Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮದರಂಗಿ

ನೀ ಕರಗಳಿಗೆ ಶೃಂಗರಿಸಿದ ಮದರಂಗಿಯ ಸುವಾಸನೆ
ಎನ್ನ ಮನಕೆ ನೀಡಿದೆ ಸಂತಸದ ಸಂಕ್ರಾಂತಿಯ ಭಾವನೆ
ಚೆಲುವಿನ ಚಿತ್ತಾರದ ತರಹ ಮೂಡಿದೆ ಸಂಭಾಷಣೆ
ಪ್ರೀತಿಯ ಪಿಸುಮಾತಿಗೆ ಚಿಮ್ಮಿದ ಒಲವಿನ ಆರಾಧನೆ॥

ಮದರಂಗಿಯು ಹೊರ ಸೂಸುತಿದೆ ಪ್ರೇಮ ಪಯಣ
ಮನದಾಳದ ಭಾವನೆಗಳ ಸಂಭ್ರಮದ ಸಂಕೀರ್ತನ
ನೋವು ನಲಿವನು ಮರೆತು ನಕ್ಕು ನಲಿಯುವ ಕವನ
ಅವಳಲ್ಲಿ ಒಂದಾಗಿ ಮೈಮರೆಯುವ ಸಾಧನ॥

ಅಕ್ಷರಗಳ ನಡುನಡುವೆ ಭಾವನೆಗಳ ಸಂಭ್ರಮ
ಅರಿಯುವ ಮನವಿರಲು ಬೆಳದಿಂಗಳ ಚಂದ್ರಮ
ಪವಿತ್ರವಾದ ಪ್ರೀತಿಗೆ ಸಾಕ್ಷಾತ್ಕಾರವೇ ಪರಂಧಾಮ
ಎಲ್ಲರೊಳಗೊಂದಾಗಿ ಬೆರೆತರೆ ಅದೇ ಆತ್ಮ ಸಂಭ್ರಮ॥

ನಿನ್ನೊಲವಿನ ಪ್ರೀತಿಯ ನಾ ಬಲ್ಲೆ ಗೆಳತಿ
ಹಚ್ಚಿರುವೆ ಮನದಾಳದಲಿ ಒಲವಿನ ಪಣತಿ
ಮಂದಾರ ಪುಷ್ಪದಂತೆ ನಿನ್ನ ಸಂಪ್ರೀತಿ
ಇರಲಿ ನನ್ನೊಂದಿಗೆ ಸದಾ ಹಸಿರಿನ ರೀತಿ॥

- Shankru Badiger

24 Aug 2023, 11:10 pm

ಇನ್ಸಾಟಗ್ರಾಮ್ ಪ್ರೇಮಿ

Instagram ಇನ್‌ಸ್ಟಾಲ್ ಆಯ್ತು
accountu ರಚಿಸಿ ಆಯ್ತು
profile ಅಪ್ಡೇಟ್ ಆಯ್ತು
stories ಅಪ್ಲೋಡ್ ಆಯ್ತು
premi ಇಂದಾ ಮೆಸೇಜ್ ಬಂತು
preyasi ಇಂದಾ ರಿಪ್ಲೇ ಹೋಯ್ತು
next ಮುಂದೇನಾಯಿತು.....?
crush ಆಯ್ತಾ ......!
like ಆಯ್ತಾ .......!
hate ಆಯ್ತಾ ......!
Mr&Mrs ಇನ್ಸ್ಟಾ DP ಆಯ್ತು ...❤️

- Saanvi

24 Aug 2023, 02:22 pm

ಪ್ರೇಮಿ ಯಾರು?

ಮನದಲಿ ಆಸೆಗಳು ನೂರಾರು,
ಆದರೆ ಅವುಗಳಿಗೆ ಆಸರೆ ಯಾರು?
ಕಣ್ಣಿನಲಿ ಕನಸುಗಳು ಸಾವಿರಾರು,
ಆದರೆ ಅವುಗಳಿಗೆ ಸ್ಫೂರ್ತಿ ತುಂಬಿ
ಪ್ರೋತ್ಸಾಹಿಸುವ ಪ್ರೇಮಿ ಯಾರು?

- Dhanu Chandu

22 Aug 2023, 04:19 am

noda jiva

ಕಾಯ್ದು ಕಾಯ್ದು ಸುಸ್ತಾಗಿ ಈ ಮನಸು ಕರ ವಸ್ತ್ರದಿಂದ ಬಂದು ಕಣ್ಣೀರು ಒರಿಸು ಇಲ್ಲವೆಂದರೆ ಅದೇ ಕೈಗಳಿಂದ ಉಸಿರನ್ನು ನಿಲ್ಲಿಸು ಇದರ ಮೇಲೆ ನನ್ನ ಮೇಲೆ ನಿನಗೆ ನಂಬಿಕೆ ಬಂದಿಲ್ಲ ಅಂದರೆ ಮನ್ನಿಸು ಮನ್ನಿಸು
pachii

- wαntєd pαchíí

19 Aug 2023, 08:27 pm

#ಮನದ_ಬೆಳಕು

ಜಗವ ಬೆಳಗಲು ಸೂರ್ಯ ಇರುವನು.
ಮನೆಯನು ಬೆಳಗಲು ತಾಯಿ ಇರುವಳು
ಮನಸು ಬೆಳಗಲು ಮಡದಿ ಇರುವಳು
ಕತ್ತಲೆಯ ಮನೆ ಬೆಳಗಲು ದೀಪ ಇರುವುದು
ನನ್ನ ಮನ ಬೆಳಗಲು ನಿನ್ನ ಪ್ರೀತಿ ಇರುವುದು...✍

- ಸುಮ

17 Aug 2023, 01:19 pm

ಚಿತೆಯಲು ಜೊತೆಯಾಗುವೆ..

ನಿನ್ನ ಬಿಸಿ ಉಸಿರು ನನ್ನ ತಾಕಲು
ಮರೆವೆ ನನ್ನನ್ನೇ, ನೀ ಸನಿಹವಿರಲು..
ಎಂಥ ನಿರ್ಭಯ ನಿನ್ನ ಅಪ್ಪುಗೆಯಲಿ..
ಏನೋ ನೆಮ್ಮದಿ ನಿನ್ನ ಮಡಿಲಲಿ..
ಆಂತರ್ಯದಲಿ ಅಮ್ಮನಾದೆ..
ಅಕ್ಕರೆಯಲಿ ಅಪ್ಪನಾದೆ..
ಒಮ್ಮೆ ಸಂತೈಸುವ ಸ್ನೇಹಿತನಾದೆ..
ಮತ್ತೊಮ್ಮೆ ಪ್ರೇಮಿಸುವ ಪತಿಯಾದೆ...
ಸರ್ವವು ನೀನೆಯಾಗಿ, ಸರ್ವಸ್ವವೂ ನಿನ್ನದಾಗಿದೆ..
ಬಿಡಿಸಲಾಗದ ಬಂಧ ನಮ್ಮದು, ದೂರಾಗದ ದಾಂಪತ್ಯವದು...
ಕೈಯಹಿಡಿದು ಹೆಜ್ಜೆ ಹಾಕುವೆ ಕೊನೆಯ
ಪಯಣವರೆಗೂ..
ಚಿತೆಯಲು ಜೊತೆಯಾಗುವೆ, ಇನ್ನೇನಿದೆ ಈ ಜಗದಲಿ ನಿನ್ನ ತೊರೆದು..

ತನುಮನಸು ✍️

- Tanuja.K

17 Aug 2023, 03:52 am

- Imtiyaz Ahmed

16 Aug 2023, 07:09 pm

- Imtiyaz Ahmed

16 Aug 2023, 07:09 pm

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ದೀಪಾವಳಿಯ ಶುಭಾಶಯಗಳು
************************
ದೀಪಾವಳಿ ದೀಪಾವಳಿ
ನೂರೊಂದು ಕನಸಿನ ದೀಪಾವಳಿ

ಬಗೆ ಬಗೆಯ ಬಣ್ಣದ ರಂಗೋಲಿ
ದೀಪದಿಂದ ದೀಪ ಬೆಳಗಿಸುವ ದೀಪಾವಳಿ

ಹೊಸ ಬಟ್ಟೆ ಧರಿಸುವ
ಮನೆಗೆಲ್ಲ ಗೋಪುರ ಕಟ್ಟುವ

ಹಿರಿಯರ ಕಿರಿಯರ ಆಶೀರ್ವಾದ ಪಡೆಯುವ ದೀಪಾವಳಿ
ಹಗಲಲ್ಲಿ ರಂಗೋಲಿ ಹಾಕುವ
ಇರುಳಿನಲ್ಲಿ ದೀಪ ಹಚ್ಚುವ
ಕತ್ತಲಲ್ಲಿ ಪಟಾಕಿ ಹಾರಿಸುವ
ಗಗನದಲ್ಲಿ ಬೆಳಕನ್ನು ಚೆಲ್ಲುವ ದೀಪವೇ ದೀಪಾವಳಿ ಹಬ್ಬ
ಮಕ್ಕಳ ಮನಸ್ಸಿನಲ್ಲಿ ಮಂದಹಾಸ
ಪೋಷಕರ ಹೃದಯದಲ್ಲಿ ಉಲ್ಲಾಸ

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ರಚನೆ:-ಇಮ್ತಿಯಾಜ್ ಭರಮಸಾಗರ

- Imtiyaz Ahmed

16 Aug 2023, 07:09 pm

- Imtiyaz Ahmed

16 Aug 2023, 07:09 pm