಲ್ಲಿ ಜಾನಕಿಯಾದೆ,
ಕ್ಷಮಿಸುವ ಕ್ಷಮಯಾಧರಿತ್ರಿ ನೀನಾದೆ.
........ರೋಹಿಣಿ ಪಾಟೀಲ
- RohiniPatil
08 Mar 2020, 03:09 pm
ನಿಟ್ಟುಸಿರು ಬಿಡುತ
ಕುಳಿತಿದ್ದೇನೆ ಕಿಟಕಿಗೊರಗಿ ಏಕಾಂಗಿ..
ಬಿಟ್ಟು ಹೋದ ಹೆಜ್ಜೆಗಳ
ದಿಟ್ಟಿಸತ ಎದೆಯನಲ್ಲೆ ತಂಗಿ..
ಕಣ್ಣಕಂಬನಿ ಕಂಡೀತೆಂದು
ಕನ್ನಡಕ ಕಪ್ಪಗಾಜ ಅಚ್ಚಿ...
ಬಣ್ಣವೆಲ್ಲ ಮಬ್ಬುಕಾಣಲೆಂದು
ತೆಗೆಯದಿದ್ದೇನೆ ಮುಚ್ಚಿ..
ಹಿಂಗದೆ ಜಾರಿತೊಂದು
ಅವನಸಂಗಚಿತ್ರದ ಕಣ್ಣೀರ ಹರಳು..
ಎದೆ ಸನಿಹಕೆ ತಾ ಬಂದು
ಬಿಚ್ಚಿತು ಕಥೆಯಾದವನ ತಿರುಳು..
ಕಂಪಿಸತಿವೆ ತುಟಿ ಒಣಗಿ
ನುಡಿತೊದಲು ಅವನೊಲವ ಗುನಗಿ...
ಮೌನ ಕೊನರತಿದೆ ತೂಗಿ
ಎದೆಮೊಗ್ಗ ಹನಿತೊಯ್ದು ಇಬ್ಬನಿಯಾಗಿ....
ಕಿಟಕಿಯಾಚೆ ತೋರಲೆಳಸಿ
ತೂರಿಬರುವ ಬೆಳಕ ಕನ್ನಡಕಕೆ ತೋರಿ...
ಎದೆಸೋತಿತು ಮೌನಕೆದರಿ
ಮನಹಾರಿದೆ ಹುಡಕತ ನಲ್ಲನದಾರಿ...
- samna
08 Mar 2020, 12:44 pm
ಅದೇನೋ ಕಾತರ ಕಣೇ ನನಗೆ,
ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು.
ಅದೇನೋ ಅವಸರ ನನಗೆ,
ಆದಷ್ಟು ಬೇಗನೆ ನಿನ್ನ ಕಾಣಲು.
ಬರೀ ಕಣ್ಣನೋಟದಿಂದ ನೀನಿಟ್ಟೆ,
ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ
ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,
ನಾ ಮೌನದಿ ಕರಗಲೇ ನಿನ್ನ ತೋಳಲಿ ?
ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,
ನಿನ್ನ ನಗುವ ನೆನಪಿಸುತಿದೆ ಮನಸು.
ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,
ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು.
ಇದು ಪ್ರೀತಿಯೆನ್ನದೇ ಮತ್ತೇನೆಂದು ಹೇಳಲಿ,
ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,
ಒಮ್ಮೆ ಕೃಪೆ ತೋರು ಬಾ ಚೆಲುವೆ ನನ್ನಲಿ,
ಕನಸಲೂ ಕನಸಾಗಿ ಉಳಿಯದೇ, ನನಸಾಗಿ ಬಾರೇ.
ನಿನಗೆಂದೆ ಕಾದಿದೆ ಬೆಚ್ಚನೆಯ ಅಪ್ಪುಗೆ, ಕೃಪೆತೋರೆ.,,,,,,,,,,ದೇವು
- ದೇವು,,,,,,ಕನ್ನಡಿಗ
08 Mar 2020, 11:57 am
ಪೀಡಿಸಲಾರೆ ನೀ ನನ್ನ ಪ್ರೀತಿಸು ಎಂದುಆದರೆ ನಾ ಪ್ರೀತಿಸುವೆ ನಿನ್ನ ಎಂದೆಂದೂ...ಮನದಲಿ ಪ್ರೀತಿಯಿಲ್ಲದಿರೆ ನಿನ್ನದೇನಿದೆ ತಪ್ಪುನನಗೇನಿದೆ ಹಕ್ಕು, ಹೇಳಲು ನನ್ನ ಪ್ರೀತಿಯ ಒಪ್ಪು ..
ಇಂತಿ ನಿಮ್ಮ ಪ್ರೀತಿಯ ಮಲ್ಲೇಶ್
- mallesh
08 Mar 2020, 08:51 am
ನನ್ನೀ ಮೌನದ ಭಾವಕ್ಕೆ ಲೇಖನಿಯೇ ಮಾತು.
ಬರೆಯುವ ಹಂಬಲ ಯಾವ ದಿಕ್ಕಿನಿಂದ ಮೂಡಿತೋ ನಾ ಅರಿಯೆ.
ಕವಿತೆಗಳ ಸಾಲು ಅಲ್ಲದೆ
ಒಂದಷ್ಟು ಕಥೆ ಕಾದಂಬರಿ ಸಹ ಈ ಲೇಖನಿಯಿಂದ ಮೂಡಿದೆ.
ಒಮ್ಮೆ ನೋಡುವ ಅನಿಸಿದ್ದರೆ.
ಪ್ರತಿ ಲಿಪಿ ಎಂಬ ಲೋಕಕ್ಕೆ ಧಾವಿಸಿ
ಒಮ್ಮೆ ಹಂಸವೇಣಿ ಎಂದು ಹುಡುಕಿ ನೋಡಿ.
ಓದಿ ಮರೆಯದೇ ನಿಮ್ಮ ಅಭಿಪ್ರಾಯ ತಿಳಿಸಿ.
- ಹಂಸ✍️✍️✍️
- ಹಂಸವೇಣಿ
07 Mar 2020, 10:54 pm
ಮೂಡುವ ಸಾಲಿಗೊಂದು ಭಾವನೆಗಳ ತೋರಣ
ಜೋಡಿಸಿ ಹೆಣೆವ ನುಡಿಗೊಂದು ಅಲಂಕಾರದ ಸೃಷ್ಠಿ
ಸುಮದ ಪದಪದಗಳ ನಡುವೆ ಸೂಸುವ ಘಮ
ಸಮಗ್ರ ರಸದ ಸವಿಯ ಬಚ್ಚಿಡುವ ಕಲೆಯೇ ಇಲ್ಲಿದೆ
- ಹಂಸ✍️✍️✍️
- ಹಂಸವೇಣಿ
07 Mar 2020, 10:46 pm
ಈ ಹೃದಯಕ್ಕೆ ಅಂದೊಮ್ಮೆ
ಬಡಿತದ ಸ್ವರೂಪ ನೀಡಿದೆ
ಉಸಿರು ಸೂಸುವ ಸ್ವರಕ್ಕೆ
ಲಾಲಿಯ ನಾದ ತುಂಬಿದೆ
ನನ್ನೀ ಪುಟ್ಟ ಪುಟ್ಟ ಕನಸಿನ ಕಥೆಗೆ
ನನಸಿನ ಉಡುಗೊರೆ ಹೊತ್ತು ತಂದೆ
ಸಾಗುವ ದಾರಿಯಲ್ಲಿ ಜೊತೆಯಾಗಿ
ನಿನ್ನೀ ಒಲವಿನ ಬಣ್ಣ ನೀಡಿದೆ
ಅಮ್ಮ ಅಮ್ಮ ಅಮ್ಮ
ಎನ್ನ ಪ್ರತಿ ಎದೆ ಬಡಿತವೂ
ಸ್ವರ ನೀನೇ
- ಹಂಸ ಕುಲಾಲ್✍️✍️✍️
- ಹಂಸವೇಣಿ
07 Mar 2020, 10:38 pm
ಒಂದೊಮ್ಮೆ ಮಾತಿಗೆ ಕೇಳಿದೆ
ಅವನ
ಹಿಡಿದು ಬಂಧಿಸಿ ಕೊಡುವೆಯ
ಸೂರ್ಯನ
ನಾನೇ ಸೋತೆ ಕ್ಷಣಕ್ಕೆ
ಒಪ್ಪಿದವನ
ಬೆಸೆದ ಕೈಯೊಳು ಬಂಧಿಸಿದ
ಆ ನೇಸರನ
- ಹಂಸ✍️✍️✍️
- ಹಂಸವೇಣಿ
07 Mar 2020, 10:32 pm