ಸಂತೋಷವ ಕಳೆದುಕೊಂಡಿದೆ ಬದುಕು..
ದುಃಖದಲ್ಲಿ ಮುಳುಗಿದೆ ಮನಸು..
ಸಿಕ್ಕ ಪ್ರೀತಿಯನು ತಾನಾಗಿಯೇ ಒಲ್ಲೆ ಎಂದ ಹೃದಯ ಪರಿತಪಿಸುತ್ತಿದೆ...
ನೂರಾರು ಮಾತುಗಳನಾಡಿದ ತುಟಿಗಳು ಇಂದು
ಮೌನ ತಾಳಿದೆ...
ಯಾರ ಮಾತಿಗೂ ಸ್ಪಂದಿಸದ ಈ ಜೀವ
ನಿನ್ನನ್ನೇ ಹಂಬಲಿಸುತಿದೆ...
ಕೇಳದೆ ನನ್ನ ಮನದ ಮಾತು, ನೀ ಎಲ್ಲಿ ಹೋದೆ...
ಅಪ್ಪ ಅಪ್ಪ ಅಪ್ಪ..
ಎಷ್ಟು ಬಾರಿ ಕರೆದರೂ ಖುಷಿಯೇ..
ಎಷ್ಟು ಪ್ರೀತಿಸಿದರೂ ಕಡಿಮೆಯೇ..
ಅಪ್ಪ ಎಂದಾಕ್ಷಣ ನೆನಪಾಗುವುದು ನಿಮ್ಮ ಗಾಂಭೀರ್ಯ..
ನಿಮ್ಮ ಕೋಪ ಹೇಳಲಸಾಧ್ಯ...
ನಿಮ್ಮ ಪ್ರೀತಿ ಅತಿ ಹೆಚ್ಚು ಮಾಧುರ್ಯ..
ನಿಮ್ಮ ಆದರ್ಶವೇ ಮಾನಸಿಕ ಸ್ಥೈರ್ಯ...
ಅಪ್ಪ ಇಂದು ನೀವು ನೆನಪು ಮಾತ್ರ..
ನಿಮ್ಮಂತಹ ತಂದೆಯ ಪಡೆದ ನಾವು ಧನ್ಯರು..
ಆದರೆ ಇಷ್ಟೇ ವರುಷ ಸಾಕೆ ನಿಮ್ಮೊಂದಿಗೆ ಬದುಕಿದ ಕ್ಷಣಗಳು..??
ನಿಮ್ಮಂತಹ ತಂದೆಯೇ ಎಲ್ಲರಿಗೂ ಸಿಗಲಿ..
ಆದರೆ ಆ ಪ್ರೀತಿ ಕೊನೆವರೆಗೂ ಉಳಿಯಲಿ..
ನೋವಾದಾಗ, ದುಃಖವಾದಾಗ ನೆನಪಾಗುವಿರಿ ತಕ್ಷಣ..
ಕನಸಿನಲ್ಲಾದರು ಬನ್ನಿ ದಿನ ದಿನ..
ಇಂದೇಕೋ ನಿಮ್ಮ ನೆನಪು ಅತಿಯಾಗಿ ಕಾಡುತಿದೆ ಅಪ್ಪ
ಇನ್ನೊಂದು ಜನ್ಮವಿದ್ದರೆ ನಿಮ್ಮ ಮಗಳಾಗಿ ಹುಟ್ಟಬೇಕೆಂಬುದೆ ನನ್ನ ಕೊನೆಯಾಸೆಯಪ್ಪ..
ಪ್ರೀತಿಗೆ ಮತ್ತೊಂದು ಹೆಸರು ನನ್ನ ಅಪ್ಪ ಕೃಷ್ಣಪ್ಪ..
ಬಿಡುವಿಲ್ಲದ ಕೆಲಸ ನಿನ್ನದು..
ಸ್ವಲ್ಪ ಬಿಡುವು ಮಾಡಿಕೊ ಈ ಜೀವ ಕಾದಿವುದು..
ನಿನ್ನಲ್ಲಿ ಏನನ್ನೂ ಬಯಸುವುದಿಲ್ಲ ನಾನು..
ಪ್ರೀತಿ ಮತ್ತು ಕಾಳಜಿಯ ಮುಂದೆ ಯಾವುದು ದೊಡ್ಡದಲ್ಲ ಹೌದಲ್ಲವೇನು..??
ನನ್ನ ಸಾವಿಗಾದರೂ ಸ್ವಲ್ಪ ಬೇಗ ಬರಲು ತಯಾರಾಗಿರು...
ಮಣ್ಣು ಮಾಡುವ ಜನರು ನನ್ನಂತೆ ಕಾಯರು..
ಭಾರತೀಯ ಮಕ್ಕಳೆಲ್ಲ ನಾವು ಒಂದೇ ಇಂದು ಎಂದಿಗೂ ಎಂದೆಂದಿಗೂ
ಭರತ ಭೂಮಿಯ ಬಿಡೆವು ಇಂದು ಎಂದಿಗೂ ಎಂದೆಂದಿಗೂ
ನಮ್ಮ ನೆಲ ನಮ್ಮ ಜಲ ನಮ್ಮ ಪವಿತ್ರ ತಾಣವು
ನಮ್ಮ ಇರುವು ನಮ್ಮ ಒಲವು ನಮ್ಮ ನೆಲದ ಪ್ರಾಣವು
ನಮ್ಮ ದೇಶ ನಮ್ಮ ಭಾಷೆ ನಮ್ಮ ಶಕ್ತಿ, ತ್ರಾಣವು
ನಮ್ಮ ಕುಲ ನಮ್ಮ ಬಲ ನಮ್ಮವರ ಸ್ವಾಭಿಮಾನವು
ಬರಲಿ ಎಲ್ಲಾ ದೇಶಭಕ್ತರು ಭರತ ಮಾತೆ ಮಕ್ಕಳು
ತರಲಿ ಎಲ್ಲ ದೇಶಕ್ಕಿಂದು ಸವಿ ಗೆಲುವಿನ ಕಲಿಗಳು
ಹೊರಲಿ ಎಲ್ಲ ದೇಶ ನಿಷ್ಠೆ ಶ್ರೇಷ್ಠತನವ ಮೆರೆಯಲು
ಹೊರಳಿ ಎಲ್ಲಾ ನಮ್ಮ ದೇಶಕ್ಕಿಂದು ಸೇವೆ ಮುಡಿಪಾಗಿಸಲು.
ಕಣ್ಣು ಕನಸಿಗೊಂದು ಮಾತು ಕೇಳುತ್ತಿದೆ ....
ನಾನು ನನ್ನ ಕಣ್ಣು ಮುಚ್ಚಿದರೆ ಮಾತ್ರ ನೀನು ಕಾಣುವೆ ....
ಕನಸು ಕಣ್ಣಿಗೆ ಹೇಳಿತು ....ನೀನಾಗಿಯೇ ಕಣ್ಣು ಮುಚ್ಚುವ ಅವಶ್ಯಕತೇ ಇಲ್ಲ
ಯಲ್ಲ ನನ್ನ ನೋಡುವುದಕ್ಕಾಗಿಯೇ ಸ್ವತಃ ತಾವೇ ಕಣ್ಣು ಮುಚ್ಚುವರು ....
ಯಾರು ಮೇಲು ಯಾರು ಕೀಳು....
ಚಿಂತೆಯು ಹೇಳುತ್ತಿದೆ ಚಿತೆಗೆ ನೀನು ಎಷ್ಟು ಕ್ರೂರಿ ದೇಹವನ್ನ ಹೇಗೆ ಸುಡುತ್ತಿರುವೆ....
ಚಿತೆಯು ಹೀಗೆ ಹೇಳಿತು ....ಬದುಕಿರುವಾಗ ನೀನು ಈ ದೇಹಕ್ಕೆ ನೇಮದಿಯೇ ಸಿಗದ ಹಾಗೆ ಮಾಡಿ ಪ್ರತಿ ದಿನವೂ ಒಂದೊಂದು ಚಿಂತೆಗಳನ್ನು ಕೊಟ್ಟುಸುಟ್ಟಿರುವೆ ...ನಾನಾದರೂ ಒಂದೇ ಬಾರಿ ಸುಟ್ಟು ಈ ದೇಹಕ್ಕೆ ಶಾಂತಿ ತಂದಿರುವೆ ಎಂದು....