ನನ್ನವನು ನನಗಾಗಿ ಏನು ಬೇಕಾದರೂ ಮಾಡುವವನು
ನನಗಾಗಿ ಬದುಕುವವನು
ನನ್ನ ಖುಷಿಗೆ ಕಾರಣವಾದವನು
ನನ್ನ ಉಸಿರಿಗೆ ಉಸಿರಾದವನು
ನನ್ನ ಬದುಕಿಗೆ ಬೆಳಕಾಗುವವನು
ನನ್ನ ಪ್ರೀತಿಗೆ ಪಾತ್ರರಾದವನು
ನನ್ನ ಹೃದಯದ ಸಾರಥಿಯಾಗಿ
ನನ್ನೊಂದಿಗೆ ಸದಾ ಇರುವವನು
ನನ್ನವನು......... ನನ್ನವನು........
ನಾ ಮೆಚ್ಚಿದವನು......❤️❤️
ಹೇ ಪ್ರಕೃತಿಯೇ ಸೋತಿದೆ ನನ್ನ ಮನ
ನಿನ್ನ ಸೌಂದರ್ಯದ ಸೊಬಗ ಕಂಡು
ನಾಚಿ ನೀರಾಗಿದೆ ನನ್ನ ತನು
ನಿನ್ನ ವೈಯಾರದ ಬೆಡಗ ಕಂಡು
ಸಕಲ ಜೀವರಾಶಿಯ ತಾಯಿಯೇ
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
ಮುಂಜಾನೆಯ ಮಂಜಿನಲ್ಲಿ
ತಂಪು ಗಾಳಿಸುಳಿದಾಗ
ಚಿಗುರಿದ ಎಲೆಗಳ ಹಸಿರಿನ ಮಡಿಲಲ್ಲಿ
ಹಕ್ಕಿಗಳ ಚಿಲಿಪಿಲಿ ಕಲರವ ಕಂಡು
ಸೋತಿದೆ ನನ್ನ ಮನ ಇಂದು
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
ಹರಿಯುವ ನದಿಯ ಜುಳು ಜುಳು ನಾದದಿಂದ
ಸಪ್ತ ಸ್ವರಗಳು ಹೊರಹೊಮ್ಮುವಂತೆ
ಎಲ್ಲೆಲ್ಲಿಯೂ ಹಸಿರು ಸೆರಗನ್ನು
ಹೊದಿಕ್ಕೆಯಾಗಿ ಮಾಡಿಕೊಂಡು
ವೈಯಾರದಿಂದ ನಾಚಿನಲಿಯುತ್ತಲಿರುವೆ
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
ಬಣ್ಣ ಬಣ್ಣ ಹೂಗಳ ರಾಶಿ
ವಿಧವಿಧ ರೀತಿಯಲ್ಲಿ ಮೈತಳೆದು ನಿಂತು
ಘಮ ಘಮ ಸುವಾಸನೆಯಿಂದ
ಜಗವೆಲ್ಲ ಕನಸಿನ ಲೋಕಕ್ಕೆ ಕರೆದೊಯ್ಯುವ
ಯಕ್ಷ ಕಣ್ಣಿಕೆಯಂತೆ ಇರುವ
ಹೇ ಪ್ರಕೃತಿ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
ನಿನ್ನ ಮಡಿಲಿನಲ್ಲಿ ಸಕಲ
ಜೀವರಾಶಿಗೆ ಆಶ್ರಯ ನೀಡಿದವಳೇ
ಭೇದಭಾವ ಮಾಡದೆ ಒಂದೇ ರೀತಿಯಲ್ಲಿ
ಕಾಣುವ ಗುಣ ಸ್ವಭಾವದವಳೇ
ತಾಯಿ ಮಕ್ಕಳನ್ನು ಸಲಹುವಂತೆ ಸಲಗುತ್ತಿರುವ
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
ಮನುಕುಲವು ನಿನ್ನ ನಾಶಕ್ಕೆಮುಂದಾಗಿಹರು
ಆದರೆ ಅವರಿಗೆ ತಿಳಿಯದೆ ಹೋಗಿತೆ
ನಿನ್ನನಾಶ ಅವರ ಅಂತ್ಯಕ್ಕೆ ದಾರಿ ಎಂದು
ನಿನಗೆ ಕೋಪ ಬಂದರೆ ಉಳಿವಿಲ್ಲ ಜೀವರಾಶಿಗೆ
ಎಲ್ಲವನ್ನು ಸಹಿಸಿಕೊಂಡ ಶಾಂತ ಸ್ವರೂಪಿಯಾದ
ಹೇ ಪ್ರಕೃತಿಯೇ ಜಗದಲ್ಲಿ ಯಾರಾದರೂ ನಿನಗೆ ಸರಿಸಾಟಿಯೇ
ಸ್ವಲ್ಪ ವೇಟ್ ಮಾಡು
ಮಳೆಗಾಲ ಒಂದು ಮುಗಿಲಿ
ಕಂಟ್ರಾಕ್ಟರ್ lessons ಮೇಲೆ
ಒಂದೆರೆಡು ಕೆಲಸ ಮಾಡಿಕೋಂಡು
ಮನೆಯವರ ಎದುರೆ
ತಾಳಿ ಕಟ್ಟಿ ಕೈ ಹಿಡಿದು
ಅರುಂಧತಿ ನಕ್ಷತ್ರ
ತೋರಸ್ತಿನಿ...!!
ಎಮ್.ಎಸ್.ಭೋವಿ...✍️
.
..
...
...
.......
....
..
...
...
ಕವಿತೆ ಬರಿಯೋ ಅಷ್ಟು ಸಾಲು ನಿನಲ್ಲ...
ನನಗೆ ನೆನಪು ಆಗೋ
ಕವಿತೆಯು ಊಹಿಸಿಕೊಂಡಗ ಆಗೋ
ನೆನಪಿನ ಚೆಲುವೆ ನೀನು...
ಸದಾ ನಗುವ ಹೂವುಗಳೂ ನೀನು...
ಆ ಹೂವಿನ ಮೇಲೆ ಕುತೂಕೊಂಡು
ಹೋಗೋ ದುಂಬಿ ನಾನು...
ಹೃದಯದಲ್ಲಿ ಹಾರಾಡೋ ಹಕ್ಕಿ ನೀನು...
ಹಾರಾಡೋ ಹಕ್ಕಿಯ ಜೊಪಾನಮಾಡೋ
ಗೂಡು ನಾನು...
ನಿನ್ನ ಮನಸ್ಸು ದೇಗುಲ...
ನಿನ್ನ ಮುದ್ದಾದ ಮನಸ್ಸು ಹಾಡಿ ಹೊಗೊಳೋ
ಪೂಜಾರಿ ನಾನು....
ಎಮ್.ಎಸ್.ಭೋವಿ...✍️