ದಿನಗಳು ಉರುಳುತ್ತಿದೆ, ಕಾಲ ಸಾಗುತ್ತಿದೆ
ನೆನ್ನೆಗಳು ಕಳೆದು ಹೋದವು ಲೆಕ್ಕಕ್ಕೆ ಸಿಗದಂತೆ
ಬರುವ ನಾಳೆಗಳ ಬಗ್ಗೆ ಯಾರಿಗೆ ತಾನೇ ತಿಳಿದಿದೆ
ಜೀವಿಸು ನೀನು ಈ ಕ್ಷಣ ಮಾತ್ರ ನಿನ್ನದೆಂಬಂತೆ
ಒಂದು ಕಾಲದಲ್ಲಿ ಅದೆಷ್ಟು ಮಾತಾಡ್ತಿಯ
ಅಂತಿದ್ದವರೆಲ್ಲ
ಇಂದು ಯಾಕೆ ಏನು ಮಾತಾಡ್ತಿಲ್ಲ ಅಂತ ಕೇಳುವಷ್ಟು ಬದಲಾಗಿದಿನಿ
ಕಾರಣವಿಷ್ಟೇ ಈ ಮೌನದಲ್ಲೇ ನೆಮ್ಮದಿಯನ್ನ
ಹುಡುಕ್ತಿದಿನಿ.......!
ಮೊದಲಾ ಸಲ ನಿನ್ನ ನೋಡಿದ ಕ್ಷಣವು
ನನ್ನ ಕಣ್ಣಿಗೆ ಜೀವ ನೀಡಿತು
ಮೊದಲಾ ಸಲ ನಿನ್ನೊಂದಿಗೆ ಮಾತಾಡಿದ ಕ್ಷಣವು
ನನ್ನ ಮಾತಿಗೆ ಅರ್ಥ ನೀಡಿತು
ಮೊದಲಾ ಸಲ ನಿನ್ನ ಇಷ್ಟ ಪಟ್ಟ ಕ್ಷಣವು
ನನ್ನ ಹೃದಯದಲ್ಲಿ ಪ್ರೀತಿ ಹುಟ್ಟಿಸಿತು
ಈ ಹೃದಯಕೆ ನೀ ಬಂದ ಆ ಒಂದು ಕ್ಷಣವು
ನನ್ನ ಜೀವನಕೆ ಅರ್ಥ ನೀಡಿತು
ನೀನೆ ಮೊದಲು ನೀನೆ ಕೊನೆಯು
ಈ ಹೃದಯಕೆ
ಇಂದಿಗೂ ..........!
ದೇವಸ್ಥಾನ ಗುಡಿ ಗುಂಡಾರಗಳಿಗೆ ಕೋಟ್ಟ್ಯಂತರ ದೇಣಿಗೆ ನೀಡುವವರಿದ್ದಾರೆ ಇಲ್ಲಿ....
ಆದರೆ ಕಡು ಬಡವರಿಗೆ ಹೊಟ್ಟೆ ತುಂಬ ಊಟ ನೀಡುವರು ಇಲ್ಲವಯ್ಯ....
ಜಾತಿ ಮತ ಧರ್ಮಗಳೆಂದು ಹಲವಾರು ವರ್ಷ ಹೋರಾಟ ನಡೆಸುವರು ಇಲ್ಲಿದ್ದಾರೆ....
ಆದರೆ ಮನುಷ್ಯನ ಮೂಲ ಅಗತ್ಯಗಳಿಗೆ ಹೋರಾಡುವವರು ವಿರಳವಯ್ಯ......
ಸಾವಿರಾರು ಹೆಣ್ಣು ದೇವತೆಗಳನ್ನು ಪೂಜಿಸುವವರಿದ್ದಾರೆ ಇಲ್ಲಿ....
ಆದರೆ ಅದೇ ಹೆಣ್ಣನ್ನು ಕೀಳಾಗಿ ಕಾಣುವವರು ಎಲ್ಲೆಡೆಯೂ ಇದ್ದಾರಯ್ಯ.....
ದೇಶದ ಉನ್ನತಿಗೆ ಸಾಕಷ್ಟು ಯುವ ಜನತೆ ಶಕ್ತಿ ಇದೆ ಇಲ್ಲಿ....
ಆದರೆ ಯುವಜನತೆಯೇ ಹಾಳಾಗುತ್ತಿದೆ ಸಾಕಷ್ಟು ಕೆಟ್ಟ ಚಟಗಳಿಗೆ...
ದುಷ್ಟ ಬ್ರಿಟೀಷರ ಗುಲಾಮರಾಗಿದ್ದೇವು ಅಂದು...
ಕುತಂತ್ರಿ ರಾಜಕಾರಣಿಗಳ ಗುಲಾಮರಾಗಿದ್ದೇವೆ ಇಂದು.....
ಸತ್ಯ ,ಧರ್ಮ,ನ್ಯಾಯ, ನೀತಿ ರಾರಾಜಿಸುತಿತ್ತು ಈ ನಾಡಿನಲ್ಲಂದು.....
ಕೊಲೆ ,ಸುಲಿಗೆ,ಭ್ರಷ್ಟಾಚಾರ ,ಅತ್ಯಾಚಾರ ಪರ್ವತ ಶಿಖರವನ್ನೇರಿದೆ ಇಂದು......
ಅಪ್ಪಾ ಅಂದ್ರೆ ಸಾಕು ಮುಖದಲಿ ಮೂಡುವುದು ಏನೋ ಹುರುಪು....
ಮಕ್ಕಳ ಬಾಳಲಿ ಬರುವ ಕಗ್ಗತ್ತಲನ್ನು ಓಡಿಸಿ ಬಾಳನು ಮಾಡುವನು ಬಿಳುಪು....
ಅಪ್ಪನಿಲ್ಲದಿರಬಹುದು ಭಾರೀ ಶ್ರೀಮಂತ....
ಆದರೆ ಅವನು ಪ್ರೀತಿಯಲ್ಲಿ ಅಂಭಾನಿಗಿಂತ ಸಿರಿವಂತ....
ಜೀವನದ ಮೌಲ್ಯಗಳನ್ನು ಕಲಿಸಿದಾತ....
ಅಮ್ಮನಿಲ್ಲದ ಸಮಯದಲ್ಲಿ ತಾಯಿಯಂತೆ ಜೋಗುಳ ಹಾಡಿದಾತ....
ನಿಸ್ವಾರ್ಥ ಭಾವದಿಂದ ಮಕ್ಕಳನ್ನು ಸಲಹುವಾತ ....
ಮಕ್ಕಳ ಕಣ್ಣಲಿ ನೀರು ಬರದಂತೆ ನೋಡಿಕೊಳ್ಳುವಾತ.....
ಹಾಸ್ಟೇಲ್ನಿಂದ ಮನೆಗೆ ಬಂದಾಗ ತಬ್ಬಿಕೊಂಡು ಮುದ್ದಾಡುವಾತ...
ಸಿಟ್ಟ ಮಾಡ್ಕೊಂಡ ಊಟ ಇಲ್ದೇ ಮಲ್ಕೊಂಡಾಗ ರಮಿಸಿ ಕೈ ತುತ್ತು ತಿನ್ನಿಸಿದಾತ.....
ಅಮ್ಮ ಇಲ್ಲ ಅನ್ನೋ ಕೊರಗನ್ನ ನೀಗಿಸಿದಾತ.....
ಸೋತಾಗ ಜಗವೇ ಕೀಳಾಗಿ ನೋಡಿದರೂ ನನ್ನ ಎಂದಿಗೂ ಬಿಟ್ಟುಕೊಡದಾತ.....