Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶುಭ ದಿನ

ಮುಂಜಾನೆಯ
ಮುಗಿಲ ತೆರೆಯ ಸರಿದು
ಕತ್ತಲೆಯು
ಹರಿದು ಬೆಳ್ಳಕ್ಕಿ ಕಳವರ,
ಕಿವಿಗಿಂಪು
ಮೆಲ್ಲನೆ ಹರಳುವ ಹೂ,
ಹರಡಿದೆ ಕಂಪು
ಜಗದಗಲ ಮರಳಿದೆ
ಮತ್ತೆ ,ನವ ನವೀನತೆ
ಭೂತಾಯ ಒಡಲ
ತುಂಬಾ ಸಂಕ್ರಾಂತಿಯ ಸಂಭ್ರಮ ಬಿಂಬ. ಸರ್ವರಿಗೂ ಶುಭ ಕಾಮನೆಗಳು
ಹಬ್ಬದ ಶುಭಾಶಯಗಳು .)

- RaviThondgere

14 Jan 2018, 08:12 am

ಓ ಪ್ರೀತಿಯೇ

ಪ್ರೀತಿಯ ಮುತ್ತು ಧರಿಸಿ
ಮುತ್ತಿನಂತೆ ಕಂಗೊಳಿಸುವ
ನನ್ನದೆಯ ಒಡತಿ ನೀ.

ಕತ್ತಲು ತುಂಬಿದ ಈ ಜೀವಕ್ಕೆ
ನೀನೇ ಬೆಳದಿಂಗಳ ಚಂದಿರ
ನನ್ನ ಬಾಳ ಸಂಗಾತಿ ನೀ.

ನಾ ಎಷ್ಟೇ ಪ್ರೀತಿಸಿದರು
ಸಲಾದೇನಿಸಿದೆ
ನನ್ನ ಪ್ರೀತಿಯ ಒಡತಿ ನೀ.

ಕೈ ಚಾಚಿ ನಿಂತ್ತಿರುವೆ
ನಿನಗಾಗಿ ನಿನ್ನ ಪ್ರೀತಿಗೆ
ನನ್ನಾಸೆಯ ಹೂವೇ ನೀ.

ನೀ ಬಂದು ಸೇರು
ಈ ನಿನ್ನ ಗೆಳೆಯನ ಹೃದಯವ
ನೀನೇ ನನ್ನ ಹೃದಯದ ದೇವತೆ ನೀ.

ನೀ ಎಲ್ಲೇ ಇದ್ದರು,ಹೇಗೆ ಇದ್ದರು,
ಏಳೇಳು ಜನ್ಮಕೂ ನೀನೇ ನನ್ನ ಪ್ರೀತಿಯ ಒಡತಿ,
ನನ್ನ ಹೃದಯದ ಒಡತಿ, ನನ್ನಬಾಳ ಸಂಗಾತಿ ನೀ.

ರಾಜು ಹಾಸನ

- raju

14 Jan 2018, 02:32 am

ನವ ವಸಂತ

ಕತ್ತಲೆಯನು ಕರಗಿಸಲು
ನಲುಗುತ್ತಿರುವ
ಜ್ಯೋತಿಗಳನ್ನು ಬಿರುಗಾಳಿಗಳೇ
ಬೆಳಗಲು ಬಿಡಿ .
ಇದು ನಿಮ್ಮ ಮನೆಯ ಹಾಗೆ ನಮಗೂ ...
ನಮ್ಮ ಪಾಡಿಗೆ ಬಿಡಿ
ಹಡೆದ ಜೀವಗಳು ಮಡಿದಿವೆ ಮಬ್ಬಲಿ ಬೆಳಕ ಸಿಂಚನ
ಹರಿಸಲೇ ಬೇಕು ಬಾಡಿದ ಜೀವಗಳುಳಿಯಲು
ಮುಗಿಲಲಿ ಮತ್ತೆ ಅರಳಲು

- RaviThondgere

14 Jan 2018, 12:19 am

ಹೊಯ್ದಾಟದ ಪಯಣ..

ತೀರ ಕಾಣದ ಕಡಲಿನಲ್ಲಿ
ಬೀಳುತೇಳುತ ಸಾಗುತ್ತಿರುಬ
ಪುಟ್ಟದೊಂದು ಹಾಯಿ ದೋಣಿಯನೇರಿ
ಹೊರಟ ಹುಚ್ಚು ಪಯಣಿಗನು ನಾನು,
ನೆಚ್ಚಿಕೊಂಡಿರುವೆನು ಏನೋ
ಅರ್ಥವಾಗದ ಮನದ ಸೊಗಸ
ಸಿಗುವುದೆಂದು ಹುಡುಕಿ ಕನಸ..
ತಡೆಯದಾಗಿದೆ ಹಾಯಿ ದೋಣಿಯು
ಬಿಡದೆ ಬೀಸುವ ಬಿರುಗಾಳಿ ಹೊಡೆತಕೆ
ನಡುಗಿ ಉಡುಗಿದೆ ಬದುಕುವಾಸೆಯು
ಕಡಿದು ಹೋಗಿದೆ ತವರ ಆಸೆಯು
ಸೇರುವೇನೋ ದೂರ ತೀರವ
ಮುಳುಗುವೇನೋ ಯಾರು ತಿಳಿದವ?
ಗಂಟಲಾರಿ ದಾಹ ಇಣುಕಿದೆ
ಉಪ್ಪು ನೀರು ಬಿಡದೆ ಕೆಣಕಿದೆ
ಸುಡುವ ಸೂರ್ಯನ ತಡೆಯಲಾರೆನು,
ಕಡಲ ತಡಿಯನು ಹಿಡಿಯಲಾರೆನು..
ನೀಲಿ ಕಡಲಿನ ಆಳದಲ್ಲಿ
ಆಡುತಿರುವ ಪ್ರೀತಿ ಮೀನು
ಹಿಡಿಯಲು ಸಿಗದು,
ಬಿಡಲು ಮನಸು ಏಕೋ ಒಪ್ಪದು
ಹೊಯ್ದಾಟದ ಪಯಣದಲ್ಲಿ
ಹೊಂಗನಸಿನ ನೆಲೆಯು ಎಲ್ಲಿ ?

- ಶ್ರೀಗೋ.

13 Jan 2018, 11:38 pm

ಪ್ರೀತಿಯಾಗಿದೆ

ಕಂಬನಿಗೇಕೊ ಪ್ರೀತಿಯಾಗಿದೆ
ಕೆನ್ನೆ ಮುದ್ದಿಸುವಾಸೆಯಾಗಿದೆ
ಕಣ್ಣಂಚಲಿ ತುಸು ಪ್ರೀತಿ ತುಂಬಿ
ಕಾಯುತಿರುವ ಪ್ರೀತಿ ನಂಬಿ

ಮೌನವಾಗಿ ಒಪ್ಪಿಬಿಡಲೇ
ತಿಳಿಯದಂತೆ ಇದ್ದುಬಿಡಲೇ
ಬಿರಿದ ಹೃದಯದಕೆ ಒಡತಿ ನಾನು
ಅವನು ಬಂದು ತಂಪೆರೆಯಬಲ್ಲನೇನು?

ಕಣ್ಣಂಚಲಿ ಕಂಡರೆ ಅವನ
ನನ್ನೊಳಗೆ ಬರಿಯ ಮೌನ
ಕೊಂಚ ಸಲಿಗೆ ಕೊಟ್ಟರೆ ನಾನು
ಅಪ್ಪಿಬಿಡುವ ತಿಳಿಯದಂತೆ ಮೆಲ್ಲಗವನು

ಮನಸಾದರೆ ಸಾಕು ಕೊಂಚ ನೋವಿನಂದರ
ಬಂದು ಬಿಡುವ ಸಮಧಾನಿಸಲು ಹತ್ತಿರ
ಕಂಡಿಲ್ಲ ಎಲ್ಲೂ ಇಂತ‌ ಪ್ರೇಮಿ ನಾನು
ಒಪ್ಪಿ ಒಮ್ಮೆ ಪ್ರೀತಿಸಿಯೇ ಬಿಡಲೇನು

- ಶ್ರೀಕಾವ್ಯ

13 Jan 2018, 08:42 pm

ಜೀವದ ಗೆಳತಿ

ನನ್ನ ಜೀವದ ಗೆಳತಿ
ಪ್ರೀತಿಸುವೆ ನಾ ನಿನ್ನ
ಈ ಜೀವ ಉಸಿರಿರುವತನಕ
ಈ ಜೀವಾ ಮಣ್ಣ್ ಸೇರಿದರು

ನೀ ಕಣ್ಣೀರು ಹಾಕದಿರು
ಉಸಿರು ನಿಂತ
ಈ ನಿನ್ನ ಗೆಳೆಯನ ದೇಹದ ಮುಂದೆ
ನನ್ನ ಜೀವದ ಗೆಳತಿ

ನಾ ಬಯಸೇನೂ
ನಾ ಸತರೂ
ಜಾರದಿರಲ್ಲಿ ಕಂಬನಿ ನಿನ್ನ ಕಣ್ಣಗಳಲ್ಲಿ
ಸದಾ ನಗುವಿರಲ್ಲಿ ನಿನ್ನ ಮನದಲ್ಲಿ
ನನ್ನ ಜೀವದ ಗೆಳತಿ

ರಾಜು ಹಾಸನ

- raju

13 Jan 2018, 10:58 am

ಚುಕ್ಕಿ

ದಣಿದ ಕಡಲ ತಣಿಸಲು
ಅಲೆಯು ಬಂದಿತು ಉಕ್ಕಿ....

ಕುಣಿದು ರೆಕ್ಕೆಯ ಬಡಿದು
ಒಡಲ ಸೇರಿತು ಹಕ್ಕಿ....

ತೂಗಿ ಆಡಿತು ಗಿಡಗಳು
ಸಂಜೆಯ ಮೋಹಕೆ ಸಿಕ್ಕಿ....

ಸಾಗಿ ಮುಳುಗಲು ಸೂರ್ಯನು
ನಗುವ ಬೀರಿತು ಚುಕ್ಕಿ....

ಕುಶಿ...

- sharin rao

13 Jan 2018, 10:25 am

ಹೇಳು ಸಖೀ...

ಹೇಳು ಸಖೀ..,

ಏನೆಂದು ಬರೆಯಲಿ
ನಾ ನಿನ್ನ ಕುರಿತು.!
ನಿನ್ನಂತರಂಗದೊಳು
ಒಂದಾಗಿರುವಾಗ
ನಾ ನಿನ್ನ ಬೆರೆತು..!

ಕನಸೆಂಬ ಲೋಕಕ್ಕೆ
ಅಧಿಪತಿಯು ನಾನೀಗ
ನನ್ನನ್ನೇ ಮರೆತು.!
ಮುಗ್ದನಾದೇನು ನಾ
ತನುವ ಮರೆತು ನಿನ್ನ
ಸನ್ನಡತೆಯನರಿತು..!

ಮಾರುತಿಹೇ ನಾನು
ಬಣ್ಣಬಣ್ಣದ ಕನಸುಗಳ
ಬಾಳಸಂತೆಯಲಿ ನಿತ್ಯದಿ.!
ಟಿಸಿಲೊಡೆಯ ಬೇಕಿದೆ
ಪ್ರೀತಿಲತೆಯೊಂದು
ನಿನ್ನಯ ಸಾಮಿಪ್ಯದಿ..!

ಏನೆಂದು ಬರೆಯಲಿ ನಾ
ಭಾವನೆಗಳದು ನೂರು.!
ವರ್ಣಿಸಲು ಅಲ್ಪನು ನಾ
ನಿನ್ನ ಸೌಂದರ್ಯವ,
ದೌಡಾಯಿಸುತ ನೀ
ನನ್ನ ಕಾಮನೆಯ ಸೇರು..!

ಏನೆಂದು ಹೇಳಲಿ ಗೆಳತಿ
ಸೆಳೆಯುವ ಕಾಂತಿಯದು
ನಿನ್ನ ಕಣ್ಣಲ್ಲಿದೆ..!
ಹಗಲಿರುಳೂ ನಡೆಯುವ
ವಿರಹದ ಕ್ರಾಂತಿಯದು
ನನ್ನಲ್ಲಿದೆ..!

ಇನ್ನೇನೂ ಹೇಳೆನು ಹುಡುಗಿ
ನಾ ನಿನ್ನಲ್ಲೇ ಇರುವೆ ಅಡಗಿ...!
~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

13 Jan 2018, 07:33 am

ನಾ ಚಿರಋಣಿ

ಕೊರೆವ ಚಳಿಗೆ
ಮೈಯೊಡ್ಡಿ
ಸುಡುವ ಬೀಸಿಲಿಗೆ
ಕೈಯೊಡ್ಡಿ
ಸುರಿಯುವ ಮಳೆಗೆ
ಸೇರಗೋಡ್ಡಿ
ಜೋಪಾನ ಮಾಡಿದೆ
ನನ್ನವ್ವ

ನನ್ನ ಒಬ್ಬಂಟಿ ಮಾಡಿ
ಜಾರಿದೆಯಲ್ಲೇ ಚಿರ ನಿದ್ರೆಗೆ
ಏಕೆ ಹೇಳೇ ನನ್ನವ್ವ
ಹೆಂಗೆ ತೀರಿಸಲಿ ನಿನ್ನ ಋಣವ
ಎಷ್ಟೇ ಜನ್ಮ ಎತ್ತಿದರು
ತಿರಿಸಲಾರೇನು ನಿನ್ನ ಋಣವ
ಹೇಳೇ ನನ್ನವ್ವ

ರಾಜು ಹಾಸನ

- raju

13 Jan 2018, 02:15 am

ಕನ್ನಡ ಕಂದ

ಕಾವೇರಿ ತಾಯಿಯ ಕಂದ
ಭೂಮಿ ತಾಯಿಯ ಭೂಮಿ ಪುತ್ರ
ಭಾರತಾಂಬೆಯ ಚೊಚ್ಚಲ್ಲ ಮಗ ನಾ.

ನಾಡ ತಾಯಿಯ
ದೇಶ ಸೇವೆಗೆ ಸದಾ ಸಿದ್ದ
ಕರುನಾಡ ಕಂದ ನಾ.

ಬರಗಾಲ ಬಂದರು
ಎದರದೆ, ಅಂಜದೆ ದುಡಿಯುವೆ
ನನ್ನ ನಾಡಿಗಾಗಿ, ನನ್ನ ಜನರಿಗಾಗಿ ನಾ.

ವೈರಿಗಳು ವೈರತ್ವ ಕಟ್ಟಿದರು
ಪ್ರೀತಿ, ಸ್ನೇಹದ ತವರು ಕಟ್ಟುವೇ
ಕರುನಾಡ ಗಂಡು ನಾ.

ಪರಕೀಯರ ಆರ್ಭಟ,
ಯಾರ ನವರಂಗಿ ಆಟ ನೆಡೆಯಾದು
ಕರುನಾಡ ಗಂಡುಗುಲಿಯಾ ಮುಂದೆ..

ರಾಜು ಹಾಸನ

- raju

13 Jan 2018, 01:58 am