ಅವಳ ಇಂಪಾದ ದನಿ ಕೇಳಲು
ಕಾತುರದಿಂದ ಕಾಯುತ್ತಿದ್ದೆ
ನನ್ನ ಈ ಹೃದಯದ ಮಿಡಿತ...
ಅವಳ ಸೌಂದರ್ಯವನ್ನು ನೋಡಲು
ನಲಿದಾಡುತ್ತಿರುವ ನನ್ನ ಈ ಕಣ್ಗಳು..
ಒಂದೊಂದು ಕಣದಲ್ಲೂ
ಇರುವ ಒಂದೇ ಪ್ರಶ್ನೆ,
"ಎಲ್ಲಿ ಇರುವಳು ನನ್ನವಳು? "
ಆದರು ಕಾಯಲು ಸಿದ್ಧ
ಈ ನನ್ನ ಪ್ರೀತಿ,
ಹೇಳಬೇಕು ಅವಳಿಗೆ
"ನೀನೆ ನನ್ನವಳೆಂದು"
ಪ್ರೀತಿಯನ್ನು ಮಾಡಲು ಕಲಿಸಿದೆ, ಆದರೆ ಮರೆಯುವುದನ್ನು ಕಲಿಸಲಿಲ್ಲ,
ಕನಸಿನ ಗೂಡಿಗೆ ಹಕ್ಕಿಯಾದೆ ಜೊತೆಯಾಗಿ ಹಾರಾಡಲಿಲ್ಲ,
ಮನಸಾರೆ ಪ್ರೀತಿ ಮಾಡಿದೆ ಜೊತೆಯಾಗಿ ಬದುಕಲಿಲ್ಲ, ನೋವಿನಲ್ಲಿ ಸ್ಪಂದಿಸಿದೆ ನನಗೆ ಅರ್ಥವಾಗಲಿಲ್ಲ,
ನಿನ್ನ ನೆನೆಯುವಾಗ ಕಣ್ಗಳು ಒದ್ದೆಯಾಯಿತಲ್ಲಾ,
ನನಗೆ ನೀ ಮರೀಚಿಕೆ ಆದರೂ ನನ್ನ ಕವನಗಳಿಗೆ ಸ್ಫೂರ್ತಿಯಾದೆಯಲ್ಲ.
Creat by sagi
ಕಣ್ಣನ್ನು ರಕ್ಷಿಸಲು ಬೇಕು ರೆಪ್ಪೆ
ದೇಹವನ್ನು ರಕ್ಷಿಸಲು ಬೇಕು ಬಟ್ಟೆ
ಮನಸ್ಸಿಗೆ ಬೇಕು ರಕ್ಷೆ
ಕನಸಿಗೆ ಇರಬೇಕು ಕಕ್ಷೆ
ಆದರೆ ನನಗೆ ಬೇಕಾಗಿರುವುದು
ನನ್ನ ತಂಗಿಯ ಪ್ರೀತಿಯ
"ಅಣ್ಣಾ"ಎಂಬ
ಎರಡಕ್ಷರದ "ಭಿಕ್ಷೆ"