Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನದೇ ನೆನಪಲ್ಲಿ ನಿಶಾಚರಿ ನಾನಿಲ್ಲಿ...

ನನ್ನ ವೃತ್ತಿ ಪ್ರಪಂಚ ಬೇರೆಯೇ ಇದ್ದರೂ..
ನಿನ್ನ ಕುರಿತು ಗೀಚಿತ್ತಾ
ಲೇಖಕನೇ ಆಗಿ ಬಿಟ್ಟಿರುವೆ..!!
ಪದಗಳನ್ನು ಹುಡುಕಬೇಕೆಂದೇನಿಲ್ಲ‌
ಅಕ್ಷರಗಳೆಲ್ಲವು ನಾಜುಕಾಗಿ
ಬಂದು ಸೇರುತ್ತಿವೆ ನನ್ನ
ಬರವಣಿಗೆಯಲ್ಲಿ.....
ಎಮ್.ಎಸ್.ಭೋವಿ...✍️
.
.
.
..
..
..
..
.
.
.
.

- mani_s_bhovi

30 Jun 2024, 09:25 pm

ಪ್ರೀತಿ ಮಾಯೆ

ನಾ ಇದ್ದೆ ಶಿಲೆಯಂತೆ
ನೀ ಬಂದೆ ಅಲೆಯಂತೆ
ನಮ್ಮಿಬ್ಬರ ಸ್ನೇಹ ಬೆಳೆದಂತೆ
ನೀ ಹೋದೆ ಎಂದಿನಂತೆ
ನನಗಾಯಿತು ನಿನ್ನದೇ ಚಿಂತೆ......


ನನ್ನ ತಾಯಿ ಕೊಟ್ಟಳು ನನಗೆ ಜನುಮ
ನನ್ನನ್ನು ಮೆಚ್ಚಿದವಳು ಪ್ರೇಮ

ಆಕಾಶದಲ್ಲಿ ಇರುವುದು ನಕ್ಷತ್ರ
ನಮ್ಮಿಬ್ಬರ ಪ್ರೀತಿ ಪವಿತ್ರ


ಮರದಲ್ಲಿರುವ ಎಲೆಯು ಚಂದ
ನನ್ನ ಮುಖದಲ್ಲಿ ನಗುವಿರಲು ಕಾರಣ ನಿನ್ನ ಅಂದ


- Shivu Shetty

27 Jun 2024, 11:38 pm

ನಾ ಕಂಡ ಜೀವನ

ನಾಲ್ಕು ಗೋಡೆ ಮದ್ಯೆ ನನ್ನ ಜನನ
ತಂದೆ ತಾಯಿ ಪ್ರೀತಿಯಲ್ಲಿ ಕಂಡೆ ನಾ ಪಾವನ
ನಾಲ್ಕು ಜನ ಹೆಗಲ ಮೇಲೆ ಸಾಗುವವರೆಗೆ ಮಾಡುವೆ ನಾ ಪಯಣ
ಇಂದು ಅವಮಾನ ಮಾಡಿದವರು
ಮುಂದೆ ಒಂದು ದಿನ ಸನ್ಮಾನ ಮಾಡುವವರಿಗೂ
ಮಾಡುವೆ ಜೀವನ ಇಲ್ಲಿಗೆ ಸ್ವಾರ್ಥಕ ನನ್ನ ಜೀವನ

- Manju rolli

27 Jun 2024, 06:39 am

ಆನ್ಲೈನ್ ಪ್ರೇಮಿ

ಅಪರಿಚಿತರ ರೀತಿ ಆದ
ನಮ್ಮಿಬ್ಬರ ಭೇಟಿ
ಮನಸಿನ ಭಾವನೆಗಳು ಬೆಸೆಯುತ್ತಿವೆ
ಸ್ನೇಹ ಎಂಬ ಸುಂದರ ಸಮುದ್ರವ ದಾಟಿ
ನನ್ನ ನೀನು ಸಣ್ಣ ಮಗುವಿನಂತೆ
ಅಳಿಸುತ್ತಿರುವೆ ನನ್ನ ಹುಚ್ಚುತನವ ಚಿವುಟಿ



ಒಮ್ಮೆ ಹೇಳು ನೀ ನನ್ನ ಮನವ ಗೆದ್ದ
ಮುಗ್ದ ರಾಕ್ಷಸಿ
ಹೊರಡಲು ಸಿದ್ದವಾಗಿರುವೆಯಾ
ನನ್ನೆಲ್ಲ ಕನಸು ಆಸೆಗಳ ನಿರ್ಲಕ್ಷಿಸಿ ☹️

- Mallu Patil

22 Jun 2024, 12:00 am

ಕೇವಲ ಮನುಷ್ಯ

ಹೃದಯವ ನಂಬಿ ದೋಣಿ ಏರಿದೆ..
ನಡು ನೀರಿನಲ್ಲಿ ಹೃದಯ ನಿಂತಿತು..
ದೋಣಿ ಮುಳುಗಿತು!

- Naveen

21 Jun 2024, 11:39 pm

ಕವನ ವಿಶಾಲ ಹೃದಯ.

..
ನನ್ನ ಸೌಭಾಗ್ಯದ ಸಿರಿ ನೀವು,
ಯಾರಿಗೂ ಕೇಡನ್ನು ಬಯಸದ ಹೃದಯ ನಿಮ್ಮದು.
ನನ್ನ ಮೇಲೆ ಕೋಪಿಸಿಕೊಳ್ಳದ ದೇವರು ನೀವು,
ನಿಮ್ಮಲ್ಲಿ ಕಂಡಿಲ್ಲ ಒಂದು ದೋಷವು ನನಗೆ.

ನಾ ಹೃದಯ ಚಿಪ್ಪಲ್ಲಿ ಬಚ್ಚಿಟ್ಟು ಪೂಜಿಸುತ್ತಿರುವೆ ನಿಮನ್ನ,
ಜ್ವಾಲಾಮುಖಿಯೂ ಸುಡಲಾಗದು ನಿಮ್ಮಾ ಮೇಲಿನ ಪ್ರೀತಿಯನ್ನು ನನ್ನಾ ಉಸಿರಿರುವ ತನಕ.
ಯಾವ ಜನ್ಮದ ಸಂಬಂಧವೋ ನೀ ನನಗೇ,
ಈ ಜನ್ಮದಲ್ಲಿ ಸಿಕ್ಕ ನಿಧಿಯು ನೀವೂ.
ನನ್ನಾ ಕೋಪಕ್ಕೆ ಬೇಸರಗೊಳ್ಳದ ನಿಮ್ಮ ಮನಸ್ಸು,
ಹೊಳೆಯುವ ಸಿಂಧೂರದಂತೆ.
ಮಾನವ ರೂಪದ ದೇವರು ನೀವೂ,
ಶಿಷ್ಟಾಚಾರದ ಹಾದಿಯಲ್ಲಿ ನಡೆಯುವ ಹೃದಯ ನಿಮ್ಮದು.
ನನ್ನೆಲ್ಲ ಹೃದಯ ಬಡಿತ ನೀವಲ್ಲವೇ,
ಗಡಿಯಾರದ ಮುಳ್ಳಂತೆ ನಿಮ್ಮ ನೆನಪುಗಳು ಸವೆಸುತಿವೆ ನನ್ನಾ ಜೀವವ.
ನನ್ನ ನೋವು ನಲಿವಿನಲಿ ಜೊತೆ ಗಿರುವೆ,
ನನ್ನ ನಗು ಮುಖವ ನೋಡಲು ಸದಾ ಕಾಯುವೆ.
ಹೆಪ್ಪುಗಟ್ಟಿರೋ ಹೃದಯ ತಿಳಿಯಾಗದೆ ಹರಿಯುವುದೇ ನಗುವಿನ ಕಾಲುವೆ..

- nagamani Kanaka

20 Jun 2024, 11:22 am

.ಮನಸ್ಸಿನ ಮಾತು.

ನಿಗೂಢವಾಗಿದೆ ನಿನ್ನ ಪ್ರೀತಿಯ ದಾರಿ
ಹೇಗೆ ಬಿಡಿಸಲಿ ಅದರ ಸರಪಳಿ
ಆದರೂ ತೂರು ನೀ ನನ್ನವಾಳೆಂಬ ಪ್ರೀತಿಯ ಪರಿ
ಈ ಜೀವ ಕಾದು ಕುಳಿತಿದೆ ನಿನಗಾಗಿ
ಮೌನಿ...❤️


.ಭಾವನೆಗಳ ಭವಣೆ.

ಮುಗಿದು ಹೋದ ಅಧ್ಯಾಯ ನೀನು...
ಮರಳಿ ಬರುವೆ ಎನ್ನುವ ಆಸೆಯೂ ನನಗಿಲ್ಲ...
ನೀ ಬಂದರೂ ಪ್ರೀತಿಸುವ ಮನಸ್ಸು ಉಳಿದಿಲ್ಲ...

ಏಕಾಂಗಿ..?

- Bhiresh Pujari

20 Jun 2024, 12:11 am

ಪಿಸು ಮಾತುಗಳು ಜೊತೆ ಬರಹದ ಮೆರವಣಿಗೆ

ಅದೇಷ್ಟೋ ಆಕರ್ಷಣೆಗಳ ನಡುವೆಯೂ ಈ ಕಣ್ಣು ಅವನನ್ನೇ ಹುಡುಕುವುದು..!!✨ ಹೆಣ್ಣಿನ ಮನಸ್ಸು ಚಂಚಲ ಎಂದು ತಿಳಿದರು ಈ ಹೃದಯ ಅವನಿಗಾಗಿ ಮಿಡಿಯುವುದು ಈ ನನ್ನ ಕೈ ಬಳೆಗಳು ಅವನ ಸ್ಪರ್ಷಕ್ಕಾಗಿ ಕಾಯುವುದು ?ಕಣ್ಣಿನ ಎಳೆತಕ್ಕೆ ಸೋತು ತಪ್ಪೋ ಸರಿಯೋ ಎಂಬ ಹರಿವು ಸಹಾ ಇಲ್ಲದ ಮನಸಿಗೆ ?ಇದೆಲ್ಲ ನೋಡಿದರೆ ಒಮ್ಮೆ ಮನವೇ ಕಲಕುವಾಗೆ ಅನಿಸಿದರೂ? ಆ ದಿನವೇ ಒಂದು ಮಾಯಜಾಲದಂತೆ ಕಾಣುತ್ತಿತ್ತು.☺️ಯಾರನ್ನೂ ಸಹ ಕಣ್ ಎತ್ತಿ ನೋಡದ ಆ ಕಣ್ಣು ?️ಆ ದಿನ ಮಾತ್ರ ಮನದಲಿ ಯಾವುದೇ ಗೊಂದಲವಿಲ್ಲದೆ ಮನಸೋತು ಮನಸಾರೆ ಕಣ್ಣಿನೊಂದಿಗೆ ಕಣ್ಣಿನ ಸ್ಪರ್ಶವಾದ ಗಳಿಗೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.?... ಯಾರು ಏನು ಎಂಬ ಸಣ್ಣ ಸುಳಿವು ಇಲ್ಲದೆ ಮನಸಿಗೆ ಇಷ್ಟೆಲ್ಲಾ ಇಷ್ಟವಾದ ನಿಷ್ಕಲ್ಮಶ ಕಣ್ಣಿನ ನೋಟ ?ಆ ಮುಗ್ಧ ನಗು☺️.ಕಣ್ಣಿನ ಬಾಣಕ್ಕೆ ಕರಗಿ ನೀರಾಗಿ ಒಂದೊಮ್ಮೆ ಮನದಲಿ ಯಾವುದನ್ನು ಇಟ್ಟುಕೊಳ್ಳದೇ... ಇಷ್ಟೆಲ್ಲಾ ಆಸೆಗಳ ನಂಬಿಕೆ....? ಅಂತರಂಗಲಾಳದ ಮಾತು ಒಂದೇ ನಾ ಇಸ್ಟ ಪಟ್ಟ ಮೊದಲ ಕೊನೆಯ ವ್ಯಕ್ತಿಯು ನೀ ಆಗಿರಬೇಕೆಂಬು... ?ಪುಟ್ಟ ಸಮಯದಲ್ಲಿ ಸಿಕ್ಕ ಅಕ್ಕರೆಯ ಅಪರಂಜಿ.?..ಜೊತೆ ಕಳೆದ ಪ್ರತಿ ಕ್ಷಣವೂ ಹಬ್ಬದ ವಾತಾವರಣ.?... ಸ್ಪರ್ಶವೂ ಹೊಸ ರೆಕ್ಕೆ? ಬಂತಾಗಿದೆ. ಪ್ರತಿ ಕ್ಷಣವೂ ನೋಡಲು ಮಾತನಾಡಲು ಹಂಬಲಿಸುವ ಜೀವ ನನ್ನದು?... ಪದಗಳೇ ನಿನ್ನನ್ನು ವರ್ಣಿಸಲು...??


ಇಂತಿ
ಆರಾಧಕಿ

Q

0

- Meghana S

19 Jun 2024, 10:57 pm

ಪ್ರಾರ್ಥನೆ

ನನ್ನ ವಾಸ್ತವ ಲೋಕದಿಂದ
ಸಾಕಷ್ಟು ದೂರವಿರುವ
ನಿನಗಾಗಿ ನನ್ನ ಪ್ರಾರ್ಥನೆ ಒಂದೇ..

ಕಲ್ಪನೆಯಲ್ಲಿ ನಮ್ಮ ಆತ್ಮಗಳು ಒಂದಾಗಿವೆ..

ನಮ್ಮ ಪ್ರೀತಿ ಅಲ್ಲಿ ನೆಲೆಯಾಗಿದೆ..

ಬಾರದಿರುವ ನಾವು ವಾಸ್ತವಕ್ಕೆ...
ಹೀಗೆ ಇರುವ ಎಂದೂ ಜೊತೆಗೆ.....

..
..
..
..
..
..

✍️ತನುಮನಸು

- Tanuja.K

19 Jun 2024, 05:56 pm

ನೆನಪು

ಕನಸಲೂ ನೀನೆ ಮನಸಲೂ ನೀನೆ
ಕನ್ನಡ ಪ್ರತಿಬಿಂಬದಲ್ಲೂ ನೀನೆ
ಇಲ್ಲಿ ನೋಡಿದರೂ ನೀನೆ ನೋಡಿದರು ನೀನೇ
ಏಕೆ ಕಾಣುವೆ ನೀ ನನ್ನನು ಹೀಗೆ

ಕಾಲೇಜಿನ ಕ್ಲಾಸ್ ರೂಮಲ್ಲಿ ಸುಮ್ಮನೆ ಇರುತ್ತಿದ್ದೇನೆ ನೀನು
ನಿಗೇಕೆ ಕಾಡುತ್ತಿರುವೆ ಹೀಗೆ ನನ್ನ ನು
ಅಂದಿನ ದಿನಗಳೆಲ್ಲ ನೆನಪಾಗಿ ಉಳಿದಿವೆ
ದಿನಗಳ ನೆನಪೇ ಬೇಡವಾಗಿದೆ

ಬಾಲ್ಯದ ಜೀವನವೇ ಚಂದ
ವಯಸ್ಸಾದಂತೆ ಬರೀ ಚಿತ್ರ ಚಿತ್ರ
ವಿಚಿತ್ರ ಅನುಭವಗಳುತ್ತಿಗೆ ಸಾಗಿವೇ ಜೀವನ
ಅದರಲ್ಲಿ ಇಲ್ಲದಿರುವುದೇ ಬೇಸರ

ಒಂದು ತಿಳಿಯಲಿಲ್ಲ ಮನಸ್ಸಿಗೆ ನೀನೆಷ್ಟು ಪ್ರೀತಿಸಿದೆ ಎಂದು
ಇಂದ ಬಯಸುತ್ತಿರುವೆ ನೀ ನನಗೆ ಸಿಗಬೇಕೆಂದು
ಕಾಲ ಮಿಂಚಿಹೋಗಿದೆ ಅದು ಎಂದಿಗೂ ನೆರವೇರದು
ನೆನಪುಗಳೇ ಶಾಶ್ವತ

- RoopaGowtham

17 Jun 2024, 02:56 pm