Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಗಲಿಕೆಯ ಶಿಕ್ಷೆ...!!

ಜನ್ಮ ಕೊಟ್ಟೆ
ಜೀವ ಕೊಟ್ಟೆ
ಜೀವನ ಏನೆಂದು
ಕಲಿಸಿ ಕೊಟ್ಟೆ
ಸ್ನೇಹ ಪ್ರೀತಿ
ಎಲ್ಲವೂ
ನೀ ಕೊಟ್ಟ ಬಿಕ್ಷೆ...!
ನನ್ನಗಲಿ ಕೊಟ್ಟೆ
ನೀ ಯಾಕೆ ಈ ಶಿಕ್ಷೆ...!!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

27 Feb 2020, 11:08 pm

ನೋವಿನ ರಾತ್ರಿ

ಚುಕ್ಕಿ ಚಂದ್ರಮ
ನಕ್ಕ ರಾತ್ರಿ
ಮನವು ಬಿಕ್ಕಿ
ಅತ್ತ ರಾತ್ರಿ
ನೀನಾದೆ ಮುಗಿಲು
ಮನದಲ್ಲಿ ದಿಗಿಲು
ನೋವೊಂದೆ ಮಿಗಿಲು..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

27 Feb 2020, 11:03 pm

ಮನದ ಕನ್ನಡಿ

ಹಾಯಾದ ಸಂಜೆಯಲಿ
ಹಿಡಿದಿಹೆನು ಲೇಖನಿ,
ಬರೆಯಬೇಕೆಂದಿರುವೆ
ಸುಂದರ ಶಾಯರಿ.
ಅರಿಯದೆ ಗೀಚುತಿರುವೆ
ಸಾಲು ಸಾಲು ಸಾಲುಗಳನ್ನು,
ಮನದೊಳಗೆ ಹುದುಗಿರುವ
ನೋವು ನಲಿವುಗಳೆಲ್ಲ
ಬಿಳಿ ಹಾಳೆಯ ಮೇಲೆ
ಬಣ್ಣ ತಳೆದುಕೊಂಡಿಹುದು,
ನನ್ನೆದೆಯ ಕನ್ನಡಿಯ
ನಾನೆ ಕಂಡು ಅಚ್ಚರಿಗೊಂಡು
ನನ್ನ ಮೊಗದ ಮೇಲೆ
ನನಗೆ ಅರಿವಾಗದಂತೆ
ಮಾಸದ ನಗು ಮೂಡಿದೆ.!

- ಅಕ್ಷತ

27 Feb 2020, 07:40 pm

ನಿರುದ್ಯೋಗಿಯ ಪಾಡು

ಬೆಳಗಿನ ಸೊರಗಿನಲ್ಲಿ ಎದ್ದು
ನೆನ್ನೆಯ ಚಿಂತೆಯ ಹೋತು
ಏಳಲು ಮನಸಿಲ್ಲದೆ ಹಾಸಿಗೆ ಸರಿಸಿ
ಆರಂಭ ನನ್ನ ದಿನದ ಓಟ.

ಹಾಲು ತರಲು ಒಂದು ಬಾರಿ
ತಿಂಡಿ ತರಲು ಒಂದು ಬಾರಿ
ದಿನಸಿ ತರಲು ಒಂದು ಬಾರಿ
ಹೀಗೆ ಅಂಗಡಿಗು ಮನೆಗೂ ಹಾರಿ ಹಾರಿ
ದಿನದ ಆಟ ಶುರು ರೀ.

ಆಟ ಮುಗಿಯಲ್ಲು ಆನೊಂದು ಗಂಟೆ
ಆನೊಂದರಲ್ಲಿ ಹಲ್ಲು ಉಜ್ಜಿ ಮುಖ ತೊಳೆದು
ಅಂಕಲ್ ಅಂಗಡಿಯ ತಿಂಡಿ ತಿಂದು
ಶುರು ಈ ಸೋಮಾರಿಯ ತುತ್ತೂರಿ.

ಹಗಲೆಲ್ಲ ಟಿವಿಗು ಹಾಸಿಗೆಗೂ ನಾ ಸ್ವಂತ
ಹೇಗೋ ಸಮಯವ ಸರಿಸಿ ಬಂತು ಸಂಜೆಯ ಹಂತ ಮತ್ತೆ ಶುರು ಅಂಗಡಿಗೆ ಹೋಗುವ
ಅಟದ ಕಾಟ.

ಕಿರಣ್ ಕ್ರೀಸ್

- Kris

27 Feb 2020, 08:22 am

ಗಜಲ್( ಮಿಲನ)

ಗಜಲ್

ಹೇಳು ನೀ, ನನ್ನನ್ನು ಕಾಡದೇ ಇದ್ದ
ದಿನಗಳು ಯಾವವು? ಎಂದು
ಅದಕ್ಕೆಂದೇ ನಾನು ನನ್ನ ಮನೆಯ
ಮುಂಬಾಗಿಲಿಗೆ ತೋರಣ ಕಟ್ಟಿ
ಕಾಯ್ದು ಕುಳಿತಿದ್ದೇನೆ,
ಕೇಳಲು ಆತುರ ,ನಿನ್ನ ಮಗ್ಧ ನಿಷ್ಕಲ್ಮಶ
ಮಾತುಗಳಿಗಾಗಿ ನನ್ನ ಕಿವಿಗಳೆರಡನ್ನು ಜೋತು ಬಿಟ್ಟಿದ್ದೇನೆ.

ಹೇಳು ನೀ, ನನ್ನನ್ನು ಎದೆಗಪ್ಪಿ ತೋಳು ಗಟ್ಟಿಯಾಗಿ
ಹಿಡಿದ ದಿನಗಳು ಇನ್ನೆಷ್ಟು ಉಳಿದಿವೆ? ಎಂದು
ಎದೆಯ ಬಡಿತದ ಹಿಂದೆ ಅಡಗಿದ ಅದೆಷ್ಟೋ ಜನ್ಮಗಳ
ನಮ್ಮಿಬ್ಬರ ಮಿಲನದ ಮಾತುಗಳು ಇನ್ನೂ ಕಿವಿಯಲ್ಲಿ
ಪ್ರೇಮ ಪಲ್ಲವಿಯನ್ನೇ ಸೃಷ್ಟಿಸುತ್ತಿವೆ,
ಯಾರೋ ಆಡಿದ ಬಿರುನುಡಿಗಳಿಗೆ ತಲೆಕೆಡಿಸಿಕೊಳ್ಳದ
ನಿನ್ನ ನಿಷ್ಕಪಟದ ಸ್ವಭಾವ ನನ್ನನ್ನು
ಇನ್ನೂ ಮಂತ್ರ ಮುಗ್ಧನನ್ನಾಗಿ ಮಾಡಿದೆ.


ಹೇಳು ನೀ, ನನ್ನನ್ನು ನಿನ್ನ ತೊಡೆಯ ತೊಟ್ಟಿಲ ಮೇಲೆ
ಮಲಗಿಸಿಕೊಂಡು ನವಿರಾಗಿ ತಲೆ ಸವರಿದ
ದಿನಗಳು ಇನ್ನೂ ಎಷ್ಟು ಉಳಿದಿವೆ?ಎಂದು
ಕಡು ಕಷ್ಟಗಳು ಮೈ ಸುಡುತ್ತಿದ್ದರೂ  ಮರೆತು ಹಾಯಾಗಿ ಮಲಗಿದ
ದೃಶ್ಯ ಇನ್ನೂ ನನ್ನ ಕಣ್ಮುಂದೆ ಕಟ್ಟಿದಂತಿದೆ,
ತಳಮಳವಿಲ್ಲದ, ಗೊಂದಲವಿಲ್ಲದ ನಿನ್ನ ತಾಯ್ತನದ
ವಾತ್ಸಲ್ಯದ ಅಮರತ್ವದಲ್ಲಿ ಮಿಂದೆದ್ದ ನನ್ನನ್ನು
ಪ್ರಶಾಂತ ಸರೋವರದಲ್ಲಿ ಚಲಿಸುವ ದೋಣಿಯನ್ನಾಗಿ ಮಾಡಿದೆ.


ಹೇಳು ನೀ,ನನ್ನನ್ನು ಬಿಳ್ಕೊಡುವಾಗ ಬಿಗಿದಪ್ಪಿ ಹಣೆಯ ಮೇಲಿಟ್ಟ
ಹೂ ಮುತ್ತುಗಳು ಇನ್ನೆಷ್ಟು ಉಳಿದಿವೆ ಎಂದು?
ನನ್ನನ್ನೇ ನಂಬಿ ಬಂದ ನೀನು, ದೇವನು ಸೃಷ್ಟಿಸಿದ ಮಾಯಾಜಾಲದ
ಸಪ್ತಪದಿ ತುಳಿದ ಗಳಿಗೆ ಇನ್ನೂ ಮರೆಯದಂತಿದೆ.
ಅವಸರದ ಬದುಕಿನಲ್ಲಿ ದಿವ್ಯ ಸಾನಿಧ್ಯವನ್ನೇ ವಹಿಸುವ
ನಿನ್ನ ಸ್ನೇಹಕ್ಕಾಗಿ ಈಗಲೂ ಕಾಯ್ದು ಕುಳಿತಿದ್ದೇನೆ
ನಿನ್ನ ಬಿಸಿ ಅಪ್ಪುಗೆಯ ನಿಶೆಯುಸಿರನ್ನು ಬಯಸಿ.

                         // ಸುರೇಶ ಜಕಾತಿ.ಜಮಖಂಡಿ//
                               8746086658

- ಸುರೇಶ ಜಕಾತಿ.ಜಮಖಂಡಿ

27 Feb 2020, 05:42 am

ವೈಟ್ ಶಾಲು

ಬಾರನಲ್ಲಿ ಸಿಕ್ಸ್ಟಿ ಗೆ ಅಂತಾರೆ ಕಾಲು
ಅದನ್ನ ಕುಡಿಯೋಣ ಒಬ್ಬನೇ ನಮ್ ಬಾಲು
ಕುಡಿದಾದಮೇಲೆ ಆಗುತ್ತೆ ಅವನಿಗೆ ಮುಕ್ಕಾಲು
ಹೆಚ್ಚುಕಡಿಮೆ ಆಯಿತಂದರೆ ಹೋಚ್ಚಬೇಕು ವೈಟ್ ಶಾಲು

- hanumanaik lamani

26 Feb 2020, 04:28 pm

ಇಂದು ನಾಳೆ ಎಂಬ ಮಾತು

ಇಂದು ನಾಳೆ ಎಂಬ ಮಾತು
ದಿನವ ನೂಕಿತು!!
ಆ ದಿನಗಳೆಲ್ಲ ಮುಂದೆ ಸಾಗಿ
ಬದುಕ ನೂಕಿತು!!

ಇದ್ದು ಇರದ ದೇಹದಿಂದ
ಉಸಿರು ನಿಂತಿತು!!
ಆ ಉಸಿರು ನಿಂತ ಮೇಲೆ
ಹೆಸರು ಮರೆತುಹೋಯುತು!!

ಜೊತೆಗೆ ಬರುತಲಿದ್ದ ನೆರಳು
ಮರೆಗೆ ಸರಿಯಿತು!!
ಮರೆಗೆ ಸರಿದ ಮೇಲೆ
ನನ್ನ ಒಬ್ಬಂಟಿ ಮಾಡಿತು!!

ಬಣ್ಣ ಬಣ್ಣದ ಸುಂದರ
ಬದುಕು ಮಾಸಿದಂತಾಯಿತು!!
ಬದುಕು ಮಾಸಿದ ಮೇಲೆ
ಎಲ್ಲಾ ನಶ್ವರವೇ ಆಯಿತು!!

- ಪಿ.ಜಿ.ಜ್ಯೋತಿ

26 Feb 2020, 09:06 am

*((ನಾನು ಮತ್ತು ನನ್ನ ಅಮ್ಮ))

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ
ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ
ವಿತ್ತವುಳ್ಳವನ ಕುಲ ಎಣಿಸುವುದುಂಟೆ
ಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ
ಅತ್ತೆಮನೆ ಸೇರುವಗೆ ಅಭಿಮಾನವುಂಟೆ
ಬತ್ತಲೆ ತಿರುಗುವಗೆ ಭಯವು ಇನ್ನುಂಟೆ
ಪೃಥ್ವಿಯೊಳಗೆ ನನ್ನ ಸಾಕಿ ಸಲುವುವ ಅಮ್ಮ
ಮರ್ತ್ಯದೊಳನ್ಯ ದೇವರು ಸರಿಯುಂಟೆ ನನ್ನ ಪ್ರೀತಿಯ ಗೆಳೆಯರೇ ನಿಮ್ಮನ್ನು ನೋಡಿ ನನ್ನ ಜೀವನದ ಅತ್ಯಂತ ಸರಳ ನುಡಿ ಇದು ಸರಿಯಾಗಿ ಅರ್ಥ ತಿಳಿದು ಕೊಳ್ಳಿ ಜೀವನ ಸಾರ್ಥಕ ಬದುಕು ಸಾರ್ಥಕ. ಶಶಿ ಯಶ್.

- shashiyash

25 Feb 2020, 11:12 pm

ಹೆಡ್ಡ Loves ದಡ್ಡಿ

ನಿನ್ನಿಂದ ನಾ
ಒಂಟಿತನವನ್ನ ಕಲಿತೆ,
ನಿನ್ನ ಮೇಲೆಯೇ
ಬರಿತಿದ್ದೆ ಕವಿತೆ...

ನನ್ನ ಕವಿತೆಗಳನ್ನ ಅರ್ಥ
ಮಾಡಿಕೊಳ್ಳದಿರೊವಷ್ಟು ದಡ್ಡಿ ನೀನು,

ನೀನೆಷ್ಟೇ ಬೇಡ ಅಂದ್ರೂ
ನಿನ್ನನ್ನೇ ಪ್ರೀತಿಸುವ ಹೆಡ್ಡ‌ ನಾನು..

- Bheemashi KD

25 Feb 2020, 08:45 pm

ಕಾಡುವ ನೆನಪು

ಕಾಡುವ ನೆನಪು
ಸಿಲುಕಿದೆ ಮನದೊಳು...
ಬಿಡಿಸಲು ಹೋದರೆ
ಸಹಿಸದ ನೋವು.....‌‌‌‌....

ಬಿಕ್ಕುವ ಅಳುವು
ಬಿಗಿದಿದೆ ಕೊರಳನು.....
ತಡೆಯಲು ಹೋದರೆ
ಬರುವುದು ಸಾವು.......

- ಪಿ.ಜಿ.ಜ್ಯೋತಿ

25 Feb 2020, 11:35 am