Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ ಮಾತು

ಯೋಗ್ಯತೆ #ಅನ್ನೋದು

- mallesh

22 Feb 2020, 06:24 pm

ಅಮ್ಮ.

ಬಾಳಿಗೆ ಬಂದವಳು ಕೊಟ್ಟಾಗ ಮುತ್ತು
ಮರೆಯಬೇಡ ನೀ ಅಮ್ಮನ ಕೈ ತುತ್ತು
ಈ ಮಾತು ಈಗ ಎಲ್ಲರಿಗೂ ಗೊತ್ತು
ತಾಯಿ ನಿನ್ನ ಬಾಳಿನ ಸಂಪತ್ತು
ಯಾಕೆಂದರೆ ಸಾಕಿ ಸಲಹಿದಳು ನಿನ್ನನ್ನು ಹೆತ್ತು
ಸಿಗುವುದಿಲ್ಲ ಅವಳಿಗಿಂತ ಬೆಲೆಯುಳ್ಳ ಮುತ್ತು
ಯಾಕೆಂದರೆ ಮಾತೆ ಎಂಬುವುದು ಬೆಳೆ ಬಾಳುವ ಸೊತ್ತು
ಅವಳು ತುತ್ತು ಕೊಟ್ಟ ಆ ಹೊತ್ತು
ನೀ ಮರೆಯಬೇಡ ಯಾವತ್ತೂ
ಯಾಕೆಂದರೆ ಅವಳು ಕೊಡದಿದ್ದರೆ ಆ ಒಂದು
ತುತ್ತು
ನೀ ಹೋಗುತ್ತಿದ್ದೆ ಸತ್ತು ಅವತ್ತು
ಧೈರ್ಯದಿಂದ ಎತ್ತಬೇಡ ಅವಳೆದುರು ನಿನ್ನ ಕತ್ತು
ಯಾಕೆಂದರೆ ನಿನಗೆ ಬಂದಾಗ ಜ್ವರವೆಂಬ ಆಪತ್ತು
ಅವಳು ಹೆದರಿಕೆಯಿಂದ ಸುತ್ತುತ್ತಿದ್ದಳು ನಿನ್ನ ಸುತ್ತು
ಬೇಡುತ್ತಿದ್ದಳು ನಿನಗಾಗಿ ದೇವರಲ್ಲಿ ಅತ್ತು
ಯಾಕೆಂದರೆ ಆ ಕರುಣಾಮಯಿಗೆ ನಿನ್ನ ಮೇಲೆ ಅಪಾರ ಪ್ರೀತಿ ಇತ್ತು
ಅವಳ ಕಣ್ಣಿಂದ ಕಣ್ಣೀರು ಬರುತ್ತಿತ್ತು ಕಿತ್ತು ಕಿತ್ತು
ಈಗಲೂ ಯಾವಾಗಲೂ ಅವಳಿಗೆ ನೀನೆ ಪ್ರೀತಿಯ ಮುತ್ತು

- shareef

22 Feb 2020, 04:25 pm

2. ಹಿತ ವಚನಗಳು.

ತನ್ನ ಕರ್ತವ್ಯದಲ್ಲಿ / ತಾ ನಿಷ್ಠ ವಂತನಾಗಿರದೆ
ನಿಷ್ಟವಂತರ ಕಂಡು ಕರುಬಿದರೇನು ಫಲ /
ಶ್ರೀ ಷಡಕ್ಷರದೇವ //

ಊರೂರು ತಿರುಗಿ /ದೇವರ ದರ್ಶನ ಮಾಡಿದರೇನು ಫಲ
ಹೆತ್ತವರ ಕೃಪಶೀರ್ವಾದವಿಲ್ಲದ ದುರುಳಗೆ /
ಬಂದಿತೆ ಪುಣ್ಯ ಶ್ರೀ ಷಡಕ್ಷರದೇವ //

- Raj Raj

22 Feb 2020, 11:14 am

ಅಮ್ಮ ಐ ಲವ್ ಯು

ತಾಯಿಯ ಕರುಳ ತನಿಸೋ ವರವ ನೀಡೋ
ದೇವನೇ ಜಗದಿ ಧನ್ಯನಗುವೇ ನಾ !!
ಶತಕೋಟಿ ದೇವರ ಅನುಗ್ರಹವ ಕಾಣುವೆ ಅವಳ ಮಡಿಲಲ್ಲಿ ಲೋಕದಿ ಪುಣ್ಯನಗುವೇ ನಾ !!

ಅಮೃತಕ್ಕಿಂತಲು ಮಿಗಿಲು ಅಮ್ಮನ ಎದ್ದೆ ಹಾಲು
ಸ್ವರ್ಗಕ್ಕಿಂತಲು ಮಿಗಿಲು ಅಮ್ಮನ ಮುದ್ದು ಮಡಿಲು ಕಾಣದ ದೇವರ ಹುಡುಕದೆ ತಾಯಿಗೆ ಕೈಯ ಮುಗಿವೆ ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂದು ನಾನು ಅರಿವೇ.

ನಾನು ಪಡೆದ ಪುಣ್ಯ ತಾಯಿ ಒಬಳು
ನನ್ನ ಹಡೆದ ಕರುನಾಡ ತಾಯಿ ಒಬಳು
ದರೆಯ ತುಗೋ ಭೂಮಿ ತಾಯಿ ಒಬಳು
ಮಾತೆಯ ಸೆರಗಿನಲ್ಲಿ ಸುರಕ್ಷಿತನ್ನು ಎಂದೂ ನಾನು.
ಅಮ್ಮ ನಿನ್ನ ಋಣವ ತೀರಿಸೋ ವರವ ಬೇಡುವೆ ನಾ.

ಬದುಕ ಕಳಿಸೋ ಮೊದಲ ಗುರುವು ಅವಳು
ನನ್ನ ಪ್ರೀತಿಯ ಮೊದಲ ಒಲವು ಅವಳು
ಕಷ್ಟ ಸಮಯದಿ ಹೆಗಲು ನೀಡೋ ಗೆಳೆಯನಾಗುವಳು
ಕಾಯಿಲೆಯಲ್ಲಿ ಬಳಲೋವಾಗ ನಿನಗೆ ವೈದ್ಯನಾಗುವಳು
ಅವಳ ಬದುಕೆಲ್ಲ ನಿನ್ನ ನಗುವಿಗಾಗಿ ಜೀವಿಸುವಳು.

ಅಮ್ಮ ನಿನ್ನ ಮಹತ್ವ ಹೇಳಲು ವರ್ಣಮಾಲೆಯ ಅಕ್ಷರಗಳು ಸಾಲದು.
ಕಿರಣ್ ಕ್ರೀಸ್

- Kris

22 Feb 2020, 07:52 am

ಓ ನನ್ನ ನಲ್ಲೆ

ಓ ನನ್ನ ನಲ್ಲೆ ನಿನಗೋಸ್ಕರ ತಂದೆ ಹೂ ನಲ್ಲೆ
ಆದರೆ ನಿನ್ನ ತಲೆ ಮೇಲೆ ಕೂದಲೇ ಇಲ್ವಲ್ಲೇ

- hanumanaik lamani

21 Feb 2020, 11:13 pm

ಓ ನನ್ನ ನಲ್ಲೆ

ಚಂದ್ರನಿಲ್ಲದ ರಾತ್ರಿ
ತುಂಬಾ ಕತ್ತಲು
ಚಂದ್ರನಿಲ್ಲದಾ ರಾತ್ರಿ
ತುಂಬಾ ಕತ್ತಲು
ಗಗನದಲ್ಲಿ ನಿಂತು
ನಕ್ಕುಬಿಡು ಒಮ್ಮೆ
ಗಗನದಲ್ಲಿ ನಿಂತು
ನಕ್ಕುಬಿಡು ಒಮ್ಮೆ
ಜಗದ ತುಂಬಾ
ಬೆಳದಿಂಗಳಾ
ಬೆಳಕು ಚೆಲ್ಲಲಿ

ರವಿ ಆರಾಧ್ಯ

- TbRaviAradhya

21 Feb 2020, 09:59 pm

ಯಾಕೆ ಹಿಂಗೆ

ಕೆಲವೊಂದು ಸಲ,
ಕೆಲವರು
ಕೆಲವರಿಗೆ
ಕೇವಲವಾಗಿ ಬಿಡುತ್ತಾರೆ
ಯಾಕೆ ಹಿಂಗೆ......?

ರವಿ ಆರಾಧ್ಯ

- TbRaviAradhya

21 Feb 2020, 08:27 pm

ಶಿವರಾತ್ರಿ

ಮಾಘ ಮಾಸ ಕೃಷ್ಣ ಚತುರ್ದಶಿಯದು
ದೇವತೆಗಳಲ್ಲಿ ಅತ್ಯಂತ ನಿಗೂಢನಾಗಿಹ
ಲೋಕಕಲ್ಯಾಣಕ್ಕಾಗಿ ವಿಷವ ಆಪೋಶಿಸಿಹ
ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ
ಪಂಚಭೂತಗಳ ಒಡೆಯನಾಗಿಹ ಶಿವನಿಗೆ
ಪಾರ್ವತಿಯೊಂದಿಗೆ ಭೂ-ಸಂಚಾರ ಯೋಗ.

ಪರ್ವತ ರಾಜನ ಮಗಳಾದ ಪಾರ್ವತಿಯು
ಸದಾ ಶಿವನ ಸೇವೆಯಲ್ಲಿ ತೊಡಗಿಕೊಂಡು
ಆಹಾರ ತ್ಯಜಿಸಿ ಧ್ಯಾನ, ಪ್ರಾರ್ಥನೆಯಿಂದ
ಶಿವನ ಪ್ರೀತಿಯನ್ನು ಒಲಿಸಿಕೊಂಡು
ದೇವಾನುದೇವತೆಗಳ ಸಮಕ್ಷಮದಲ್ಲಿ
ಮದುವೆಯಾದ ಸುಂದರ ದಿನವಿದು.

ಗಂಗೆಯನ್ನು ತಲೆಯ ಮೇಲೆ ಹೊತ್ತು
ಎದೆಯಲ್ಲಿ ಗೌರಿಯನ್ನು ಕುಳ್ಳಿರಿಸಿ
ಸುಬ್ರಹ್ಮಣ್ಯನನ್ನು ಸರವಾಗಿ ಧರಿಸಿ
ನಂದಿಯ ಮೇಲೆ ಕುಳಿತುಕೊಂಡ
ಕೈಲಾಸವಾಸಿಯ ರುದ್ರತಾಂಡವನಿಗೆ
ಭೂಸಂಚಾರ ಮಾಡುವ ಸುಮಧುರ ದಿನ.

ಭೂಮಿಯ ಮೇಲಿನ ಜೀವರಾಶಿಗಳು
ಸೂರ್ಯೋದಯಕ್ಕೂ ಮುನ್ನ ಎದ್ದು
ಶುಚಿರ್ಭೂತರಾಗಿ ಶಿವ ನಾಮವ ಜಪಿಸತ್ತಾ
ರಾತ್ರಿಯೆಲ್ಲ ಜಾಗರಣೆಯಿಂದ ಇದ್ದು
ರಾತ್ರಿಯ ಕತ್ತಲೆಯ ನಂತರ ಬರುವ
ಬೆಳಕಿನ ಅರ್ಥ ಹುಡುಕುವ ದಿನವದು.

ಆಡಂಬರ ಮುಕ್ತ, ಭಸ್ಮವ ಬಳಿದಿಹ,
ಹುಲಿಚರ್ಮ ಉಟ್ಟ, ಧ್ಯಾನಪ್ರಿಯನಿಗಾಗಿ
ಹಗಲು ಉಪವಾಸ, ರಾತ್ರಿ ಜಾಗರಣೆ ಮಾಡಿ,
ಶಿವನ ಕೃಪೆಗೆ ಪಾತ್ರವಾಗುವ ಶುಭದಿನ.
ಉಪವಾಸ, ಜಾಗರಣೆ ಮತ್ತು ಶಿವಧ್ಯಾನಗಳ
ಸಂಗಮವೇ ಭೂಲೋಕದಲ್ಲಿ ಶಿವರಾತ್ರಿ.

- ಅಕ್ಷತ

21 Feb 2020, 06:45 pm

ಬಯಸಿದ ಭಯ

ಹಸಿರು ವನದಲ್ಲಿ ಹಸಿದು ಬಂದ ಹಸು ತುಸು ಹಸಿರು ಹುಲ್ಲನ್ನು ಬಯಸಿತ್ತು
ಹಾಗೆ ಮುಸುಕಿನ ವ್ಯಕ್ತಿಯು ನಸುಕಿನ ವೇಳೆ ಪುಸು ಕನೆ ಪಿಸುಗುತ್ತಾ ಹೇಳುವ ಮಾತು ಭಯವಾಗುತ್ತಿತ್ತು

- hanumanaik lamani

20 Feb 2020, 10:04 pm

ಜವಾನ್ ಮತ್ತು ರೈತನ ನೋವಿನ ಮಾತು

ಪ್ರೀತಿ ಒಂದು ದಿನ ಕಳೆದರೆ ನೋವಾಗುತ್ತದೆ ಮನಸ್ಸಿಗೆ
ತಾಯಿ ಲಾಲಿ ಒಂದು ದಿನ ಕಳೆದರೆ ನೋವಾಗುತ್ತದೆ ಮಗುವಿಗೆ
ವರ್ಷದ ಬೆಳೆ ಒಂದು ದಿನ ಕಳೆದರೆ ನೋವಾಗುತ್ತದೆ ನಮ್ಮ ರೈತನಿಗೆ
ಆದರೆ ನಮ್ಮ ಯೋಧರ ಜೀವ ಒಂದು ದಿನ ಕಳೆದರೆ ನೋವಾಗುತ್ತದೆ ಭಾರತಾಂಬೆಯ ಜನತೆಗೆ
ಅದಕ್ಕೆ ಅನ್ನೋದು ಜೈ ಜವಾನ್ ಜೈ ಕಿಸಾನ್

- hanumanaik lamani

20 Feb 2020, 09:53 pm