Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕರಿಯಾ ಇರುವೆ ನಿನ್ನ ಕರೆಯುತಿರುವೆ
ಮರೆಯಬೇಡೆಂದು ನೀ ಹೇಳುತಿರುವೆ
ಎಲ್ಲಿ ಅವಿತು ಕುಳಿತಿರುವೆ
ಎಲ್ಲಿಂದ ನೀನು ಬರುತಿರುವೆ
ದೃಢ ಸಂಕಲ್ಪದಿ ನೀ ಮೆರೆಯುತಿರುವೆ
ಸದೃಢ ಮನದಿ ನೀ ಮೇಲೇರುತಿರುವೆ
ಬವಣೆ ಮೆಟ್ಟಿ ನೀ ಕಷ್ಟಗಳನ್ನಟ್ಟುತ್ತಿರುವೆ
ನವಣೆ ಸಕ್ಕರೆ ನೀ ಮೆಲ್ಲುತ್ತಿರುವೆ
ಕಷ್ಟಕಾಲಕ್ಕೆ ನೀ ಕೂಡಿಡುತ್ತಿರುವೆ
ನಷ್ಟವಾಗದಂತೆ ನೀ ಜೀವ ತಡೆಯುತ್ತಿರುವೆ
ಅಷ್ಟೂ ಭಾರವನ್ನ ನೀ ಹೊತ್ತಿರುವೆ
ಸ್ಪಷ್ಟ ಬದುಕಿಗೆ ನೀ ಮಾದರಿಯಾಗಿರುವೆ
_ಶಶಿಜಿತ್
- m Jithendra_ಶಶಿಜಿತ್
23 May 2023, 09:44 pm
ನಿನ್ನ ನೆನೆದಷ್ಟು ಮುಗುಳ್ನಗುವು
ನಕ್ಕಷ್ಟು ಸುಂದರ ಈ ಜಗವು
ನೆನಪುಗಳ ತೊಟ್ಟಿಲಲಿ
ನಮ್ಮೊಲವಿಗೆ ಜೋಜೋ ಲಾಲಿ....
ನಿನ್ನೆಡೆಗೆ ನಡೆದಷ್ಟು ದೂರ
ಹೂವಾಯ್ತು ಹೃದಯ ಪೂರ
ಮನವ ತಬ್ಬಿರಲು ಪ್ರೀತಿ
ಏಳುಬೀಳೆಲ್ಲ ಸೊನ್ನೆಯ ರೀತಿ.....
- ಶ್ರೀಕಾವ್ಯ
22 May 2023, 10:00 pm
ಸಾವಿರ ಜನುಮವ ದಾಟಿ ಬಂದೆ ನಾ ನಿನ್ನಯ ನೋಡಲು
ಸಾಕಾರವಾಯ್ತು ಸೇರಿದ ಮೇಲೆ ಕಂಡೆನು ನಾ ನಿನ್ನಯ ಒಡಲು
ಆಕಾರವಾದೆ ಅವಕಾಶವಾದೆ ಆಧಾರವಾದೆ ಬಾಳನು ಬೆಳಗಲು
ಸಾವಕಾಶದಲಿ ಭಾವಾಕಾಶದಲಿ ಪ್ರತಿಕ್ಷಣದಲಿ ನಿನ್ನಯ ಕಾಣಲು
ಉತ್ತಮವಾಯ್ತು ಉತ್ತರವಾಯ್ತು ಬಾಳಿದು ವರ ಬೆಳಗಲು
ಸುತ್ತಲೂ ಮತ್ತೇ ಕವಿದಿದೆ ಮೋಡ ಬಾಯಾರಿದ ಭುವಿಗೆ ಬರಲು
_ಶಶಿಜಿತ್
- m Jithendra_ಶಶಿಜಿತ್
21 May 2023, 11:02 pm
ಕಣ್ಣಲ್ಲಿ ಕಣ್ಣಿಟ್ಟಾಕ್ಷಣ..
ಮನದಲಿ ನಿಂತೆ ನೀನಾದಿನ..
ಅಪ್ಪಿತಪ್ಪಿಯೂ ರೆಪ್ಪೆ ಮುಚ್ಚ ಬಾರದೆಂದಿತು ಮನ..
ನನ್ನನ್ನೇ ಮರೆತ ಆ ಕ್ಷಣ....
ಮೋಡದ ಮರೆಯಲಿ ಚಂದಿರ ನೋಡುತ್ತಿರುವನು ನಮ್ಮನ್ನ...
ನಾಚಿಕೆಯಲಿ ಅಪ್ಪಿದೆ ನಾ ನಿನ್ನನ್ನ..
ಮನದಲಿ ಆಸೆಗಳು ಗರಿಗೆದರಿತು ಆಗ...
ನಗುತ ನೀ ನನ್ನ ಕರೆದಾಗ..
ನೀ ಎದುರಿಗೆ ಬಂದರೆ ತಳಮಳ ಮನದಲಿ..
ಭಯ ನಡುಕ ತನುವಿನಲಿ....
ತನುಮನಸು ✍️
- Tanuja.K
21 May 2023, 06:10 pm
ಸ್ನೇಹವೆಂದರೆ...
ಅದು ಹಾಲು ಜೇನಿನ ಸಮ್ಮಿಲನ..
ಆಕರ್ಷಣೆ ತೊರೆದು ಆರೈಕೆಗಳಿಂದ ತುಂಬಿದ ಮನ..
ಎಲ್ಲಿದ್ದರೂ ಸಂತೋಷವಾಗಿರು ಎಂಬ ಭಾವ..
ನೀ ನನಗೆ ಬೇಕೆಂಬ ಸ್ವಾರ್ಥ ದೂರ..
ಈ ಸ್ನೇಹಕ್ಕೆ ಪ್ರೀತಿಯೆಂಬ ಲೇಪವೇಕೆ..??
ಈ ಸ್ನೇಹವು ಕೊನೆ ಇಲ್ಲದ ಕಡಲು..
ಅನುಭವಿಸಿ ನೋಡಿದು ನಿಸ್ವಾರ್ಥ ಒಲವು..
ತನುಮನಸು ✍️
- Tanuja.K
21 May 2023, 06:10 pm
ನಿನ್ನ ಮೇಲಿರುವುದು ಸ್ನೇಹವೋ, ಪ್ರೀತಿಯೋ ತಿಳಿಯುತ್ತಿಲ್ಲ..
ನಿನ್ನ ಜೊತೆಗೆ ಬದುಕಬೇಕೆಂಬ ಹಂಬಲ ಹೆಚ್ಚುತ್ತಿದೆಯಲ್ಲ..
ಪ್ರೀತಿಯ ಕನಸಿಗೆ ಕಾರಣ ನೀನು..
ನಿನ್ನನ್ನೇ ಅನುಕರಿಸಿ ಕಾಯುವೆ ನಾನು..
ಹೆಜ್ಜೆ ಹೆಜ್ಜೆಗೂ ಕಾಯುವಿಕೆ..
ಕಾರಣವಿಲ್ಲ ಒಲವಿನಾರಂಭಕೆ..
ಎಲ್ಲಕು ಉತ್ತರ ನಿನ್ನ ಬಳಿಯಿದೆ..
ಬರಿ ಪ್ರಶ್ನೆಗಳೇ ನನ್ನಲ್ಲಿ ಉಳಿದಿದೆ..
ತನುಮನಸು ✍️
- Tanuja.K
21 May 2023, 11:43 am
ಮೂಡಿದ ಸೂರ್ಯಾ ಆಗಸದಿಂದ ಬೆಳಕಿನ ಕಿರಣಗಳ ಸೂಸುತ್ತಾ
ಹಾಡಿದ ಹಕ್ಕಿಯ ಚಲನವಲನಗಳನು ಬಿಡದಲೇ ತಾ ಗಮನಿಸುತಾ
ಕೂಡಿದ ಭೂಮಿಯ ಜೀವ ಜೀವಿಗಳ ಪೋಷಿಸಲು ತಾ ಅನವರತ
ಮಾಡಿದ ಅದ್ಭುತ ಸೃಷ್ಟಿಗಳನ್ನೆಲ್ಲ ವರ ದೇವನ ಬಹು ನೆನೆಯುತ್ತ
ಬಾಡಿದ ಗಿಡಗಳ ನೋಡುತ ನಿಲ್ಲದೆ ಕರೆದ ಮಳೆ ಮೋಡಗಳ ಗಮನಿಸುತ
ನೀಡಿದ ಈ ಪರಿ ವರ ಭುವಿಮನುಜರಿಗೆ ಬೇಡಿದವರನು ಬಿಡದೆ ಸಲಹುತ್ತಾ
_ಶಶಿಜಿತ್
- m Jithendra_ಶಶಿಜಿತ್
21 May 2023, 09:32 am
ನಿನ್ನ ಮೇಲಿನ ಪ್ರೇಮ ಅನ್ನೋದು
ಹೇಗೆ? ಯಾಕೆ? ಎಲ್ಲಿ?
ಹುಟ್ಟಿತು ಅನ್ನೋ ಅರವಿಲ್ಲ ನಂಗೆ;
ನೀ ಜೊತೆಗಿದ್ದರು, ಇಲ್ಲದೆ ಇದ್ರು
ನೀನು ನನ್ನ ಬದುಕಿನ
ಒಂದು ಭಾಗ ಅಷ್ಟೆ;
ಬಹುಶಃ ಅದಕ್ಕೇ
ಅದಷ್ಟೇ ದಿಕ್ಕರಿಸಿ ದೂರಾದರೂ
ಮತ್ತೆ ಮತ್ತೆ ಈ ಮಳೆಗಾಲದ
ನದಿ ಮತ್ತೆ ಸಾಗರ ಸೇರುವ ಹಾಗೆ
ನೀ ನನ್ನ ಸೇರೋದು..!!
ಎಮ್.ಎಸ್.ಭೋವಿ...✍️
- mani_s_bhovi
20 May 2023, 11:46 pm
ಪಿಸುಮಾತಿನಾ ಚಕಮಕಿಯಲಿ ನಿಮಗೆ ಸ್ವಾಗತವಿದು
ಆಸುಪಾಸಿನ ವಿಷಯಂಗಳ ನಿಮಗಾಗಿ ಹೊಂದಿಸುತಿಹುದು
ಚಿಕ್ಕ ಚಿಕ್ಕ ಪದ ಲಾಲಿತ್ಯಗಳಿಗೆ ಆದ್ಯತೆಯಿದೆ
ಚೊಕ್ಕವಾಗಿ ಬರೆವ ನವಕವಿಗಳಿಗೆ ಸಾಧ್ಯತೆಸುಧೆ
ಇಂಪಾಗಿ ಹಾಡುಗಳನು ಹಾಡಲು ಹುಡುಕಿದ ಹಾಡುಗಾರರಿಗೆ
ಸೊಂಪಾಗಿ ಸಿಗುತಿಹುದು ಕವನಗಳ ಝರಿ ಹೊನಲಾಗಿ
_ಶಶಿಜಿತ್
- m Jithendra_ಶಶಿಜಿತ್
19 May 2023, 12:22 pm
ಹಕ್ಕಿಗಳು ಮನೆಯೆಡೆಗೆ ಮುಖ ಮಾಡಿಹವು ನೋಡಲ್ಲಿ
ಹಾರುತಿವೆ ಬಾನಿನಲಿ ಕೆಂಬಣ್ಣವನು ಚೆಲ್ಲಿ
ಬೀಸುತಿದೆ ತಂಗಾಳಿ ಸುಮದ ಕಂಪಿನ ಜೊತೆಯಲ್ಲಿ
ಕಳೆದ್ಹೋಯಿತೆನ್ನಮನ ಸುಗಂಧದ ಸುಳಿಯಲ್ಲಿ
ಮುಗಿಲಂಗಳಕೆ ಹೋಳಿ ನಿತ್ಯ ಮುಸ್ಸಂಜೆಯಲಿ
ಮೋಡಗಳ ಮರೆಯಲ್ಲಿ ಇಣುಕುತಿಹನಾರಲ್ಲಿ
ಕೆಂಗಿರಣವ ತೂರಿಹನು ಪರ್ವತದ ಮುಡಿಯಲ್ಲಿ
ಹೇಮಪರ್ವತವೆಂಬ ಆಸೆಯನು ಚೆಲ್ಲಿ
ಅಡಗಿಹನು ತಾನ್ ಕಡಲಲ್ಲಿ
- Shekhar S gowda
17 May 2023, 05:48 pm