ಅವನು ಬೇಕೆಂದೂ ಹೇಳಲಾರೆ..
ಅವನು ದೂರ ಇರುವುದನ್ನೂ ಸಹಿಸಲಾರೆ..
ಅವನು ನನ್ನವನೆ, ಬರಿ ಕನಸಿನಲ್ಲಿ..
ಮನದಲ್ಲಿ ಅವನನ್ನೇ ಪೂಜಿಸಿರುವೆ..
ನಾ ಅವನಿಗೆ ಎಂದಿಗೂ ದಾಸಿಯೇ ಆಗಿರುವೆ..
ನನ್ನೆಲ್ಲಾ ಆಸೆ ಕನಸುಗಳು ಅವನೆ..
ನನ್ನೆಲ್ಲಾ ಪ್ರೀತಿಯು ಅವನಿಗಾಗಿಯೆ..
ಹೀಗಿದ್ದರೂ ಅವನು ನನ್ನವನಲ್ಲ..
ಕಾರಣ ನನ್ನ ಕೊರಳ ಮಾಂಗಲ್ಯಕೆ ಅವನ ಹೆಸರಿಲ್ಲ..
ಮಂದ ಬೆಳಕಿನ ಲಾಂಧರಿನಲ್ಲಿ ಅವನು ಓದುಲು ಶುರು ಮಾಡಿದ ನಿಶಬ್ದ ರಾತ್ರಿ ಸಮಯ ಹನ್ನೆರಡರ ಆಸುಪಾಸು. ನೀಲಿ ಬಣ್ಣದ ಹಾಳೆಯೊಂದರಲ್ಲಿ ಕಪ್ಪು ಬಣ್ಣದ ಅಕ್ಷರಗಳು ಓದಲು ಶುರು ಮಾಡಿದ ನಿದ್ದೆಗೆಟ್ಟು ಓದುವಂತಹ ಮುಖ್ಯವಾದ ಪತ್ರ ಅದಾಗಿತ್ತು. ಪ್ರೀತಿಯ ಶರೀಫನಿಗೆ ನೆನ್ನೆಯ ದಿನ ಈ ಪತ್ರ ಬರೆಯಲು ಕುಳಿತಾಗ ಹಿಂದೆಂದೋ ನಾವು ನಡೆದುಬಂದ ಹಾದಿಯೊಂದು ನೆನಪಾಯಿತು ನಮ್ಮ ಹೆಜ್ಜೆ ಗುರುತುಗಳು ಇನ್ನು ಮೀನುಗುತ್ತಿದ್ದವು! ದಿಢೀರನೆ ನೀ ನನ್ನೆಡೆಗೆ ನೋಡಿ ಕೊನೆಯವರೆಗೂ ಜೊತೆಗಿರುವೆಯಲ್ಲ ಎಂದು ಕೇಳಿದ್ದೆ ಅಂದು ತಿಳಿದಿರಲಿಲ್ಲ ಈ ಪತ್ರವೇ ನನ್ನ ವಿದಾಯವೆಂದು. ಕಣ್ಣು ತುಂಬಿ ನೂರಾರು ಹನಿಗಳು ಪತ್ರಕ್ಕಂಟಿವೆ ಕ್ಷಮಿಸು ನಿನ್ನಂತೆ ರೀತಿ ರಿವಾಜುಗಳನ್ನು ಅನುಸರಿಸಿ ಬರೆಯಲಾಗಲಿಲ್ಲ ನನಗೆ. ಸಣ್ಣ ವಯಸ್ಸಿನಲ್ಲೇ ನನ್ನ ಅಮ್ಮ ದೇವರ ಪಾದ ಸೇರಿದಳು ಅಪ್ಪ ಅವಳ ನೆನಪಿನಲ್ಲೇ ಜಗವ ಮರೆತು ಮೌನಿಯಾದ ನನ್ನವರಿದ್ದು ಯಾರಿಲ್ಲದೆ ಅನಾಥೆಯಾದವಳು ನಾನು. ದೇವರು ಕೇಳದೆ ಕೊಟ್ಟ ಪ್ರೀತಿಯ ಹುಡುಗೊರೆ ನೀನು ಕಸಿಕೊಳ್ಳದಿದ್ದರೆ ಉಸಿರಾಡುತ್ತಿದೆ ನಿನ್ನ ಜೊತೆ ಆದರೆ ವಿಧಿಬರಹ ಈ ಜನ್ಮಕ್ಕಿಷ್ಟೇ ನೋಡು. ಸತ್ತ ಮನಸ್ಸಿನ ಜೊತೆಗೆ ಬದುಕುವುದಕ್ಕಿಂತ ಮನಸಿದ್ದು ಸತ್ತವರ ನೆನೆದು ಬದುಕುವುದು ಸುಲಭ ಎನಿಸುತ್ತದೆ ನನಗೆ.
ಕೊನೆಯ ವಾರ ನಮ್ಮ ನಡುವೆ ಬರಿ ಮೌನ ತುಂಬಿತ್ತು ನೋಡು ಸ್ಮಶಾನ ಮೌನವದು. ಆ ಸ್ಮಶಾನವಾಸಿಯೇ ಜಗತ್ತಿನ ನೆಮ್ಮದಿಯೆಲ್ಲಾ ಕದ್ದು ಭೂದಿಯಲ್ಲಿ ಬಚ್ಚಿಟ್ಟಿರುವನಂತೆ ಇಹದ ಎಲ್ಲಾ ಬಂಧನಗಳಿಗೂ ಸಾವು ಮುಕ್ತಿಯಲ್ಲವೇ! ಎಲ್ಲೋ ಕೇಳಿದ ಮಾತು ಜನರು ಸಾವಿಗೆ ಹೆದರುತ್ತಾರೆ ನೋವಿಗಲ್ಲ ಆದರೆ ಸತ್ತ ಬಳಿಕ ಆ ನೋವೇ ಇರುವುದಿಲ್ಲ ಎಷ್ಟು ನಿಜ ಅಲ್ಲವೇ ಬಹುಶಃ ನನ್ನ ಮನದ ನೋವಿಗೆ ಹೆದರಬೇಕಿತ್ತು ನೀನು ಲೆಕ್ಕಿಸದೆ ಹೋದೆ ಈಗ ನೋಡು ಸಾವಿಗೂ ಹೆದರಲಿಲ್ಲ ನಾನು. ನಿನ್ನುಸಿರ ಲಾಲಿಗೆ ರೆಪ್ಪೆ ಮುಚ್ಚಿದವಳು ನಾನು ಪತ್ರ ಮುಗಿಸುವ ಸಮಯವಾಯಿತು ಮತ್ತೊಮ್ಮೆ ಸಿಗುವೆ ಸಿಹಿ ನಿದುರೆಯ ಕನಸಿನಂತೆ ಮುಂದೊಂದು ಜನ್ಮವಿದ್ದರೆ ಅಲ್ಲಿಯವರೆಗೂ ಜೋಪಾನ.
ಲಾಂಧರಿನ ಬೆಳಕು ಕ್ಷಯಿಸುತ್ತಿತ್ತು ಕತ್ತಲಾವರಿಸಿ ಮೌನ ಕವಿಯಿತು....
ಅವಳ ಕೊನೆಯ ಮುತ್ತಿನ ಗುರುತು ಅವನ ಬೆರಳಿಗಂಟಿತ್ತು ಉಸಿರಿನದ್ದೂ ಕೂಡ!
ಮಹಡಿಯಲ್ಲಿ ನಿಂತು ನಾ ನೋಡಿದೆ
ಸ್ವರ್ಗವೇ ಹನಿ ಹನಿಯಾಗಿ ಇಳಿಯುತಿದೆ
ಮೈ ಚೂರೇ ಚಳಿಗೆ ಜುಮ್ಮೆಂದಿದೆ
ಈ ದೃಶ್ಯ ಕೆ ನಿಜ ನಾನೇ ಸೋತೆ ಬಿಟ್ಟೆ
ಹೆಜ್ಜೆ ಹೆಜ್ಜೆಗೂ ಪುಟ್ಟ ಪುಟ್ಟ ಹನಿಯ ಹನಿಯುತ್ತಿದೆ
ಜೋರೇನಲ್ಲ ಚಿಟಿಜಿಟಿಯಾಗಿ ಬಿಳುತ್ತಿದೆ
ಅರೆರೆ ಇದೇನು ಮುಖಕ್ಕೆ ಕೈ ಹಿಡಿದು ನಾನು ಕೂತು ಬಿಟ್ಟೆ
ಈ ದೃಶ್ಯಕ್ಕೆ ನಿಜ ನಾನೇ ಸೋತೆ ಬಿಟ್ಟೆ
ಲೇಖನಿಯು ಸೋತಿದೆ ವರ್ಣಿಸಲಾಗದೆ
ಇನ್ನು ನನಗಿಲ್ಲಿ ಗತಿ ನಾನು ನೆನೆಯುತ್ತಾ ಕುಳಿತುಬಿಟ್ಟೆ
ಮೇಘ ಸಂಘರ್ಷದಿ ಉಂಟಾದ ಮಳೆ ಚಿಪ್ಪಿನಲ್ಲಿ ಸಿಗದಒಂದು ರೀತಿಯಮುತ್ತೆ
ನಿನ್ನಬರೆಯಲು ಆಗದೆಸುಮ್ಮನಿರಲು ಆಗದೇ
ಕವಿತೆಸೋತು ಬಿಟ್ಟೆ
ನೂರಾರು ಕವಿಗಳಮರಳು ಮಾಡಿದನಿಸರ್ಗ
ನೀ ನಕ್ಕರೆ ಈಭೂಮಿಗೆ ಸ್ವರ್ಗ
ನಿನ್ನಲ್ಲಿ ಪಡೆಯಿತು ಸಂತೃಪ್ತಿ ಆತ್ಮ ನಿನ್ನಾ ಯೋಚಿಸುತ್ತಾ ಆದೆ ಆಧ್ಯಾತ್ಮ
ಸರಳ ಸೌಂದರ್ಯ ಅಡಗಿದ ಅಂದ
ದೃಷ್ಟಿ ತೆಗೆಯುವೆ ಕಳ್ಳ ಬಂದ
ತರ್ಕದಿ ಗೆಲುವು ಅರಸುತ್ತಿದ್ದ ನಾನು
ನಿನ್ನ ತಂಗಾಳಿ ಆಗಮನದಿ ಯಾಕೋ ಸೋತು ಬಿಟ್ಟೆ
ನನ್ನ ಕವನಗಳ ಒಡೆಯ..
ನಿನ್ನ ಪ್ರೀತಿಯೇ ಈ ಕವನಗಳಿಗೆ ಸ್ಫೂರ್ತಿ
ಕವನಗಳ ಬರೆಯುವೆ ನಿನ್ನ ನೆನಪಾಗಿ..
ನಿನ್ನಲೆ ಕಳೆದು ಹೋಗುವೆ ಮತ್ತೆ ಮನಸಿಗಾಗಿ..
ನನ್ನ ಕವನಗಳ ಪದೆ ಪದೆ ಓದುವೆ ನಿನಗಾಗಿ..
ಮತ್ತಷ್ಟು ಕವನಗಳ ಕಟ್ಟಿ ಕೊಡುವೆ ಪ್ರೀತಿಗಾಗಿ..
.. ..
ಭೂಮಿ ಅದುವೇ ಕರ್ಮ
ನೆಲ ಉಳುವುದು ನಿಯಮ
ಬೀಜ ಹಾಕುವುದು ನಂಬಿಕೆ
ಬೇರು ಅದರ ಸಹನೆ
ಕಾಂಡ ಇದರ ಶಕ್ತಿ
ಎಲೆಗಳು ಆಯಸ್ಸು
ರೆಂಬೆ ಕೊಂಬೆಗಲು ಜೀವನದ ಸಾವಲುಗಳು
ಹೂವು ಶುದ್ಧ ಮನಸ್ಸುಗಳು
ಕಾಯಿ ಬಯಕೆಗಳು
ಹಣ್ಣು ಯಲ್ಲದರ ಪ್ರೀತಿ .....
ಈ ವೃಕ್ಷವು ನಾವು.....
ಸುಧಾ ಆರ್ ಬಳಿಗೇರ
- ಸುಧಾ ಆರ್ ಬಳಿಗೇರ
03 Jul 2023, 02:32 pm
ಗುರು ಪೂರ್ಣಿಮೆ ದಿನದ ಶುಭಾಶಯಗಳು
ನನಗೆ ವಿದ್ಯೆ ಕಲಿಸಿಕೊಟ್ಟ ಎಲ್ಲಾ ಗುರುಗಳಿಗೆ ಹೃದಯ ಪೂರ್ವಕವಾಗಿ
ನಮಸ್ಕಾರಗಳು
ಗುರುವಿನ ಗುಲಾಮನಾಗು
ಗುರುವೆ ನಿನ್ನ ಕರುಣೆಯಿಂದ
ಪುನೀತನಾದೆ ನಾನು
ನಿಮ್ಮ ಜ್ಞಾನದಿಂದ ನನಗೆ
ಜ್ಞಾನ ಜ್ಯೋತಿ ಫಲಿಸಿತು
ಅಜ್ಞಾನವೆಂಬ ಕತ್ತಲಿಂದ
ಸುಜ್ಞಾನಿಯನ್ನಾಗಿ ಮಾಡಿದೆ
ಲೋಕದಲ್ಲಿ ಕಣ್ಣು ತೆರೆಸಿ
ನೀತಿವಂತನಾಗಿಸಿದೆ
ಅನ್ಯಾಯವೆಂಬ ಕಲ್ಲು ಮುಳ್ಳು ತೆಗೆಸಿ
ಸತ್ಯವೆಂಬ ಹುಲ್ಲು ಹಸಿರ ಶಾಂತಿ ಬೆಳಸಿ
ನಿತ್ಯ ಜ್ಞಾನಿಯಾಗಿ ಗುರುವ ಸೇವೆ ನಾ ಮಾಡುವೆ
ಉತ್ತಮನಾಗಬೇಕೆಂಬ ಸತ್ಯ ನುಡಿಯ ತಿಳಿಸುವೆ