ನೀನು ನನ್ ಹತ್ರ ಮಾತಾಡಿದ್ರು,
ಮಾತಾಡಿಲ್ಲ ಅಂದ್ರು
ತುಂಬಾ ವ್ಯತ್ಯಾಸ ಏನು ಆಗೋದಿಲ್ಲ,
ಯಾಕಂದ್ರೆ ನಿನ್ ಜೊತೆ ಮಾತಾಡಿದ್ದಕ್ಕಿಂತ,
ಕಲ್ಪನೆಯಲ್ಲಿ ನಿನ್ನ ಊಹಿಸಿ ಕೊಂಡಿದ್ದೆ ಹೆಚ್ಚು,
ವಾಸ್ತವ ಏನು ಅಂತ ನನಗೆ ಗೊತ್ತಿದೆ..
ಆದ್ರೆ ಈ ಕಲ್ಪನೆ
ನನಗೆ ತುಂಬಾ ಸಂತೋಷಗಳನ್ನ ಕೊಟ್ಟಿದೆ
ಕಾರಣ ಅಲ್ಲಿ ಪ್ರೀತಿ ಮಾತ್ರ ಇರುತ್ತೆ...
ಇನ್ನೇನು ಮೋದಿಜಿ ಅವರ ಪ್ರಮಾಣವಚನ ಮಾಡೊದು ಮುಗಿಯಿತು,
ನನ್ನ ನಿನ್ನ ಈ ವಿರಹದ ಪ್ರೀತಿಯನ್ನು ಸ್ವಲ್ಪ ಬದಿಗಿಟ್ಟು ಮನೆಯವ್ರನ್ನ ಒಪ್ಸೋಣ...!
ಅಮ್ಮನಿಗೆ ಹೇಳಿ ನನ್ನ ನಿನ್ನ ಜಾತಕ ತೆಗೆಯಿಸ್ತಿನಿ,
ಪಂಡಿತರನ್ನ ಪ್ರೀ_ಬುಕ್ ಮಾಡ್ಸಿ ಬರೋ ಶಿವರಾತ್ರಿಗೆ ಇಬ್ರು ಸಾಮುವಿಕ ಮದ್ವೇ ಆಗೋಣ...!!!
ಎಮ್.ಎಸ್.ಭೋವಿ...✍️
ಮನಸ್ಸಿನಲ್ಲಿ ಮನೆಯ ಮಾಡಿ
ಮನೆಯಲ್ಲಿ ದೀಪ ಬೆಳಗಿ
ನನ್ನ ಬಾಳು ಬೆಳಗಿದ ನನಗೆ
ಇದು ನಾನು ಹೇಳಿದೆ ಪ್ರೀತಿಯ ವಂದನೆ
ಕಷ್ಟಗಳನ್ನು ಕಂಡು ಕೂರಗಿದ್ದ ಮನಸ್ಸಿಗೆ
ನಿನ್ ಕಂಡ ಪ್ರೀತಿಯ ಸುಪ್ಪತ್ತಿಗೆ
ಕಷ್ಟ ಸುಖದಲ್ಲಿ ಜೊತೆ ಇರುವ ಎಂದಿಗೂ ಹೀಗೆ
ಬಯಸುವುದು ಈ ಜೀವ ಇರಲು ಎಂದಿಗೂ ನಿನ್ನೊಟ್ಟಿಗೆ
ಅಪ್ಪ ಅಮ್ಮನ ಪ್ರೀತಿ ಕೊಟ್ಟೆ ನೀನು
ನಿನ್ನ ಕಂಡು ಬೆರಗಾದೆ ನಾನು
ಮಗುವಿನಂತೆ ಹಾರೈಸಿದೆ ನನ್ನ
ನಾನಿರಲಾರೆ ಬಿಟ್ಟು ನಿನ್ನ
ಕಣ್ಣಿನ ಕಂಬನಿಯು ಮರೆಯಾಗಿದೆ ನಿನ್ನ ಪ್ರೀತಿಯಿಂದ
ಹೃದಯ ತುಂಬಿ ಬಂದಿದೆ ಸಂತೋಷದ ಛಾಯೆ ನಿನ್ನಿಂದ
ಇದೊಂದು ಕನಸಾಗದೆ ಇರಲಿ ಎಂದೆಂದಿಗೂ ನಿನ್ನ ಸಾಗಲಿ
ನನ್ನ ಪ್ರೀತಿಯ ಹುಡುಗ ಇದೇ ನನ್ನ ಆಶಯ ಇರಲಿ ನಿನ್ನ ಶುಭಾಶಯ
- RoopaGowtham
07 Jun 2024, 04:41 pm
ಹಚ್ಚ ಹಸಿರಾದ ಪ್ರಕೃತಿಯಲ್ಲಿ
ಹೊಚ್ಚ ಹೊಸದಾದ ಚಿಗುರು ಕಂಡೆ
ಪಚ್ಚ ಮಲ್ಲಿಗೆಯ ಪರಿಮಳ
ಸ್ವಚ್ಚ ಗಾಳಿಯಲ್ಲಿ ಬೆರೆತು
ಮುಚ್ಚಿದ ಮನವ ತೆರೆಯಿತು