Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಯಾರು ಅರಿವರು ಈ ತಾತ್ಸಾರದ ನೋವನ್ನು
ನಾನೇನು ಅಪರಾಧ ಮಾಡಿದೆ ಈ ನಿರ್ಲಕ್ಷದ ಶಿಕ್ಷೆ
ಪಡೆಯಲು,
ಪಣ ತೋಟು ಊಳಿಗೆ ಮಾಡಿದರು ನಿನ್ನ
ಲಕ್ಷ ಮಾಡರು, ಕಷ್ಟಕೆ ನೇರವಾಗಿ ಹೆಗಲು ನೀಡಿದರು
ಕೊರತೆಗಳ ಕಾಣುವರು,
ಉಸಿರ ಹಂಚಿ ಜೀವ ನೀಡಿದ ಜೀವದಾತನೆ ನಿನ್ನ ಊಪೇಕ್ಷೇ ಮಾಡುವ ಬಾಳು ನರಕವೆ ಹೌದು,
ಆಸೆಯ ಮನದಿ ಸ್ನೇಹವ ಅಪೇಕ್ಷಿಸಿದೆ
ನನ್ನ ಅಸಡ್ಡೆ ಮಾಡಿದರು,
ವಸ್ತುಗಳ ಪ್ರೀತಿಸಿ ವ್ಯಕ್ತಿಗಳ ಉಪಯೋಗಿಸೊ ಕಟುಕರಾದರು ಇಂದಿನ ಜನರು,
ನಿಜ ಪ್ರೀತಿಯ ತೋರಿ ನಿಜ ಸ್ನೇಹವ ಕೋಟವನಿಗೆ
ಅನಾದರದ ಅನುರಾಗವೆ ಕೊಡುಗೆ.
ಕಿರಣ್ ಕ್ರೀಸ್
- Kris
03 Mar 2020, 07:50 am
ಕೆನ್ನೆಗುಳಿ ಮಲ್ಲೆನಗು
ನಿನ್ನ ಪಿಸುನುಡಿವ ತುಟಿಜೇನ ರೆಕ್ಕೆ..
ಸನ್ನೆಮುಂಗುರುಳು
ನನ್ನ ಕರೆದಚ್ಚಿವೆ ನಿನ್ನೊಲವ ಸ್ಪರ್ಶಕ್ಕೆ..
ಕಪ್ಪುಕೆರಳ ಜಡೆನಾಗರ
ಹೆಪ್ಪಿದ ಹಾಲಂತ ಚಂದ್ರಮೊಗಾ..
ಮುಗ್ಧತೆ ಹೂ ತಾಮರ
ಮೌನರಳಿ ನೀನೊ ದೇವಸೊಗಾ..
ಎದೆಕೂಗಿ ಕಣ್ಣುಕರೆವಾ
ಕಣ್ಣರೆಪ್ಪೆ ನಿನ್ನ ಮುಚ್ಚಿತೆರೆವಾ..
ನಿನ್ನ ನಡೆಯೊ ಹರಿವಾ
ನದಿನವಿಲೊ ಸ್ವರ್ಗತೆರೆವಾ..
ಮಲೆತ ಮನಕೆ ಮೊಗ್ಗಿರಿಸಿ
ಕಲೆತೆನೀ ಎದಿಒಲವ ಸುರಿದಾ..
ಮಳೆನೆನಪ ನೀ ಸೆಲೆಬರಿಸಿ
ಇಳೆನಕ್ಕ ಹೂಹಸಿರು ಬಿರಿದಾ..
- samna
03 Mar 2020, 07:08 am
ಬಿರುಗಾಳಿಯ ಜೊತೆ ಹೋರಾಡಿ ನಾ ಸ್ಥಿರವಾಗಿ ನಿಂತಿರುವ ಹೂ ಬಳ್ಳಿಯು!!
ನಿನ್ನಾಸೆ ಮಲ್ಲಿಗೆಯ ಮೊಗ್ಗನ್ನು ಹೊತ್ತು
ಬಯಸಿ ಬಂದಿರುವೆ ನಿನ್ನ ಆಸರೆಯ!!
ಅಂಗೈಯ ಚಾಚಿ ನೀ ಬರಸೆಳೆದುಕೋ
ನಾ ಕಾದಿರುವೆ ನಿನ್ನ ಬಿಸಿ ಅಪ್ಪುಗೆಗೆ!!
ನೀ ಒಲವಿಂದ ಮುತ್ತಿಕ್ಕಿ ಮುದ್ದಿಸಲು
ಮೊಗ್ಗರಳಿ ಹೂವಾಗಿ ಘಮಿಸುವುದು!!
ನಿನ್ನ ಪ್ರಾಯದ ಇಬ್ಬನಿ ಸೋಕಿರಲು
ನನ್ನ ಕೊರಳು ನಿನ್ನ ಬಳಸ ಬಂದಿಹುದು!!
ನಿನ್ನ ಸುತ್ತ ನಾ ಹಬ್ಬಿ ನನ್ನನ್ನು ನೀ ತಬ್ಬಿ
ಎಂದೆಂದೂ ಜೊತೆಯಾಗಿ ನಗುತಲಿರುವ!!
ಬಿಡದಂತೆ ಬಿಗಿಯಾದ ಅನುರಾಗವಿರಲು
ಬಿರುಗಾಳಿ ಬಂದರೂ ಪ್ರೀತಿ ಸೋಲದು!!
ದೊರೆತಿರುವ ಆಸರೆ ನೆಮ್ಮದಿ ತಂದಿರಲು
ಎಂದೆಂದೂ ಅಗಲುವ ಮಾತು ಬರದು!!
- ಪಿ.ಜಿ.ಜ್ಯೋತಿ
02 Mar 2020, 10:12 pm
ಎತ್ತ ಹೋದೆ ಎನ್ನ ಮುತ್ತಿನ ಗಣೆಕಾರ ಹೊತ್ತೊಯ್ಯಾ
ಇತ್ತ ಸಿಕ್ಕಿನ ಕತ್ತಲ ಬಲೆಗ/ರನ್ನಗೆಣೆಯ
ಹೊತ್ತು ಮುಳುಗ ಹೊತ್ತಿನ ಒಳಗ
- samna
02 Mar 2020, 11:55 am
ದಿಟಬಾಳ ಅರ್ಥದ ಗೆಲುವ ಹರಸಿ
ಮಠಕೆ ಬಂದವರು ದಿಕ್ತಟ ಊರೂರ ದಾಟೀ॥॰॰
ಕಟ್ಟಳೆ ಮೀರದೆ ಕಟ್ಟುನಿಟ್ಟ ನಡೆಸಿ
ವಟವೃಕ್ಷ ನೆರಳಿಗೆ ತಳೆದವರು ಮೊಳಕೆನಾಟೀ॥॰॰
ಗುರು ಪಂಚಾಕ್ಷರಿ ಇನಕಿರಣದಲಿ
ಅರಳುಗಟ್ಟಿಸಿಕೊಂಡವರು ಎದೆಮೊಗ್ಗ ಕ್ಷಾರ॥॰॰
ಅರಿವೆಂಬ ಸತ್ಯ ಸಾಕ್ಷಾತ್ಕಾರದಲಿ
ಎರಗುತ ಪದತಲಕೆ ಕಂಡವರು ಸಂಸ್ಕಾರ ॥॰॰
ಕಟ್ಟಿಗೆಯ ಸೀಳಿ ಕುಟ್ಟಿಸಿ ಭತ್ತವನು
ಭಾರಡಕಿ ಉಣಬಡಿಸಿ ದಾಸೋಹ ಕೃಪಾಕರ॥॰॰
ಗಟ್ಟಿಗೊಳ್ಳತ ಗೈದವರು ಕಬ್ಜವನು
ಕುಪ್ಪಳಿಸಿ ಕುಣಿದದ್ದು ನೆನಪೀಗ ಹಿತಕರ॥॰॰
ರನ್ನದ ಕೆಳೆಯರ ಅನ್ನದ ಒಡೆಯರ
ಚೆನ್ನೇಶ ನೆಲೆವೀಡು ಎದೆಮನದ ಹೊನ್ನರಳಿ॥॰॰
ಜ್ಞಾನಹಸಿವನೀಗಿ ಬದುಕ ಕಟ್ಟಿತೆಲ್ಲರ
ಕೊನರಿಟ್ಟಿದೆ ಕಲ್ಮಠ ಚಂದ್ರಶೇಖರ ಜೊನ್ನರಳಿ॥॰॰
- samna
02 Mar 2020, 11:42 am
ಜವಾಬ್ದಾರಿಗಳು ಬೆನ್ನೇರಿ ಬೇತಾಳನಂತೆ
ಕಾಡುತ್ತಿರುವಾಗ ಕನಸಿನ ಕೈ ಹಿಡಿವುದು
ಹೇಗೆ, ಪ್ರತೀ ಹೆಜ್ಜೆಗೂ ಹೊಸತೊಂದು
ಸವಾಲು ಉದ್ಭವಿಸಿದಾಗ ಉತ್ತರ
ಹುಡುಕುವುದಾದರೂ ಹೇಗೆ!
ಆಗಸದಿ ತಾರೆಗಳ ನೋಡಿ
ನಗುವಷ್ಟರಲ್ಲಿ ನಿಂತ ನೆಲವು ಕುಸಿದು
ಹೋದರೆ ಪಾದವೆಲ್ಲಿ ಇಡುವುದು
ಹೆಜ್ಜೆಗಳ ಭಾರ ಹೇಗೆ ಹೊರುವುದು!
ಆಸೆ ಆಕಾಂಕ್ಷೆಗಳಿಗೆ ತಾವಿಲ್ಲ ಇಲ್ಲಿ
ಕೋಪ ತಾಪಗಳಿಗೆ ಉಳಿವಿಲ್ಲ ಇಲ್ಲಿ
ಕಣ್ಣ ಹನಿಯ ಒರೆಸುವ ಕೈ ನಂಜಾಗಿ
ಮಡಿದಾಗ, ಮಿಡಿವ ಹೃದಯ ನಾಳೆಗಳ
ಚಿಂತೆಯಲ್ಲಿ ಬಡಿತವನ್ನು ಮರೆತಾಗ!
ನನ್ನವರೆನ್ನುವವರ್ಯಾರಿಲ್ಲಿ ನೊಂದ
ಮನಕೆ ಉಸಿರುಗಟ್ಟುವಂತೆ ಒಲವ
ಚಿತೆಗೆ ಬೆಂಕಿ ಹಚ್ಚಿದಲ್ಲಿ? ನಂಬಿಕೆಯ
ನೆಂಟಸ್ತಿಕೆ ಏತಕಿಲ್ಲಿ ಸ್ವಾರ್ಥದಿಂದ ಹಗ್ಗ
ಎಣೆದು ಕೊರಳಿಗಾಕಿ ಕೊಲ್ಲುವಲ್ಲಿ!
ಬಿಂಕದ ಬದುಕಿಗೂ ಸುಂಕ ಸಲ್ಲಿಸಬೇಕಾದರೆ ಉಳಿಗಾಲವೆಲ್ಲಿ ನೋವು ನಲಿವುಗಳ ನಿತ್ಯ ದೊಮ್ಮರಾಟದಲ್ಲಿ!!
- ಚುಕ್ಕಿ
01 Mar 2020, 10:18 pm
ಒಬ್ಬಳನ್ನು ನೋಡಿದ ತಕ್ಷಣ ಮನಸ್ಸಲ್ಲಿ ಭಾವನೆಗಳ ಅಲೆದಾಟ ಅಲೆದಾಡುವ ಮನಸುಗಳು ಒಬ್ಬಳನ್ನು ನೋಡಿದ ತಕ್ಷಣ ಅವಳನ್ನು ಇಷ್ಟಪಡುತ್ತೇವೆ ನೋಡಿದ ತಕ್ಷಣ ಹುಟ್ಟುವ ಪ್ರೀತಿಯು ಒಂದು ನಿಜವಾದ ಪ್ರೀತಿನೆ
ಅನು
- THALVAR HANUMANT
01 Mar 2020, 10:01 pm
ನನ್ನ ಕತ್ತಲೆಯ ಬಾಳಲ್ಲಿ
ಹೊತ್ತಂದು ಹೊಂಬೆಳಕ ಹಚ್ಚಿಟ್ಟು
ಹೋದವಳ್ಯಾರ?॥॰॰॰॰
ಹಚ್ಚಿಟ್ಟ ಬೆಳಕಲ್ಲಿ ಭಿತ್ತಿಯ
ಬಚ್ಚಿಟ್ಟಿರಬಹುದೆಂದು ಹುಡುಕುತ್ತಲಿಹೆ
ನನ್ನೊಳಡಗಿದ ಅವಳ್ಯಾರ?॥॰॰॰॰
ನನ್ನ ತಬ್ಬಲಿ ಬದುಕಲ್ಲಿ
ಮಬ್ಬುಗತ್ತಲ ಕಪ್ಪುಮೋಡ ಕರಗಿಸಿ
ತಬ್ಬಿ ಮಳೆಬಿಲ್ಲಿಟ್ಟು ಹೋದವಳ್ಯಾರ?॥॰॰॰॰
ದಿಕ್ಕು ದೆಸೆ ತಿಳಿಯದಲ್ಲಿ
ಪ್ರೀತಿಕಡಲ ಹರಿಸಿ ದೋಣಿಮಾಡಿ
ದಡಕಚ್ಚಿ ಹೋದವಳ್ಯಾರ?॥॰॰॰॰
ತುಂಬಿದೆದೆಯ ಮಾತಮಲ್ಲಿ
ನಂಬಿಗೆ ಅಗೆದು ಮೊಗೆದಷ್ಟು ತುಂಬಿ
ನಗೆಚುಕ್ಕಿ ಆದವಳ್ಯಾರ?॥॰॰॰
ಹುಡುಕುತಿಹೆ ಏಕಾಂತದಲಿ
ಕುಳಿತು ಒಬ್ಬನೇ ಪಿಸುಗುಟ್ಟುತ
ಅವಳೇ ಪ್ರೀತಿಯೇನ?॥॰॰॰॰
- samna
01 Mar 2020, 07:17 pm
ಯಾರನ್ನಾದರೂ ಪ್ರೀತಿಸುತ್ತೇನೆ ಅನ್ನುವ ಬದಲು, ಇಷ್ಟ ಪಡುತ್ತಿದ್ದೇನೆ ಅನ್ನುವುದು ಸೂಕ್ತ. ಯಾಕ್0ದ್ರೆ ಪ್ರೀತಿ ನೋಡಿದಾಕ್ಷಣ ಹುಟ್ಟುವುದಿಲ್ಲ. ಎಲ್ಲ ರೀತಿಯಿ0ದಲೂ ಅರ್ಥ ಮಾಡಿಕೊ0ಡಮೇಲೆ ಪ್ರೀತಿ ಹುಟ್ಟುತ್ತದೆ.
ಇಂತಿ ಮಲ್ಲೇಶ್
- mallesh
01 Mar 2020, 07:10 pm
#ನಿಷ್ಠೆಜನರ ಕೆಟ್ಟೆವೆನಿಸಿ
ಕರಡಿಯ ಕುಣಿಸಿದನೋ ತೈತಕ ಕರಡಿಯ
ಕುಣಿಸಿದನೋ ॥ऽऽऽ
#ಭೇಧವನೆ ಬಗೆದಿರಿಸಿ
ಮೋಹಿತನೀತ ಲೋಲುಪನಾಗಿ
ವೇಷವ ತೊಟ್ಟನೋ ॥ऽऽऽ
#ಒಕ್ಕೊರಲ ಕತ್ತಹಿಸುಕಿ
ಕುರಿಮಂದೆಯ ಮಾಡಿ ಒಡೆದು
ಗಾಧೆಯ ಆಳಿದನೋ॥ऽऽऽ
#ಸಂಸ್ಕೃತಿ ಗರ್ಭ ಬಗೆದು
ರೊಕ್ಕದಾಸೆಗೆ ನೆಲದುಸಿರ ನಿತ್ಯವೂ
ಕೊಲ್ಲತಿಹನೋ॥ऽऽऽ
- samna
01 Mar 2020, 04:45 pm