Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನದ ಶೀರ್ಷಿಕೆ ಗಣರಾಜ್ಯೋತ್ಸವ.


ಹೂದಳ.ಗಳಂತೆ ರಾಜ್ಯಗಳ ಬಂಧಿಸಿದೆ ಭಾರತ,
ಜಗಕೆ ಗುರುವಾಗಿದೆ ಒಂದೇ ಮಾತರಂ ಗೀತೆ ಹಾಡುತ.

ವಿವಿಧ ಧರ್ಮಗಳ ನೆಲೆಗೆ ದೇಶವೇ ತೊಟ್ಟಿಲು,
ತಾಯ ಸ್ಥನ್ಯಪಾನದ ಮಂತ್ರವೇ ಏಕತೆಯ ಸಾಲು.

ಪರಕೀಯರ ಸೆರೆಯಿಂದ ಮುಕ್ತರಾದ ಭಾರತೀಯರಿಗೆ,
ಬೇಕಿತ್ತು ಮಾರ್ಗ ಸೂಚಿ ಭವಿಷ್ಯದ ಭದ್ರತೆಗೆ.

ನೇತಾರರೆಲ್ಲ ಸೇರಿ, ದೇಶ ವಿದೇಶಗಳಿಗೆ ಹಾರಿ,
ಜ್ಞಾನಾಮೃತವ ಹೀರಿ, ಸುಗಮಗೊಳಿಸಿದರು ಸಾರ್ವಭೌಮತ್ವದ ದಾರಿ.

ಮತದಾನ ನಿರ್ಧರಿಸುವುದು ಪ್ರಜೆಗಳ ಪ್ರತಿನಿಧಿಗಳನ್ನ,
ಸಂವಿಧಾನ ನಿರ್ದೇಶಿಸುವುದು ಸರ್ವರ ಕಲ್ಯಾಣಕ್ಕಾಗಿ ದುಡಿಯುವುದನ್ನ.

ಕೋಟಿ ಕೋಟಿ ತಾರೆಗಳ ಸೂರಿಗೊಬ್ಬರೇ ರಾಷ್ಟ್ರಪತಿ,
ಸ್ವರಾಜ್ಯದ ನೆನಪಿನ ದಿನದಂದು ಜಾರಿಯಾದ ಸುವ್ಯವಸ್ಥಿತ ಕಾನೂನುಗಳ ಹೊತ್ತಿಗೆಯೇ ಸರ್ಕಾರದ ಅಧಿಪತಿ.

ತಲೆಬಾಗಿ ನಮಿಸುವ ನಾಡಗುಡಿಗೆ,
ಉಕ್ಕುರಳ ಜಯ ಘೋಷ ಗಣರಾಜ್ಯೋತ್ಸವಕ್ಕೆ,
ಪ್ರಸ್ತಾವನೆ ಪುಟದಂತೆ ಸಾಗುವ ದೇಶದ ಏಳಿಗೆಗೆ.

- nagamani Kanaka

26 Jan 2025, 10:49 pm

ಹುಟ್ಟು ಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಗೆಳತಿ...

ನನ್ನ ಜೀವದ ಗೆಳತಿ ನೀನು
ನಿನ್ನ ಸ್ನೇಹದಲಿ ಅರಿತೆ ನನ್ನನ್ನು..
ನಾ ಹಾಗೆ ಸುಮ್ಮನೆ ಕುಳಿತಿರಲು
ನಿನಗಾಗಿ ಬರೆದ ಕವತಿಯೊಂದನು.
ಯಾರಲ್ಲೂ ಸಿಗದಷ್ಟು ಆತ್ಮೀಯ
ಬಾಂದವ್ಯ ಕೊಟ್ಟಿದ್ದು ನೀನು
ಎಷ್ಟು ಹೇಳಿದರೂ ತೀರದಷ್ಟು
ಪದಗಳುಂಟು ನಿನ್ನಲ್ಲಿ
ಇಷ್ಟೆ ಪದಗಳು ಸಾಲದು ನಿನ್ನ
ವರ್ಣಿಸಲು ನನಗಿಲ್ಲಿ
ಇಂದು ದೇವರಲ್ಲಿ ಪರ್ಥಿಸುವೆ ನಾನು
ಸದಾ ನಗು ನಗುತಾ ಖುಷಿಯಾಗಿ
ಇರಬೇಕು ನೀನು...
ಹುಟ್ಟು ಹಬ್ಬದ ಶುಭಾಶಯಗಳು
ನನ್ನ ಪ್ರೀತಿಯ ಗೆಳತಿ....
ಎಮ್.ಎಸ್.ಭೋವಿ...✍️

- mani_s_bhovi

26 Jan 2025, 10:02 pm

ದುಡ್ಡೆ ದೊಡ್ಡಪ್ಪ

ನಿಯತ್ತು ನಾಯಿಗು ಇರುತ್ತೆ ಆ ನಾಯಿ ಪಟ್ಟ ನಿನಗೆ ಬೇಕಾ
ಬೇಡ ಅಂದ್ರೇ ನಿನ್ನ ನಿಯತ್ತನ್ನ ನೀರಲ್ಲಿ ತೊಳೆದುಬಿಟ್ಟು
ಹಣ ಮಾಡು ಜನ ನಿನ್ನ ಗುಣ ನೋಡಿ ಸಲಾಂ ಹೊಡಿಯಲ್ಲ
ಹಣ ನೋಡಿ ಸಲಾಂ ಹೊಡೀತಾರೆ,,,,ಸೂರಿ.....✍️?

- sureshraj

26 Jan 2025, 03:02 pm

ಕನಸು ಕಂಡೆ ನಾ

ನಿನ್ನನು ನೋಡುವ ಆಸೆ ಈ ಮನಕ್ಕೆ
ಕನಸಿನಲು ನಿನ್ನ ಕಣ್ಣು ಕಂಡೆ ನಾ
ಮನಸಿನಲು ನಿನ್ನ ಹೆಸರು ಹೇಳಿದರೆ ಖುಷಿ ಪಟ್ಟ ಕನಸು ಕಂಡೆ ನಾ
ಪ್ರೀತಿ ಸೇರಿಸಿ ಕೊಬ್ಬರಿವಡಿ ಮಾಡಿಕೊಡುವ ಕನಸು ಕಂಡೆ ನಾ
ಪ್ರೀತಿಯಿಂದ ಅಪ್ಪಿಕೊಂಡಿದ್ದು ಕನಸು ಕಂಡೆ ನಾ
ಅಮ್ಮ ಅಪ್ಪ ಜೊತೆಗು ದೇಶ ಸುತ್ತಿದು ಕನಸು ಕಂಡೆ ನಾ
ದಂಪತಿಯಾಗಿ ಮಡಿಲೇ ಅಡಗಿ ಮಾಡುವ ಕನಸು ಕಂಡೆ ನಾ
ನಿನ್ನ ಮರೆಯುವ ಕನಸನ್ನು ಏಕೆ ಕಾಣಲಿಲ್ಲ,
ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ ಕನಸು ಕಾಣುತಿರುವ ಪೆದ್ದು ನಾನು ?

- Ambika Kulkarni

26 Jan 2025, 12:03 am

*ಕರುನಾಡ ಕನ್ನಡ ರಾಜೇಶ್ವರಿ ಕನ್ನಡ ಕಂದನ ಭುವನೇಶ್ವರಿ
ಕದಂಬ ಕಲಿನಾಡ ಕಲಾ ಈಶ್ವರಿ

ನಿನ್ನ ಭಾಷೆಗೆ ಶಾಸ್ತ್ರೀಯ ಸಮ್ಮಾನ
ನಿರುಪಮ ಅನುಪಮ ಅಭಿಮಾನ

ಅಷ್ಟ ಜ್ಞಾನಪೀಠ ನಿನ್ನ ಮಡಿಲಿಗೆ
ಅಗ್ಗಳಿಕೆ ಚಂದನನಾಡಿನ ನುಡಿಗೆ

ಭಾರತೀಯ ಚಲಾವಣೆ ನೋಟಿನಲಿ
ನಾಲ್ಕರ ನೋಟವು ಕಸ್ತೂರಿಯಲಿ

ಕನ್ನಡತಿ ಸುಂದರ ಲಿಪಿಗಳ ರಾಣಿ
ಸನ್ನಡತೆಯ ಸಂಸ್ಕಾರಗಳಗ್ರಣಿ

ವಿಧಾನಸೌಧದಂಗಳದಿ ನಿನ್ನ ವೈಭವ
ವಿಶ್ವಕೆ ಬೆರಗು ನಿನ್ನ ದರ್ಶನ ಸ್ವರೂಪ

ಕನ್ನಡಿಗನಿದು ಗರ್ವ ಪ್ರತಿಷ್ಠಾನ ಪರ್ವ
ಜಯ ರಾಜರಾಜೇಶ್ವರಿ ಭುವನೇಶ್ವರಿ



ಜಿ.ಹೆಚ್.ಸಂಕಪ್ಪ

- ಕವಿಕೂಸು

25 Jan 2025, 06:25 pm

ಶಿಸುನಾಳ ಶರೀಫರು ಪದ್ಯ

ಶುದ್ಧ ಜ್ಞಾನ ಮೇಲೇರಿ
ದಾರಿದ್ರ್ಯ ದೇಹ ಸುಟ್ಟು
ಹೊಗೆಯು ಹಾರುವುದು
ಬುದ್ದಿವಂತರ ಹೇಳೆದು
ವರಸಿದ್ಧ ಶಿಸುನಾಳ ದೀಶರ ತೋರ್ವುದು,,,, ✍️??

- sureshraj

25 Jan 2025, 06:40 am

ವೆಕ್ಯಾನ್ಸಿ ಇಲ್ಲ ?

SSLC ಮುಗಿಸಿ ಪಿಯುಸಿ ಸೇರಿದ ಸಮಯ ಆಗ
ಪ್ರೀತಿ ಬೇಡುತಿತ್ತು ಹೃದಯದೊಂದು ಭಾಗ
ಕಣ್ಣಿಗೆ ಬಿದ್ದಳೊಬ್ಬಳು ಸುಂದರಿ, ಅರಳಿತು ಪ್ರೀತಿ ಅನುರಾಗ
ಪ್ರಿಯತಮನ post ಇದೆಯಾ ಎಂದು application ಹಾಕಿದಾಗ
ಹೇಳಿದಳು, vacancy ಇಲ್ಲ, "ಖಾಲಿ ಇರೋದು ಅಣ್ಣನ ಜಾಗ"

✍? ಯಕ್ಷ

- pavan

24 Jan 2025, 10:17 am

ಹೇಗೆ ಬಣ್ಣಿಸಬಲ್ಲಿರಿ

ಹೇಗೆ ಬಣ್ಣಿಸಬಲ್ಲಿರಿ ಗುಣಗಳನ್ನು
ಅವರು ಸಜ್ಜನರು ಇವರು ದುಷ್ಟರೆಂದು
ಶಕುನಿ ಇಲ್ಲದಿದ್ದರೆ ಮಹಾಭಾರತ ಎಲ್ಲಿ ನಡೆಯುತ್ತಿತ್ತು
ಧರ್ಮ ಅಧರ್ಮಗಳಲ್ಲಿ ವ್ಯತ್ಯಾಸ ಎಲ್ಲಿರುತಿತ್ತು
ಮಂತರೆ ಇಲ್ಲದಿದ್ದರೆ ರಾವಣನ ಅಟ್ಟಹಾಸಕ್ಕೆ ಕೊನೆ ಎಲ್ಲಿರುತಿತ್ತು
ರಾಮನ ಅವತಾರಕ್ಕೆ ಅರ್ಥವೆಲ್ಲಿರುತಿತ್ತು

ಹೇಗೆ ಬಣ್ಣಿಸಬಲ್ಲಿರಿ
ಅಗ್ನಿಯಷ್ಟು ಶುದ್ಧಳಾದ ಸೀತೆಗೆ ಅಪಮಾನ ಹೊರಿಸಿದ ರಾಮ ದೇವರೆಂದು
ಜೂಜಿಗೆ ಪತ್ನಿಯನ್ನು ಪಣವಿಟ್ಟ ಪಾಂಡವರು ಧರ್ಮದ ಪಾಲಕರೆಂದು

ನಾನು ಒಳ್ಳೆಯವಳು ನಾನು ಧರ್ಮ ಪಾಲಿಸುವವಳು
ಎಂದು ಹೇಗೆ ಹೇಳಬಲ್ಲಿರಿ
ನಿಮ್ಮ ಅಂತರಂಗದಲ್ಲೇ ಯುದ್ಧ ನಡೆಯುತ್ತಿರುವಾಗ
ನಿಮ್ಮ ಅರಿಷಡ್ವರ್ಗಗಳ ಮೇಲೆ ಹಿಡಿತ ಇಡಲಾಗದವರು
ಹೇಗೆ ಅಳೆಯಬಲ್ಲಿರಿ ಹೊರಗಿನ ಪ್ರಪಂಚವನ್ನು

- rashmi maladkar

23 Jan 2025, 06:53 pm

ಅವಳ ಆ ಪುಟ್ಟ ಡೈರಿ

ಅವಳ ಆ ಪುಟ್ಟ ಡೈರಿ ಹೇಳಿತ್ತು ಅವಳ ಕಥೆಯನು
ಅದರಲ್ಲಿ ಅವಳ ಕಣ್ಣೀರಿನ ಗುರುತಿತ್ತು ನಗುವಿನ ನೆನಪಿತ್ತು
ಯಾರಿಗೂ ಹೇಳಲಾಗದ ಎಷ್ಟೋ ಗುಟ್ಟಿನ ಮಾತಿತ್ತು
ಅದರಲ್ಲಿ ಒಣಗಿದ ಗುಲಾಬಿ ಹೂವಿತ್ತು
ಅದು ಅವಳ ಮೊದಲ ಪ್ರೀತಿಯಾ ಕಂಪು ಸೂಸುತಿತ್ತು
ಅವಳಿಗೆ ಅದೆಷ್ಟು ಜೀವನೋತ್ಸಾಹ
ನೂರು ಕನಸುಗಳಾ ಕಟ್ಟಿ ಎಲ್ಲಾ ಬರೆದಿಟ್ಟಳು
Cancer ಎಂದು ಅರಿತಾಗ ಅಳಲಿಲ್ಲ ಅವಳು
ನೋವನ್ನು ನಿರಾಸೆಯನ್ನು ಎಲ್ಲಾ ಬರೆದಿಟ್ಟಳು
ಬಿಡಲಿಲ್ಲ ಅವಳು ಉತ್ಸಾಹವನ್ನು
ಎಲ್ಲೋ ಒಂದು ಪುಟ್ಟ ಭರವಸೆ ಬದುಕುವೆನೆಂದು
ಆದರೆ........
ಅಪೂರ್ಣವಾದ ಡೈರಿಯಂತೆ ಅವಳ ಕಥೆಯೂ ಅಪೂರ್ಣವಾಗಿ ಹೋಯಿತು

- rashmi maladkar

23 Jan 2025, 06:47 pm

ನಾನು

ನಾನು ನಾನು ಎಂದು ಅಹಂಕಾರ ಪಡುವ ನೀನು
ಮರೆತುಹೋದೆಯಾ ನೀನೊಂದು ಕಣವೆಂದು
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ನಿಮಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ,
ದಿನಗಳು ವರುಷಗಳಾಗಿ, ನಾನು ಎಂಬುದು ಹುಟ್ಟಿ,
ನಾನು ಎಂಬುದು ಹೆಮ್ಮರವಾಗಿ ಬೆಳೆದು,
ನಾನು ಎಂಬುದು ಅಸ್ಥಿತ್ವವಾಗಿ
ಒಂದು ದಿನ ಅಸ್ಥಿತ್ವ ನಾಶವಾಗಿ ಅಜೀವವಾಗಿ ಹೋದರೂ
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ಜೀವನದ ಜಂಜಾಟದಲ್ಲಿ ನಾನು ನಾನೆಂಬ ಅಹಂ ಬೆಳೆದು
ಆಸೆ ದುರಾಸೆಯಾಗಿ, ದುರಾಸೆ ನಿರಾಸೆಯಾಗಿ,
ಸೋತು ನೊಂದು ಬೆಂದರು
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

ನನ್ನವರನ್ನು ಪಡೆದುಕೊಂಡು ಸಂತೋಷವಾಗಿ
ನನ್ನವರನ್ನು ಕಳೆದುಕೊಂಡು ಕಣ್ಣೀರು ಹರಿಸಿ
ಮತ್ತೆ ಜೀವನ ಚಕ್ರದಲ್ಲಿ ಒಂದು ಕಣವಾಗಿ ತಿರುಗಿ
ಎಲ್ಲೋ ಕಳೆದು ಹೋದರೂ
ಮರೆತು ಹೋದೆಯಾ
ನೀನೊಂದು ಆತ್ಮವೆಂದು, ಆತ್ಮವೇ ಸತ್ಯವೆಂದು
ನಾನು ಒಂದು ಸುಳ್ಳು ಎಂದು

- rashmi maladkar

23 Jan 2025, 06:46 pm