ನಾ ಒಬ್ಬ ಹುಡುಗನ ಮೆಚ್ಚಿದ್ದೆ
ಅವನೇ ನನ್ನ ಜೊತೆಗಾರನಾಗಲಿ ಎಂದು ಬಯಸಿದ್ದೆ
ಕಣ್ತುಂಬ ಕನಸ ತುಂಬಿದ್ದೆ
ಅವನ ಬರುವಿಕೆಗಾಗಿ ಕಾದಿದ್ದೆ
ನಂಬಿಕೆಯಿಂದ ಅವನೊಂದಿಗೆ ಎಲ್ಲವ ಹೇಳಿದ್ದೆ
ಅತಿಯಾಗಿ ಅವನ ನಂಬಿದ್ದೆ
ಪ್ರತಿದಿನ ಅವನೊಂದಿಗೆ ನಗುತ್ತಿದ್ದೆ
ಅವನು ಹತ್ತಿರವಿರಲಿ ಎಂದು ದಿನ ಬಯಸುತ್ತಿದ್ದೆ
ಹೀಗೆ ಕಳೆದಿತ್ತು ವಾರಗಳು
ಮಧ್ಯದಲ್ಲೆ ಮೂಡಿತ್ತು ಬಿರುಕುಗಳು
ಈಗೋ(Ego)ಎಂಬ ಭೂತ ಅಲ್ಲೇ ಜನಿಸಿತ್ತು
ಸೆಲ್ಫ್ ರೆಸ್ಪೆಕ್ಟ್(Self respect)ಎಂಬ ಮಾತು ಆಗಾಗ ಬರುತ್ತಿತ್ತು
ಒಬ್ಬರನ್ನೊಬ್ಬರು ನೋಡಿದರೆ ಮೈ ಉರಿಯುತ್ತಿತ್ತು
ಆದರೂ ಎಲ್ಲೋ ಮನದಂಚಿನಲ್ಲಿ ಖುಷಿ ತುಂಬಿರುತ್ತಿತ್ತು
Finally
ನನಗೂ ಅವನಿಗೂ ಸಂಪರ್ಕವೇ ಇಲ್ಲ
ಯಾವುದೇ ಸಾಮಾಜಿಕ ತಾಣಗಳ ಗೋಜಿಲ್ಲ
ಅವನ ಬರುವಿಕೆಗಾಗಿ ನಾ ಕಾಯುತ್ತಿಲ್ಲ
ಆದರೂ ನಾ ಅವನ ಮರೆತಿಲ್ಲ
ಓ ಹೊನಲೇ ದಟ್ಟನೆಯ ಕಾನನದೊಳಗೆ ನೀ ಅವಿತಿರಲು,
ನಾ ಬೆಟ್ಟವ ಸುತ್ತಿ ಬರುವೆ ನಿನ್ನ ನೋಡಲು,,
ನೀ ಎಂದರೆ ಸದಾ ನನ್ನೆದೆಯಲ್ಲಿ ಹೊಸ ಬಗೆಯ ಅಮಲು,
ನೀ ಹರಿಯುವ ಇಂಪಾದ ಶಬ್ದದ ಸ್ವರವೇ ನನ್ನೆರಡು ಕಿವಿಗೆ ಮಿಗಿಲು.....!
ನನ್ನೊಳಗೆ ಮರೆಮಾಚಿದೆ ಅವ್ಳ
ಮುಗ್ದ ನಗುವೊಂದು,
ಪುಟದ ಹಾಗೆ ತೆರೆಯಲಾಗದು ಅವಳ ಮನಸ್ಸನೆಂದು,,
ಅವಳೊಂದು ನನ್ನೊಳಗಿನ ಮಂದಿರದ ಕೇಂದ್ರ ಬಿಂದು,
ಆದರೂ ಅವಳ ಹೆಸರೇ ಕವಿದಿದೆ ನನ್ನ ಹೃದಯದಲಿ ಎಂದೆಂದೂ......!!
ನಿತ್ಯವೂ ನೆನಪಾಗಿ ಕಾಡುವುದು ಗೆಳತಿ ನಿನ್ನ ಧ್ವನಿ,
ಆದರೂ ಮಾತಾಡಲು ನೀನೇಕೆ ಆಗಿರುವೆ ಇಷ್ಟೊಂದು ಮೌನಿ,
ನನ್ನ ಸಖಿಯ ಸ್ವರ ಕೇಳದೆ ನಾನಾಗಿರುವೆ ನಿನ್ನ ಧ್ಯಾನಿ,
ಸದಾ ಗೆಳತಿ ನಾನೆಂದು ನಿನ್ನ ಪ್ರೀತಿಗೆ ಮುಗ್ದ ಅಭಿಮಾನಿ.....!!!
ಮೀಟಲು ಆಗುವುದಿಲ್ಲ ! ಕಲ್ಲಿನ ವೀಣೆಯನು !
ಅರಿಯಲು ಸಾದ್ಯವಿಲ್ಲ ! ಮನಸಿನ ಭಾವನೆಯನು !
ಕಂಡು ಹಿಡಿಯಲು ಆಗುವುದಿಲ್ಲ ! ಮೀನಿನ ಹೆಜ್ಜೆಯನು !
ಹಾಗೆಯೆ ! ಅನುಭವಿಸಬೇಕು ! ಸ್ನೇಹದ ! ಆನಂದವನು !
ವರ್ಣಿಸಲು ಸಾದ್ಯವಿಲ್ಲ ! ಸ್ನೇಹವೆಂದರೆ ಏನೆಂದು !
ಅನುಭವಿಸಬೇಕು ! ಆನಂದಿಸಬೇಕು ! ಕೇಳಬೇಡ ಏಕೆಂದು !
ಕಾಣದ ದೇವರ ನೆನೆದು ! ಅವನ ದಯೆ ಕೋರುವ ಜನ ನಾವು !
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !
ಭಾವಿಸುವುದಿಲ್ಲ ಏಕೆ ! ಸ್ನೇಹ ಒಂದು ಮದುರ ಸಂಬಂದವೆಂದು !
ಕಟ್ಟುವಿರೆಕೆ ! ಅದಕೂ ! ಸಲ್ಲದ ಕಥೆಗಳನು !
ಬದುಕು ಅಂದರೆ ! ಏನೆಂದು ! ಅರಿಯಬೇಕಿದೆ ನಾವಿಂದು !
ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ ! ಆದರೆ ಸುಮ್ಮನೆ ಅಳಿಸಬೇಡಿ !
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! ಆದರೆ ಸುರಿಯುವ ಹಾಗೆ ಮಾಡಬೇಡಿ !
ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !
ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !
ಜಗದಲಿ ! ಕಣ್ಣಿಲ್ಲದ್ದವರಿಗಿಂತ ! ಕಣ್ಮುಚ್ಚಿ ಕುಳಿತವರೇ ಹೆಚ್ಚು
ಕನಸು ಕಾಣುವವರಿಗಿಂತ ! ಕನಸು ಕಳೆದು ಕೊಂಡ ವರೇ ಹೆಚ್ಚು !
ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು.
ಇಂದ ಶ್ರೀ ಎ ಆರ್ ಹಂಚಿನಾಳ. ಶಿಕ್ಷಕರು ,
ಸರಕಾರಿ ಕೆ ಪಿ ಎಸ್ ಮುಗಳೊಳ್ಳಿ. ತಾ/ಜಿ - ಬಾಗಲಕೋಟ.