ಎಲ್ಲೋ ಹುಟ್ಟಿ ಬೆಳೆದ ಜೀವಗಳು..
ಮದುವೆ ಎಂಬ ನಂಟಿಗೆ ಬೆಸೆವ ಭಾವಗಳು..
ಮೂರು ಗಂಟಿನ ಬಂಧದ ಆತ್ಮೀಯತೆ..
ಏಳು ಹೆಜ್ಜೆಗಳ ಇಡುತ ಜೊತೆ ಜೊತೆ..
ಜನ್ಮ ಜನ್ಮಕೂ ಸೇರುವ ಭರವಸೆಯ ಕಡೆಗೆ..
ಸತಿ-ಪತಿಗಳಾಗುವ ಸಂಬಂಧ, ಹೆಸರಿನ ಬೆಸುಗೆ...
ಸಾಗುವುದು ಬಾಳ ಪಯಣ..
ನೋವು ನಲಿವಿನ ಜೀವನ..
ಪ್ರೀತಿ ಚಿರವಾಗಿರಲಿ ಸದಾ ಕಾಲ...
ಅಗ್ನಿ ಸಾಕ್ಷಿಯಲಿ ಕಟ್ಟುವ ಮಾಂಗಲ್ಯ...
ನಿನ್ನ ಬಿಸಿ ಉಸಿರು ನನ್ನ ತಾಕಲು
ಮರೆವೆ ನನ್ನನ್ನೇ, ನೀ ಸನಿಹವಿರಲು..
ಎಂಥ ನಿರ್ಭಯ ನಿನ್ನ ಅಪ್ಪುಗೆಯಲಿ..
ಏನೋ ನೆಮ್ಮದಿ ನಿನ್ನ ಮಡಿಲಲಿ..
ಆಂತರ್ಯದಲಿ ಅಮ್ಮನಾದೆ..
ಅಕ್ಕರೆಯಲಿ ಅಪ್ಪನಾದೆ..
ಒಮ್ಮೆ ಸಂತೈಸುವ ಸ್ನೇಹಿತನಾದೆ..
ಮತ್ತೊಮ್ಮೆ ಪ್ರೇಮಿಸುವ ಪತಿಯಾದೆ...
ಸರ್ವವು ನೀನೆಯಾಗಿ, ಸರ್ವಸ್ವವೂ ನಿನ್ನದಾಗಿದೆ..
ಬಿಡಿಸಲಾಗದ ಬಂಧ ನಮ್ಮದು, ದೂರಾಗದ ದಾಂಪತ್ಯವದು...
ಕೈಯಹಿಡಿದು ಹೆಜ್ಜೆ ಹಾಕುವೆ ಕೊನೆಯ
ಪಯಣವರೆಗೂ..
ಚಿತೆಯಲು ಜೊತೆಯಾಗುವೆ, ಇನ್ನೇನಿದೆ ಈ ಜಗದಲಿ ನಿನ್ನ ತೊರೆದು..
ಒಮ್ಮೆ ೧ದು ಹರಳಿದ ಗುಲಾಬಿ .....
ಬಾಡಿದ್ದ ೧ದು ಗುಲಾಬಿಯನ್ನ ಹೀಗೆ ಕೇಳಿತು....
ನಿನ್ನ ಸೌಂದರ್ಯ ನೋಡು ಹೇಗೆ ಬಾಡಿ ಮಣ್ಣಿನ ಬಣ್ಣ ಬಂದಿರುವೆ ......
ಆದರೆ ನನ್ನ ನೋಡು .....ಹೇಗೆ ಯವ್ವನ ತುಂಬಿ ಬಣ್ಣ ಬಣ್ಣದಿಂದ ಹರಳಿರುವೆ ಯಂತ ಪ್ರೇಮಿಯು ನನ್ನ ಸೌಂದರ್ಯಕ್ಕೆ ಸೋಲಲೇಬೇಕು ಎಂದು ಹೇಳಿತು.......
ಹೌದು ನಿಜವೇ ನಿನ್ನ ಸೌಂದರ್ಯಕ್ಕೆ ಯಾರಾದರೂ ಸೋಲಲೇ ಬೇಕು ಎಂದು ಅ ಬಾಡಿದ ಗುಲಾಬಿ ಹೇಳಿತು ....ಹಾಗೆ ೧ದು ಮಾತುಕುಡ ಹೇಳಿತು .....
ಬಾಡಿದ್ದ ಗುಲಾಬಿ.....ಇಂದು ಮುಂಜಾನೆಯೇ ದಾರಿಹೋಕನೊಬ್ಬ ಆಗತಾನೇ ಹರಳಿದ್ದ ನನ್ನ ಚೆಲುವಕಂಡು ನನ್ನ ಕಿತ್ತು ತಾನು ಪೂಜಿಸುವ ದೇವರ ಮುಡಿಯಲ್ಲಿ ಇಟ್ಟು ಪೂಜಿಸಿದ... ೧ದು ದಿನವೆಲ್ಲ ಆ ದೇವರ ಮುಡಿಯಲ್ಲಿ ಇದ್ದು ನನ್ನ ಕರ್ಮವೇಲ್ಲ ಕಳೆಯಿತು ....ಆದ್ದರಿಂದ ನಾನು ಇಂದು ಮುಂಜಾನೆ ಬಾಡಿ ಮತ್ತೆ ಬೇರೊಂದು ಗಿಡದ ಬದಿಯಲ್ಲಿ ಇರುವೆ .... ಈ ಜನುಮದಲ್ಲಿ ಇಷ್ಟು ಸಾಕು ಸಂತೋಷದಿಂದ ಮಣ್ಣಲ್ಲಿ ಮಲಗುವೆ ......
ಬಾಡಿದ ಹೂವಿನ ಮಾತು ಕೇಳಿದ ಹರಳಿದ ಹೂವು
ತಲೆ ಕೆಳಗೆಮಾಡಿ ಸುಮ್ಮನಾಯಿತು ......
ಅದೇ ಸಮಯಕ್ಕೆ ಅಲ್ಲಿಗೆ ಪ್ರೇಮಿಗಳು ಬಂದರು ಹರಳಿದ ಅ ಹೂ ನ ಕಿತ್ತು ....ಪ್ರಿಯತಮ ತನ್ನ ಪ್ರೇಯಸಿಯ ಮೂಡಿಯಲ್ಲಿ ಇಟ್ಟ ಕೋಪದಲ್ಲಿ ಇದ್ದ ಪ್ರೇಯಸಿಯು ಆ ಹೂವನ್ನ ಕಿತ್ತು ಕಾಲಿನಲ್ಲಿ ಹೊಸಕಿದಳು .....
ಕಣ್ಣೀರು ಇಡುತ್ತಾ ಆ ಹರಳಿದ ಹೂವು ನನ್ನ ಕರ್ಮ ಇನ್ನು ಮುಗಿದಿಲ್ಲ ಎಂದು ಆ ಬಾಡಿದ್ದ ಹೂವಿನತ್ತ ನೋಡುತ್ತಾ ಮಣ್ಣು ಸೇರಿತು.......