ನನ್ನಮ್ಮನ ಗರ್ಭಗುಡಿಯಲ್ಲಿ
ನಾ ಚಿಗುರುವ ಸುದ್ದಿ ತಿಳಿದು
ಸಂಭ್ರಮದ ಹೂವಿನಗೆಯ ಬೀರಿ
ನವಮಾಸ ಹೊತ್ತಳಂತೆ ನನ್ನಮ್ಮ.....
ಒಡಲೊಳಗಿನ ಕಂದಮ್ಮ ಸುಖವಾಗಿ ಬೆಳೆಯಲೆಂದು
ದೇವರ ನಾಮ ಸ್ತುತಿಸುತ್ತಾ ಭಕ್ತಿಯಿಂದ
ಭಜನೆ ಮಾಡಿದಳಂತೆ ನನ್ನಮ್ಮ ...
ಅತಿ ಶಬ್ದಕ್ಕೆ ನನ್ನ ಕಂದಮ್ಮ ಬೆಚ್ಚಿ ಬೀಳುವಳೆಂದು
ಅಂಜಿ ಪ್ರಶಾಂತ ಸ್ಥಳದಲ್ಲಿ ಕುಳಿತು
ಜೋಗುಳ ಹಾಡಿ ಮಲಗಿಸಿದಳಂತೆ ನನ್ನಮ್ಮ......
ನನ್ನ ಹೆತ್ತು ತನ್ನ ಮಡಿಲಲ್ಲಿ ಮಲಗಿರುವುದನ್ನು
ನೋಡಿ ತನ್ನ ನೋವನ್ನು ಮರೆತು
ಸಂಭ್ರಮಿಸಿದಳಂತೆ ನನ್ನಮ್ಮ......
ಜಯಾ ಪಿ ✍️
ತಿಳಿಯದೆ ಪರಿಚಯವಾದೆ ತಿಳಿದ ಮೇಲೆ
ಸ್ನೇಹದ ಗೂಡಲ್ಲಿ ಜೊತೆಯಾದೆ.
ಈ ಒಲವೆಂಬ ಸ್ನೇಹಕ್ಕೆ ಹೂವಾದೆ ನೀ,
ಆ ಹೂವನ್ನು ಕಾಯೋ ಮುಳ್ಳಾಗುವೆನು ನಾ...
ಹೆಚ್ಚೆನು ಆಸೆಯಿಲ್ಲ, ನಿನ್ನೆದುರು ಬಿಚ್ಚಿಟ್ಟ
ನನ್ನ ಭಾವನೆಗಳನ್ನ ಬೆಚ್ಚಗಿಡು....
ಒಮ್ಮೆ ಸಿಕ್ಕರೆ, ಕಿರು ಬೆರಳು ಹಿಡಿದು
ಹೆಜ್ಜೆ ಹಾಕಿಬಿಡು.........
ಎಮ್.ಎಸ್.ಭೋವಿ...✍️
ನಿನ್ನ ಕುಡಿ ನೋಟದಲ್ಲೇ ನನ್ನ ಸೆಳೆದೆ..
ನೀ... ಈ ಮನದಲ್ಲಿ ಸೆರೆಯಾದೆ..
ನೀನೆ ನನ್ನ ಆಕರ್ಷಣೆ...
ನಾನು ಹೀಗಾಗಿರಲು ನೀನೆ ಹೊಣೆ..
ನಿನ್ನ ಸನಿಹವಿರುವೆ ಸಹಕರಿಸು...
ಬೇಡವೆಂದರೂ ದೂರಾಗೆನು ಅನುಮತಿಸು..
ಬಡಪಾಯಿ ಹೃದಯವಿದು..
ನಿನ್ನನೆ ನೆಚ್ಚಿಹುದು..
ತುಸು ಕರುಣೆ ತೋರು..
ಎಂದೂ ಜೊತೆಯಾಗಿರು...
ನೀನು ಕಣ್ಣಾದರೆ ನಾನು ಕಣ್ಣ ರೆಪ್ಪೆಯಾಗಿ ಕಾಯುವೆ,
ನಿನ್ನ ಕಾಲ ಪಾದುಕೆಯಾಗಿ ರಕ್ಷಿಸುವೆ.
ಕರವ ಜೋಡಿಸಿ ಕೆಳುವೇನು,
ಮಂಡಿಯೂರಿ ಬೇಡುವೆನು,
ಒಂದು ಅವಕಾಶ ನೀಡು ನೀನು,
ಒಪ್ಪಿದರೆ ಹೂವು ಮುಡಿಸಿ ಬರಮಾಡಿಕೊಳ್ಳುವೆ,
ಇಲ್ಲದಿದ್ದರೆ ಕಣ್ಣೀರಲ್ಲಿ ಕಲ್ತೊಳೆದು ಬೀಳ್ಕೊಡುವೆ.