Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಜುಳು ಜುಳು ಹರಿವ ನೀರು ಭೋರ್ಗರಿದು
ಮಿಂಚಿ ಕತ್ತಲಲ್ಲಿ ಮರೆಯಾಗುವ ಬಾನು,
ಇಂಪಾದ ಹಕ್ಕಿಗಳ ನಾದ ಸೊಂಪಾಗಿ
ಬೀಳುತ್ತಿದೆ ಕಿವಿಗಳಿಗೆ ಮನಸಿಗೆ ತನ್ಮಯತೆ
ತರುವಂತೆ.
ಕ್ಷಣ ಗಣನೇಗಿಡಲು ಸ್ಥಗಿತವಾಗುವ
ಮುಂಗಾರು ಮಳೆ,
ಬೀಸುವ ಗಾಳಿಗೆ ಅಂಕು ಡೋಂಕಾಗಿ
ಹೆಜ್ಜೆ ಹಾಕುತ್ತಿದೆ ಪ್ರಕೃತಿಯ ತಾಳಕ್ಕೆ ತಕ್ಕಂತೆ.
ಭುವಿಯೊಳಗಿನ ಕಿರು ಪದರಗಳ ಕಣ್ಮುಚ್ಚಿ
ನಿಂತಿದೆ ತಿಳಿನೀರ ಮಂಜು
ಚಿಗುರೊಡೆದ ಎಲೆಗಳ ಮೇಲಿಂದು.
ಮಣ್ಣಿನ ಘಮಕ್ಕೆ ಸರಿ ಸಾಟಿ ಉಂಟೆನು
ಬೇರೊಂದು ಪರಿಮಳ,
ನನ್ನ ಮುತ್ತಿಕೊಂಡಿವೆ ನಾನಾ ರೀತಿಯ ಸಪ್ಪಳ ಅದೇ ನನಗೆ ನಿವ್ವಳ.
- ಚುಕ್ಕಿ
02 Dec 2017, 09:20 am
ಹಕ್ಕಿ ಪುಕ್ಕ ಅವಳು ಕೇಶ
ಕದ್ದದ್ದು ನವಿಲುಗರಿ ಗಿಳಿಗಳಿಂದ
ಕಿವಿಯೊಲೆ ಕೀಲಿ ಕೈ
ಮೂಗನತ್ತು ಸ್ವಲ್ಪ ತಿರುವಿತ್ತು
ಆ ಕಣ್ಣ ಹುಬ್ಬು ತೆವಿದಿಟ್ಟ ಕತ್ತಿ
ಕುತ್ತಿಗೆಗೆ ಅಂದದ ಹಾರಾ
ಅವಳ ಮುದ್ದಿಸಲೆ ಬೇಕೆಂದು
ಬಾಯಿ ತೆರೆದ ಆವಾ
ಬೇಡಾ ಬೇಡಾ ಮಾರಾಯಾ
ಚಂದವನು ಸವಿ ದೂರದಿಂದ
ಸ್ಪರ್ಶಿಸಿ ಸೋಲಬೇಡಾ
ಮುಖವ ಮುದ್ದಿಸಲು
ಮೇತ್ತಿದ ಬಣ್ಣವ ಕದಡಬೇಡಾ
ಎಲ್ಲೂಂಟು ಆ ಸುಂದರಿಯರು
ಅಳುವಿನಂಚಲ್ಲೆ ,ಬಿಂಕದ
ನವಿಲೆಲ್ಲಿ , ಕೆಂಪು ಕೊಕ್ಕಿನ ಗಿಳಿಯಲ್ಲಿ,
ಹಾಲುಣಿಸೊ ಹಸುವೇಲ್ಲಿ ಹಸುವೇಲ್ಲಿ
- ಕೌರವ
01 Dec 2017, 11:13 pm
ಅರಿಯದ ಮೌನ ಯಾಕೆ ಸಿದ್ದನೇ..
ಅವಸರದಿ ಉತ್ತರಿಸು ಗವಿಸಿದ್ದನೆ......
ಬಾಡುವ ಬಳ್ಳಿಗ್ಯಾಕೋ ಬೇಸರ..!
ಉದುರುವ ಹೂ ಗ್ಯಾಕೋ ನೇಸರ..!!
ಸುವಾಸನೆಯ ದುಂಬಿಯಾಕೋ ಅಸುರ..!!!
ಗಟ್ಟಿ-ಮುಟ್ಟಾದ ಕೊಂಬೆಗ್ಯಾಕೋ ಆಸರ..!!!!
ಕೂಗುವ ಕೋಳಿಗ್ಯಾಕೋ ಕಿಮ್ಮತ್ತಿಲ್ಲ..!
ಬೊಗಳುವ ನಾಯಿಗ್ಯಾಕೋ ಗಮ್ಮತ್ತಿಲ್ಲ..!!
ಹೋದರುವ ನರಿಗ್ಯಾಕೋ ಹಸುವಿಲ್ಲ..!!!
ನುಸುಳುವ ಹಾವಿಗ್ಯಾಕೋ ಹಂಬಲವಿಲ್ಲ..!!!!
ದಟ್ಟಡವಿಯ ಕಾಡಿಗ್ಯಾಕೋ ಕಿಚ್ಚು..!
ಜರಿಯುವ ನೀರಿಗ್ಯಾಕೋ ಹೊಟ್ಟೆಕಿಚ್ಚು..!!
ಆಡವಿಯ ಜಂಬಕೇಕೋ ಹಗುಚ್ಚು???!!!
ತೊರೆಯುವ ಚಿಲುಮೆಗೆಕೋ ಅರಳಚ್ಚು!!!!
ಕೆಂಗೇಡುವ ಮನಸ್ಸಿಗೇಕೋ ಜಂಬ..!
ಪ್ರೀತಿಸುವ ಹೃದಯವೇಕೋ ಬಿಂಬ..!!
ನಲಿಯುವ ಉತ್ಸಾಹವೇಕೋ ಉಂಬ..!!!
ಕಲಿಯುವ ಬುದ್ಧಿಗ್ಯಾಕೋ ಕೊಂಬ..!!!!
ಸುಗ್ಗಿ...
- ಆರ್ ಎಸ್ ಸುಗ್ಗಿ.
01 Dec 2017, 09:23 pm
ಬದುಕು ಬಯಲಿಗಿಟ್ಟು ಕಾಯುತ್ತಿದ್ದೇವೆ
ಬಿಡ್ಡುದಾರರ ಮನದಿಚ್ಛೆಗೆ
ಕನಸುಗಳ ಪಣಕ್ಕೊಡ್ಡಿ
ಮಾಗುವ ಮುನ್ನ
ಮಾರಾಟವಾಗಬೇಕು ಹಣ್ಣು
ಇಲ್ಲವಾದರೆ ಅನುಮಾನಿಸುತ್ತವೆ
ಕೊಳ್ಳುವ ಕಣ್ಣು
ದಲ್ಲಾಳಿಗಳ ಆಸೆ ಬುರಕತನ
ಕೊಳ್ಳು ವರ ಆತಾರ್ಕಿಕ ನಿಲುವು
ಹೊಣೆಗಾರರ ಹೊಣೆಗೇಡಿತನ
ಬೆಚ್ಚಿದರೂ ಕಿಚ್ಚು ಕಾರುವ
ಎದೆಗಾರಿಕೆ ಇಲ್ಲ
ಕೊಂಡವರ ಕೈಗೊಂಬೆ
ಬೆಳಕಿಗೋ ಬೆಂಕಿಗೋ
ಬದುಕು ಭವಿತವ್ಯ
- ಯು.ರಾಮು ಸಿರಿಗೆರೆ
01 Dec 2017, 09:10 pm
ಪುಟ್ಟ ಮುದ್ದು ಮಗು
ಕನಸ್ಸಿನಲ್ಲಿ ದಿನ ರಾತ್ರಿ ಬರುವ ಮುದ್ದು ಮಗು
ನೀ ಯಾರ ಎಂದು ತಿಳಿಯಾದ ಮುದ್ದು ಮಗು
ಕನಸ್ಸಿನಲ್ಲಿ ಏಕೆ ಬರುವೆ ಒಂದು ಎರಡು ದಿನ ಅಲ್ಲ
ನಾನು ನಿನ್ನ ಅಮ್ಮನ ಆದರೆ ನೀ ಯಾಕೆ ನನ್ನ ಜೊತೆ ಯಲ್ಲಿ ಇಲ್ಲ
ಬರೀ ಕನಸ್ಸಿನಲ್ಲಿ ಮಾತ್ರ ನಿಂಗೆ ನಾ ಅಮ್ಮ ನ
ಯಾವಾಗ ಬಂದು ಹೇಳುವೆ ನನ್ನ ಪ್ರಶ್ನೆಗೆ ಉತ್ತರ
ಕನಸ್ಸಿನಲ್ಲಿ ನನ್ನ ಜೊತೆ ಆಡುವೆ ಆಟ
ನೀ ಯಾರು ಎಂದ ತಿಳಯದೇ ಅದೇ ನಾನು
ಮುದ್ದು ಮಗು ಒಮ್ಮೆ ಹೇಳಿ ಬೇಡು
ನಿನ್ನ ಅಮ್ಮನಿಗೆ
ನನ್ನ ಕೂಗು ಕೇಳಿ ಈ ದಿನ ನನ್ನ ಕನಸ್ಸಿನಲ್ಲಿ ಬಂದು
ನಾ ಕಾಯುತಿರುವೆ ನಿನಗಾಗಿ ನನ್ನ ಮುದ್ದು ಮಗು
ಇಂತಿ
ನಿನ್ನ ಅಮ್ಮ......
- sparsha surya
01 Dec 2017, 05:05 pm
ಬಾಲ್ಯದಿಂದಲೂ ನೀರೆದವಳು ಕನ್ನಡತಿ
ಯವ್ವನದಲ್ಲಿ ಯಾಕೆ ಆಗುತ್ತೀಯ ಆಂಗ್ಲದ ಒಡೆತಿ
ದುಡಿಯುವ ತವಕದಲ್ಲಿ ತರದಿರು ಕನ್ನಡಕ್ಕೇ ದುರ್ಗತಿ
ಮೆರೆಸು ಮನ ಮನದಲ್ಲಿ ಕನ್ನಡದ ವೈಭವ
ಹಸಿರಾಗಲಿ ಕನ್ನಡ
ಉಸಿರಾಗಲಿ ಕನ್ನಡ
ಅಳಿಸದೆ ಉಳಿಸಿ ಪೋಷಿಸು ಕನ್ನಡಿಗ
- ಎ ಜಿ ಶರಣ್
01 Dec 2017, 04:45 pm
ಕಾಗದದ ಮೇಲೆ ಬರೆದೇನು ಮೌನದ ಕವಿತೆ
ಸ್ವರ್ಶ ಇಲ್ಲದ ನೋಟದಿಂದ ಮಾಯವಾದ ನಿನ್ನ ಕಿರುನಗೆಗಾಗಿ
ಬರೆದೇನು ಮೌನದ ಕವಿತೆ
ಜಾರಿ ಹೋದ ಕಣ್ಣ ಹನಿಗಳ
ಮರೆತು ಹೋದ ನೆನಪುಗಳ
ಕೂಡಿಸಿ ಇಟ್ಟು ಬರೆದೇನು ಮೌನದ ಕವಿತೆ
ಪದ ಪುಂಜ ಸಿಗದೇ ಪುಳಕಿನಾಗದೇ
ಬರೆದೇನು ಮೌನದ ಕವಿತೆ
ಆಸೆಗಳು ಮಂಕಾಗಿ
ಕನಸ್ಸುಗಳು ಕಮರಿ
ಉತ್ಸಾಹ ಬರಿದಾದ ಮನದಿಂದ
ಬರೆದೇನು ಮೌನದ ಕವಿತೆ
ಪ್ರೇಮದ ನಿವೇದನೆ
ಮನದ ವೇದನೆ ಸರಿದೂಗಿಸಲಾಗದೇ ಬರೆದೇನು ಮೌನದ ಕವಿತೆ .
ಎ ಜಿ ಶರಣ್
- ಎ ಜಿ ಶರಣ್
01 Dec 2017, 04:42 pm
ನೋವಿನ ಸಾಗರದಲ್ಲಿ
ಒದ್ದಾಡುತ್ತಿರುವ ಮನವೆ
ಏಕೆ ಯಾರಿಗಾಗಿ ಕೊರಗುವೆ
ನೀ ಯಾರಿಗಾಗಿ ಈ ಒದ್ದಾಟ
ಯಾರಿಗಾಗಿ ಈ ನೋವು
ಕೇಳುವವರು ಯಾರಿಲ್ಲ
ಕೈ ಹಿಡಿದು ಕಾಪಾಡಿ ದಡ
ಸೆರಿಸುವ ಮನಸು ಯಾರಿಗು ಇಲ್ಲ
ಬರಿ ಸ್ವಾರ್ಥ ತುಂಬಿದವರೆ ಯಲ್ಲ
ತಿಳಿ ನೀರ ದಡವು ನಿನಗೆ ಕಾಣುತ್ತಿಲ್ಲ
ಇಲ್ಲಿ ಬದುಕುವುದಾದರು ಹೇಗೆ ನೀನು
ನಗುವಿನ ಮನೆಯೆ ಕಾಣತ್ತಿಲ್ಲ
ಎತ್ತ ನೋಡಿದರೂ ಬರಿ ನೋವಿನ
ಅಲೆಗಳೆ ಬರುತ್ತಿವೆ ಅವುಗಳ
ಎದುರಿಸಿ ಹೋರಾಡುವ ಬದಲು
ಉಸಿರು ಕಟ್ಟಿ ಒಂದೆ ಸಲ
ಪ್ರಾಣ ಬಿಟ್ಟು ಬಿಡು
ಮನವೆ...........
- ರಾಗಸಿರಿ....
01 Dec 2017, 03:12 pm
ಕಣ್ಮರೆಯಾದ ಉಸಿರನ್ನು
ಹುಡುಕಿ ತರೋಣವೇ ಮನಸನ್ನು
ಕಳುಹಿಸಿ ಈ ಕ್ಷಣ.
ನಗುವ ಪರದೆಯ ಹಿಂದಿರುವ ಚೆಲುವೆಯ
ಕರೆತರೋಣವೇ ಕೊಂಚ ಮಾತಾಡಲು
ಸಂಕೋಚ ತೊರೆದು ನಮ್ಮೊಡನೆ.
ಬಿಗುಮಾನ ಬಿಟ್ಟು ಮನ ಬಿಚ್ಚಿ ಮಾತಾಡು
ಒಲವೇ ಬಹುಮಾನ ಕೊಡುವೆ ನನ್ನಲ್ಲಿನ
ಕಿರುನಗೆ ನಿನಗಾಗಿ ಮೀಸಲಿಟ್ಟು
ಕೊನೆಯುಸಿರವರೆಗೂ.
- ಚುಕ್ಕಿ
01 Dec 2017, 02:51 pm
ಕಣ್ಣ ಅಂಚಲಿ ನಿಂತು ಮೆಲ್ಲ ಮೆಲ್ಲನೆ
ಬಿಕ್ಕಿ ಅಳುವೆಯೇತಕೆ ಕಣ್ಣೀರ ಹನಿಯೇ,
ನೀ ಸತ್ತರು ನಿನ್ನ ನೆರಳು ಕೂಡ
ಬೀಳುವುದಿಲ್ಲ ನಿನ್ನ ನೋವಿಗೆ
ಕಾರಣವಾದವರ ಕಣ್ಣಿಗೆ.
- ಚುಕ್ಕಿ
01 Dec 2017, 02:49 pm