Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಗು....

ಆ ನಿನ್ನ ಮುಖದ ಮೇಲಿನ ನಗು...
ಅದರಿಂದ ಹೆಚ್ಚುತ್ತಿದೆ ನಿನ್ನ ಮೆರಗು...
ನೋಡುತಿದ್ದರೆ ನೀ ಮುಗ್ಧ ಮಗು...
ನಿನ್ನ ನಗುವಿನಿಂದ ಮಾಯವಾಗಿದೆ ನನ್ನ ನೋವಿನ ಕೊರಗು... ✍️ಮಲ್ಲ...

- Mallesh

10 Feb 2020, 04:32 pm

ಫೀಲ್ ಮೈ ಟ್ರು ಲವ್

ಆಣೆ ಬರಹ ಬರಿದಿರುವ ಬ್ರಹ್ಮ ಸಾಕ್ಷಿಗೆ
ಜನ್ಮ ನೀಡಿದ ತಾಯಿ ಸಾಕ್ಷಿ ಯಾಗಿ , ನನ್ನ ದೇಹವು ಜೀವಂತವಾಗಿರುವವರೆಗೂ ನಿನ್ನ ನೆನಪುಗಳೊಂದಿಗೆ ನಿನ್ನನ್ನು ಮರೆಯುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ.


- VeereshaVeeresha

10 Feb 2020, 09:29 am

ನಿನ್ನದೇ ನೆನಪು...!

ಉರಿಯುತ್ತಿರೊ ದೀಪವೇ
ನಿನ್ನ ಕಣ್ಣ ಅಂಚಲ್ಲಿ
ಯಾರದೇ ಆ ಹೊಂಬೆಳಕು....

ಕರಗುತ್ತಿರೊ ಮೋಡವೇ
ಸಣ್ಣ ಹನಿಯಲ್ಲು ಕೂತಿದೇ
ನೇಸರನ ಹೋಳಪು....

ಉಸಿರು ಬಿಗಿ ಹಿಡಿದು
ಹೃದಯ ಹೊರ ತೆಗೆದು
ಮಡಿದರು ಅಲ್ಲು ಹೋಗದು
ಆ ನಿನ್ನ ಸವಿ ನೆನಪು....!

ಅವಿನಾಶ್....!

- Avinash K M Mahesh

10 Feb 2020, 08:53 am

ಮಸಣ...

ಮಸಣದಿ
ಮಣ್ಣಾಗಿಹೆ ನೀನು
ನೋವಲಿ
ಹಣ್ಣಾಗಿಹೆ ನಾನು
ನಿನಗಿಲ್ಲ ಪ್ರಾಣ
ನಾನಂತೂ ನಿತ್ರಾಣ..!!!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

10 Feb 2020, 12:39 am

ಹೃದಯದ ಕಥೆ

ಎಲ್ಲರೊಂದಿಗೆ ಬೆರೆತು ನಗುತಿಹದು ಹೊರ ಮನಸ್ಸು ಆದರೆ ಒಂಟಿಯಾಗಿ ನೊಂದು ಅಳುತಿಹದು ಒಳ ಮನಸ್ಸು
ಎಲ್ಲರೂ ಎಲ್ಲವೂ ಇದ್ದು ಯಾರೂ ಯಾವದು ಇಲ್ಲದೆ ಹಾಗೆ ಇರುವ ಅನಾಥ ಹೃದಯದ ಕಥೆ ವ್ಯಥೆ ಇದು

- VeereshaVeeresha

09 Feb 2020, 11:15 pm

ಮನದ ಮಾತು,

ನೀವು ನನ್ನ ಕವನಗಳಿಗೆ
ಎಷ್ಟು ಪ್ರೋತ್ಸಹಿಸುತ್ತೀರೆಂದು ಅರಿತೆ,
ಆ ಕ್ಷಣದಿಂದ ನಾ ಬರೆಯುವುದನ್ನೇ ಮರೆತೆ,
ಕಾರಣ ಇಷ್ಟೇ,
ನನ್ನ ಬರವಣಿಗೆಯಲ್ಲಿ ಕಾಣಿಸಿರಬಹುದು?
ನಿಮಗೇನಾದರೂ ಕೊರತೆ.

ಮನಸ್ಸಿನ ಮೂಲೆಯಲ್ಲಿ ಮೂಡಿತ್ತೊಂದು ಕನಸು,
ಕವಿಯಾಗಬಲ್ಲೆ ಎಂಬ ಉಮ್ಮಸ್ಸು,
ನನ್ನ ಬರಹದಲ್ಲಿ
ತಪ್ಪಿದ್ದರೆ ತಿಳಿಸಿ, ಅರಿತುಕೊಳ್ಳುವೆನು,
ನಿಲ್ಲಿಸಬೇಡಿ ನೀವು ನನಗೆ ಪ್ರೋತ್ಸಹಿಸುವುದನ್ನು.

- Veena

09 Feb 2020, 07:02 pm

ರಕ್ಷಾ

ಸಾವಿರಾರು ಹೂವು ಗಳನ್ನು ನೂಡೇದೆ
ನೂರಾರು ಹೂವು ಗಳನ್ನು‌ ಬಯಸಿದೇ
ಅದರಲ್ಲಿ ಒಂದುನು.
ಅದು ಯಾರು ಗೂತೆ ಅದು

- VeereshaVeeresha

09 Feb 2020, 04:13 pm

ಪ್ರೀತಿಯ ಹುಡುಗಿಗೆ

ಅಚ್ಚು ಮೆಚ್ಚಿನ
ಬಿಚ್ಚು ಮನಸ್ಸಿನ
ಸ್ವಚ್ಛ ಹೃದಯದ
ನನ್ನ ಪ್ರೀತಿಯ ಹುಡುಗಿಗೆ
ಹೆಚ್ಚೇನು ಹೇಳಲ್ಲ
ಮತ್ತೆನು ಬರೆಯಲ್ಲ
ಸಿಂಪಲ್ಲಾಗಿ ಹೇಳ್ತೀನಿ
I LOVE YOU

- Mantesh Bhajantri

09 Feb 2020, 01:52 pm

ಅರಳುವ ಪ್ರೀತಿ..

ಅಧಮ್ಯ ಕನಸುಗಳು
ಅಗಾಧವಾಗಿದೆ
ಅಚ್ಚರಿಗೊಳ್ಳದಿರು
ಅಬ್ಬಬ್ಬವೆಂದು..!
ಅಪರಿಮಿತ ಆಸೆಗಳು
ಅರಿಯದೆ ಬಂದರೂ
ಅಪ್ಪಿಕೊಂಡಿಹೆನು
ಅಂತರಾಳದಲ್ಲಿ..!
ಅತೀಯಾಗಿ ಕಾಯಿಸದೆ
ಅದರಲ್ಲಿ ಪಾಲುದಾರನಾಗು
ಅಂದವಾಗಿ ನಡೆಸೋಣ
ಅರ್ಥಪೂರ್ಣ ಜೀವನವ..!
ಅಜ್ಞಾತವಾಸ ಸಾಕು
ಅದ್ಬುತ ಲೋಕದ
ಅಗಾಧ ಸೌಂದರ್ಯವ
ಅನುಭವಿಸಬೇಕಿದೆ..!
ಅರ್ಪಿಸುವೆನು ನನ್ನ
ಅಕ್ಕರೆ ತುಂಬಿದ
ಅಕ್ಷರಗಳನ್ನು
ಅರಳುವ ಪ್ರೀತಿಗೆ..!

- ಅಕ್ಷತ

09 Feb 2020, 01:38 pm

ತಾಯಿ

ಸೂರ್ಯ ಕಾಣುವುದು ಬೆಳಕಿನಲ್ಲಿ
ಚಂದ್ರ ಕಾಣುವುದು ಕತ್ತಲಿನಲ್ಲಿ
ಆದರೆ
ನನ್ನ ತಾಯಿ ಕಾಣುವಳು
ನನ್ನ ಹೃದಯದಲ್ಲಿ. .....

- Vishal Hiremath

09 Feb 2020, 12:43 pm