Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಂಗೈಯ ಬೊಗಸೆಯಲ್ಲಿ
ಚಂದಿರನ ಸರದಿ!!
ಬೆಳದಿಂಗಳ ಸುರಿಸುತ್ತಾ
ಅವನು ನೀಡುತ್ತಾನೆ ವರದಿ!!
ಆ ಮೋಡದ ರಥವೇರಿ
ಅವ ಬರುವನು ಪ್ರತಿ ಬಾರಿ!!
ಮನಸೋತೆನು ಯಾಮಾರಿ
ಬಳಿ ಕರೆದೆನು ಹಠ ಹೂಡಿ!!
ಸನಿಹಕ್ಕೆ ನಾ ಕರೆದರೂ
ಯಾಕಿನ್ನೂ ಬರದಾದನೂ!!
ಕನ್ನಡಿಯ ಉಡುಗೊರೆ ನೀಡಿ
ಅವನಾದನು ನನ್ನ ಜೋಡಿ!!
ಇರುಳಲ್ಲಿ ಜೊತೆ ನಡೆಯುವ
ಸಂಗಾತಿಗೆ ನಾನು ಸ್ವಂತ!!
ಹಗಲಲ್ಲಿ ಪರಿ ಪರಿ ನೆನಪಾಗಿ
ಕಾಡುತಿರುವ ನನ್ನಾತ!!
- ಪಿ.ಜಿ.ಜ್ಯೋತಿ
25 Feb 2020, 11:33 am
ಮನಸು ಕಾಗದದ ಹಾಳೆ
ಬರೆದೆ ನಾ ಪ್ರೀತಿಯ ಓಲೆ!!
ಕನಸು ಕೈಗೂಡಿತು ಅಲ್ಲೇ
ಒಲವಿನ ಭಾಷೆಯ ಬಲ್ಲೇ!!
ಬಾನಿಂದ ಸುರಿದಿರಲು ಮಳೆ
ತಂಪಾದ ಒಡಲಾಯ್ತು ಇಳೆ!!
ನೀ ಕಣ್ಣೆದಿರು ಬಂದ ವೇಳೆ
ಮರೆತೆ ನಾ ನನ್ನಯ ನಾಳೆ!!
ಮನಸಿನ ಆಸೆ ಅರಿತ ಮೇಲೆ
ಹೃದಯ ತಾ ಹಾಡಿತು ನಲ್ಲೆ!!
ಹುಸಿ ಕೋಪವ ನೀ ಬಿಟ್ಟು
ನನ್ನೆದೆಯ ಸೇರಿಕೋ ಬಾಲೆ!!
- ಪಿ.ಜಿ.ಜ್ಯೋತಿ
25 Feb 2020, 11:28 am
ನಿನ್ನ ಬಿಸಿ ಅಪ್ಪುಗೆಯ ಶಾಖಕ್ಕೆ
ನನ್ನ ಪ್ರಾಯದ ಇಬ್ಬನಿ ಕರಗಿತು!!
ನಿನ್ನುಸಿರಲಿ ನನ್ನುಸಿರು ಬೆರೆತು
ನವ ವಂಸಂತಕೆ ತಂಪೆರೆಯಿತು!!
ಎದೆಯ ಬಡಿತವ ಆಲಿಸುತಲಿ
ಕಿವಿಯಾಲೆಯು ಸಂಭ್ರಮಿಸಿತು!!
ನಿನ್ನ ಕೈ ಬೆರಳಿನ ಸ್ಪರ್ಷಕೆ
ಮುಂಗುರುಳು ಚಡಪಡಿಸಿತು!!
ಕಾಲು ಬೆರಳಿನ ತುಂಟಾಟವು
ಹರೆಯವನು ಬಡಿದೆಬ್ಬಿಸಿತು!!
ಉಸಿರಾಟದ ಏರಿಳಿತದಿ
ಆಂತರ್ಯವು ತುಸು ಬಳಲಿತು!!
ನಸು ನಾಚಿಕೆ ಕಣ್ಣೋಟವ
ದಿಕ್ಕರಿಸುತ ಆಹ್ವಾನಿಸಿತು!!
ಬೆವರು ಹನಿಗಳ ಸಮ್ಮಿಲನಕೆ
ಈ ಶೃಷ್ಠಿಯೇ ಸಾಕ್ಷಿಯಾಯಿತು!!
- ಪಿ.ಜಿ.ಜ್ಯೋತಿ
25 Feb 2020, 11:26 am
ರವಿ ಮೂಡುವನು ಬಾನಿನಲ್ಲಿ
ಆ ಮುಂಜಾನೆಯ ಹೊತ್ತಿನಲಿ
ಮಂದ ಬೆಳಕಿನ ಆವರಣದಲಿ
ಸುಂದರ ಪ್ರಭೆಯ ಬಣ್ಣದಲಿ
ರವಿ ನೋಡುವನು ಗಗನದಲಿ
ಎಲ್ಲಿಲ್ಲದ ಪ್ರಕೃತಿ ಗಮನದಲಿ
ಹಕ್ಕಿಗಳ ಚಿಲಿಪಿಲಿ ನಾದದಲಿ
ಸುಂದರ ವನಗಳ ಗುಂಪಿನಲಿ
ಆದಿತ್ಯನ ನೃತ್ಯವು ಆಗಸದಲಿ
ಮುತ್ತಿನ ಹನಿಗಳ ತಂಪಿನಲಿ
ಕೋಗಿಲೆ ಧ್ವನಿಯ ಇಂಪಿನಲಿ
ಬಗೆಬಗೆ ಹೂಗಳ ಕಂಪಿನಲಿ
ಬೆಳದಿಂಗಳ ಆ ಮಂಜಿನ ಆಟವು
ಮನದಲಿ ಸೆಳೆಯುವ ಚಿಲಿಪಿಲಿ ಕೂಟವು
ಇದುವೇ ಮುಂಜಾನೆಯ ನೋಟವು
ಈಗಲೇ ಪತರಂಗಿಗಳ ನೃತ್ಯ ಓಟವು
ಸುಂದರ ಹಕ್ಕಿಗಳ ಗಾನದಲಿ
ಆ ವಿಶಾಲತೆಯ ಬಾನಿನಲಿ
ಮಂಜು ಬೀಳುವ ವೇಳೆಯಲಿ
ಏನಿದು ಸೊಬಗು ಮುಂಜಾನೆಗಿಂದು
ಭುವಿಯಲಿ ಬಿತ್ತೊಂದು ಮಂಜಿನ ಹನಿಯು
ಬಾನಿನಲಿ ಹರಡಿತು ಎಲ್ಲಿಲ್ಲದ ಧ್ವನಿಯು
ಅದಾಯಿತು ತೆನೆಯಲಿ ಸುಂದರ ಇಬ್ಬನಿಯು
ಇಬ್ಬನಿಯಿಂದ ಬೆಳೆಯಿತು ಆ ತೆನೆಯು
ರವಿ ಮೂಡುವನು ಬಾನಿನಲಿ
ಆ ಮುಂಜಾನೆಯ ಹೊತ್ತಿನಲಿ
ಮಂದ ಬೆಳಕಿನ ಆವರಣದಲಿ
ಸುಂದರ ಪ್ರಭೆಯ ಬಣ್ಣದಲಿ
- Akshatha Harish
24 Feb 2020, 10:31 pm
ನನ್ನ ಎದೆಯ ಬೀದಿಯಲ್ಲಿ
ಸಾಲು ಹಣತೆಗಳ ಹಚ್ಚಿ
ನಿನಗಾಗಿ ಕಾದಿದ್ದೆ ಚೆಲುವೆ...
ನೀ ಬರುವ ಮುನ್ನ
ಬೀಸಿ ಬಂದ ತಂಗಾಳಿಯು
ಹಣತೆಗಳ ಆರಿಸಿತು ಒಲವೇ...
- ಪಿ.ಜಿ.ಜ್ಯೋತಿ
24 Feb 2020, 09:09 pm
ಎಲ್ಲೋ ಮರೆಯಾಗಿ ನಿಂತು
ನನ್ನನ್ನು ನೋಡುತ್ತಿರುವ
ಆ ಎರಡು ಕಣ್ಣುಗಳು
ಎಂದಿಗೂ ನನ್ನೆದಿರು ಬರಲಿಲ್ಲ...
ಇಂದಿಗೂ ನಾ ಜೀವಂತವಾಗಿ
ಕಾಯುತ್ತಿರುವೆ...
ಎಂದಾದರೊಮ್ಮೆ
ಆ ಕಣ್ಣುಗಳು
ನನ್ನೆದುರು ಬಂದೇ ಬರುತ್ತವೆ
ಎನ್ನುವ
ಬಲವಾದ ನಂಬಿಕೆಯಿಂದ...
- ಪಿ.ಜಿ.ಜ್ಯೋತಿ
24 Feb 2020, 09:08 pm
ಬಚ್ಚಿಟ್ಟರೂ
ಹುಚ್ಚೆದ್ದು ಕುಣಿವ
ಪ್ರೇಮ.....
ಎದೆಗೆ
ಕಿಚ್ಚಿಟ್ಟು ಹೇಳಿತು
ವಿರಾಮ.....
- ಪಿ.ಜಿ.ಜ್ಯೋತಿ
24 Feb 2020, 09:06 pm
ಸಾವಿರ ಆಸೆಯ ಕನಸಿನ ಜೋಳಗೆ
ಬಗಲಲಿ ಧರಿಸಿದ ಜಂಗಮನು!!
ಬದುಕಿನ ದಾರೀಲಿ ಹೆಜ್ಜೆಯನಿಕ್ಕುತ
ಸಾಗುತ ನಡೆದಿಹ ಸುಂದರನು!!
ಸೂರನು ಕಟ್ಟುವ ಕನಸಿನ ಆಸೆಗೆ
ಗಿಡ ಮರ ಬಳ್ಳಿಯ ಚಾವಣಿಯು!!
ಮೆತ್ತನೆ ಹಾಸಿಗೆ ಬೆಚ್ಚನೆ ಹೊದಿಕೆ
ಭೂ ತಾಯಿಯ ಮಡಿಲೇ ಆಸರೆಯು!!
ಮಾಗಿದ ಬಾಗಿದ ಹಣ್ಣಿದೆ ಕಾಯಿದೆ
ಹಸಿವಿನ ಬಾಧೆಯ ನೀಗಿಸಲು!!
ಬಳುಕಿ ಹರಿಯುವ ಜಲವಿದೆ ನೋಡು
ಬಾಯಾರಿಕೆ ಬಳಲಿಕೆ ಹೋಗಿಸಲು!!
ಚಿಲಿಪಿಲಿ ಹಾಡುವ ಹಕ್ಕಿಯ ಗೆಳೆತನ
ಮರೆಸಿದೆ ಬಾಳಿನ ಒಂಟಿತನ!!
ಆಡುತ ಓಡುವ ಮೃಗಗಳು ಕಲಿಸಿವೆ
ಸುಂದರ ಬದುಕಿಗೆ ಅಧ್ಯಾಯನ!!
ಬೇಸರ ಕಳೆಯಲು ನೇಸರ ಬರುವನು
ಸುಂದರ ಸೃಷ್ಠಿಯ ಅಂದವ ತೋರಲು!!
ಇರುಳಲಿ ಚಂದ್ರನ ಚೆಂದದ ಜೋಗುಳ
ಸುಖ ನಿದ್ರೆಗೆ ಇಲ್ಲ ತೊಂದರೆಯು!!
- ಪಿ.ಜಿ.ಜ್ಯೋತಿ
24 Feb 2020, 09:04 pm
ಸುಂದರಿಯ ನೋಡಲು
ಚಂದಿರನು ಬಂದನು!!
ಸುಂದರಿಗೆ ಮನಸೋತು
ನೋಡುತ ನಿಂತನು!!
ತಾರೆಗಳ ಕರೆಯನು
ಆಲಿಸದೇ ಹೋದನು!!
ಮೋಡದ ಮರೆಯಿಂದ
ನಲ್ಲೆಯ ಕಂಡನು!!
ಮಿಂಚಿತ ತಾಳಕೆ
ಗುಡುಗಿನ ಮೇಳವು!!
ಚಂದಿರನ ಎದೆಯಲ್ಲಿ
ಪ್ರೇಮದ ಭಾವವು!!
ಚಂದಿರನ ಮನದಾಸೆಗೆ
ಹಂಸದ ರಾಯಭಾರ!!
ತಿಳಿನೀರ ಕೊಳದಲ್ಲಿ
ಅಲೆಗಳ ಅಲಂಕಾರ!!
ಮುತ್ತಿಡುವ ಮಳೆ ಹನಿಗೆ
ತಂಗಾಳಿಯ ಆತಿಥ್ಯ!!
ಚಂದಿರನ ಚೆಲುವೆಗೆ
ಬೆಳದಿಂಗಳ ಸಾನಿಧ್ಯ!!
- ಪಿ.ಜಿ.ಜ್ಯೋತಿ
24 Feb 2020, 08:59 pm
❤❤ ಕಲ್ಪನೆಯ ಕಣ್ಣೊಟ ನಿನ್ನದು
ಕಾವ್ಯಕ್ಕೆ ಸಿಲುಕದ ಹೆಸರು ನಿನ್ನದು
ನಿನ್ನ ಹೆಸರ ಮೇಲೆ ಕವಿತೆ
ಬರೆಯುವ ಆಸೆ ನನ್ನದು ❤❤
- Vishal Hiremath
24 Feb 2020, 12:53 pm