Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಉತ್ತರಾಯನದ ಮಕರ ರಾಶಿಗೆ ಪ್ರವೇಶಿಸುವ ಭಾಸ್ಕರ,
ಕೊರೆಯುವ ಚಳಿಯ ಮಾಯ ಮಾಡಿ ಪೊರೆಯುವನು ನೇಸರ.
ಸತ್ಕಾರ್ಯಗಳಿಗೆ ಶುಭ ಮುಹೂರ್ತ ಕಾಲವಿದು,
ದವಸ ಧಾನ್ಯಗಳ ರೈತ ಮನೆಗೆ ಸ್ವಾಗತಿಸಿ ಸಂಭ್ರಮಿಸುವ ಹಬ್ಬವಿದು.
ವಿವಿಧ ಹೆಸರುಗಳಿಂದ ಆಚರಿಸುವರು ಸಂಕ್ರಮಣವನ್ನ,
ದನಕರುಗಳ ಸಿಂಗರಿಸಿ ಸೌಹಾರ್ದದಿ ಆಯೋಜಿಸುವರು ಸ್ಪರ್ಧೆಗಳನ್ನ.
ನಾರಿಯರು ಮನೆ ಮನೆಗೆ ಹಂಚುವರು ಎಳ್ಳು ಬೆಲ್ಲ,
ವಿನಿಮಯದ ಹಾರೈಕೆಗಳಿಂದ ತಿಳಿಗೊಳವಾಗುವುದು ಮನವೆಲ್ಲ.
ಕಬ್ಬಿನ ರಸದಂತಿದ್ದರೆ ಎಲ್ಲರ ಮನಸ್ಸು,
ಶರದಂತೆ ಬರುವ ಸಿಹಿ ನುಡಿಗಳದ್ದೇ ಸೊಗಸು.
ಗುಸುಗುಟ್ಟಲಿ ಪುರಾಣ ಕಥೆಗಳ ಸಾರ ಹೃದಯದಲ್ಲಿ,
ಉತ್ತರಾಯನದ ಪುಣ್ಯವೆಲ್ಲ ಸರ್ವರಿಗೂ ಲಭಿಸಲಿ.
ರಚನೆ ಶ್ರೀಮತಿ ನಾಗಮಣಿ h b
GHPS Dharmapur.
- nagamani Kanaka
14 Jan 2025, 08:43 am
ಕುವೆಂಪು ಯಂತೆ ಪ್ರೀತಿಸುವೆ
ನೀ ಪ್ರೀತಿಸು...
ಬೇಂದ್ರೆ ಯಂತೇ ಬಣ್ಣಿಸುವೆ
ಒಲವ ಬಾವಿಸು...
ಮಾಸ್ತಿಯಂತೆ ಆಸ್ತಿ ಇಟ್ಟಿರುವೆ
ನೀ ಮನ್ನಿಸು...
ಕನ್ನಡಕ್ಕಿನ್ನೊಂದು ಜ್ಞಾನಪಿಠ ತರುವೆ
ಜೊತೆ ಜೀವಿಸು...!!
ಎಮ್.ಎಸ್.ಭೋವಿ...✍️
.
.
.
.
.
.
.
.
.
.
- mani_s_bhovi
14 Jan 2025, 12:31 am
ಸೀರೆ ಉಟ್ಟು ಬರಬೇಡ
ಹುಡುಗಿ ನೀ ಹೋರಗೆ...
ಕಂಡು ನನ್ನ ಹೃದಯ ಜಾರಿಬಿದ್ದಾತು
ನಿನ್ನ ಸೆರಗ ಒಳಗೆ...
ನಮ್ಮವ್ವ ಅಂತಾಳೆ,
ಜಾರದಿರು ಯಾವ ಹೂವಿಗೆ...
ಗೊತ್ತಿಲ್ಲ ಕೊನೆಗೆ,
ಆ ಹೂವು ಯಾರ ಮುಡಿಗೆ...
ಎಮ್.ಎಸ್.ಭೋವಿ...✍️
.
.
.
.
.
.
- mani_s_bhovi
14 Jan 2025, 12:00 am
ಕಣ್ಮರೆಯಲ್ಲಿ ಕೈ ಹಿಡಿದವರು,
ಬೆನ್ನೆಲುಬಾಗಿ ನಿಂತು ಸಲಹಿದರೂ.
ಸದ್ಗುಣಗಳ ಐಸಿರಿಗೆ ಸೋತು,
ಮಾತಿನ ಮಾಧುರ್ಯಕ್ಕೆ ಮನ ಒಂದಾಯಿತು.
ವಾತ್ಸಲ್ಯದ ಸೆಳೆತ,
ಹೆಚ್ಚಿಸುವುದು ಹೃದಯ ಬಡಿತ.
ಕಣ್ಣಂಚ ನೀರು,
ನೆನಪುಗಳೊಳಗೆ ಸುರಿಯುವ ಪನ್ನೀರು.
ಕರುಳೊಳಗೆ ಕರಗಿರುವ ಕವಿಯೂ,
ಒಡಲ ತಾಪದಿ ಹೊರಹೊಮ್ಮುವ ಹೊಗೆಯು.
ಆರ್ಭಟಿಸೋ ಅಂತರಾಳದ ಸ್ನೇಹ,
ಕೇಳದೆ ಕೊಡುವುದು ವಿರಹ.
ಸಮತೆ ಇರದೆ ಕೂಡಿದ ನಂಟು,
ಬಿಡಿಸುವುದು ಬಾಂಧವ್ಯದ ಗಂಟು.
ಹಸುಳೆಯಂತೆ ಚಿಗುರೋಡೆದ ಪ್ರೀತಿ,
ಮರವಾಗಿ ಬಿರಿಯುವುದೆಂಬ ಭೀತಿ.
ವಾಸ್ತವಕ್ಕೆ ಸಿಲುಕದ ವಿಷಯ,
ಸ್ತುತಿಸುವ ನೋವಿಗೆ ಹೇಳದು ವಿದಾಯ.
ನಮ್ಮವರೊಂದಿಗೆ ಇರಲಾಗದ ಕ್ಷಣ,
ಜಿಗಣೆಯಂತೆ ನರಳಿಸುವುದು ಪ್ರತಿದಿನ.
ಅವರಿಗೆ ಇರದ ಕನವರಿಕೆ,
ನಮ್ಮೆದೆಯ ಚಿವುಟುವುದು ಏಕೆ?
ಸಂತಸದ ಹೊನಲು ಮರೆಯಾದಾಗ,
ಪುಟಿಯದು ಪ್ರೀತಿಯ ಅನುರಾಗ.
ಕೋಟಿ ಜನರ ಮಧ್ಯೆಯೂ ಸಿಕ್ಕರೆ ಒಲವು,
ಆಗ ಕಾಣಬಹುದು ಮಂದಹಾಸದ ಚೆಲುವು.
- nagamani Kanaka
13 Jan 2025, 07:44 am
ಬಹುಶಃ ನಿನ್ನನ್ನು ಸಂಕ್ರಾಂತಿಗೆ ಹೋಲಿಸಿದರೆ
ಯುಗಾದಿಗೆ ಬರಬಹುದು ಕೋಪ,
ಮಿನುಗುತಾರೆಗೆ ಹೋಲಿಸಿದರೆ
ಪೂರ್ಣಚಂದ್ರ ಮುನಿಸಿಕೊಳ್ಳಬಹುದು
ಪಾಪ...
ಅದೇನೇ ಇರ್ಲೀ ನನ್ನವಳೆದರು
ನೀ ಪೈಪೋಟಿಗಿಳಿಯದಿರು
ನಿನಗಾಗಬಹುದು ನಿನ್ನ ರೂಪದ
ಮೇಲೆ ಮನಸ್ತಾಪ, ಕಾರಣ
ನನ್ನವಳು ಕೋಟಿ ತಾರೆಗಳ
ಏಕಸ್ವರೂಪ....
ಎಮ್.ಎಸ್.ಭೋವಿ...✍️
.
.
.
- mani_s_bhovi
12 Jan 2025, 10:15 pm
ಲೋಕದ ತುಡಿತಗಳನರಿತ ಲೋಕೇಶ್ವರ,
ಭ್ರಾತೃತ್ವ ಬೆಸೆದ ನರೇಂದ್ರರು ಅಜರಾಮರ.
ದುರ್ಬಲರ ಸೇವೆಯ ಸಾರಥಿಯಾಗಿ,
ಭೀಕರ ಬರಗಾಲದಿ ಹಸಿವು ನೀಗಿಸಿದ ತ್ಯಾಗಿ.
ಪರಮಹಂಸರ ಶಿಷ್ಯರಾಗಿ,
ಸನ್ಮಾರ್ಗದಿ ನಡೆದ ಶಿವಯೋಗಿ.
ಗೂಡಾಚೆ ವಿಹರಿಸೋ ನಿಮ್ಮ ಆತ್ಮದ ಏಕಾಗ್ರತೆ,
ಗುಡುಗ ಸೀಳಿ ಸಾಗುವವರಿಗೆ ಹಣತೆ.
ಗಂಗಾಸುತನ ಕರುನಾಡ ಪ್ರವಾಸ,
ಒಡೆಯರ ಗರುಡನಾಗಿ ನುಡಿಯಿತು,
ಶಾಲೆಗಳ ತೆರೆಸಿ ಕೊಡಿಸಿ ವಿದ್ಯಾಭ್ಯಾಸ.
ಗುರುತಿರದ ಭಾರತೀಯ ಸಂತನ ಭಾಷಣ,
ಗಳಿಸಿತು ವಿಶ್ವಮನ್ನಣೆಯನ್ನ.
ಮುನ್ನಡೆವ ಹಾದಿ ಮುಳ್ಳಿನ ಹಾಸಿಗೆ ಇದ್ದರೂ,
ಬಗ್ಗದೊಳ್ ಕುಗ್ಗದೆ ನಡೆದರೆ ನಮಗೆ ಸಮನಾರು!.
ಸರ್ವ ಮಸ್ತಕಗಳಿಂದು ಮಾಹಿತಿಯ ಕಣಜ,
ವಿವೇಕದ ವೀಣೆ ನುಡಿಯುತ್ತಿರಲಿ ಮದವೇರದೆ ಸಹಜ.
ಧ್ಯಾನ ಸುದೆಯಾಗಿ ಹೃದಯದಲ್ಲಿ ನೆಲೆಸಿ,
ಉದ್ದರಿಸಿದರು ಮನಗಳ ಗುರೂ ಭಕ್ತಿಯನುಳಿಸಿ.
- nagamani Kanaka
12 Jan 2025, 04:59 pm
ಗರ್ಭದಲ್ಲೇ ಗುಡಿ ಕಟ್ಟಿ
ರಕ್ತದಲ್ಲೇ ಅಭಿಶೇಕ ಮಾಡಿ
ಕರುಳನ್ನೇ ಹಾರ ಮಾಡಿ
ಒಂಬತ್ತು ತಿಂಗಳು ಪೂಜಿಸಿ ಕಾಪಾಡುವಳು
ತಾಯಿ ಅಮ್ಮ
- Rajguru Bommani
12 Jan 2025, 11:52 am
ಗರ್ಭದಲ್ಲೇ ಗುಡಿ ಕಟ್ಟಿ
ರಕ್ತದಲ್ಲೇ ಅಭಿಶೇಕ ಮಾಡಿ
ಕರುಳನ್ನೇ ಹಾರ ಮಾಡಿ
ಒಂಬತ್ತು ತಿಂಗಳು ಪೂಜಿಸಿ ಕಾಪಾಡುವಳು
ತಾಯಿ ಅಮ್ಮ
- Rajguru Bommani
12 Jan 2025, 11:50 am
ಅವಳಿಗಾಗಿ ಕಾಯುತಿದ್ದೆ
ನಾನು ಶಬರಿಯಂತೆ
ನೀ ಸಿಗಬೇಕಿತ್ತು ನನಗೆ ಸೀತೆಯಂತೆ
ಆದರೆ ಎನು ಮಾಡೋದು
ನಿನ್ನ ಗಂಡ ನಿನ್ನ ಹೊತ್ತೋದ
ರಾವಣನಂತೆ...
ಯುದ್ಧ ಮಾಡಿ ನಿನ್ನ ಪಡಿಬೇಕು
ಅಂದ್ರೆ ಇದು ರಾಮಾಯಣ
ಅಲ್ಲ ನಿಜ ಜೀವನ....
ಎಮ್.ಎಸ್.ಭೋವಿ...✍️
.
.
.
.
- mani_s_bhovi
11 Jan 2025, 09:49 pm
ಕಣ್ಮುಚ್ಚಿ ಕೂತರು ಸನಿಹವೇ ಇದ್ದಂತೆ
ಕಾಡುವ ನಿನ್ನ ಭ್ರಮೆಯನ್ನು ಹೇಗೆ..?
ತಡಿಯಲಿ ನಾನು...
ಹೃದಯದ ತುಂಬಾ ತುಂಬಿರುವ ನಿನ್ನದೇ
ನೆನಪುಗಳಿಗೆ ಮರೆವು ಬರಲು ಹೇಗೆ..?
ಯೋಚಿಸಲಿ ನಾನು...
ನನ್ನ ಉಸಿರ ಕಣ ಕಣದಲ್ಲೂ ನಿನ್ನದೇ
ಹೆಸರಿರುವಾಗ ಸಾವು ಬೇಕೆಂದು ಹೇಗೆ..?
ಬೇಡಲಿ ನಾನು...
ಬೇಡವೇ ಬೇಡ ಹೀಗೆಯೇ ಇದ್ದುಬಿಡುವೆ
ನಾನು ನಿನ್ನ ನೆನಪಿನ ಕೋಟೆಯೊಳಗೆ
ನಾನೊಬ್ಬನೆ ಹುಚ್ಚು ಪ್ರೇಮಿಯಂತೆ...
ಎಮ್.ಎಸ್.ಭೋವಿ...✍️
- mani_s_bhovi
11 Jan 2025, 03:26 pm