ಹೊರಗೆ ಕೋಗಿಲೆಯ ಕುಹೂ ಕುಹೂ
ಒಳಗೆ ಮೆಲ್ಲನೆ ತಿರುಗುವ ಫ್ಯಾನೂ
ಎರಡೇ ಕೂದಲನ್ನು ಕುಣಿಸುವ ತಂಗಾಳಿ
ಕೋಣೆಯಲ್ಲಿ ಅಡಗಿದೆ ನೀರವ ಮೌನ
ಆ ಮೌನಕ್ಕೆ ಮೂಡಿದೆ ಮನಸಲ್ಲಿ
ನೂರೆಂಟು ಯೋಚನೆಗಳ ಸಂಚಲನ
ಮೂಡುವ ಯೋಚನೆಗಳಿಗೆ ನೀಡಬೇಕಾಗಿದೆ ವಿರಾಮ
ಏನೂ ಅರ್ಥವಾಗದೆ ಎತ್ತಲೋ ಸಾಗುತಿದೆ ನನ್ನ ಜೀವನ
ನನ್ನದಲ್ಲದ ಊರಿನಲ್ಲಿ ಬದುಕತಲಿರುವೆ ಪ್ರತಿ ದಿನ..
ನೆನಪಾಗುತ್ತಿದೆ ಆ ಸುಂದರ ಕ್ಷಣಗಳು,
ಶಾಲೆಯಲ್ಲಿ ಕಳೆದ ಸಿಹಿ - ಕಹಿಗಳ ನೆನಪುಗಳು.
ಈಗಲು ನೆನಪಾಗುತ್ತದೆ ಅಂದಿನ ಸುವರ್ಣ ಅವಧಿಗಳು,
ಅಲ್ಲಿ ಗೆಳೆಯ - ಗೆಳತಿಯರೊಂದಿಗೆ ಮಾಡಿದ ಮೋಜು ಮಸ್ತಿಗಳು.
ನನ್ನ ಕಣ್ಣ ಮುಂದೆ ಬರುತ್ತದೆ ಅಲ್ಲಿ ಕಳೆದ ನೆನಪಿನ ಚಿತ್ರದ ಪುಟಗಳು.
ಬೇಕೆಂದರೂ ಬಾರದು ಶಾಲೆಯ ಸುಂದರ ನೆನಪುಗಳು!!!
ನನ್ನ ಹೃದಯದಲ್ಲಿ ಇಂದಿಗೂ ಅಮರ ನನಗೆ ತಿದ್ದಿ ಬುದ್ಧಿ ಹೇಳಿದ ಗುರುಗಳು,
ನನಗೆ ಈಗಲೂ ನೆನಪಿದೆ ಅವರು ಹೇಳಿದ ಆ ಹಿತನುಡಿಗಳು.
ಮಧುರ ಮಧುರಗಳು ಆ ದಿನಗಳು!!!
ಮಧುರ ಮಧುರಗಳು ಆ ದಿನಗಳು!!!
- ಇತ ✍️
ದೂರವಾಣಿಯ ಕಾಲದಲ್ಲಿ ಸ್ನೇಹಿತ-ಬಂದುಗಳ ಹೆಸರಿನ ಜೊತೆ ಅವರ ದೂರವಾಣಿಯ ಸಂಖ್ಯೆಯೂ ನೆನಪಿರುತ್ತಿತ್ತು..
ಕಾಲ ಬದಲಾಗಿದೆ, ದೂರವಾಣಿಯ ಬದಲು ಜಂಗಮವಾಣಿಯಾಗಿ.
ಸ್ನೇಹಿತರ ಹೆಸರು ನೆನಪಿದೆ, ಆದರೆ ದೂರವಾಣಿಯ ಸಂಖ್ಯೆ ನೆನಪಿನಲ್ಲಿ ಉಳಿದಿಲ್ಲ.
ಬದಲಾವಣೆ ಜಗದ ನಿಯಮ,ಅದ ನಿಜ ಮಾಡಲು
ಸ್ನೇಹಿತರೂ ಮರೆಯಾಗುತ್ತಿದ್ದಾರೆ, ಕಾರಣ ಅಹಂಮ್ಮಿನ
ತಾತ್ಸಾರಕ್ಕೆ ಸಮಾಜಿಕ ಮಾಧ್ಯಮಗಳು!!
ಲೈಕ್ ಡಿಸ್ಲೈಕಿನ ನಡುವೆ ಬದುಕು
ಸ್ಹೇಹಿತರೆಲ್ಲರು ಸಾಮಾಜಿಕ ಮಾಧ್ಯಮದಲ್ಲಿ ಬಿಸಿಯಾಗಿದ್ದೇವೆ, ಮಾತಾಡಲು ಸಮಯವಿಲ್ಲ..
ದೂರವಾಣಿಯೂ ದೂರ, ಸ್ನೇಹವೂ ದೂರ..
ಹೆಣ್ಣು ಸಂಸಾರದ ಕಣ್ಣೆನ್ನುವರು..
ಇಲ್ಲೊಬ್ಬ ಸುಂದರಿ, ತನ್ನ ಕರುಳು ಬಳ್ಳಿಯನ್ನೇ
ಚಿವುಟಿ ಸೂಟ್ ಕೇಸ್ ತುಂಬಿಸಿದ್ದಾಳೆ
ಏನು ಬಂದಿತ್ತು ಈಕೆಯ ಬುದ್ದಿಗೆ, ನಾಲ್ಕು ಪದವಿ
ನಾಲ್ಕು ಪ್ರಥಮ ದರ್ಜೆ ಆದರೆ ಜೀವನ ಮಾತ್ರ ಕೆಳದರ್ಜೆ
ಅರಿಯದ ಕಂದ ಯಾವ ತಪ್ಪು ಮಾಡಿತ್ತು ಸಾಯಲು
ಪ್ರಶ್ನೆ ಕೇಳಲು ಆ ಕಂದನಿಲ್ಲ, ಈ ಚಲುವಿನ ವಿಶವರ್ತುಲದ
ಕಾರಣ ಅರಿಯಲೇ ಬೇಕಾದ ಪಾಠವಿಲ್ಲ ಈಗಲೂ.
ತಾಯದವಳು ಸಹನಾ ಮೂರ್ತಿ ಎನುವರು.
ಅದರೆ ಆದರೆ ಈ ತಾಯಿಗೇ ಏಕಿಲ್ಲ ಆ ಸಹನೆ!?
ನನಗಿಂತ ಮೊದಲು ಹುಟ್ಟಿದವನು ನನ್ನೆಲ್ಲಾ ಆಸೆ ಕನಸುಗಳನ್ನು ನೆರವೇರಿಸಿದವನು
ನಾನು ಕಣ್ಣಾದರೆ ನನ್ನ ಕಣ್ಣ ರೆಪ್ಪೆ ಆಗುವನು
ಬಯಸದೆ ಬಂದವನು
ಬಯಸದಷ್ಟು ಖುಷಿಯನ್ನು ತಂದವನು ಸದಾ ನನ್ನ ಖುಷಿಯನ್ನು ಬಯಸುವನು ನನ್ನ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವನು
ತುಂಬಾ ಕಾಟ ಕೊಡುತ್ತೇನೆ ಅಲ್ವಾ
ಆದರೆ
ಅದಕ್ಕಿಂತ ಜಾಸ್ತಿ ಪ್ರೀತಿ ಮಾಡ್ತೀನಿ