Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೇಳಬಯಸುವೆ ನಾನು ಮಳೆನೀರ ಸದ್ದು
ಜಲಪಾತದ ತುದಿಯಿಂದ ಒಂದೊಂದು ಹನಿಯು ಧರೆಯೆಡೆಗೆ ಜಾರುವ ಸದ್ದು...................
ಹಕ್ಕಿಗಳ ಚಿಲಿಪಿಲಿಯ ರಾಗ ಅವು ಗಗನದೆಡೆಗೆ ಪಾಯನಿಸುವ ವೇಗ ಪ್ರತಿಯೊಂದರಲ್ಲಿ ವಿನೂತನ ಶಬ್ದ ಕೇಳಿವ ಮನಕೆ ಉಲ್ಲಾಸ...........
- ಚುಕ್ಕಿ
12 Jul 2017, 07:53 am
ಭಾವನೆಗೊಂದು ಅರ್ಥ ನೀಡಿ ಭಾಂದವ್ಯ ಬೆಸೆಯುವವರು ಪ್ರೇಮಿಗಳು||
ಭಾವನೆಗೊಂದು ಅರ್ಥ ನೀಡಿ ಬರಹ ರಚಿಸುವವರು ಕವಿಗಳು||
- ಎಸ್.ಬಿ
12 Jul 2017, 07:12 am
ಬೆಳ್ಳಂಬೆಳಗ್ಗೆ ನಾ ಕಂಡೆ ಬಾನೆತ್ತರದಲಿ
ಬೆಳ್ಳಕ್ಕಿಗಳ ಸಾಲು.....
ಅದ ನೋಡಿ ನಾ ಬರೆದೆ ಕವನದ ಸಾಲು
ಸೂರ್ಯನ ರಶ್ಮಿಯೂ ಅಪ್ಪಳಿಸುತ್ತಿತ್ತು
ಬೆಳ್ಳಕ್ಕಿಯ ಪುಕ್ಕಕ್ಕೂ......
ನಳನಲಿಸುತ್ತಿತ್ತು ಗಗನವು
ನಾಚಿ ನೀರಾಯಿತು ಮೋಡವು
- ಎಸ್.ಬಿ
12 Jul 2017, 06:49 am
ಅವಗವಾಗ ಅವಕಾಶಕ್ಕಾಗಿ
ಕಾದು ಕುಳಿತವರು.
ಕಷ್ಟ ಕಾಲಕ್ಕೆ ಮೆಸೇಜ್ ನಲ್ಲೆ ಸಮಾಧಾನಿಸುವವರು.
ಎಂದೆಂದಿಗೂ ನಾನಿದ್ದೆನೆಂದು
ಮರೆಯಾಗುವವರು
ಕಿಸೆ ಖಾಲಿಯಾಗುವಂತೆ ನೋಡುವವರು
ಅವಶ್ಯಕತೆ ಇಲ್ಲದಾಗ ಬ್ಯೂಸಿಯಾಗಿರುವವರು
ಒಟ್ಟಾರೆಯಾಗಿ
ನಮ್ಮ ಹಿಂದೆ-ಮುಂದೆ ತಿರುಗುತ್ತಿರುವವರು
- ಎಸ್.ಬಿ
11 Jul 2017, 09:38 pm
ಮೂಡಣದಲಿ ಮೂಡಿದ ಸೂರ್ಯನು
ಪಡುವಣದಲಿ ಮುಳುಗುವ ಹೊತ್ತಲ್ಲಿ
ಮಳೆಯು ಇಂಪನ್ನು ಚಿಮ್ಮಿಸಿ
ಬೀಳ್ಕೊಡ್ತು....
ಚಂದಿರನ ಸ್ವಾಗತಿಸಲು
ಮೋಡವನ್ನೇ ಚದುರಿಸಿ ದಾರಿ ಮಾಡಿ ಕೊಡ್ತು
ಬೆಳದಿಂಗಳ ಬೆಳಕನ್ನು ನೀಡಲು
ಕಾತುರನಾಗಿಹನು ಚಂದಿರನು
- ಎಸ್.ಬಿ
11 Jul 2017, 06:31 pm
ಮೌನವಾಗಿದೆ ಮನವಿಂದು
ಆತ್ಮೀಯತೆ ಹೆಸರಿನಲಿ ವಂಚಿಸಿದೆ ಸ್ನೇಹಿತರ ಗುಂಪೊಂದು
ಮಾತುಗಳೇ ಹಾಗೇ ಹಿಂದೊಂದು-ಮುಂದೊಂದು
ನಂಬಿ ಕೆಟ್ಟಾಗಿದೆ ನಾನಿಂದು
ಇನ್ನಾದರೂ ಇರಬೇಕು ನಾ ಒಂಟಿಯಾಗಿ
ಮನಸ್ಸನ್ನು ಹುಗುರವಾಗಿಸಿ
ಬದುಕ ಬೇಕು ನನ್ನಷ್ಟಿ ನಾನಿಲ್ಲಿ
- ಎಸ್.ಬಿ
11 Jul 2017, 06:07 pm
ಕೋಮು-ಗಲಭೆಯ ನಡುವೆ
ಕೇಳಿಸಲೇ ಇಲ್ಲ ಶಾಂತಿಯ ಮಾತು
ಬೇಕಿಲ್ಲ ಕೆಲವರಿಗೆ ಶಾಂತಿ
ರಾಜಕೀಕ್ಕೆ ಇದು ಬಹುದೊಡ್ಡ ಆಸ್ತಿ
ಅವರಿಗಿದೆ ಬಹಳಷ್ಟು ಸೇಪ್ಟಿ
ಅಮಾಯಕ ಮಾತ್ರ ಇಲ್ಲಿ ಸಿಕ್ಕಿ ಬಿದ್ದ ಪಾಪಿ
ಅರ್ಥ ಮಾಡಿಕೊಳ್ಳಿ ಯುವಕರೇ
ನೀವು ಈ ದೇಶದ ಭವಿಷ್ಯದ ಆಸ್ತಿ
ಶಾಂತಿ ಕಾಪಡಿ ಭವಿಷ್ಯನ ಕಟ್ಟಿಕೊಳ್ಳಿ
- ಎಸ್.ಬಿ
11 Jul 2017, 04:23 pm
ಯಾಕೆ ಸೋಲುವೆ ಮನವೇ
ನಿನಗೆ ಸಿಗುವುದು ಬರಿಯ ನೋವೇ
ನಿನಗೆಂದು ಒಂದು ಹೂವಿಲ್ಲ
ಬಾಳ ಪಯಣದಲ್ಲಿ ಚೂರು ಸಿಹಿಯಿಲ್ಲ.
ಬಡತನದಲ್ಲಿ ಬೆಂದ ಹೃದಯ
ಬೂದಿ ಅಗದೇ ಉಳಿದ ಕರಿ ಇದ್ದಿಲು
ಪ್ರೀತಿ ಗಿಡಕೆ ಹಿಡಿದ ಗೆದ್ದಲು
ಅವಳೇಕೋ ಎಡಗಳಲ್ಲೇ ನಿನ್ನ ಒದ್ದಳು.
ಬಾಯಾರಿಕೆ ತೀರದ ಬೆಂಗಾಡಲ್ಲಿ
ಪ್ರೇಮ ಸಸ್ಯ ಚಿಗುರುವ ಮಾತೆಲ್ಲಿ
ಸೋತ ಎತ್ತಿಗೇ ಹೊಡೆತ ಹೆಚ್ಚು
ಸತ್ತರೂ ಆರಲೊಲ್ಲದು ಪ್ರೀತಿ ಕಿಚ್ಚು.
- ಶ್ರೀಗೋ.
11 Jul 2017, 03:59 pm
ಭಾವನೆಗೊಂದು ಪದಪುಂಜವ ಕೊಟ್ಟು ಬರೆದ ಸಾಲುಗಳು.....
- ಎಸ್.ಬಿ
11 Jul 2017, 09:49 am
ನಗುವ ಬಾಲ್ಯ ಕಳೆದಿತ್ತು ಅಪ್ಪ ಅಮ್ಮ ನ ಮಡಿಲಲ್ಲಿ
ಯವ್ವನಕ್ಕೆ ಕಾದಿತ್ತು ಬೆಂಕಿಕುಂಡದ ದಾರಿ....
ಕಲ್ಪನೆಯ ತವರು ಕಣ್ಣೀರಲ್ಲಿ ಮುಗಿದು ಹೋಯಿತು
ಶುರುವಹಿತು ಜೀವನದ ಬೆಸುಗೆಯ ನಡುಗೆ
ದಿನಗಳು ಕಳೆದಂತೆಲ್ಲ ತವರಿನ ನೆನಪು ಮರೆಯಾದವು
ನಂಬಿ ಕೈ ಹಿಡದ ಪತಿರಾಯ ಕಣ್ಣೀರಲ್ಲಿ ಮಾಸುವ ಹಾಗೆ ಮಾಡಿದನು
ಮನೆಯವರೆಲ್ಲ ದ್ವೇಷದಿಂದ ಕಂಡರು ಕಾರಣ ನಾನೊಬ್ಬ ಹೆಣ್ಣು ಮಗಳಿಗೆ ಜನುಮವ ನೀಡಿದೆ..
ಹೆಣ್ಣು ಗಂಡು ನೋಡುತ್ತಾ ಮರೆತರು ಮನುಷ್ಯತ್ವ ವನ್ನ
ನನ್ನ ನೋವನ್ನು ಹೇಳುವ ಮುನ್ನ ನಾ ಈ ಭೂಮಿಯ ತೊರೆದೆ ನನ್ನ ಮಗಳಿಗೆ ಆ ದೇವರೇ ಗತಿ....
ಶಾಪದಿ ಮುಕ್ತಿಸು ಇವರನ್ನ ದೇವ ಮುಂದಿನ ಜನ್ಮದಲ್ಲಿ ಕರುಣಿಸದಿರು ತಾಯಿಯನ್ನ ಆಗ ಗೊಟ್ಟದಿತು ಹೆಣ್ಣಿನ ಬೆಲೆ ಯನ್ನ......
- ಅಂಜಲಿ
11 Jul 2017, 08:44 am