ವಯಸ್ಸಾದಂತೆ ಇರಬೇಕು ಪ್ರೀತಿಸಾರ
ಸಂಸಾರದ ಬಾಳಿನಲಿ ಅದೇ ಸಂಸ್ಕಾರ
ಮಕ್ಕಳು,ಮೊಮ್ಮಕ್ಕಳು ಎಲ್ಲರಿಗೂ ಹಿರಿಯ
ಇರಲಿ ಶಾಶ್ವತ ಮನಸಿನಲಿ ಅತಿ ಕಿರಿಯ
ಮಕ್ಕಳಾಗಿ ಹಣ್ಣೆಲೆಯಾದರು ಹಸಿರು ಹಸಿರು
ಊಟ ಬಟ್ಟೆಯಲ್ಲಿ ತಂಪು ಹುರುಪು
ನೋಟದಲಿ ಸಂತಸ ಹೊಳಪು ಕಣ್ಣು
ಆಯ ತಪ್ಪಿದರೂ ಬೀಳದ ಕಠಿಣ ತೆವಲು
ಬೇಕಿಲ್ಲ ಊರುಗೋಲು ಗಟ್ಟಿ ಮುಟ್ಟಿ ಕಾಲು
ಇರಲಿ ಬಣ್ಣ ಹಾಕುವ ಚಪಲ ನೆರೆತ ಕೂದಲಿಗೆ
ಹೊಸ ಹಲ್ಲು ಇರಲಿ ಬೊಚ್ಚು ಬಾಯಿಯಲ್ಲಿ
ಒಯ್ ಸುಂದರಿ...
ನಾನು ರೊಮ್ಯಾಂಟಿಕ್ ಹಾ !
ಅಥಾವ ಇಲ್ಲ ಅಂತ ಪೋನ್ ಮಾಡಿ,
ಮೆಸೇಜ್ ಮಾಡಿ ಎಲ್ಲ ಕೇಳಬೇಡ ಹುಡ್ಗಿ..
ಸಂಶಯ ಇದ್ರೆ, ಸಮಾಧಾನವಾಗಿ
ಸೀರೆಯುಟ್ಟು ಸಂಜೆಯ ಹೊತ್ತಿಗೆ,
ಒಂದು ಸವಿ ಮುತ್ತಿನೊಂದಿಗೆ,
ಸಹಕಾರವ ಕೊಟ್ಟು ನನ್ನೊಮ್ಮೆ ಭೇಟಿಯಾಗು..,
ಆ ಕ್ಷಣದಿಂದಲೇ ಆ ಪದದ ಸ್ವರ್ಗವನ್ನೆ ಪರಿಚಯ ಮಾಡ್ತಿನಿ...
ಎಮ್.ಎಸ್.ಭೋವಿ...✍️
ಕೊಡೆಗೆ ಮಳೆಯನ್ನು ನಿಲ್ಲಿಸಲು ಸಾದ್ಯವಿಲ್ಲ ಆದರೆ ಮಳೆಯಲ್ಲಿ ನಿಲ್ಲುವ ಶಕ್ತಿಯನ್ನು ನಮಗೆ ಕೊಡುತ್ತದೆ. ಹಾಗೆಯೇ ಆತ್ಮವಿಶ್ವಾಸ ನಮಗೆ ಜಯವನ್ನು ತಂದು ಕೊಡದೆ ಇದ್ದರು ಕಷ್ಟ ಎದುರಿಸಲು ಶಕ್ತಿ ನೀಡುತ್ತದೆ.
ಪ್ರೇಮ ನೀ ಆಕಸ್ಮಿಕ ಪರಿಚಯ ನೀನು
ದೇವಲೋಕ ಕನ್ನೆಯ ಹೋಲುವ ರೂಪ ನಿನ್ನದು
ಅಪ್ಸರೆಯ ಸೌಮ್ಯತೆ ನಿನ್ನ ನಗು ನಿನ್ನದು
ನಿನ್ನ ವಯ್ಯಾರವ ಕಂಡು ವರುಣ ಧರೆಗಿಳಿದನು
ನಿನ್ನ ಅಂದ ಕಂಡು ರವಿ ಮಂಕಾದನು
ಚಂದಿರ ನಾಚಿ ನೀರಾಗಿ ಸೋತುಹೋದನು
ನಿನ್ನ ಕಣ್ಣಿನ ಕಾಡಿಗೆಯ ಕಂಡ ಇಂದ್ರ ತನ್ನ ಪಟ್ಟವನ್ನು ಕೆಳಗಿಟ್ಟ
ನಿನ್ನ ಸೌಂದರ್ಯ ಕಂಡು ಪಟ್ಟವನ್ನು ನಿನ್ನ ಸೌಂದರ್ಯಕೆ ಅಡವಿಟ್ಟು ಬಿಟ್ಟ
ಅಪರೂಪದ ರೂಪಾಸಿ ದೇವಲೋಕದ ಸುಂದರಿ ಇಂದ್ರನನ್ನೇ ಗೆದ್ದವಳು ಅವಳೇ ಪ್ರೇಮ
ನಿನ್ನ ಸೌಂದರ್ಯಕ್ಕೆ ಹೂವು ಕೂಡ ನಾಚುತ್ತೆ
ನಿನ್ನ ಮುಖದ ಕಾಂತಿಗೆ ಚಂದಿರ ಕಾಣೆಯಾದ
ನಿನ್ನ ನಡಿಗೆಯ ಕಂಡ ಮೋಡ
ನಿನ್ನ ವಯ್ಯರದ ನಡಿಗೆ ತುಂಬಾ ಮಳೆ ತರಿಸಿದ
ದೇವ ಲೋಕದ ಅಪ್ಸರೆಯ ರೂಪ
ರಂಭೆ ಊರ್ವಶಿ ಮೇನಕೆ ಯರು ಕೋಪ ಗೊಳ್ಳು ವಂತ ಸೌಂದರ್ಯ ಅವಳದು
ಮಲ್ಲಿಗೆ ಹೂ ನಾಚುವ ಮೂಕವು
ಗುಳಿ ಕೆನ್ನೆಯ ಮೊಗದವಳು
ದೇವಲೋಕದ ಕನ್ಯೆ
ಬಂದು ಸೇರು ನೀನೊಮ್ಮೆ
ಅಪರೂಪದ ರೂಪಾಸಿ ದೇವಲೋಕದ ಸುಂದರಿ ಇಂದ್ರನನ್ನೇ ಗೆದ್ದವಳು ಅವಳೇ ಪ್ರೇಮ
ಭಾವಗಳನ್ನ ತುಂಬಿದ ಮನಸ್ಸು
ಭಾವಗಳನ್ನ ವ್ಯಕ್ತಪಡಿಸಿದ ಮನಸ್ಸು.
ಯಾರ ಮನಸ್ಸು ಕಲ್ಲಲ್ಲ
ಯಾರ ಮನಸ್ಸು ಹೂವಲ್ಲ.
ಮನಸ್ಸಿಗೂ ಬೆಲೆ ಇದೆ
ಕನಸಿಗೂ ಬೆಲೆ ಇದೆ.
ಮನಸ್ಸಿಗೆ ಒಳ್ಳೆದು, ಕೆಟ್ಟದು ಯಾವುದು ಇಲ್ಲ
ಮನಸ್ಸಿಗೆ ನಾಟಕ, ನಟನೆ ಯಾವುದು ಇಲ್ಲ.
ನಿನ್ನ ಕಂಡಾಗ ನಾ
ಆದೆ ಅಪಭ್ರಂಶ
ನನ್ನ ಮನಸ್ಸು ಅಪೇತ
ನನ್ನ ದೇಹ ಸೌಂದರ್ಯಕ್ಕೆ ನನಗಿಲ್ಲ ಅಭಿಲಾಷೆ
ಕೇವಲ ನಿನ್ನ ಪ್ರೀತಿಯ ಪಡೆಯುವಸೆ
ನನ್ನ ಪ್ರೀತಿ ಅಮೇಯವಾದ ಉಡುಗೊರೆ
ನೀ ಮಾಡಿದೆ ಒಂದು ಕ್ಷಣ ನನ್ನ ಮನಸೂರೆ ?