ಸುಲಭವಾಗಿ ಮರೆತು ಬಿಡಲು ನನ್ನ ನಿನ್ನ
ಪರಿಚಯ ನಿನ್ನೆ ಮೊನ್ನೆಯದಲ್ಲ....
ನಿನ್ನ ಮರಿಯುತ್ತಿನಿ ಎಂದು ಬಾಯಿಂದ ಹೇಳಬಹುದು
ಆದರೆ ಮನಸ್ಸಿಂದ ಹೇಳಲು ಸಾದ್ಯವಿಲ್ಲ....
ಹೊರಟು ನಿಂತಿರುವವನಿಗೆ ಬಿಳ್ಕೋಡುಗೆ ನೀಡು
ಆದರೆ ಏನನ್ನೂ ಹಾರೈಸಬೇಡ ಯಾಕೆಂದರೆ
ನನ್ನ ಮನಸು ಮತ್ತೊಮ್ಮೆ ನಿನ್ನತ್ತ ವಾಲಿಬಿಡುದರಲ್ಲಿ
ಯಾವ ಸಂಶಯವಿಲ್ಲ....
ನಾ ಎಷ್ಟೇ ದೂರ ಸಾಗಿದರೂ, ನನ್ನ ಮನದಲ್ಲಿ
ನಿನಗೆ ಅಂತ ನಿನಗೆ ನಿಡಿರುಲ ಸ್ಥಾನ
ಯಾವತ್ತೂ ನಾಶವಾಗುದಿಲ್ಲ......
ಎಮ್.ಎಸ್.ಭೋವಿ...✍️
ಘಾಟ್ಬೊರಳ ಗ್ರಾಮದಿ ಮೂಡಿದ ಬಾಲ ಚಂದಿರ,
ಶಿವಲಿಂಗರ ಶಿಶುವಾಗಿ ವ್ಯಾಸರಾಯರಂತೆ ಪಡೆದರು ವಿದ್ಯಾಸಂಸ್ಕಾರ.
ಶಿಕ್ಷಕರ ಮಗನಾದ ಪರ್ವತಯ್ಯ ಸ್ವಾಮಿಗೆ ಲಭಿಸಿತು ಸರ್ಕಾರಿ ಉದ್ಯೋಗ,
ಜ್ಯೋತಿ ಬಾರಂತೆ ಶಿಕ್ಷಣ ಪ್ರಗತಿಗೆ ಶ್ರಮಿಸಲು ಹುಡುಕಿದರು ಹೊಸ ಮಾರ್ಗ.
ಸುಸಂಸ್ಕೃತ ಸಾತ್ವಿಕೆ ಪಾರ್ವತಿಯವರಿಗೆ ಮನಸೋತ ಕುವರ,
ಅನ್ಯೂನ್ಯತೆಗೆ ಹೆಸರಾದ ಅವರ ಬದುಕು ಎಷ್ಟು ಸುಂದರ!.
ಜನುಮದ ಜೋಡಿಗೆ ಆರು ಋತುಗಳ ಸ್ತುತಿಗೆ ಜನಿಸಿದರು 6 ಮಕ್ಕಳು,
ತಂದೆಯ ಶಿಸ್ತಿಗೆ ಹೆಸರಾದ ಭಾವೈಕ್ಯತೆ ಹೂಗಳು.
ಶಾರದೆಯಂತ ಸತಿಗೆ ತಮ್ಮ ಮಕ್ಕಳೊಂದಿಗೆ ಕೊಡಿಸಿದರು ಶಿಕ್ಷಣ.
ಶಿಕ್ಷಕಿಯಾಗಿ ಸ್ಮರಿಸುತ್ತಿಹ ರು ಪಾರ್ವತಿ ಪತಿಯ ಪ್ರೇರಣೆಯ ಅನುಕ್ಷಣ.
ಅಂದೆ ಹೆಣ್ಣಿನ ಸ್ವಾವಲಂಬನೆ ಬದುಕಿಗೆ ಶ್ರಮಿಸಿದ ಮಹಾಪುರುಷ,
ಸತಿಯ ವಚನಮೃತದಲ್ಲಿ ಅರಳಿದ ಮಕ್ಕಳ ಉಜ್ವಲ ಭವಿಷ್ಯವು ನೀಡಿದೆ ದಂಪತಿಗಳಿಗಿಂದು ಮರೆಯಲಾಗದ ಹರ್ಷ.
ಸ್ತ್ರೀಯರ ಸ್ವಾಭಿಮಾನದ ಬದುಕಿಗೆ ಸ್ಪೂರ್ತಿಯಾಗಿ ಸಮಾಜ ಸೇವೆಗೆ ಸತಿಯನ್ನು ಸಜ್ಜುಗೊಳಿಸಿದ ಮಹಾನ್ ನಾಯಕ,
ಗೃಹಲಕ್ಷ್ಮಿಯಾಗಿ ಪತಿಯ ಕನಸನ್ನು ನನಸಾಗಿಸಿದ ಪಾರ್ವತಿ ಅಮ್ಮನವರ ಸಾಧನೆಯೆ
ಹೆಣ್ಣು ಕುಲಕಿಂದು ಸ್ಪೂರ್ತಿದಾಯಕ.
ಶಿಕ್ಷಣಕ್ಕೆ ಮಾದರಿಯಾಗಿರುವ ಈ ಜೋಡಿಯನ್ನು ಮರೆಯಬಾರದು ನಾವು ಕೊನೆಯ ತನಕ,
ಇಂಥವರ ಸನ್ಮಾರ್ಗದಲ್ಲಿ ಬೆಳೆಯುವ ಮಕ್ಕಳ ಬದುಕು ಸಾರ್ಥಕ.
ಆದರ್ಶ ದಂಪತಿಗಳಾದ ನಿಮಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ನಾ ಗುರುಗಳಿಗಾಗಿ ಬರೆದಿರುವೆ ಈ ಪುಟ್ಟ ಕವನ
ಆರಂಭದಲ್ಲಿಯೇ ನಾ ಹೇಳುವೆ ಹೃದಯವಂತ ಗುರುಗಳಿಗೆಲ್ಲ ಹೃದಯಪೂರ್ವಕ ನಮನ.
ಕಾರಣ ಇವರೆಲ್ಲ ನಮಗೆ ದೇವರ ಸಮಾನ.
ಭೂಮಂಡಲದಲ್ಲ್ಯಾರಿಲ್ಲ ಗುರುಗಳ ಸಮಾನ.
ದೇವರು ಕೊಟ್ಟ ಅಪರೂಪದ ಈ ವರದಾನ.
ಗುರುಗಳೆಲ್ಲರಿಗೂ ನಮ್ಮೆಲ್ಲರ ಭಾವದಾನ.
ವಿದ್ಯಾರ್ಥಿಗಳೆಂಬ ನೆಲಕೆ ಗುರುಗಳೆಲ್ಲರೂ ಬಿತ್ತುವರು ಜ್ಞಾನದ ಬೀಜಾನ.
ನೆಲವೆಂಬ ಹೃದಯದಿ
ಫಲವೆಂಬ ಜ್ಞಾನವ ಬೆಳೆಸುವುದು ಗುರುಗಳ ಮನ.
ಗುರುಗಳ ಪರಿಚಯ ನಮಗೆ ದೈವದತ್ತ ಬಹುಮಾನ.
ನಾ ಹೃದಯದಿ ಹೇಳುವೆನು ಕೊನೆವರೆಗೂ
ಗುರುಗಳಿಗೆ ಕೋಟಿ ಕೋಟಿ ಭಕ್ತಿಪೂರ್ವಕ ನಮನ...