ಮೌನಕ್ಕೆ ಅರ್ಥಗಳು ಹಲವು
ಅನಾರ್ಥ ಅಪಾರ್ಥಗಳು ಕೆಲವು
ತನ್ನ ಬಗ್ಗೆ ಅರಿಯದ ಮನವು
ಅನ್ಯರಿಗೆ ಬುದ್ಧಿ ಹೇಳುವ ನೆಪವು
ಇನ್ನೊಬ್ಬರ ಬೆಳವಣಿಗೆ ಸಹಿಸದೆ
ಹಂಗಿಸಿ ಮಾತನಾಡುವ ಗುಣವು
ಸಹಿಸಿ ಮುನ್ನಡೆಯಲು ಗಟ್ಟಿಇರಬೇಕು
ನಮ್ಮ ಆತ್ಮ ಬಲವು
-ಪಾವನಿ
ನಿನ್ನ ಸಂತೋಷಕ್ಕಾಗಿ ಜೀವನವಿಡೀ ಬದುಕುವ ಆಸೆ ನನ್ನದು
ಕೊಡುವೆಯಾ ಒಂದು ಅವಕಾಶ
ಮುಂದಿನ ಜನ್ಮದ ಕಲ್ಪನೆ ನನಗಿಲ್ಲ ಆದರೆ ಈ ಜನ್ಮವಿಡಿ ನಿನಗಾಗಿ ಬದುಕುವ ಒಂದು ಅವಕಾಶ ಕೊಡು ಸಾಕು ನಿನ್ನ ಹೃದಯದಲ್ಲಿ ಕೊಡು ಸ್ವಲ್ಪ ಜಾಗ
ಹೃದಯದರಸ ನಾಗಿ ಬಾಳುವೆ ನನ್ನ ಉಸಿರಿರುವ ತನಕ
ಉರಾಗ ಇತ್ತ ಒಂದು ಸಣ್ಣ ಓಣಿ...
ಆ_ಓನ್ಯಾಗ ಇತ್ತ ನನ್ನ ಮನಸಿನ ಮಹಾರಾಣಿ..
ಮಾಡಿದಾಗ ನನಗ ಕಣ್ಣು ಸೊನ್ನಿ..
ಕೂಗಿ ಕರಿತಿದ್ನಿ ನಾ..ಎ ಚಿನ್ನಿ...
ಮನಸಾರೆ ಪ್ರೀತಿ ಮಾಡಿ ತಿನಿಸಿದ್ನಿ
ಹಾಲಮ್ಯಾಗಿನ ಕೆನಿ...
ಅವಳೆ ನನ್ನ ಪಾಲಿಗೆ ಚಿನ್ನದ ಗಣಿ...
ಚಿನ್ನದ ಗಣಿ...
_ಮಲ್ಲು ಎಸ್ ಬಿರಾದಾರ
ನಾನು.....
ನನ್ನ ಕನಸು ಕಾಣುವ
ಕನಸೇ ನಾನು.....
ಕನಸಲ್ಲಿ ಮರೆಯಾಗದೆ
ಕನಸಲ್ಲಿ ಕಾಣದೇ
ಕನಸಲ್ಲಿ ಪರಿಚಯ ವಾದ
ಸುಂದರ ಕನಸು ನಾನು....
ಕನಸಲ್ಲಿ ನಾನು ಒಂದು ಕಂಡೆ
ಸುಂದರ ಕನಸೊಂದು ಶುರುವಾಗಿತು..
ನಲ್ಲೇ
ನೀ ಆಡುವ ಮಾತು
ಗುನುಗುತ್ತಿದೆ
ಹೃದಯದಲಿ ಕೂತು,
ನೀನ್ನ ಕುಡಿ ನೋಟ
ಕಲಿಸಿದೆ ಮನಸಿಗೆ ಹೊಸ ಪಾಠ
ಕೈ ಬಳೆ ಸದ್ದಿನಲಿ
ಕಳೆದು ಹೋದೆ
ಕಾಲ್ಗೆಜ್ಜೆ ನಾದದಲಿ
ಮರಳಿ ಬಂದೆ
ಈ ಮೌನದ ಭಾಷೆಗೆ
ಲಿಪಿ ಇಲ್ಲ
ಪ್ರೀತಿಲಿ ಬಿದ್ದೋರು
ಯಾರ ಮಾತು ಕೇಳೋದಿಲ್ಲ
ಪ್ರೀತಿಗೆ ಕಾರಣ ಇಲ್ಲವೇ ಇಲ್ಲ......