Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಕಣ್ಣೀರು ಮರೆಯದೆ ಒರೆಸು... ಗೆಳತಿ

ನಿನ್ನ ಬಳಿ ಮಾತಾನಡದ ಪದಗಳನ್ನು
ಕಾಗದದ ಮೇಲೆ ಚೆಲ್ಲಿದೇನೆ
ದಯವಿಟ್ಟು ಓದಿಬಿಡು ,
ಕೆಲವು ಕಡೆ ಪದಗಳಿಲ್ಲ
ನನ್ನ ಕಣ್ಣೀರಿದೆ
ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
ಮುರಳಿಧರ ವಿನಾಯಕ ಟೈಲರ್ ಕೇಸರಹಟ್ಟಿ

- Murali.T

27 Aug 2018, 08:59 pm

ಕಾಯುತ್ತಿರುವೆ ನಿನಗಾಗಿ...

ಕಾಯುತ್ತಿರುವೆ ನನ್ನ ಸಾವಿಗಾಗಿ
ಓ ಸಾವೆ ಬಂದು ಸೆರಬಾರದೆ ನನ್ನ..
ಈ ಜನ್ಮವು ಇನ್ನೆಂದೂ ಬೇಡ ನನಗೆ
ಬೇಗ ಬಂದು ಸೆರು ನನ್ನ...
ಓ ಹೃದಯ ವಾಸಿಯೇ...
ನೀ ಇಲ್ಲದ ಜೀವನ ಬೇಕಿಲ್ಲ ನನಗೆ..
ಮುರಳಿಧರ ವಿನಾಯಕ ಟೈಲರ್ ಕೇಸರಹಟ್ಟಿ ...

- Murali.T

27 Aug 2018, 05:50 pm

ಹೇಳಲಿಲ್ಲ ನೀ ಕಾರಣ

ಕಂಬನಿಯು ಕಣ್ಣಿಂದ
ಜಾರುವ ಮುನ್ನ
ಕೇಳಲೇ ಇಲ್ಲ ನನ್ನ.
ಕಣ್ಣಿಂದ ನೀ
ದೂರವಾಗುವ ಮುನ್ನ
ಹೇಳಲೇ ಇಲ್ಲ ನೀ ಕಾರಣ...

- vasu

26 Aug 2018, 08:08 pm

ಕಡಲಯಾನದ ನಡುವೆ

ಕಡಲದಡೆಯ ಮೂಡಿರುವ ನನ್ನ ಹೆಜ್ಜೆ
ಗುರುತಿನ ಜೊತೆಗೆ
ಮಾತು ಮಣ್ಣಾಯಿತು
ನಿನ್ನ ಗೆಜ್ಜೆಯ ಶಬ್ದಕ್ಕೆ ಮೌನ ಕಲ್ಲಾಯಿತು.

ನಿನ್ನಯ ಹೃದಯದ ಹೂವಿನ ಚಪ್ಪರದಲಿ
ಉಸಿರು ಮಾತಾಯಿತು
ಆಸೆ ಹಾಡಾಯಿತು
ನೆನಪಿನ ಅಂಬರವೇ
ಹೆಪ್ಪೊಡೆದು ನೀರಾಗಿ ಶಿಲೆಗೆ ಉಸಿರಾಯಿತು

ಮೌನವಾಗಿದ್ದು ಧನಿಯು ಬಿಗಿಯಾಗಿತೂ
ಭಾವ ಲಘುವಾಯಿತು
ಸಹಿಸೋ ಮೇಣವಾಗಿ ಕರಗೋ ಮನಸ್ಸುಯಾಯಿತು
ಅಲೆಯು ಭೋರ್ಗರೆಯಿತು ಹಡಗು ಸರಿದಾಡಿತು
ದಿಗಂತವು ಹತ್ತಿರವಾಗಿ ದೇಹವೂ
ಕಡಲಾಯಿತೂ

ನನ್ನವಳ ಕಾದಿರುವಿಕೆಗಾಗಿ.....

- Prakash Angadi

25 Aug 2018, 10:47 pm

ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?

ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?

ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?


ನನ್ನವರೆ ನನಗೆ ಎರಡು ಬಗೆವಾಗ,

ಬದುಕಿನಲಿ ನೋವೇ ತುಂಬಿರುವಾಗ,

ಕಂಬನಿಗೆ ಬೆಲೆಯೇ ಇಲ್ಲದಿರುವಾಗ,

ಏನ ಸಾಧಿಪೆನೆಂದು ಬದುಕಲಿ ನಾನು?

ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?

ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?


ನನ್ನಿಂದ ಯಾರಿಗೂ ಸಂತೋಷವಿರದಾಗ,

ಮಾಡಿದ ತ್ಯಾಗಕ್ಕೆ ಬೆಲೆಯೆ ಇರದಾಗ,

ನನ್ನವರು ಎಂದು ಯಾರೂ ಇರದಾಗ,

ಯಾವ ಪುರುಷಾರ್ಥಕ್ಕಾಗಿ ಬದುಕಲಿ ನಾನು?

ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?

ಹೇಗೆ ಬದುಕಲಿ ನಾನು, ಯಾರಿಗಾಗಿ ಬದುಕಲಿ ನಾನು?

                         *********

ಇಲ್ಲ ಬದುಕುವೆ ನಾನು, ಇನ್ನು ಬದುಕುವೆ ನಾನು

ಇಲ್ಲ ಬದುಕುವೆ ನಾನು, ಇನ್ನು ಬದುಕುವೆ ನಾನು


ಎರಡು ಬಗೆವವರನ್ನು ಎದುರಿಸುವುದಕ್ಕಾಗಿ,

ನೋವುಗಳ ಛೇದಿಸಿ ನಲಿವುದಕ್ಕಾಗಿ,

ಕಣ್ಣೀರ ಹನಿಗಳಿಗೆ ಅರ್ಥ ಕಲ್ಪಿಸುವುದಕ್ಕಾಗಿ,

ಆಗಸದಿ ಹಾರುವ ಗಾಳಿಪಟವಾಗಿ,

ಹೌದು ಬದುಕುವೆ ನಾನು, ಇನ್ನು ಬದುಕುವೆ ನಾನು

ಹೌದು ಬದುಕುವೆ ನಾನು, ಇನ್ನು ಬದುಕುವೆ ನಾನು


ಚಪ್ಪಾಳೆಗಳಿಗಲ್ಲ ಆತ್ಮತೃಪ್ತಿಗಾಗಿ,

ಬರಲಿರುವ ಅನಿಯಮಿತ ಸಂತೋಷಗಳಿಗಾಗಿ,

ಜನಿಸಿರುವ ಪರಮಮೂಲ ಉದ್ದೇಶಕಾಗಿ,

ಕೆಣಕಿದರೆ ಉಕ್ಕುವ ಜ್ವಾಲಾಮುಖಿಯಾಗಿ,

ಹೌದು ಬದುಕುವೆ ನಾನು, ಇನ್ನು ಬದುಕುವೆ ನಾನು

ಹೌದು ಬದುಕುವೆ ನಾನು, ಇನ್ನು ಬದುಕುವೆ ನಾನು


ಹೊಸದಾಗಿ ಬದುಕುವೆ ನಾನು, ನನಗಾಗಿ ಬದುಕುವೆ ನಾನು........

                                           ಭಾವುಕ(ನಾಗು)

- ನಾಗು

25 Aug 2018, 01:57 pm

ಮುಂಜಾನೆಯ ನಮನ

ಸಾವಿರ ಕನಸನೊತ್ತ ಭಾಸ್ಕರನು ಮೂಡಿದ
ಕಾರ್ಮೋಡಗಳೇ ತುಂಬಿದ್ದರೂ ಬೆಳದಿಂಗಳ ನಗೆ ಚೆಲ್ಲಿದ
ನಗುವಿನಲ್ಲೆ ಜಗದೆಲ್ಲೆಡೆ ಪ್ರಖಶಿಸಿಯೇ ಬಿಟ್ಟ
ಕಾರ್ಮೋಡಗಳೆಲ್ಲವೂ ಚದುರಿ ಸರಿದವು ಬದಿಗೆ
ಸೂರ್ಯ ನಗುಬೀರಿದ ಪ್ರಭಾವದಿ
ಬಾನು ಬೆಳ್ಳಿಪರದೆಂತೆ ಹೊಳೆದುಬಿಟ್ಟಿತ್ತು
ಇಡೀ ದಿನದಿ

- ಎಸ್.ಬಿ

25 Aug 2018, 06:58 am

ನನ್ನವರು

ದೇಹ ತಂದೆಯಾದರೆ
ಜೀವ ತಾಯಿ
ನನ್ನೆರಡು ಕಣ್ಣುಗಳೆ
ನನ್ನ ತಂಗಿಯರು
ನನ್ನವಳೇ ನನ್ನುಸಿರು...

- RajaneeshNandikolmath

25 Aug 2018, 01:58 am

ನೋವು

ಸೋತಕದ ಛಾಯೆಯೊಳಗೆ ಸೋತು ಬದುಕಿದ ಬದುಕಿದು....
ಅರಳಬೇಕೆಂದರೇಗೆ ಅರಳುವುದು ಸುಟ್ಟ ಗಾಯಗಳೇ ನೋವನ್ನುನಿಸುವಾಗ
ನೆಮ್ಮದಿಯ ಎಲ್ಲಿ ಹುಡುಕಲಿ ನಾನು ನನ್ನ ಸುತ್ತಲು ಸ್ಮಾಶನವೇ ಕಂಡಾಗ
ಬದುಕು ಇಷ್ಟೇ ....

- ಎಸ್.ಬಿ

24 Aug 2018, 11:44 pm

ಹಾಗೇ ಸುಮ್ಮನೇ ....

ನಗುವೇ ಜೀವನ ಎಂದವರಾರು
ನಕ್ಕಿದ್ದು ಗೊತ್ತಿಲ್ಲ
ನಕ್ಕವರು ಎಂದಿಗೂ ಸುಖಿಗಳೆಂದು ಹೇಳುವಂತಿಲ್ಲ
ನಗುನಗುತಾ ಬಾಳಿದವರು ಅಂದವಾಗಿ ಕಾಣಲೆಂದಷ್ಟೆ
ನಗುವುದು ಸಹಜವಾದರೂ ನಗುವುದು ಅನಿವಾರ್ಯವಾದರೂ
ನಗು ಅವರ ಬಾಳಿಗೆ ಮಾವನ ಮನೆ

- ಎಸ್.ಬಿ

24 Aug 2018, 06:26 pm

ಬದುಕೆಂಬುದೇ ಒಂದು ಭಾಗ್ಯ

ಎಲ್ಲವೂ ಇದೆಯೆಂದು ಹಿಗ್ಗಬೇಡ ಯಾವುದೂ ಇಲ್ಲವಾಗಬಹುದು,,
ಏನೂ ಇಲ್ಲವೆಂದು ಕುಗ್ಗಬೇಡ ಎಲ್ಲವೂ ನಿನ್ನದಾಗಬಹುದು,,
ಬಂದ ಭಾಗ್ಯವನು ಒದೆಯಬೇಡ ಮತ್ತೆ ಬಾರದೇ ಇರಬಹುದು,,
ಬರದ ಭಾಗ್ಯವನು ಕರೆಯಬೇಡ ಇದ್ದ ಭಾಗ್ಯವೂ ಮರೆಯಾಗಬಹುದು,,
ಅನ್ಯರ ಜೀವನಕ್ಕೆ ಹೋಲಿಕೆ ಮಾಡಬೇಡ ನಿನ್ನ ಜೀವನ ಹಾಳಾಗಬಹುದು,,
ಹೊಂದಿಕೊಂಡು ಹೋಗುವುದ ಕಲಿ ಬದುಕು ಬೆಳಗಬಹುದು,,
ಬದುಕೆಂಬುದೇ ಒಂದು ಭಾಗ್ಯವಿಹುದು,,
ಬಂದಂತೆ ಬಯಸಿದರೆ ಸಂತಸದಿ ಆನಂದಿಸಬಹುದು,,
✍ನೊಂದ ಪುಂಗವ

- SatyanarayanBadiger

24 Aug 2018, 03:49 pm